Don't Miss!
- News
ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರ್ಕಾರ ಕಚೇರಿ ತೆರೆಯಬೇಕು: ಸಂಜಯ್ ರಾವತ್
- Automobiles
ಪ್ರತಿ 2 ಸೆಕೆಂಡುಗಳಿಗೆ ಒಂದು ಸ್ಕೂಟರ್ ಉತ್ಪಾದನೆ ಮಾಡಲಿದೆ ಓಲಾ ಎಲೆಕ್ಟ್ರಿಕ್
- Finance
ಸೆನ್ಸೆಕ್ಸ್ 1,100 ಪಾಯಿಂಟ್ಸ್ ಕುಸಿತ: ನಿಫ್ಟಿ 332 ಪಾಯಿಂಟ್ಸ್ ಇಳಿಕೆ
- Sports
ಈ ಐಪಿಎಲ್ನ 'ಮ್ಯಾನ್ ಆಫ್ ದ ಟೂರ್ನಿ' ಹೆಸರಿಸಿದ ಮೈಕಲ್ ವಾನ್
- Lifestyle
ಕೊರೊನಾ 2ನೇ ಡೋಸ್ ಪಡೆದ ಬಳಿಕ ರೋಗ ನಿರೋಧಕ ಶಕ್ತಿ ಹೆಚ್ಚಲು ಎಷ್ಟು ದಿನ ಬೇಕು?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡದ ಈ ಹೀರೋಯಿನ್ ಮೇಲೆ ಧನಂಜಯ್ ಗೆ ಕ್ರಶ್ ಆಗಿತ್ತು

'ಟಗರು' ಸಿನಿಮಾದ ನಂತರ ನಟ ಧನಂಜಯ್ ದಿಕ್ಕು ಬದಲಾಗಿದೆ. ಹೀರೋ ಆಗಿ ಎಂಟು ಸಿನಿಮಾ ಮಾಡಿದ್ದ ಧನಂಜಯ್ ಅದಕ್ಕೂ ಮೀರಿದ ಜನಪ್ರಿಯತೆಯನ್ನು 'ಟಗರು' ಸಿನಿಮಾದ ಮೂಲಕ ಪಡೆದುಕೊಂಡಿದ್ದಾರೆ. ಡಾಲಿ ಎನ್ನುವ ಒಂದು ಪಾತ್ರದಿಂದ ಈಗ ಧನಂಜಯ್ ಎಲ್ಲರ ಹಾಟ್ ಫೇವರೇಟ್ ನಟ ಆಗಿದ್ದಾರೆ.
ಡಾಲಿ ಪಾತ್ರಕ್ಕೆ ಹುಡುಗರು ಮಾತ್ರವಲ್ಲ ಅದೆಷ್ಟೋ ಹುಡುಗಿಯರು ಸಹ ಫಿದಾ ಆಗಿದ್ದಾರೆ. ಅದು ಯಾವ ಮಟ್ಟಿಗೆ ಅಂದರೆ ಒಂದು ಹುಡುಗಿ ತನ್ನ ಭುಜದ ಮೇಲೆ ಡಾಲಿ ಎಂದು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾಳೆ. ವಿಲನ್ ಪಾತ್ರವಾದರು ಧನಂಜಯ್ ಪಾತ್ರ ಹುಡುಗಿಯರಿಗೆ ತುಂಬ ಇಷ್ಟ ಆಗಿದೆ. ಧನಂಜಯ್ ಗೆ ಮೊದಲಿನಿಂದ ಲೇಡಿ ಫ್ಯಾನ್ಸ್ ಇದ್ದಾರೆ. ಆದರೆ ಡಾಲಿ ಪಾತ್ರದ ನಂತರ ಅದು ಡಬಲ್, ತ್ರಿಬಲ್ ಆಗಿದೆ.
ಅಂದಹಾಗೆ, ಸಾಕಷ್ಟು ಹುಡುಗಿಯರಿಗೆ ಧನಂಜಯ್ ಮೇಲೆ ಕ್ರಶ್ ಆಗಿದೆ. ಅದೇ ರೀತಿ ಧನಂಜಯ್ ಗೆ ಸಹ ಕನ್ನಡದ ಒಬ್ಬ ನಟಿ ಮೇಲೆ ಕ್ರಶ್ ಆಗಿತ್ತು. ಯಾರು ಆ ನಟಿ ಎನ್ನುವ ಕುತೂಹಲ ಇದ್ದರೆ ಹಾಗೆ ಮುಂದೆ ಓದಿ...

ಕೃತಿಕಾ ಮೇಲೆ ಕ್ರಶ್
ನಟಿ ಕೃತಿಕಾ ಜಯಕುಮಾರ್ ಮೇಲೆ ನಟ ಧನಂಜಯ್ ಗೆ ಕ್ರಶ್ ಆಗಿತಂತೆ. ಈ ವಿಷಯವನ್ನು ಸ್ವತಃ ಅವರೇ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಈ ಮೂಲಕ ಡಾಲಿಯ ಮನಸ್ಸು ಕದ್ದ ಆ ಹುಡುಗಿ ಯಾರು ಎನ್ನುವ ವಿಷಯ ಎಲ್ಲರಿಗೆ ತಿಳಿದಿದೆ.

ಶಿವಣ್ಣನ ಪ್ರಶ್ನೆ
ಕಾರ್ಯಕ್ರಮದ ಮೊದಲ ಸುತ್ತಿನಲ್ಲಿ ಶಿವಣ್ಣ ''ನೀವು ನಟಿಸಿದ 9 ಸಿನಿಮಾಗಳಲ್ಲಿ ಯಾವ ನಟಿಯ ಮೇಲಾದರೂ ಕ್ರಶ್ ಆಗಿತ್ತಾ?'' ಎಂದು ಪ್ರಶ್ನೆ ಕೇಳಿದರು. ಆಗ ಧನಂಜಯ್ ''ಹೌದು,'ಬಾಕ್ಸರ್' ಸಿನಿಮಾದಲ್ಲಿ ನನ್ನ ಜೊತೆಗೆ ನಟಿಸಿದ್ದ ಕೃತಿಕಾ ಜಯಕುಮಾರ್ ಮೇಲೆ ಆ ಟೈಂ ನಲ್ಲಿ ಕ್ರಶ್ ಆಗಿತ್ತು.'' ಎಂದು ಉತ್ತರಿಸಿದರು.

ಮಾತೇ ಆಡಿಸುತ್ತಿರಲಿಲ್ಲ
''ಆ ಸಿನಿಮಾದ ಸಂದರ್ಭದಲ್ಲಿ ಕ್ರಶ್ ಆಗಿತ್ತು. ಆಮೇಲೆ ಯಾಕೋ ಅವರು ತುಂಬ ಚಿಕ್ಕ ಹುಡುಗಿ ಅನಿಸಿತು. ನಾನು ಅವರನ್ನು ಮಾತೇ ಆಡಿಸುತ್ತಿರಲಿಲ್ಲ. ಅವರು ನಿಮ್ಮ ಜೊತೆಗೆ ಕೂಡ ಸಿನಿಮಾ ಈಗ ಮಾಡುತ್ತಿದ್ದಾರೆ.'' ಎಂದು ಸಂಕೋಚದಿಂದಲೇ ಧನಂಜಯ್ ಉತ್ತರಿಸಿದರು. ಆಗ ಶಿವಣ್ಣ ''ಆಕೆ ತುಂಬ ಒಳ್ಳೆ ಹುಡುಗಿ. ಫೋನ್ ಮಾಡಿ ಇದೆಲ್ಲ ಕೇಳ್ತನಿ'' ಅಂತ ಹಾಗೆ ತಮಾಷೆ ಮಾಡಿದರು.

ಬೆಂಗಳೂರಿನ ಹುಡುಗಿ
ಕೃತಿಕಾ ಜಯಕುಮಾರ್ ಮೂಲತಃ ಬೆಂಗಳೂರಿನ ಹುಡುಗಿ. ಮೊದಲು ತೆಲುಗಿನ 'ದೃಶ್ಯಂ' ಸಿನಿಮಾದ ಮೂಲಕ ಸಿನಿಮಾ ಪಯಣ ಶುರು ಮಾಡಿದ ಕೃತಿಕಾಗೆ ಕನ್ನಡದಲ್ಲಿ 'ಬಾಕ್ಸರ್' ಮೊದಲ ಸಿನಿಮಾವಾಗಿದೆ. ಆ ಚಿತ್ರದ ನಂತರ ಮತ್ತೆ ತೆಲುಗು, ತಮಿಳು ಸಿನಿಮಾ ಮಾಡಿದ ಕೃತಿಕಾ ಈಗ ಶಿವರಾಜ್ ಕುಮಾರ್ ನಟನೆಯ 'ಕವಚ' ಚಿತ್ರದಲ್ಲಿ ನಟಿಸುತ್ತಿದ್ದಾರೆ.