»   » ದೀಪಾವಳಿ ಹಬ್ಬಕ್ಕೆ ಸೀರಿಯಲ್ ಸಂಭ್ರಮ; ಉದಯ ಟಿವಿಯ ವಿಶೇಷತೆಗಳು.!

ದೀಪಾವಳಿ ಹಬ್ಬಕ್ಕೆ ಸೀರಿಯಲ್ ಸಂಭ್ರಮ; ಉದಯ ಟಿವಿಯ ವಿಶೇಷತೆಗಳು.!

Posted By:
Subscribe to Filmibeat Kannada

ಬೆಳಕಿನ ಹಬ್ಬ ದೀಪಾವಳಿಯಂದು ಟಿವಿ ವೀಕ್ಷಕರಿಗೆ ಭರಪೂರ ಮನರಂಜನೆ ಸಿಗಲಿದೆ. ದೀಪದ ಹಬ್ಬದ ವಿಶೇಷವಾಗಿ ಉದಯ ಟಿವಿಯಲ್ಲಿ ಮಹಾಸಂಚಿಕೆಗಳ ಮಹಾಪೂರ ನೋಡಬಹುದು.

ಹಳೆ ಧಾರಾವಾಹಿಗಳ ಹಬ್ಬದ ಸಂಭ್ರಮದ ಜೊತೆ ಹೊಸ ಧಾರಾವಾಹಿಗಳ ಮಹಾಸಂಚಿಕೆ ನಿಮ್ಮನ್ನ ರಂಜಿಸಲು ಸಿದ್ದವಾಗಿದೆ.

ಹಾಗಿದ್ರೆ, ಯಾವ ಯಾವ ಧಾರಾವಾಹಿಯಲ್ಲಿ ಯಾವ ರೀತಿಯ ಹಬ್ಬವನ್ನ ಆಚರಿಸಲಾಗುತ್ತಿದೆ. ಯಾವ ಕಥೆಯಲ್ಲಿ ಯಾವ ತಿರುವು ಸಿಗಲಿದೆ ಎಂಬ ಮಾಹಿತಿ ಮುಂದಿದೆ ಓದಿ.....

ದೊಡ್ಮನೆ ಸೊಸೆ

ಕಥೆಯಲ್ಲಿ ಅಷ್ಟೆ ಅಲ್ಲದೆ, ಅತಿಥಿಗಳೂ ಕೂಡ ಈ ಸಂಭ್ರಮದಲ್ಲಿ ಪಾಲ್ಗೊಳ್ತಿದ್ದಾರೆ. 'ದೊಡ್ಮನೆ ಸೊಸೆ'ಯಲ್ಲಿ ದೊಡ್ಮನೆಯ ತುಂಬ ದೀಪಗಳನ್ನು ಬೆಳಗಿಸೋಕೆ ಸುಧಾ ಬೆಳವಾಡಿ ಅತಿಥಿಯಾಗಿ ಬರುತ್ತಿದ್ದಾರೆ. ಜೊತೆಗೆ ದೀಪೋತ್ಸವ ಕೂಡ ಮಾಡಿ ಮಹಾಸಂಚಿಕೆಯನ್ನ ಪ್ರಸ್ತುತ ಪಡಿಸುತ್ತಿದ್ದಾರೆ.

ನಂದಿನಿ

ಇತ್ತೀಚಿನ ದಿನಗಳಲ್ಲಿ ಟಿವಿ ಲೋಕದಲ್ಲಿ ಸಂಚಲನ ಮೂಡಿಸಿದ ಧಾರಾವಾಹಿ 'ನಂದಿನಿ'ಯಲ್ಲಿ ನಂಬೂದರಿಯ ರಹಸ್ಯದ ಸುತ್ತಾ ನಡೆಯೋ ಒಂದು ಮಹತ್ತರ ತಿರುವು ದೀಪಾವಳಿ ಮಹಾಸಂಚಿಕೆಯಲ್ಲಿ ಬಯಲಾಗುತ್ತೆ. ಹೀಗೆ ಹಲವು ವಿಶೇಷ ಕಾರ್ಯಕ್ರಮಗಳನ್ನ ದೀಪಾವಳಿಗೆ ನಿಮಗಾಗಿ ತರುತ್ತಿದೆ ಉದಯ ಟಿವಿ. 18 ರಂದು ನಂದಿನಿಯ ಮಹಾಸಂಚಿಕೆ ಪ್ರಸಾರವಾಗಲಿದೆ.

ಅರಮನೆ

ಸದ್ಯದಲ್ಲೇ 400 ಸಂಚಿಕೆಯಳನ್ನು ಪೂರೈಸಲಿರುವ 'ಅರಮನೆ' ಧಾರಾವಾಹಿ ಸಾಗರದಲ್ಲಿ ಚಿತ್ರೀಕರಣ ಮಾಡುತ್ತಿದ್ದು, ದೂರವಾಗಿದ್ದ ನಾಯಕ ಅವೀ ಮತ್ತು ನಾಯಕಿ ಸ್ಮಿತಾ ಭೇಟಿಯಾಗುವ ಪ್ರೀತಿಯ ಸನ್ನಿವೇಶದ ಮೇಲೆ ದೀಪಾವಳಿಯನ್ನ ಆಚರಿಸುತ್ತಿದ್ದಾರೆ. ಕಥೆಯ ಮುಖ್ಯ ಘಟ್ಟ ಇದ್ದಾಗಿದ್ದು, ಸತ್ತು ಹೋಗಿದ್ದಾಳೆ ಅಂದುಕೊಂಡಿದ್ದ ಸ್ಮಿತಾ ಬೇರೆ ರೂಪ ಹೊತ್ತು ಸಾಗರದಲ್ಲಿ ಅವೀಗೆ ಸಿಗುತ್ತಾಳೆ. 19ರಂದು ಅರಮನೆಯ ಮಹಾಸಂಚಿಕೆ ಪ್ರಸಾರವಾಗಲಿದೆ.

ಅವಳು

ಉದಯ ಟಿವಿಯಲ್ಲಿ ಪ್ರಸಾರವಾಗ್ತಿರುವ ಅವಳು ಧಾರಾವಾಹಿ ಈಗಾಗಲೇ ಜನಮೆಚ್ಚುಗೆ ಗಳಿಸಿ ನೂರವೈತ್ತನೇ ಸಂಚಿಕೆಯತ್ತ ಸಾಗುತ್ತಿದೆ. ಎಂದಿನಂತೆ ಹಬ್ಬದ ಸಮಯದಲ್ಲಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿರುವ ಉದಯ ಟಿವಿ ಈ ದೀಪವಾಳಿ ಹಬ್ಬಕ್ಕೆ ಅವಳು ಧಾರಾವಾಹಿಯಲ್ಲಿ ವಿಶೇಷತೆಯನ್ನು ಹೊತ್ತು ತಂದಿದೆ.

ಜೋ ಜೋ ಲಾಲಿ

ಬಾಡಿಗೆ ತಾಯಿಯಾಗಿರುವ ರಾಧಾ ಮತ್ತು ಪ್ರಪಂಚದ ಕಣ್ಣಿಗೆ ತಾಯಿಯಾಗಿರುವ ರುಕ್ಮಿಣಿಯ ಸೀಮಂತ ನಡೆಯೋ ಅದ್ದೂರಿ ಸನ್ನಿವೇಶವೇ ಜೋ ಜೋ ಲಾಲಿಯ ದೀಪಾವಳಿಯ ವಿಶೇಷ. ಪ್ರೀತಿಯ ದಂಪತಿ ಮಾಧವ, ರುಕ್ಮಿಣಿ ಜೊತೆಗೆ ಬಾಡಿಗೆ ತಾಯಿಯಾಗಿರುವ ರಾಧಾ, ಈ ಇಬ್ಬರು ಗರ್ಭಿಣಿಯರು ಒಂದು ವಿಶಿಷ್ಟ ಜಾಗದಲ್ಲಿ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ. 17 ರಂದು ಜೋ ಜೋ ಲಾಲಿಯ ಮಹಾಸಂಚಿಕೆ ಪ್ರಸಾರವಾಗಲಿದೆ.

English summary
Deepavali Special Udaya Tv Serial Celebration.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X