»   » 'ದೇವಸೇನಾ' ಕುರಿತು ಧಾರಾವಾಹಿ: 'ಕಥಾನಾಯಕಿ' ಯಾರು?

'ದೇವಸೇನಾ' ಕುರಿತು ಧಾರಾವಾಹಿ: 'ಕಥಾನಾಯಕಿ' ಯಾರು?

Posted By:
Subscribe to Filmibeat Kannada

'ಬಾಹುಬಲಿ' ಚಿತ್ರದಲ್ಲಿ ಪ್ರೇಕ್ಷಕರನ್ನ ಕಾಡುವ ಪಾತ್ರಗಳಲ್ಲಿ 'ದೇವಸೇನಾ' ಪ್ರಮುಖವಾದದು. ಈ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಅವರ ಅಭಿನಯಿಸಿದ್ದು, ಅನುಷ್ಕಾಳ ಕಣ್ಣು ಕುಕ್ಕುವ ಸೌಂದರ್ಯ, ಕತ್ತಿ ಹಿಡಿದು ಕಾದಾಡುವ ಪರಿ, ನೋಡಿದವರು ಒಂದು ಕ್ಷಣ ಮೂಕ ವಿಸ್ಮಿತರನ್ನಾಗಿಸುತ್ತದೆ.

ಇಂತಹ ಪಾತ್ರವನ್ನ ನೋಡುತ್ತಿದ್ದರೇ, ಮತ್ತೆ ಪದೆ ಪದೆ ನೋಡಬೇಕೆಂಬ ಬಯಕೆ ಬರುವುದು ಸಹಜ. ಅಷ್ಟರ ಮಟ್ಟಿಗೆ 'ದೇವಸೇನಾ' ಪಾತ್ರ ಮನಮೋಹಕವಾಗಿದೆ.

ಹೀಗೆ 'ಬಾಹುಬಲಿ' ಚಿತ್ರದಲ್ಲಿ ಎಲ್ಲರನ್ನ ಮೀರಿಸಿ ಗಮನ ಸೆಳೆದ 'ದೇವಸೇನಾ' ಈಗ ಧಾರಾವಾಹಿ ಮೂಲಕ ಮತ್ತೆ ನಿಮ್ಮ ಮನೆಗೆ ಬರುತ್ತಿದ್ದಾಳೆ. ಹೌದು, 'ಆರಂಭ್' ಹೆಸರಿನಲ್ಲಿ 'ದೇವಸೇನಾ' ಕಥೆ ಧಾರಾವಾಹಿ ಆಗಿದೆ. ಮುಂದೆ ಓದಿ.....

'ಆರಂಭ್' ಆದ ದೇವಸೇನಾ ಕಹಾನಿ

'ಬಾಹುಬಲಿ ಚಿತ್ರದ 'ದೇವಸೇನಾ'ಳ ಕಥೆ ಈಗ ಧಾರಾವಾಹಿ ಆಗಿದೆ. ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ. ಈ ಧಾರಾವಾಹಿಗೆ ‘ಆರಂಭ್' ಎಂದು ಹೆಸರಿಡಲಾಗಿದ್ದು, 100 ಎಪಿಸೋಡ್ ಗಳು ಮೂಡಿ ಬರಲಿದೆ.

ಕೆ.ವಿ ವಿಜಯೇಂದ್ರ ಪ್ರಸಾದ್ ಕಥೆ

'ಬಾಹುಬಲಿ'ಗೆ ಕಥೆ ಬರೆದಿದ್ದ ಕೆ.ವಿ ವಿಜಯೇಂದ್ರ ಪ್ರಸಾದ್ ಅವರೇ ಈ ಧಾರಾವಾಹಿಗೂ ಕಥೆ ಬರೆದಿದ್ದಾರೆ. ಅಲ್ಲಿ 'ಬಾಹುಬಲಿ' ಎಂಬ ಪಾತ್ರವನ್ನ ಪ್ರಧಾನವಾಗಿಟ್ಟುಕೊಂಡು ಕಥೆ ಮಾಡಿದ್ದರು. ಇಲ್ಲಿ 'ದೇವಸೇನಾ' ಪಾತ್ರದ ಸುತ್ತಾ ಕಥೆ ಮಾಡುತ್ತಿದ್ದಾರಂತೆ.

'ದೇವಸೇನಾ' ಪಾತ್ರದಲ್ಲಿ 'ಕಾರ್ತಿಕಾ'

'ಬಾಹುಬಲಿ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅಭಿನಯಿಸಿದ್ದ ದೇವಸೇನಾ ಪಾತ್ರವನ್ನ, 'ಆರಂಭ್' ಧಾರಾವಹಿಯಲ್ಲಿ ಬಹುಭಾಷಾ ನಟಿ ಕಾರ್ತಿಕಾ ನಾಯರ್ ನಿರ್ವಹಿಸುತ್ತಿದ್ದಾರೆ. ಕಾರ್ತಿಕಾ ಈ ಹಿಂದೆ ‘ದಮ್ಮು', ‘ಕೋ', ‘ಮಕರ ಮಂಜು' ನಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

'ಬಾಹುಬಲಿ' ಸೆಟ್ ನಲ್ಲೆ ಶೂಟಿಂಗ್

'ಬಾಹುಬಲಿ' ಸೆಟ್ ನಲ್ಲೇ ‘ಆರಂಭ್' ಧಾರಾವಾಹಿಯ ಶೂಟಿಂಗ್ ಪ್ರಾರಂಭವಾಗಿದೆ. ಅದಕ್ಕಾಗಿ 'ಬಾಹುಬಲಿ' ಚಿತ್ರಕ್ಕಾಗಿ ಹಾಕಲಾಗಿದ್ದ ಸೆಟ್ ನ್ನ ಹಾಗೇ ಉಳಿಸಿಕೊಳ್ಳಲಾಗಿದೆ.

'ಬಾಹುಬಲಿ', 'ಶಿವಗಾಮಿ' ಪಾತ್ರಗಳಲ್ಲಿ ಯಾರು?

'ಬಾಹುಬಲಿ' ಪಾತ್ರದಲ್ಲಿ ರಜನಿಷ್ ದುಗ್ಗಲ್ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟಿ ತನುಜಾ ಶಿವಗಾಮಿ ಪಾತ್ರದಲ್ಲಿ ಮಿಂಚಲಿದ್ದಾರೆ. ಸದ್ಯ, ಆರಂಭ್ ಧಾರಾವಹಿಯ ಪ್ರೋಮೋ ಪ್ರಸಾರವಾಗುತ್ತಿದ್ದು, ಧಾರಾವಾಹಿ ಯಾವಾಗಿನಿಂದ ಪ್ರಸಾರವಾಗಲಿದೆ ಅಂತ ಮಾತ್ರ ಇನ್ನೂ ಹೇಳಿಲ್ಲ.

[ದೇವಸೇನಾ 'ಆರಂಭ್' ಪ್ರೋಮೋ ನೋಡಿ]

English summary
Devasena’s story from Baahuabli to be made as a serial; Karthika Nair to play the lead

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada