»   » ಗೊಂದಲದಲ್ಲಿರುವ ಸಿದ್ದು, ಮದುವೆ ಇಷ್ಟವಿಲ್ಲ ಅಂದ್ಬಿಟ್ಟ!

ಗೊಂದಲದಲ್ಲಿರುವ ಸಿದ್ದು, ಮದುವೆ ಇಷ್ಟವಿಲ್ಲ ಅಂದ್ಬಿಟ್ಟ!

Posted By:
Subscribe to Filmibeat Kannada

ಒಂದೇ ವಾಹಿನಿಯ ಎರಡು ಮೆಗಾ ಸೀರಿಯಲ್ ನಿಂದ ಮತ್ತೊಂದು ಸೀರಿಯಲ್ ಕಥೆ ಹುಟ್ಟಿಕೊಂಡ ಮೂರನೇ ಕಥೆ ಹೊಸ ಧಾರಾವಾಹಿ ರೂಪದಲ್ಲಿ ಬರುವ ಮೂಲಕ ಈಟಿವಿ ಕನ್ನಡ ಹೊಸ ಸಾಹಸ ಮಾಡಿದೆ. ಅಗ್ನಿ ಸಾಕ್ಷಿ ಧಾರಾವಾಹಿಯ ಮೊದಲೆರಡು ಎಪಿಸೋಡು ನೋಡಿದ ಜನತೆ ಸೀರಿಯಲ್ ಗೆ ಬಹುಪರಾಕ್ ಹೇಳಿದ್ದಾರೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಸಿದ್ದು ಹಾಗೂ ಅಶ್ವಿನಿ ನಕ್ಷತ್ರದ ಸನ್ನಿಧಿ ಇಬ್ಬರ ಮದುವೆ ಕಥೆಯೊಂದಿಗೆ ಸೋಮವಾರ ಆರಂಭಗೊಂಡ 'ಅಗ್ನಿಸಾಕ್ಷಿ' ಧಾರಾವಾಹಿಗೆ ಪ್ರೇಕ್ಷಕ ಮನ ಸೋತಿದ್ದಾನೆ. ಕನ್ನಡ ಮೆಗಾ ಸಿರಿಯಲ್ ಗಳ ಇತಿಹಾಸದಲ್ಲೇ ಇಂಥದ್ದೊಂದು ನೈಜ ಮದುವೆ ಚಿತ್ರಣ ಕಂಡಿಲ್ಲ ಎಂದು ಪ್ರೇಕ್ಷಕರು ಮಾತನಾಡಿಕೊಂಡಿದ್ದಾರೆ.

ಅಶ್ವಿನಿ ನಕ್ಷತ್ರದ ಸೂಪರ್ ಸ್ಟಾರ್ ಜೆಕೆ ರಾಖಿ ಸಿಸ್ಟರ್ ಸನ್ನಿಧಿ ಜತೆಗೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಂದನ್ ಆಪ್ತ ಗೆಳೆಯ ಸಿದ್ದಾರ್ಥ್ ಮದುವೆ ನಿಶ್ಚಯವಾಗಿರುತ್ತದೆ. ಆದರೆ, ಲಕ್ಷ್ಮಿ ಬಾರಮ್ಮದ ಚಿನ್ನು ಪ್ರೀತಿಸುತ್ತಿರುವ ಸಿದ್ದುಗೆ ಇದು ಒತ್ತಾಯದ ಮದುವೆಯಾಗಿರುತ್ತದೆ. ತಂದೆ (ಮುಖ್ಯಮಂತ್ರಿ ಚಂದ್ರು) ಅನಾರೋಗ್ಯದಿಂದ ಈಗಷ್ಟೇ ಚೇತರಿಸಿಕೊಂಡಿರುತ್ತಾರೆ. ಹೀಗಾಗಿ ಮನಸ್ಸಿಲ್ಲದ ಮದುವೆಗೆ ಸಿದ್ದು ಸಜ್ಜಾಗಿರುತ್ತಾನೆ.

ಆದರೆ, ಹೇಗೋ ಸನ್ನಿಧಿ ಮೊಬೈಲ್ ಫೋನ್ ಪತ್ತೆ ಮಾಡಿದ ಸಿದ್ದು ಅವಳಿಗೆ ಕಾಲ್ ಕೊಡುತ್ತಾನೆ. ಆದರೆ, ಮದುವೆ ಸಂಭ್ರಮದಲ್ಲಿರುವ ಸನ್ನಿಧಿ ಫೋನ್ ಎತ್ತುವುದೇ ಇಲ್ಲ. ಸಿದ್ದು ತನ್ನ ಪ್ರೇಮ ಪುರಾಣ ಸನ್ನಿಧಿಗೆ ಹೇಳಿದ್ನಾ? ಸನ್ನಿಧಿ ಪ್ರತಿಕ್ರಿಯೆ ಹೇಗಿತ್ತು? ಮುಂದೆ ಓದಿ.. ಹಾಗೆ ಸಂಭಾಷಣೆಗಾರ ಶ್ರೀನಿಧಿ ಡಿಎಸ್ ಅವರು ಸಿದ್ದು ಮದುವೆಯ ಕಾಶಿ ಯಾತ್ರೆ, ಉಡುಗೊರೆ ನೀಡಿಕೆ ಪದ್ಧತಿಯ ಚಿತ್ರಗಳನ್ನು ಕಳಿಸಿದ್ದಾರೆ ತಪ್ಪದೇ ನೋಡಿ...

ಮದುವೆಗೆ ಮನಸಾಕ್ಷಿ ಮುಖ್ಯನಾ?

ಮದುವೆಗೆ ಮನಸಾಕ್ಷಿ ಮುಖ್ಯನಾ? ಅಥವಾ ಅಗ್ನಿಸಾಕ್ಷಿ ಮುಖ್ಯನಾ? ನೀವು ಅರೇಂಜ್ಡ್ ಮದುವೆ ಬಗ್ಗೆ ಕೇಳಿರುತ್ತೀರಾ? ಅರೇಂಜ್ಮೆಂಟ್ ಗಾಗಿ ಆಗಿರುವ ಮದುವೆ ಬಗ್ಗೆ ಗೊತ್ತಾ? ಎಂದು ಪ್ರಶ್ನಿಸುತ್ತಿರುವ ನಾಯಕ ಸಿದ್ದು ಈಗ ಸನ್ನಿಧಿಗೆ ಅದೇ ಪ್ರಶ್ನೆ ಕೇಳಿದ್ದಾನೆ . ಉತ್ತರ ಪ್ರತಿ ರಾತ್ರಿ 8 ಗಂಟೆಗೆ ಸಿಗಲಿದೆ.

ಸಿದ್ದು ಜತೆಗೆ ಚಂದನ್ ಅವರ ಅಜ್ಜ ಅಜ್ಜಿ ಹಸಮಣೆ ಏರಲು ಸಿದ್ದರಾಗಿದ್ದು, ಸಿದ್ದು ಅಂತೂ ಇಂತೂ ಕಾಶಿಯಾತ್ರೆಗೆ ಹೊರಟ ದೃಶ್ಯ ಹೀಗಿತ್ತು.

ತಾರಾ ಬಳಗ

ಅರ್ಕ ಮೀಡಿಯಾ ಹೌಸ್ ನಿರ್ಮಾಣದ ಅಗ್ನಿಸಾಕ್ಷಿ ಧಾರಾವಾಹಿಯ ನಿರ್ದೇಶಕರು ಹಯವದನ. ಹೊಸ ಕಥೆ ವಿನೂತನ ಪ್ರಯೋಗದ ಸೀರಿಯಲ್ ಗೆ ವೈಷ್ಣವಿ ಅವರು ನಾಯಕಿಯಾಗಿದ್ದರೆ, ವಿಜಯ್ ಸೂರ್ಯ ನಾಯಕ. ಲಕ್ಷ್ಮಿ ಬಾರಮ್ಮ ಧಾರಾವಾಹಿ ನಿರ್ದೇಶಕ ಸತೀಶ್ ಕೃಷ್ಣನ್ ಹಾಗೂ ಅಶ್ವಿನಿ ನಕ್ಷತ್ರ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಅವರು ಮದುವೆ ಮಂಟಪದಲ್ಲಿ ಹಯವದನ ಅವರಿಗೆ ಸಾಥ್ ನೀಡಿದ್ದಾರೆ.

ತಾಂತ್ರಿಕ ವರ್ಗ

ಬೆಂಗಳೂರಿನ ಮಾರತಹಳ್ಳಿ ಸಮೀಪವಿರುವ ಟೆಂಪೆಲ್ ಟ್ರೀ ಲೀಷರ್ ತಾಣದಲ್ಲಿ ವಿಜೃಂಭಣೆಯ ಮದುವೆ ಸೆಟ್ ಹಾಕಲಾಗಿತ್ತು. ಈಟಿವಿ ಕನ್ನಡದ ಕ್ರಿಯೆಟೀವ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಈ ಅಭೂತಪೂರ್ವ ಧಾರಾವಾಹಿ ಉಗಮಕ್ಕೆ ಸಾಕ್ಷಿಯಾಗಿದ್ದರು. ಜತೆಗೆ ಕಾರ್ತಿಕ್, ಚಿತ್ರಶ್ರೀ ಸುಂದರ್ ಮುಂತಾದವರ ಜತೆಗೆ ಹಯವದನ, ಆರೂರು ಜಗದೀಶ್, ಸತೀಶ್ ಕೃಷ್ಣನ್ ಅಲ್ಲದೆ ಶ್ರೀನಿಧಿ ಡಿಎಸ್ ಜತೆಗಿನ ಇತರೆ ತಾಂತ್ರಿಕ ವರ್ಗ ಮದುವೆ ಯಶಸ್ವಿಯಾಗಿಸಿದ್ದಾರೆ.

ಪತ್ನಿ ಜತೆ ಸಪ್ತಪದಿ

ಮನಸಾಕ್ಷಿ ಒಪ್ಪದಿದ್ದರೂ ಅನಿವಾರ್ಯವಾಗಿ ವರಪೂಜೆ, ಕಾಶಿ ಯಾತ್ರೆ, ತಾಳಿ ಕೊಟ್ಟಿದ ಮೇಲೆ ಪತ್ನಿ ಜತೆ ಸಪ್ತಪದಿ ಇಟ್ಟಿರುವ ಸಿದ್ದು

ಮದುವೆ ಮನೆಯ ಆಕರ್ಷಣೆ

ಅಶ್ವಿನಿ ನಕ್ಷತ್ರ ಧಾರಾವಾಹಿಯ ಜನಪ್ರಿಯ ಜೋಡಿ ಅಶ್ವಿನಿ ತನ್ನ ಮದುವೆ ಆತುರಾತುರವಾಗಿ ಆಗಿದ್ದರ ಬಗ್ಗೆ ಈಗ ಚಿಂತೆಯಾಗಿದೆ. ಅದರಲ್ಲೂ ಸನ್ನಿಧಿ ಬಂದು ಸಿದ್ದು ನನಗೆ ಮದುವೆ ಇಷ್ಟವಿಲ್ಲ ಎಂದಿದ್ದಾನೆ ಏನು ಮಾಡಲಿ ಎಂದು ಹೇಳಿದ ಮೇಲೆ ಅಶ್ವಿನಿ ಚಿಂತೆಗೀಡಾಗಿದ್ದಾಳೆ. ಆದರೂ ಸನ್ನಿಧಿ ಧೈರ್ಯ ತುಂಬಿ ಕಳಿಸಿದ ಅಶ್ವಿನಿ ನಂತರ ಪತಿ ದೇವ ಜೆಕೆ ಬಳಿ ಬಂದು ತಮ್ಮ ಮದುವೆ ಆಚರಣೆ ಬಗ್ಗೆ ಪ್ರಶ್ನಿಸಿದ್ದಾಳೆ

ಸಂಭ್ರಮದಲ್ಲಿ ಸನ್ನಿಧಿ

ಸನ್ನಿಧಿ ತನ್ನ ಡಿಂಪಲ್ ನಗೆ ಮೂಲಕ ಎಲ್ಲರನ್ನು ಅಕರ್ಷಿಸುತ್ತಿದ್ದಾಳೆ. ಮುಖ ಸಪ್ಪಗೆ ಮಾಡಿಕೊಂಡಿರುವ ಸಿದ್ದು ಕೊನೆಗೂ ಮದುವೆ ವಿಧಿ ವಿಧಾನದಲ್ಲಿ ಪಾಲ್ಗೊಂಡಿದ್ದಾನೆ. ಸಿದ್ದುಗೆ ವಿಜಯ್ ರಾಘವೇಂದ್ರ, ಜೆಕೆ ಹಿತ ವಚನ ನೀಡಿದ್ದಾಗಿದೆ.

ಜೆಕೆಗೆ ಉಡುಗೊರೆ

ಸನ್ನಿಧಿ ಅಣ್ಣ ಸೂಪರ್ ಸ್ಟಾರ್ ಜೆಕೆಗೆ ಉಡುಗೊರೆ ನೀಡುತ್ತಿರುವ ಸಿದ್ದಾರ್ಥ್

ಅಂತರ ಪಟ ಸರಿದಾಗ

ಅಗ್ನಿಸಾಕ್ಷಿ ಧಾರಾವಾಹಿಯ ಮದುವೆ ಮನೆಯಲ್ಲಿ ಅಂತರ ಪಟ ಸರಿದ ಸಂದರ್ಭದಲ್ಲಿನ ಸಂಭ್ರಮ

English summary
Etv Kannada Serial Agnisakshi story formed out of two popular serials Lakshmi Baramma and Ashwini Nakshatra is catching the audience well. Actor Siddu forced to marry Sannidhi and he reveals his past love story and refuses to marry Sannidhi
Please Wait while comments are loading...