For Quick Alerts
  ALLOW NOTIFICATIONS  
  For Daily Alerts

  ಉದಯ ಟಿವಿಯಲ್ಲಿ ವಿಜಯದಶಮಿಯಂದು 'ದಸರಾ ಉತ್ಸವ'

  |

  ಈ ದಸರಾ ಹಬ್ಬಕ್ಕೆ ಮನರಂಜನೆಯ ಪಾಕವನ್ನೇ ಉಣಬಡಿಸುತ್ತಿದೆ ನಿಮ್ಮ ಉದಯ ಟಿವಿ. ಮನರಂಜನೆ ಕಾರ್ಯಕ್ರಮಗಳಲ್ಲಿ ಸದಾ ವಿಭಿನ್ನ ರೂಪವನ್ನು ಅಳವಡಿಸಿಕೊಂಡು, ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಹೆಚ್ಚಿಸುವ ನಿಟ್ಟಿನಲ್ಲಿ ಉದಯ ಟಿವಿ 'ದಸರಾ ಉತ್ಸವ' ಎಂಬ ವಿಶೇಷ ಕಾರ್ಯಕ್ರಮವನ್ನ ಹೊತ್ತು ತಂದಿದೆ.

  ಉದಯ ಸೀರಿಯಲ್ ತಾರೆಗಳಾಗಿರುವ ಯಮುನಾ ಶ್ರೀನಿಧಿ, ದಿವ್ಯಾ, ನಂದೀಶ್, ನಯನ ಶೆಟ್ಟಿ, ದೇವ್, ಪ್ರಮೋದ್, ದೀಪಾ ಹಿರೇಮಠ್, ರಕ್ಷಾ ಹೊಳ್ಳ, ಅಕ್ಷತಾ ರಾವ್ ಹಾಗೂ ಜೈ ಹನುಮಾನ್ ಖ್ಯಾತಿಯ ಪ್ರದ್ಯುಮ್ನ ಮತ್ತು ವಿನಯ್ ಗೌಡ ಮುಖ್ಯ ಆಕರ್ಷಣೆಯಾಗಿ ಈ ದಸರಾ ಉತ್ಸವದ ಸಂಭ್ರಮಕ್ಕೆ ಜೊತೆಯಾಗಿದ್ದಾರೆ.

  ಅರುಣ್ ಹರಿಹರನ್ ಮತ್ತು ಶೀತಲ್ ಶೆಟ್ಟಿ ಇಬ್ಬರೂ ಕಾರ್ಯಕ್ರಮದ ನಿರೂಪಕರಾಗಿ ಮನರಂಜನೆಯ ಪಾಕವನ್ನೇ ಜನರಿಗೆ ಉಣಬಡಿಸಿದ್ದಾರೆ.

  ಮತ್ತೊಂದು ಪೌರಾಣಿಕ ಧಾರಾವಾಹಿ ಶುರು: ಉದಯ ಟಿವಿಯಲ್ಲಿ 'ಜೈ ಹನುಮಾನ್'ಮತ್ತೊಂದು ಪೌರಾಣಿಕ ಧಾರಾವಾಹಿ ಶುರು: ಉದಯ ಟಿವಿಯಲ್ಲಿ 'ಜೈ ಹನುಮಾನ್'

  ಇಷ್ಟು ಮಾತ್ರವಲ್ಲದೇ ಪವನ್, ತಬಲಾ ನಾಣಿ, ಮತ್ತು ವಿಶ್ವ ಅವರ ತಂಡದಿಂದ ಹಾಸ್ಯ ಪ್ರಹಸನವೂ ಸೇರಿದೆ. 9 ಜನ ಧಾರಾವಾಹಿ ನಾಯಕಿಯರು ದುರ್ಗೆ ಅವತಾರದಲ್ಲಿ ಮಾಡಿರುವ ದೇವಿ ನೃತ್ಯ ಈ ಉತ್ಸವದ ಕೇಂದ್ರ ಬಿಂದು.

  Dasara Utsav on Vijayadashami in Udaya TV

  ವಿದೂಷಿ ಯಮುನಾ ಶ್ರೀನಿಧಿ ಅವರು ದ್ವಿಪಾತ್ರದಲ್ಲಿ ಮಾಡಿರುವ ನೃತ್ಯ ಕಿರುತೆರೆಯ ಕಾರ್ಯಕ್ರಮದಲ್ಲೊಂದು ಹೊಸ ಬಗೆಯ ವಿಭಿನ್ನ ಪ್ರಯತ್ನವೆಂದೇ ಹೇಳಬಹುದು. ಹನುಮಾನ್ ಖ್ಯಾತಿಯ ಪ್ರದ್ಯುಮ್ನ ಮತ್ತು ರಾವಣ ಖ್ಯಾತಿಯ ವಿನಯ್ ಗೌಡ ಅವರು ಜೈ ಹನುಮಾನ್ ಶೀರ್ಷಿಕೆ ಗೀತೆಗೆ ಪವರ್ ಫುಲ್ ಡ್ಯಾನ್ಸ್ ಫರ್ಫಾಮೆನ್ಸ್ ನೀಡಿದ್ದಾರೆ.

  ಒಟ್ಟಿನಲ್ಲಿ ಈ ದಸರಾ ಹಬ್ಬಕ್ಕೆ ವೀಕ್ಷಕರಿಗೆ ಫುಲ್ ಪ್ಯಾಕ್ ಎಂಟರ್‍ ಟೈನ್ಮೆಂಟ್ ಕೊಡಲು ಉದಯ ಟಿವಿ ಸಜ್ಜಾಗಿದೆ. ಈ ದಸರಾ ಉತ್ಸವ ಇದೇ ಶುಕ್ರವಾರ ವಿಜಯದಶಮಿ ಪ್ರಯುಕ್ತ ಮಧ್ಯಾಹ್ನ 1 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  English summary
  Watch special program Dasara Utsav on Vijayadashami in Udaya TV.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X