»   » ದಿಗಂತ್ ಅಭಿನಯದ ಡಬ್ಬಾ ಸಿನಿಮಾ ಇದೇ! ನೋಡಲು ಆಗದೆ ಎದ್ದು ಹೋಗಿದ್ರಂತೆ ದೂದ್ ಪೇಡ!

ದಿಗಂತ್ ಅಭಿನಯದ ಡಬ್ಬಾ ಸಿನಿಮಾ ಇದೇ! ನೋಡಲು ಆಗದೆ ಎದ್ದು ಹೋಗಿದ್ರಂತೆ ದೂದ್ ಪೇಡ!

Posted By:
Subscribe to Filmibeat Kannada

ಅದಾಗಲೇ ವಿದ್ಯಾಭ್ಯಾಸ ಮುಗಿಸಿ ಮಾಡೆಲಿಂಗ್ ಮಾಡುತ್ತಿದ್ದ ದೂದ್ ಪೇಡ ದಿಗಂತ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು 2006 ರಲ್ಲಿ. 'ಮಿಸ್ ಕ್ಯಾಲಿಫೊರ್ನಿಯ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ದಿಗಂತ್ ಪಯಣ ಆರಂಭ ಆಯ್ತು.

ಅಂದಿನಿಂದ ಇಂದಿನವರೆಗೂ ಚಂದನವನದಲ್ಲಿ ದಿಗಂತ್ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ಮುಂಗಾರು ಮಳೆ', 'ಗಾಳಿಪಟ', 'ಮನಸಾರೆ', 'ಪಂಚರಂಗಿ', 'ಲೈಫು ಇಷ್ಟೇನೇ'... ಅಂತ ಹಿಟ್ ಸಿನಿಮಾಗಳಲ್ಲಿ ದಿಗಂತ್ ಅಭಿನಯಿಸಿದ್ದಾರೆ.

ಈ ನಡುವೆ ದಿಗಂತ್ ನಟಿಸಿರುವ ಡಬ್ಬಾ ಸಿನಿಮಾ ಯಾವುದು ಗೊತ್ತಾ.? ಆ ಚಿತ್ರವನ್ನ ನೀವು ನೋಡಿರ್ತೀರೋ ಇಲ್ವೋ, ಗೊತ್ತಿಲ್ಲ. ಆದ್ರೆ, ಸ್ವತಃ ದಿಗಂತ್ ಅವರಿಗೆ ಆ ಚಿತ್ರ ನೋಡಲು ಆಗದೆ ಥಿಯೇಟರ್ ನಿಂದ ಅರ್ಧಕ್ಕೆ ಎದ್ದು ಹೋಗಿದ್ದರಂತೆ.

ಈ ಸಂಗತಿಯನ್ನ ಸ್ವತಃ ದಿಗಂತ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದರು. ಸಂಪೂರ್ಣ ವರದಿ ಇಲ್ಲಿದೆ ಓದಿರಿ....

'ಸತ್ಯ' ಹೇಳಿದ ದಿಗಂತ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಗೆಳೆಯರಾದ ದಿಗಂತ್ ಹಾಗೂ ಯೋಗಿ ಭಾಗವಹಿಸಿದ್ದರು. ಮೊದಲನೇ ಸುತ್ತಿನಲ್ಲಿ ('ಸತ್ಯನಾ.? ಧೈರ್ಯನಾ.?) 'ಸತ್ಯ'ವನ್ನು ಹೇಳಲು ದಿಗಂತ್ ನಿರ್ಧರಿಸಿದರು.

ಕಿಸ್ಸಿಂಗ್ ಸೀನ್ ಬಗ್ಗೆ ಸತ್ಯ ಒಪ್ಪಿಕೊಂಡ ದೂದ್ ಪೇಡ ದಿಗಂತ್!

ದಿಗಂತ್ ಅಭಿನಯದ ಡಬ್ಬಾ ಸಿನಿಮಾ ಯಾವುದು.?

''ನಿಮ್ಮ ಯಾವುದಾದರೂ ಸಿನಿಮಾ ನೋಡಲು ಆಗದೆ ಥಿಯೇಟರ್ ನಿಂದ ಎದ್ದು ಹೋಗಿದ್ದು ಉಂಟಾ.?'' ಎಂದು ಶಿವಣ್ಣ ಪ್ರಶ್ನೆ ಕೇಳಿದರು. ಆಗ, ''ಇದೆ'' ಎನ್ನುತ್ತಾ ''ಎಸ್.ಎಂ.ಎಸ್ 6260'' ಚಿತ್ರದ ಬಗ್ಗೆ ಮೆಲುಕು ಹಾಕಲು ದಿಗಂತ್ ಆರಂಭಿಸಿದರು.

ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ದಿಗಂತ್-ಐಂದ್ರಿತಾ ರೇ!

15 ನಿಮಿಷ ಅಷ್ಟೆ ನೋಡಿದ್ದು

''ಎಸ್.ಎಂ.ಎಸ್ 6260... ಅದರಷ್ಟು ಡಬ್ಬಾ ಸಿನಿಮಾ ನಾನು ನೋಡಿಲ್ಲ. ಇನ್ಮುಂದೆ ಅಂತಹ ಸಿನಿಮಾ ಮಾಡಲ್ಲ ಅಂತ ಅಂದುಕೊಂಡಿದ್ದೇನೆ. ಯಾಕಂದ್ರೆ, ಅವರು ಹೇಳಿದ ಕತೆ ಬೇರೆ. ಶೂಟಿಂಗ್ ಮಾಡಿದ್ದು ಬೇರೆ. ಅದನ್ನ ನೋಡಲು ಆಗದೆ 15 ನಿಮಿಷಕ್ಕೆ ಎದ್ದು ಹೋದೆ. ಆದ್ಮೇಲೆ, ಪ್ರಮೋಷನ್ ಗೆ ಕರೆಯಬೇಡಿ ಅಂತ ಹೇಳಿದೆ. ರಿಲೀಸ್ ಆಗಿ ಶುಕ್ರವಾರ, ಶನಿವಾರ, ಭಾನುವಾರ ಓಡ್ತು ಅಷ್ಟೇ'' ಎಂದರು ದಿಗಂತ್

ದಿಗಂತ್ ಗೆ ಒಂದು ಆಸೆ ಇದೆ: ಅದು ಯಾವಾಗ ಈಡೇರುತ್ತೋ.?

ಶಿವಣ್ಣ ಕೂಡ ಎದ್ದು ಹೋಗಿದ್ದಾರಂತೆ

''ನಾನು ಕೂಡ ನನ್ನ ಸಿನಿಮಾ ನೋಡಲು ಆಗದೆ ಎದ್ದು ಹೋಗಿದ್ದೇನೆ'' ಎಂದು ಇದೇ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಹೇಳಿದರು. ಆದ್ರೆ, ಅದು ಯಾವ ಸಿನಿಮಾ ಅಂತ ಶಿವಣ್ಣ ಬಾಯಿಬಿಡಲಿಲ್ಲ.

English summary
Kannada Actor Diganth regrets for acting in Kannada Movie SMS 6260.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X