»   » ಈ ವಾರದಿಂದ ಶುರು 'ಕಾಮಿಡಿ ಕಿಲಾಡಿ'ಗಳ ದರ್ಬಾರ್

ಈ ವಾರದಿಂದ ಶುರು 'ಕಾಮಿಡಿ ಕಿಲಾಡಿ'ಗಳ ದರ್ಬಾರ್

By: ಭರತ್‌ ಕುಮಾರ್
Subscribe to Filmibeat Kannada

'ಡ್ರಾಮಾ ಜೂನಿಯರ್ಸ್' ಮುಗಿತು, ಮುಂದೆ ಮತ್ತೇನಪ್ಪಾ ಅಂತಿದ್ದ ಪ್ರೇಕ್ಷಕರಿಗೆ ಜೀ ಕನ್ನಡ ವಾಹಿನಿ ಮತ್ತೊಂದು ರಿಯಾಲಿಟಿ ಶೋ ತರ್ತಿದೆ ಅಂತ ನಿಮ್ಮ ಫಿಲ್ಮಿ ಬೀಟ್ ಈ ಮೊದಲೆ ಹೇಳಿತ್ತು. ಈಗ ಆ ಟೈಂ ಮತ್ತಷ್ಟು ಹತ್ತಿರವಾಗಿದೆ.

ಹೌದು, ಪ್ರತಿ ದಿನ ಅದೇ ಫ್ಯಾಮಿಲಿ, ಅದೇ ತ್ರಿಕೋನ ಪ್ರೇಮಕಥೆಯಂತಹ ಧಾರವಾಹಿಗಳನ್ನ ನೋಡಿ ಬೇಜಾರಾಗಿರುವ ಪ್ರೇಕ್ಷಕರಿಗೆ, ಇನ್ಮುಂದೆ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ನಗಿಸಲು ಹೊಸ ಕಾರ್ಯಕ್ರಮ ಬರ್ತಿದೆ. ಆ ಹೊಸ ರಿಯಾಲಿಟಿ ಶೋನೆ 'ಕಾಮಿಡಿ ಕಿಲಾಡಿಗಳು'.[ಕಾಮಿಡಿ ಕಿಲಾಡಿಗಳ ಅಡ್ಡದಲ್ಲಿ ಜಗ್ಗೇಶ್ ಪ್ರತ್ಯಕ್ಷ !]

ರಾಜ್ಯದ ಪ್ರಮುಖ 7 ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ 10 ರಿಂದ 60 ವಯೋಮಾನದ ಸುಮಾರು 5 ಸಾವಿರ ಜನರಲ್ಲಿ ಅತ್ಯುತ್ತಮವೆನಿಸುವ 14 ಜನ ಕಾಮಿಡಿ ಕಿಲಾಡಿಗಳನ್ನ ಆಯ್ಕೆ ಮಾಡಿ ವೇದಿಕೆ ಮೇಲೆ ಕರೆತರಲಾಗ್ತಿದೆ.

ಹಾಗಾದ್ರೆ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ತೀರ್ಪುಗಾರರು ಯಾರು ? ನಿರೂಪಣೆ ಯಾರು ? ಯಾವಾಗಿಂದ ಕಿಲಾಡಿಗಳ ದರ್ಬಾರ್ ಶುರು ಅಂತಾ ಮುಂದೆ ನೋಡಿ....

ಬರ್ತಿದ್ದಾರೆ 'ಕಾಮಿಡಿ ಕಿಲಾಡಿಗಳು'

ಇಷ್ಟು ದಿನ 'ಡ್ರಾಮ ಜೂನಿಯರ್ಸ್' ಎಂಬ ಪುಟ್ಟ-ಪುಟ್ಟ ಮಕ್ಕಳ ನಾಟಕ ನೋಡಿ ಎಂಜಾಯ್ ಮಾಡಿದ್ದ ವೀಕ್ಷಕರು, ಇನ್ನು ಮುಂದೆ ಕಿಲಾಡಿಗಳು ಮಾಡೋ ಕಾಮಿಡಿ ನೋಡಿ ಬಿದ್ದು-ಬಿದ್ದು ನಗಬಹುದು.

ತೀರ್ಪುಗಾರರಾಗಿ ಜಗ್ಗೇಶ್-ಯೋಗರಾಜ ಭಟ್-ರಕ್ಷಿತಾ

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮುಖ್ಯ ತೀರ್ಪುಗಾರರಾಗಿ ನವರಸ ನಾಯಕ ಜಗ್ಗೇಶ್ ಕಾರ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಸ್ಟಾರ್ ನಿರ್ದೇಶಕ ಯೋಗರಾಜ ಭಟ್, ಹಾಗೂ ಸ್ಯಾಂಡಲ್ ವುಡ್ ನಟಿ ರಕ್ಷಿತಾ ಕೂಡ ಪ್ರಮುಖ ಜಡ್ಜ್ ಗಳಾಗಿ ಕಾಣಿಸಿಕೊಳ್ಳಲಿದ್ದಾರೆ.['ಮಸಾಲೆ ದೋಸೆ ಸೌಮ್ಯ' ಎಂಬ ಟೈಟಲ್ ನ ಜಗ್ಗೇಶ್ ಯಾಕ್ ರಿಜಿಸ್ಟರ್ ಮಾಡ್ಸಿದ್ರು? ]

ಕಿಲಾಡಿಗಳ ಎಂಟ್ರಿ ಯಾವಾಗ ?

ಅಕ್ಟೋಬರ್ 15 ಅಂದ್ರೆ ಇದೇ ವಾರದಿಂದ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ 'ಕಾಮಿಡಿ ಕಿಲಾಡಿಗಳು' ಪ್ರಸಾರವಾಗಲಿದೆ.

'ಕಾಮಿಡಿ ಟೈಮ್' ಯಾವುದು ?

ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಯಿಂದ 10 ಗಂಟೆವರೆಗೂ ಕಾಮಿಡಿ ಕಿಲಾಡಿಗಳು ನಿಮ್ಮ ಮನೆಗೆ ಬರ್ತಿದ್ದಾರೆ.

ಮತ್ತೆ ಬಂದ 'ಮಾಸ್ಟರ್ ಆನಂದ್'

'ಡ್ರಾಮ ಜೂನಿಯರ್ಸ್' ಮೂಲಕ ವೀಕ್ಷಕರ ಹೃದಯ ಗೆದ್ದ ಮಾಸ್ಟರ್ ಆನಂದ್ ಮತ್ತೆ ನಿಮ್ಮ ಮುಂದೆ ಹಾಜರಾಗ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮವನ್ನ ನಿರೂಪಣೆ ಮಾಡುವ ಮೂಲಕ ಮತ್ತೆ ನಿಮ್ಮೆಲ್ಲರನ್ನ ರಂಜಿಸಲು ಬರ್ತಿದ್ದಾರೆ.

ಕಾಮಿಡಿ 'ಕಿಕ್' ಗ್ಯಾರೆಂಟಿ !

ಮಕ್ಕಳ ಡ್ರಾಮಾ ನೋಡಿ ಇಷ್ಟ ಪಟ್ಟಿದ್ದ ವೀಕ್ಷಕರು ಇನ್ಮುಂದೆ ಕಿಲಾಡಿಗಳ ಕಿಕ್ ನೋಡಿ ಎಂಜಾಯ್ ಮಾಡಬಹುದು

English summary
Kannada Entertainment Channel Zee Kannada has come up with a new Comedy Show called 'Comedy Khiladigalu'. show start on this week means october 15th night 9pm. Kannada actor Jaggesh, director yogaraj bhat, and kannada actress rakshitha judging this reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada