»   » ಸೆಂಚುರಿ ಪೂರೈಸಿದ ಈಟಿವಿ ಕನ್ನಡ ಧಾರಾವಾಹಿ

ಸೆಂಚುರಿ ಪೂರೈಸಿದ ಈಟಿವಿ ಕನ್ನಡ ಧಾರಾವಾಹಿ

Posted By:
Subscribe to Filmibeat Kannada

ಈಗ ಕಿರುತೆರೆ ಧಾರಾವಾಹಿಗಳು ಸೆಂಚುರಿ ಪೂರೈಸುವುದೆಂದರೆ ಅದು ವಾಹಿನಿಗಳ ಮಟ್ಟಿಗೆ ಸಂಭ್ರಮದ ಸುದ್ದಿ. ರಿಯಾಲಿಟಿ ಶೋಗಳು, ಗೇಮ್ ಶೋಗಳ ನಡುವೆ ಹರಿದು ಹಂಚಿಹೋಗಿರುವ ವೀಕ್ಷಕರನ್ನು ಸೆಳೆಯುವುದು ನಿಜಕ್ಕೂ ಸವಾಲಿನ ಕೆಲಸ.

ಆದರೆ ವಿಭಿನ್ನ ಕಥಾವಸ್ತುವನ್ನು ಒಳಗೊಂಡಿರುವ 'ಅಶ್ವಿನಿ ನಕ್ಷತ್ರ' ಧಾರಾವಾಹಿ ತನ್ನ ವೀಕ್ಷಕ ಬಳಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬೇಕು. ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಸೆಂಚುರಿ ಪೂರೈಸಿರುವುದೇ ಇದಕ್ಕೆ ಪುರಾವೆ.

Ashwini Nakshatra

ಸೂಪರ್ ಸ್ಟಾರ್ ಜೆಕೆ (ಜಯಕೃಷ್ಣ) ಹಾಗೂ ಮಧ್ಯಮ ವರ್ಗದ ಹುಡುಗಿ ಅಶ್ವಿನಿ ನಡುವಿನ ಕಥೆ ವಾಹಿನಿಯ ವೀಕ್ಷಕರಿಗೆ ಬಹಳ ಹಿಡಿಸಿದೆ. ವಿಭಿನ್ನ ಕಥೆಯೇ ತಮ್ಮ ಸೀರಿಯಲ್ ಯಶಸ್ವಿಯಾಗಲು ಕಾರಣ ಎನ್ನುತ್ತಾರೆ ಅಶ್ವಿನಿ ನಕ್ಷತ್ರ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್.

ಆರಂಭದಲ್ಲಿ ಸೂಪರ್ ಸ್ಟಾರ್ ಜೆಕೆಯನ್ನು ಕಂಡರೆ ಉರಿದು ಬೀಳುತ್ತಿದ್ದ ಅಶ್ವಿನಿ ಈಗ ಬದಲಾಗಿದ್ದಾಳೆ. ಇಬ್ಬರ ನಡುವೆ ಪ್ರೀತಿ ಚಿಗುರೊಡೆಯುತ್ತಿದೆ. ಮುಂದೆಯೂ ಸಾಕಷ್ಟು ತಿರುವುಗಳನ್ನು ಧಾರಾವಾಹಿಯಲ್ಲಿ ನೋಡಬಹುದು ಎನ್ನುತ್ತಾರೆ ನಿರ್ದೇಶಕರು.

ಕಾರ್ತಿಕ್ ಜಯರಾಂ, ಮಯೂರಿ ಮುಖ್ಯಭೂಮಿಕೆಯಲ್ಲಿರುವ ಈ ಧಾರಾವಾಹಿ ವೀಕ್ಷಕರ ಮನಗೆದ್ದಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10ರಿಂದ 10.30ಕ್ಕೆ ಈ ಧಾರಾವಾಹಿಯನ್ನು ವೀಕ್ಷಿಸಬಹುದಾಗಿದೆ. (ಒನ್ಇಂಡಿಯಾ ಕನ್ನಡ)

English summary
Etv Kannada's Ashwini Nakshatra completes 100 episodes. The drama series revolves around the life of a popular celebrity.
Please Wait while comments are loading...