»   » 'ಹರಿದ್ವಾರ'ದಲ್ಲಿ ಬೀಡು ಬಿಟ್ಟ 'ದುರ್ಗಾ' ಧಾರಾವಾಹಿ ತಂಡ

'ಹರಿದ್ವಾರ'ದಲ್ಲಿ ಬೀಡು ಬಿಟ್ಟ 'ದುರ್ಗಾ' ಧಾರಾವಾಹಿ ತಂಡ

Posted By:
Subscribe to Filmibeat Kannada

ಇತ್ತೀಚೆಗೆ ಕನ್ನಡ ಧಾರಾವಾಹಿ ತಂಡಗಳು, ದೂರದ ಜಾಗಗಳಿಗೆ ಹೋಗಿ ವಿಶೇಷ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸೋದು ವಾಡಿಕೆಯಾಗಿದೆ.

ಇದೀಗ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ದುರ್ಗಾ' ಧಾರಾವಾಹಿ ಕೂಡ ಒಂದೊಳ್ಳೆ ಪ್ರವಾಸಿ ಸ್ಥಳವನ್ನು ವೀಕ್ಷಕರಿಗೆ ತೋರಿಸಲಿದೆ.[ಸುವರ್ಣ ವಾಹಿನಿಗೆ 'ದುರ್ಗಾ' ಪ್ರವೇಶ ಆಯ್ತು..!]

ಹೌದು 'ದುರ್ಗಾ' ಧಾರಾವಾಹಿ ತಂಡವು ಗಂಗಾ ನದಿ ತಟದಲ್ಲಿರುವ 'ಹರಿದ್ವಾರ'ದಲ್ಲಿ ಚಿತ್ರೀಕರಣ ನಡೆಸಿದ್ದು, ಆಕ್ಟೋಬರ್ 3ರಿಂದ ಈ ಕಂತುಗಳು ಒಂದು ತಿಂಗಳ ಕಾಲ ಪ್ರಸಾರವಾಗಲಿದೆ. ಮುಂದೆ ಓದಿ...

ಕುತೂಹಲಕಾರಿ ತಿರುವು

'ದುರ್ಗಾ' ಧಾರಾವಾಹಿಯ ಕಥಾ ಹಂದರದ ಅತ್ಯಂತ ಪ್ರಮುಖ ಘಟ್ಟ ಇದಾಗಿದ್ದು. ಸಾಕಷ್ಟು ಕುತೂಹಲಕಾರಿ ತಿರುವುಗಳು ಹರಿದ್ವಾರದ ಕಂತುಗಳಲ್ಲಿ ತೆರೆದುಕೊಳ್ಳಲಿದೆ.[ಸ್ಟಾರ್ ನಿರೂಪಕರಿಗೆ ಸಖತ್ 'ಕನೆಕ್ಷನ್' ಕೊಟ್ಟ ಅರುಣ್ ಸಾಗರ್]

'ದುರ್ಗಾ' ಧಾರಾವಾಹಿ ಕಥಾ ಹಂದರ

ನಾಯಕ ನಕುಲ್ ಮಾನಸಿಕವಾಗಿ ದುರ್ಬಲನಾಗಿದ್ದು, ಅದಕ್ಕೆ 12 ವರ್ಷದ ಹಿಂದೆ 'ಹರಿದ್ವಾರ'ದಲ್ಲಿ ನಡೆದ ಘಟನೆಯೊಂದು ಕಾರಣವಾಗಿರುತ್ತದೆ. ಈಗ ನಾಯಕಿ 'ದುರ್ಗಾ' ಹಳೆಯ ಘಟನೆಗಳು ನಡೆದ ಹರಿದ್ವಾರದ ಅದೇ ಜಾಗಕ್ಕೆ ನಾಯಕನ್ನು ಕರೆದುಕೊಂಡು ಹೋಗಿ, ಆತನ ಮಾನಸಿಕ ಸ್ಥಿತಿಯನ್ನು ಸರಿ ಮಾಡಬಹುದು ಎಂಬ ನಂಬಿಕೆಯಲ್ಲಿರುತ್ತಾಳೆ. [ಮಹಾದೇವ ವೀರಭದ್ರ ಅವತಾರ ತಾಳುವ ರೋಚಕ ಸನ್ನಿವೇಶ]

ಮುಂದೇನಾಗುತ್ತೆ?

ನಾಯಕಿ 'ದುರ್ಗಾ' ಕನಸಿನಂತೆ ನಕುಲ್ ಬದುಕು ಸರಿಯಾಗುತ್ತಾ? ಹರಿದ್ವಾರದಲ್ಲಿ 'ದುರ್ಗಾ'ಳ ಅತ್ತೆ ದಮಯಂತಿ ಮಾಡುವ ಕುತಂತ್ರಗಳೇನು? ದೇವಿಯ ಕೃಪೆಯಿರುವ ದುರ್ಗಾ ಅತ್ತೆಗೆ ಬುದ್ದಿ ಕಲಿಸ್ತಾಳಾ? ಅಥವಾ ದುರ್ಗಾ ತಾನೇ ಅಪಾಯದಲ್ಲಿ ಸಿಕ್ಕಿ ಹಾಕಿಕೊಳ್ತಾಳಾ?, 12 ವರ್ಷಗಳ ಹಿಂದೆ ನಕುಲ್ ಬದುಕಿನಲ್ಲಿ ನಡೆದ ಘಟನೆಯಾದರೂ ಏನು? ಈ ಎಲ್ಲ ಪ್ರಶ್ನೆಗಳಿಗೆ ಹರಿದ್ವಾರದ ವಿಶೇಷ ಕಂತುಗಳಲ್ಲಿ ಉತ್ತರ ಸಿಗಲಿದೆ.

ಹರಿದ್ವಾರದಲ್ಲಿ 20 ವಿಶೇಷ ಸಂಚಿಕೆ ಚಿತ್ರೀಕರಣ

ಒಟ್ಟು 20 ಚಿಕೆಗಳು ಹರಿದ್ವಾರದಲ್ಲಿ ಚಿತ್ರೀಕರಣಗೊಳ್ಳಲಿದ್ದು. ಹರಿದ್ವಾರದ ಕೆಲವು ವಿಶೇಷ ಜಾಗಗಳಲ್ಲಿ 'ದುರ್ಗಾ' ಧಾರಾವಾಹಿ ಚಿತ್ರೀಕರಣಗೊಳ್ಳಲಿದೆ. ಈಗಾಗಲೇ ಚಿತ್ರತಂಡ ಹರಿದ್ವಾರದಲ್ಲಿ ಶೂಟಿಂಗ್ ಆರಂಭಿಸಿದ್ದು, ಇದೇ ತಿಂಗಳು 29ರಿಂದ ಹರಿದ್ವಾರದ ಸಂಚಿಕೆಗಳು ಪ್ರಸಾರವಾಗಲಿದೆ.

ವಿಶೇಷ ಸಂಚಿಕೆ ಪ್ರಸಾರ ಯಾವಾಗ?

'ದುರ್ಗಾ' ಧಾರಾವಾಹಿಯ ರೋಚಕ ತಿರುವಿನ ಸಂಚಿಕೆಗಳು ಇದೇ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7ಕ್ಕೆ, ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
Durga one of the most popular show which is being telecasted at 7.00 PM in your favourite Star Suvarna Channel is all set to introduce a new track in the story line. Team Durga has travelled to Haridwara, a holy place in North India for the new track and episodes shot in Haridwara would be telecasted from October 03rd onwards.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada