»   » ಸಿಂಗಲ್ ಆಗಿದ್ರೆ ಎಷ್ಟೊಂದು ಅನುಕೂಲ ಇದೆ ಗೊತ್ತಾ ಬೇಕಾದ್ರೆ ಧನಂಜಯ್ ಕೇಳಿ

ಸಿಂಗಲ್ ಆಗಿದ್ರೆ ಎಷ್ಟೊಂದು ಅನುಕೂಲ ಇದೆ ಗೊತ್ತಾ ಬೇಕಾದ್ರೆ ಧನಂಜಯ್ ಕೇಳಿ

Posted By:
Subscribe to Filmibeat Kannada
ಧನಂಜಯ್ ಸಿಂಗಲ್ ಆಗಿರೋದರ ಅನುಕೂಲ ಹೇಳ್ತಾರೆ | FIlmibeat Kannada

ಸಿಂಗಲ್ ಆಗಿರುವ ಹುಡುಗರಿಗೆ ಒಂದು ಚಿಂತೆ ಇದ್ದರೆ, ಮದುವೆ ಆದವರಿಗೆ ನೂರು ಚಿಂತೆ ಇರುತ್ತದೆ. ಅದಕ್ಕೆ ಏನೋ ಮದುವೆ ಅಂದರೆ ಹುಡುಗರು ಸ್ವಲ್ಪ ದೂರ ಇರುತ್ತಾರೆ. ಇನ್ನು ಹುಡುಗರು ಸಿಂಗಲ್ ಆಗಿದ್ದರೆ ಎಷ್ಟು ಅನುಕೂಲ ಇದೆ ಎನ್ನುವುದನ್ನು ಈಗ ನಟ ಧನಂಜಯ್ ಹೇಳಿದ್ದಾರೆ.

ಕಳೆದ ವಾರ ಧನಂಜಯ್ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶಿವರಾಜ್ ಕುಮಾರ್ ''ಸಿಂಗಲ್ ಆಗಿ ಇದ್ದರೆ ಇರುವ ಮೂರು ಅನುಕೂಲಗಳನ್ನು ಹೇಳಿ ?'' ಎಂದರು.

ಕನ್ನಡದ ಈ ಹೀರೋಯಿನ್ ಮೇಲೆ ಧನಂಜಯ್ ಗೆ ಕ್ರಶ್ ಆಗಿತ್ತು

ಆಗ ಧನಂಜಯ್ ಮೊದಲನೆಯದು ''ಆರಾಮಾಗಿ ಇರಬಹುದು. ಎಲ್ಲಿ ಇದ್ದೀನಿ ಏನ್ ಮಾಡುತ್ತಾ ಇದ್ದೀನಿ, ಅಂತ ಯಾವಾಗಲೂ ರಿಪೋರ್ಟ್ ಒಪ್ಪಿಸುವ ಅವಶ್ಯಕತೆ ಇರೋದಿಲ್ಲ. ಎರಡನೆಯದು ಆರಾಮಾಗಿ ಫ್ರೆಂಡ್ಸ್ ಜೊತೆಗೆ ಜಾಸ್ತಿ ಟೈಂ ಕಳೆಯಬಹುದು. ಮೂರನೇಯದು ಯಾರಿಗೆ ಬೇಕಾದರು ಲೈನ್ ಹಾಕಬಹುದು.'' ಎಂದು ಸಿಂಗಲ್ ಆಗಿದ್ದರೆ ಇಷ್ಟೊಂದು ಅನುಕೂಲ ಇದೆ ಎಂದು ಉತ್ತರಿಸಿದರು.

Dhananjay answered Shiva Rajkumars funny question in No1 yari with Shivanna program

ಆಗ ಶಿವಣ್ಣ '' ಹೋ, ಹಾಗಾದರೆ ನಾನು ಆರಾಮಾಗಿ ಇಲ್ಲ. ಯಾರಿಗೂ ಲೈನ್ ಹಾಕಲ್ಲ. ನನ್ನ ಜೊತೆಗೆ ಯಾರು ಫ್ರೆಂಡ್ಸ್ ಬರಲ್ಲ ಅಲ್ವಾ. ನೀವೆಲ್ಲ ನಮ್ಮ ಮನೆಗೆ ಬರಲ್ವಾ. ರಾತ್ರಿ ಒಂದು, ಎರಡು ಗಂಟೆ ವರೆಗೆ ನಾವೆಲ್ಲ ಮಾತಾಡುತ್ತೇವೆ ತಾನೇ'' ಎಂದು ನಗುತ್ತಾ ಸಣ್ಣ ಟಾಂಗ್ ಕೊಟ್ಟರು. ಆಗ ಧನಂಜಯ್ ''ಅದು ನಾವು ಯಾರನ್ನು ಮದುವೆ ಆಗುತ್ತೀವಿ ಎನ್ನುವುದರ ಮೇಲೆ ಡಿಪೇಂಡ್ ಆಗುತ್ತೆ ಅಣ್ಣ'' ಎಂದರು. ಕೊನೆಗೆ ಶಿವಣ್ಣ ''ನಿನಗೆ ಸಹ ಅದೇ ರೀತಿಯ ಹೆಂಡತಿ ಸಿಗಲಿ.'' ಎಂದು ಆಶೀರ್ವಾದ ಮಾಡಿದರು.

English summary
Actor Dhananjay answered Shiva Rajkumar's funny question in Star Suvarna's new show 'No1 yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X