For Quick Alerts
  ALLOW NOTIFICATIONS  
  For Daily Alerts

  ತನ್ನ 'ಸೀತೆ'ಯನ್ನು ಮತ್ತೊಮ್ಮೆ ಮದುವೆಯಾದ ಈ 'ಶ್ರೀರಾಮ'

  By ರವೀಂದ್ರ ಕೊಟಕಿ
  |

  ಬರೀ ವಿಚ್ಛೇದನಗಳ ಸುದ್ದಿಗಳೇ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ ಈ ಸಮಯದಲ್ಲಿ ಈ ಕಿರುತೆರೆಯ ಜೋಡಿ ಮದುವೆಯಾದ ಹತ್ತು ವರ್ಷಗಳ ನಂತರ ಮತ್ತೊಮ್ಮೆ ಮದುವೆಯಾಗಿದ್ದಾರೆ. ಈ ಮದುವೆಯ ಹಿಂದಿರುವ ಆಸಕ್ತಿದಾಯಕ ಕಥೆ ಇಲ್ಲಿದೆ...

  ಸಾಧಾರಣವಾಗಿ ಸಿನಿಮಾ, ಕಿರುತೆರೆಯ ನಟ-ನಟಿಯರು ಜೀವನದಲ್ಲಿ ವಿಚ್ಛೇದನ ಪಡೆಯುವುದು ಆ ನಂತರ ಮತ್ತೊಂದು ಮದುವೆಯಾಗುವುದು ಇಂದಿನ ದಿನಗಳಲ್ಲಿ ತುಂಬಾ ಸಾಮಾನ್ಯ. ಅಮೀರ್ ಖಾನ್, ಸೈಫ್ ಆಲಿಖಾನ್, ಧರ್ಮೇಂದರ್, ಕಿಶೋರ್ ಕುಮಾರ್, ದಿಲೀಪ್ ಕುಮಾರ್, ನಾಗಾರ್ಜುನ, ದುನಿಯಾ ವಿಜಯ್ ಹೀಗೆ ಅನೇಕ ನಟರು ಜೀವನದಲ್ಲಿ ಎರಡನೇ ವಿವಾಹ ಆಗಿದ್ದಾರೆ. ನಟರು ಮಾತ್ರವಲ್ಲ ನಟಿಯರು ಕೂಡ ಮೊದಲ ಪತಿಯಿಂದ ವಿಚ್ಛೇದನ ಪಡೆದು ಎರಡನೇ ವಿವಾಹವಾಗಿದ್ದಾರೆ.

  ಕಿರಣ್ ಕೇರ್, ಯೋಗಿತಾ ಬಾಲಿ, ಬಿಂದಿಯಾ ಗೋಸ್ವಾಮಿ, ಶ್ವೇತಾ ತಿವಾರಿ ಮುಂತಾದ ತಾರೆಯರು ಜೀವನದಲ್ಲಿ ಎರಡನೇ ಮದುವೆಯನ್ನು ಕಂಡಿದ್ದಾರೆ. ಮತ್ತೆ ಕೆಲವೊಂದು ಸಿನಿಮಾ ಮಂದಿ ಜೀವನದಲ್ಲಿ ಮೂರು ಮದುವೆಗಳು ಕೂಡ ಆಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಉಲ್ಲೇಖಿಸಬಹುದಾದ ಹೆಸರುಗಳೆಂದರೆ ಪವನ್ ಕಲ್ಯಾಣ್, ಸಂಜಯ್ ದತ್,ಕಮಲ್ ಹಾಸನ್, ತೆಲುಗು ನಟ ಸೀನಿಯರ್ ನರೇಶ್, ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ, ಇನ್ನು ಕನ್ನಡದ ಗಾಯಕ ರಾಜೇಶ್ ಕೃಷ್ಣನ್. ಸಿನಿಮಾ ಮಂದಿಯ ಜೀವನದಲ್ಲಿ ಮದುವೆ- ವಿಚ್ಛೇದನ ತುಂಬಾ ಕಾಮನ್ ಟ್ರೆಂಡ್ ಆಗಿರುವ ಈ ದಿನಗಳಲ್ಲಿ ಇಲ್ಲೊಂದು ಜನಪ್ರಿಯ ಕಿರುತೆರೆಯ ಜನಪ್ರಿಯ ತಾರಾ ಜೋಡಿಯೊಂದು ಪ್ರೀತಿಸಿ ಮದುವೆಯಾಗಿ ಮತ್ತೆ ಹತ್ತು ವರ್ಷಗಳ ನಂತರ ಮತ್ತೊಮ್ಮೆ ಮದುವೆಯಾಗಿದ್ದಾರೆ.

  ಇವರದು ಜನಪ್ರಿಯ ಸೀತಾ-ರಾಮ ಜೋಡಿ

  ಇವರದು ಜನಪ್ರಿಯ ಸೀತಾ-ರಾಮ ಜೋಡಿ

  ದೂರದರ್ಶನದಲ್ಲಿ ಪ್ರಸಾರ ಕಂಡ ರಾಮಾಯಣವನ್ನು ಯಾರು ತಾನೇ ಮರೆತಿದ್ದಾರೆ. ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿನ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಮತ್ತು ಸೀತಾ ಪಾತ್ರಧಾರಿಯಾದ ದೀಪಿಕಾ ರಾಮಾಯಣದಷ್ಟೇ ಪ್ರಸಿದ್ಧಿಗೆ ಬಂದರು. ಮತ್ತೊಮ್ಮೆ ರಾಮಾಯಣದ ಪುನರ್ ನಿರ್ಮಾಣ ಮಾಡಿದಾಗ ಖಾಸಗಿ ಚಾನೆಲ್ಲೊಂದರಲ್ಲಿ 2006 ರಿಂದ 09ರ ಮಧ್ಯೆ ಪ್ರಸಾರ ಕಂಡಿತ್ತು. ಆನಂದ್ ಸಾಗರ ಅವರ ಹೊಸ 'ರಾಮಾಯಣ' ದಲ್ಲಿ ಸೀತಾ ಮತ್ತು ಶ್ರೀರಾಮನ ಪಾತ್ರಗಳ ಮೂಲಕ ಡೆಬಿನಾ ಬ್ಯಾನರ್ಜಿ- ಗುರ್ಮಿತ್ ಚೌಧರಿ ಸಾಕಷ್ಟು ಜನಪ್ರಿಯರಾದರು. ರಾಮಾಯಣದ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಕೆಲವರ್ಷ ಜೋಡಿ ಹಕ್ಕಿಗಳಾಗಿ ತಿರುಗಾಡಿದ ಇವರು 2011ರಲ್ಲಿ ಹಿರಿಯರ ಒಪ್ಪಿಗೆಯ ಮೇಲೆ ವಿವಾಹವಾದರು.

  ಹತ್ತು ವರ್ಷಗಳ ನಂತರ ಮರು ಮದುವೆಯಾಗಿದೆ ಈ ಜೋಡಿ!

  ಹತ್ತು ವರ್ಷಗಳ ನಂತರ ಮರು ಮದುವೆಯಾಗಿದೆ ಈ ಜೋಡಿ!

  ಕಳೆದ ಹತ್ತು ವರ್ಷಗಳಿಂದ ಈ ಕಿರುತೆರೆಯ ಈ ಜನಪ್ರಿಯ ಜೋಡಿ ಇತರರಿಗೆ ಮಾದರಿಯಾಗುವಂತೆ ಜೀವನ ನಡೆಸಿಕೊಂಡು ಬಂದಿದ್ದಾರೆ. ಈಗ ಇದೇ ತಾರಾಜೋಡಿ ಮತ್ತೊಮ್ಮೆ ಮದುವೆಯಾಗಿದ್ದಾರೆ. ಮದುವೆಯಾಗಿ ಹತ್ತು ವರ್ಷ ಕಳೆದ ಮೇಲೆ ಮತ್ತೊಮ್ಮೆ ಅವರಿಬ್ಬರು ಮದುವೆಯಾಗುವ ಅವಶ್ಯಕತೆ ಏನಿತ್ತು ಅಂತ ನೀವು ಕೇಳಬಹುದು? ಆದರೆ ಇಲ್ಲೇ ಇರುವುದು ಆಸಕ್ತಿದಾಯಕ ಸಂಗತಿ.

  ಪತ್ನಿಯ ಆಸೆಯನ್ನು ಪೂರೈಸಿದ ಪತಿ

  ಪತ್ನಿಯ ಆಸೆಯನ್ನು ಪೂರೈಸಿದ ಪತಿ

  ಸರಿಯಾಗಿ 10 ವರ್ಷಗಳ ಹಿಂದೆ ಗುರ್ಮೀತ್ ತನಗಿಂತ ವಯಸ್ಸಿನಲ್ಲಿ 4ವರ್ಷ ಹಿರಿಯಳಾದ ಬೆಂಗಾಲಿ ಕುಟುಂಬಕ್ಕೆ ಸೇರಿದ ಡೆಬಿನಾಳನ್ನು ಪ್ರೀತಿಸಿ, ಹಿರಿಯರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದರು. ಆದರೆ ಬೆಂಗಾಲಿ ಕುಟುಂಬಕ್ಕೆ ಸೇರಿದ ಡೆಬಿನಾಳಿಗೆ ಬೆಂಗಾಲಿ ಸಂಪ್ರದಾಯದಂತೆ ಮದುವೆಯಾಗುವ ಇಚ್ಛೆ ಹೊಂದಿದ್ದರು. ಆದರೆ ಅದು ಆ ಸಮಯದಲ್ಲಿ ನೆರವೇರಲಿಲ್ಲ. ಇದೊಂದು ಕೊರಗು ಆಕೆಗೆ ಬಹಳ ವರ್ಷಗಳಿಂದ ಕಾಡುತ್ತಲೇ ಇತ್ತು. ಅದಕ್ಕೆ ಪತ್ನಿಯ ಇಚ್ಛೆಯನ್ನು ಅರಿತ ಪತಿ ಈಗ ಆಕೆಯ ಇಚ್ಛೆಯನ್ನು ಪೂರೈಸಲು ಮತ್ತೊಮ್ಮೆ ಮದುವೆಯಾಗಿದ್ದಾರೆ.

  ಮತ್ತೊಮ್ಮೆ ಮದುವೆಯಾಗಿದ್ದಾರೆ ದಂಪತಿ

  ಮತ್ತೊಮ್ಮೆ ಮದುವೆಯಾಗಿದ್ದಾರೆ ದಂಪತಿ

  ಕೊಲ್ಕತ್ತಾದಲ್ಲಿ ಬೆಂಗಾಲಿ ಸಂಪ್ರದಾಯದಂತೆ ಈ ಇಬ್ಬರು ಮತ್ತೊಮ್ಮೆ ಕಳೆದ ಭಾನುವಾರ ಹಿರಿಯರ ಸಮಕ್ಷಮದಲ್ಲಿ ಸಪ್ತಪದಿ ತುಳಿದು ಮತ್ತೊಮ್ಮೆ ಮದುವೆಯಾಗಿದ್ದಾರೆ. ಬೆಂಗಾಲಿ ಸಂಪ್ರದಾಯದಲ್ಲಿ ಮದುವೆಯಾಗಬೇಕೆಂಬ ತನ್ನ ಹಲವು ವರ್ಷದ ಕನಸು ನನಸಾಗಿದ್ದಕ್ಕೆ ಅತೀವ ಸಂತಸವನ್ನು ವ್ಯಕ್ತಪಡಿಸಿರುವ ಡೆಬಿನಾನ ತನ್ನ ಮದುವೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಇದಕ್ಕೆ ಬಾಲಿವುಡ್, ಕಿರುತೆರೆ ಜೊತೆಗೆ ಇವರ ಅಭಿಮಾನಿಗಳಿಂದಲೂ ಕೂಡ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

  English summary
  Actors Debina Bonnerjee and Gurmeet Choudhary married once again. They married in 2011 after 10 years they married again.
  Wednesday, October 6, 2021, 9:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X