For Quick Alerts
  ALLOW NOTIFICATIONS  
  For Daily Alerts

  ಈಟಿವಿ ಕನ್ನಡದಲ್ಲಿ ಮತ್ತೆ 'ಸಿಲ್ಲಿ ಲಲ್ಲಿ' ಹಾಸ್ಯರಸಾವಳಿ

  By Rajendra
  |

  ಕನ್ನಡ ಕಿರುತೆರೆ ವೀಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ 'ಸಿಲ್ಲಿ ಲಲ್ಲಿ' ಜೋಡಿ ಮತ್ತೆ ಪ್ರತ್ಯಕ್ಷವಾಗಿದೆ. ಈಟಿವಿ ಕನ್ನಡ ವಾಹಿನಿಯಲ್ಲಿ ಈ ಸಿಟ್ಕಾಮ್ (Situational Comedy) ಒಂದು ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳನ್ನು ಪೂರೈಸಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದು ಗೊತ್ತೇ ಇದೆ.

  2003ರಲ್ಲಿ ಆರಂಭವಾಗಿ 2007ರವರೆಗೆ ಕಿರುತೆರೆ ವೀಕ್ಷಕರಿಗೆ ಹಾಸ್ಯದೌತಣ ನೀಡ ಖ್ಯಾತಿ ಸಿಲ್ಲಿ ಲಲ್ಲಿಯರದ್ದು. ಈಗ 'ಸಿಲ್ಲಿ ಲಲ್ಲಿ' ಮತ್ತೆ ಈಟಿವಿ ಕನ್ನಡದಲ್ಲಿ ಪ್ರಸಾರ ಆರಂಭಿಸಿದೆ. ಸೆಪ್ಟೆಂಬರ್ 24ರಿಂದ ವಾರದಲ್ಲಿ ಐದು ದಿನ 5.30ರಿಂದ 6ಗಂಟೆವರೆಗೆ ಪ್ರಸಾರವಾಗುತ್ತಿದೆ.

  ಕನ್ನಡ ಕಿರುತೆರೆಯಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಿದ ಸೀರಿಯಲ್ ಇದು. ದಿನಕ್ಕೊಂದು ಕಥೆಗಳಿರುತ್ತಿದ ಈ ಧಾರಾವಾಹಿಯಲ್ಲಿ ಎಲ್ಲಾ ಕಲಾವಿದರೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೆ ಪ್ರೇಕ್ಷಕರ ಒತ್ತಾಯದ ಮೇರೆಗೆ 'ಸಿಲ್ಲಿ ಲಲ್ಲಿ' ಬರುತ್ತಿದ್ದಾರೆ.

  ಈ ಸೀರಿಯಲ್ ಹೆಗ್ಗಳಿಕೆ ಎಂದರೆ ಹಲವಾರು ಕಲಾವಿದರು ಬೆಳಕಿಗೆ ಬಂದಿದ್ದು. ಲಲಿತಾ ಪಾತ್ರಧಾರಿ ಲಲ್ಲಿಯಾಗಿ ಮಂಜು ಭಾಷಿಣಿ, ಡಾ.ವಿಠ್ಠಲರಾವ್ ಪಾತ್ರಧಾರಿ ರವಿಶಂಕರ್ ಈಗ ಬಿಜಿ ತಾರೆಗಳು.

  ಸಿಲ್ಲಿ ಪಾತ್ರವನ್ನು ನಮಿತಾ ರಾವ್ ಪೋಷಿಸಿದ್ದಾರೆ. ಈ ಧಾರಾವಾಹಿಯಲ್ಲಿ ಅಭಿನಯಿಸಿದ ಮಿತ್ರ ಇಂದು ಕಾಮಿಡಿ ನಟನಾಗಿ ಹೊರಹೊಮ್ಮಿದ್ದಾರೆ. ಒಟ್ಟಾರೆಯಾಗಿ ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಕಲಾವಿದರೆಲ್ಲರೂ ಇಂದು ಪುರುಸೊತ್ತಿಲ್ಲದಷ್ಟು ಬಿಜಿಯಾಗಿದ್ದಾರೆ. (ಏಜೆನ್ಸೀಸ್)

  English summary
  Etv Kannada will be re-telecasts popular sitcom 'Silli Lalli' from 24th Sept in E-TV at 5:30 P.M due to Audience requests. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X