India
  For Quick Alerts
  ALLOW NOTIFICATIONS  
  For Daily Alerts

  ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಧಾರಾವಾಹಿ ಚಿತ್ರೀಕರಣ: ಸೆಟ್‌ ಮೇಲೆ ಪೊಲೀಸರ ದಾಳಿ

  By ಚಿಕ್ಕಮಗಳೂರು ಪ್ರತಿನಿಧಿ
  |

  ರಾಜ್ಯದಲ್ಲಿ ಏರುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಹೇರಿದೆ.

  ಆದರೆ ಹಲವರು ರಾಜ್ಯ ಸರ್ಕಾರ ವಿಧಿಸಿರುವ ಈ ನಿಯಮಗಳನ್ನು ಗಾಳಿಗೆ ತೂರಿ ವ್ಯವಹರಿಸುತ್ತಿದ್ದಾರೆ. ಇಂಥಹಾ ಜವಾಬ್ದಾರಿ ಹೀನರಲ್ಲಿ ಮನೋರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದವರು ಇದ್ದಾರೆ.

  ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ ಇದ್ದರೂ ಸಹ ತಂಡವೊಂದು ದೊಡ್ಡ ಸಂಖ್ಯೆಯ ಜನರನ್ನು ಗುಡ್ಡೆ ಹಾಕಿಕೊಂಡು ಧಾರಾವಾಹಿ ಚಿತ್ರೀಕರಣ ಮಾಡುತ್ತಿತ್ತು. ಚಿತ್ರೀರಣ ಸೆಟ್‌ಗೆ ದಾಳಿ ಮಾಡಿದ ಪೊಲೀಸರು ಚಿತ್ರತಂಡದ ಜ್ವರ ಬಿಡಿಸಿದ್ದಾರೆ. ಜೊತೆಗೆ ದಂಡ ಸಹ ಹಾಕಿದ್ದಾರೆ.

  'ಫಲ್ಗುಣಿ ಗ್ರಾಮದ ಕಾಫಿ ಕಾರ್ನರ್ ಕೆಫೆ ಹೊಟೇಲ್‌ನಲ್ಲಿ ಭಾನುವಾರ ರಾತ್ರಿ ಸಮಯ 'ಮುದ್ದುಲಕ್ಷ್ಮಿ' ಧಾರಾವಾಹಿ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರತಂಡದಲ್ಲಿ ಸಾಕಷ್ಟು ಜನರಿದ್ದರು. ಸ್ಥಳೀಯರ ದೂರಿನ ಆಧಾರದ ಮೇಲೆ ಬಣಕಲ್ ಠಾಣೆ ಪಿಎಸ್‍ಐ ಗಾಯತ್ರಿ ಹಾಗೂ ಕೆಲವು ಪೊಲೀಸ್ ಸಿಬ್ಬಂದಿ ಸೆಟ್‌ಗೆ ಆಗಮಿಸಿ ಚಿತ್ರತಂಡದವರನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು.

  ''ನಿಮಗೆ ಚಿತ್ರೀಕರಣ ನಡೆಸಲು ಅನುಮತಿ ನೀಡಿದವರು ಯಾರು? ನಾವೇನಾದರೂ ಅನುಮತಿ ನೀಡಿದ್ದೀವಾ? ಯಾರೂ ಮಾಸ್ಕ್ ಹಾಕಿಲ್ಲ. ಕರ್ಫ್ಯೂ ಅಂದರೆ ನಿಮಗೆ ಹುಡುಗಾಟವಾ? ಜವಾಬ್ದಾರಿ ಇದೆಯಾ ನಿಮಗೆಲ್ಲ?'' ಎಂದು ಏಕಾ-ಏಕಿ ಚಿತ್ರತಂಡದ ವಿರುದ್ಧ ವಾಗ್ದಾಳಿ ಆರಂಭಿಸಿದ ಪಿಎಸ್‌ಐ ಗಾಯತ್ರಿ, ಕೂಡಲೇ ಪ್ಯಾಕಪ್ ಮಾಡಿ ಹೊರಡಲಿಲ್ಲವೆಂದರೆ ಲಾಠಿ ರುಚಿ ತೋರಿಸಬೇಕಾಗುತ್ತದೆ ಎಂದರು. ಪಿಎಸ್‌ಐ ಗಾಯತ್ರಿ ಆವಾಜ್‌ಗೆ ಬೆದರಿದ ಚಿತ್ರತಂಡ ಮೌನವಾಗಿ ಜಾಗ ಖಾಲಿ ಮಾಡಿತು.

  ಈ ವೇಳೆ ಕೆಲವು ಸ್ಥಳೀಯರು ಸಹ ಸ್ಥಳದಲ್ಲಿ ಹಾಜರಿದ್ದು, ಚಿತ್ರತಂಡದ ಯಾರೂ ಸಹ ಮಾಸ್ಕ್ ಹಾಕದಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದರು. ಚಿತ್ರತಂಡಕ್ಕೆ ಸೂಕ್ತವಾಗಿ ಬುದ್ಧಿ ಕಲಿಸಬೇಕು ಚಿತ್ರೀಕರಣ ಸಾಧನಗಳನ್ನು ಸೀಜ್ ಮಾಡಬೇಕೆಂದು ಪೊಲೀಸರ ಬಳಿ ಮನವಿ ಮಾಡಿದರು.

   Chikkamagaluru: Tv Serial Violates Weekend Curfew By Shooting On Sunday
  ಚಿತ್ರೀಕರಣ ಸಾಮಗ್ರಿಗಳನ್ನು ಸೀಜ್ ಮಾಡುವ ಬೆದರಿಕೆ ಕೇಳಿಸಿಕೊಂಡ ಕೂಡಲೇ ಕ್ಯಾಮೆರಾಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಚಿತ್ರತಂಡ ಜಾಗ ಖಾಲಿ ಮಾಡಿತು. ಬಳಿಕ ಪಿಎಸ್‌ಐ ಗಾಯತ್ರಿಯವರು ಚಿತ್ರತಂಡ ಹಾಗೂ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದ ಹೋಟೆಲ್‌ ಮಾಲೀಕನಿಗೆ ದಂಡ ವಿಧಿಸಿದರು.

  ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪಿಎಸ್‌ಐ ಗಾಯತ್ರಿ, ''ವೀಕೆಂಡ್ ಕರ್ಫ್ಯೂ ನಡುವೆಯೂ ಧಾರಾವಾಹಿ ಚಿತ್ರಿಕರಣ ನಡೆಸಿರುವುದರಿಂದ ಧಾರಾವಾಹಿ ತಂಡ ಹಾಗೂ ಹೋಟೆಲ್ ಮಾಲೀಕರಿಗೆ ದಂಡ ವಿಧಿಸಿ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಚಿತ್ರೀಕರಣ ನಡೆಸದಂತೆ ಸೂಚಿಸಲಾಗಿದೆ'' ಎಂದು ತಿಳಿಸಿದ್ದಾರೆ.

  English summary
  Tv Serial team violates weekend curfew by shooting on Sunday in Chikkamaaluru. Police visits shooting set and fined team and hotel owner who let the team for shooting.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X