For Quick Alerts
  ALLOW NOTIFICATIONS  
  For Daily Alerts

  ನಕ್ಕು ನಲಿಯಲು ಸಿದ್ಧರಾಗಿ: ಶೀಘ್ರದಲ್ಲೇ ಪ್ರಸಾರವಾಗಲಿದೆ 'ಗಾನ ಬಜಾನ ಸೀಸನ್- 3'

  By ಪ್ರಿಯಾ ದೊರೆ
  |

  ಭಾನುವಾರ ಅಂದರೆ ಮಸ್ತ್ ಮಜಾ ಮಾಡುವ ದಿನ. ಎಲ್ಲಾ ವಾಹಿನಿಗಳು ವೀಕೆಂಡ್‌ಗಳಲ್ಲಿ ಭರ್ಜರಿ ಕಾರ್ಯಕ್ರಮಗಳನ್ನು ನೀಡಿ ಪ್ರೇಕ್ಷಕರನ್ನು ರಂಜಿಸುತ್ತವೆ. ಇದೀಗ ಸ್ಟಾರ್ ಸುವರ್ಣ ವಾಹಿನಿ ಹೊಸ ರಿಯಾಲಿಟಿ ಶೋ ಅನ್ನು ಪ್ರಾರಂಭಿಸಲು ಸಜ್ಜಾಗಿದೆ.

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು, ರಿಯಾಲಿಟಿ ಶೊಗಳು ಬರುತ್ತಿವೆ. ಧಾರಾವಾಹಿಗಳಂತೂ ಎಲ್ಲರ ಮನಸ್ಸನ್ನು ತಂಪು ಮಾಡುತ್ತಿವೆ, ಆಕ್ರೋಶಗೊಳಿಸುತ್ತಿವೆ, ಕೋಪವನ್ನು ತರಿಸುತ್ತಿವೆ. ಅದೆಲ್ಲೆದರ ಜೊತೆಗೆ ಈ ರಿಯಾಲಿಟಿ ಶೋಗಳು ನಕ್ಕು ನಗಿಸುತ್ತಿವೆ.

  Jodi No 1 winner : ಜೋಡಿ ನಂಬರ್ ಒನ್ ರಿಯಾಲಿಟಿ ಶೋ ಗೆದ್ದ ಅಭಿಜಿತ್‌ಗೆ ಕೊಟ್ಟ ಬಹುಮಾನ ಮೊತ್ತವೆಷ್ಟು?Jodi No 1 winner : ಜೋಡಿ ನಂಬರ್ ಒನ್ ರಿಯಾಲಿಟಿ ಶೋ ಗೆದ್ದ ಅಭಿಜಿತ್‌ಗೆ ಕೊಟ್ಟ ಬಹುಮಾನ ಮೊತ್ತವೆಷ್ಟು?

  ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲು ರಿಯಾಲಿಟಿ ಶೋ ಗಳು ಅದ್ಭುತ ಪಾತ್ರವನ್ನು ನಿರ್ವಹಿಸುತ್ತಿವೆ. ನಗಿಸಿ, ಕುಣಿಸಿ, ನಲಿಸಲು ಮತ್ತೊಂದು ರಿಯಾಲಿಟಿ ಶೋ ಈಗ ಪ್ರಾರಂಭವಾಗುತ್ತಿದೆ. ಅದೇ ಎಲ್ಲರ ನೆಚ್ಚಿನ ಶೋ ಗಾನ ಬಜಾನ.

   'ಗಾನಬಜಾನ ಸೀಸನ್ 3' ಆರಂಭ

  'ಗಾನಬಜಾನ ಸೀಸನ್ 3' ಆರಂಭ

  ಈ ಹಿಂದೆ 'ಗಾನ ಬಜಾನ' ರಿಯಾಲಿಟಿ ಶೋವನ್ನು ನಿರಂಜನ್ ಅದ್ಭುತವಾಗಿ ನಡೆಸಿಕೊಡುತ್ತಿದ್ದರು. ಸಾಕಷ್ಟು ಸಿನಿಮಾ ತಾರೆಯರನ್ನು ಕರೆಸಿ ಮನರಂಜನೆಯ ಔತಣವಾಗಿ ಉಣಬಡಿಸುತ್ತಿದ್ದರು. ಹೆಚ್ಚಾಗಿ ಸಿನಿಮಾ ಟೀಂಗಳನ್ನು ಕರೆಸಿ ಸಿನಿಮಾ ಪ್ರಮೋಷನ್ ಜೊತೆ ಜೊತೆಗೆ ನೋಡುಗರಿಗೆ ಹೊಟ್ಟೆ ಹುಣ್ಣಾಗಿಸುವಷ್ಟು ನಗೆಯನ್ನು ನೀಡುತ್ತಿದ್ದರು. ಫನ್ನಿ ಫನ್ನಿ ಗೇಮ್ಸ್ ಆಡಿಸುತ್ತಾ 'ಗಾನ ಬಜಾನ' ಶೋ ಶುರುವಾಗಿದ್ದು ಗೊತ್ತೆ ಆಗದಷ್ಟು ನಗಿಸುವ ಕಾರ್ಯಕ್ರಮ ಇದಾಗಿತ್ತು. 'ಗಾನ ಬಜಾನ' ಶೋನಲ್ಲಿ ತರಹೇವಾರಿ ಮನರಂಜನೆ ಈಗಾಗಲೇ ಸಿಕ್ಕಿದೆ. ಇದೀಗ ಸೀಸನ್ 3 ಆರಂಭವಾಗುತ್ತಿದ್ದು, ಪ್ರೇಕ್ಷಕರು ಕಾತುರರಾಗಿದ್ದಾರೆ.

   ಕಲರ್ ಫುಲ್ ಆಗಿ ತಯಾರಾಗಿದೆ ಗಾನ ಬಜಾನ ವೇದಿಕೆ

  ಕಲರ್ ಫುಲ್ ಆಗಿ ತಯಾರಾಗಿದೆ ಗಾನ ಬಜಾನ ವೇದಿಕೆ

  ಮೊದಲೇ ಹೇಳಿದಂತೆ ಗಾನ ಬಜಾನ ಶೋನಲ್ಲಿ ಸಿನಿಮಾ ತಂಡಗಳಿಂದ ಹೆಚ್ಚೆಚ್ಚು ಮನರಂಜನೆ ಸಿಗುತ್ತಿತ್ತು. ಎರಡು ಸೀಸನ್‌ಗಳನ್ನು ಅದ್ಭುತವಾಗಿ ನಡೆಸಿಕೊಟ್ಟ ಕಾರ್ಯಕ್ರಮವದು, ಎಷ್ಟೋ ನೋವು ನಲಿವುಗಳನ್ನು ಕೇಳಿದ-ಹೇಳಿದ ವೇದಿಕೆಯದು, ನಕ್ಕಿದ್ದು ಉಂಟು ಅತ್ತಿದ್ದು ಉಂಟು, ಎಲ್ಲಾ ರೀತಿಯ ಬಾಂಧವ್ಯ ಬೆಸೆದ ಕಾರ್ಯಕ್ರಮ. ಈಗ ಮತ್ತೆ ಆರಂಭವಾಗುತ್ತಿದೆ. ಹಾಗಾಗಿ ಗಾನಬಜಾನ ವೇದಿಕೆಯನ್ನು ಕಲರ್ ಫುಲ್ ಆಗಿ ಗ್ರ್ಯಾಂಡ್ ಆಗಿ ಅಲಂಕಾರ ಮಾಡಲಾಗಿದೆ. ಬಣ್ಣದ ಲೋಕದ ತಾರೆಯರು ಬಣ್ಣ ಬಣ್ಣದ ವೇದಿಕೆ ಮೇಲೆ ಮತ್ತೆ ಕಂಗೊಳಿಸಲು ಬರಲಿದ್ದಾರೆ.

   ಬೆಳಕಿನ ಹಬ್ಬಕ್ಕೆ ಹೊಸ ಸೀಸನ್

  ಬೆಳಕಿನ ಹಬ್ಬಕ್ಕೆ ಹೊಸ ಸೀಸನ್

  ಪ್ರತೀ ಭಾನುವಾರ ರಾತ್ರಿ 9ಕ್ಕೆ ಗಾನ ಬಜಾನ ಪ್ರಾರಂಭವಾಗಲಿದೆ. ಈ ಬಗ್ಗೆ ಸ್ವತಃ ಸ್ಟಾರ್ ಸುವರ್ಣ ವಾಹಿನಿ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಗಾನಬಜಾನ ಕಾರ್ಯಕ್ರಮದ ಪ್ರೋಮೋವನ್ನು ಹಂಚಿಕೊಂಡಿದೆ. ಸಿಕ್ಕಾಪಟ್ಟೆ ಮೋಜು ಮಸ್ತಿ ಜೊತೆ ಬರ್ತಾ ಇದೆ, ನಿಮ್ಮ ನೆಚ್ಚಿನ ಸೆಲೆಬ್ರಿಟಿ ಗೇಮ್ ಶೋ ಬರುತ್ತಿದೆ ಎಂದ ಬರೆಯಲಾಗಿದೆ. ಅಲ್ಲಿಗೆ 'ಗಾನ ಬಜಾನ' ಶೋ ಪ್ರಾರಂಭವಾಗುವುದು ಪಕ್ಕಾ ಆಯ್ತು. ಭಾಗಶಃ ದೀಪಾವಳಿ ಹಬ್ಬಕ್ಕೆ ಗಾನ ಬಜಾನ ಸೀಸನ್ 3 ಆರಂಭವಾಗಬಹುದು ಎಂದು ಊಹಿಸಲಾಗಿದೆ.

   ಹೊಸ ಆಂಕರ್ ಯಾರಿರಬಹುದು..?

  ಹೊಸ ಆಂಕರ್ ಯಾರಿರಬಹುದು..?

  ಇನ್ನು ಗಾನ ಬಜಾನ ಕಾರ್ಯಕ್ರಮವನ್ನು ನಿರಂಜನ್ ದೇಶ್ ಪಾಂಡೆ ನಡೆಸಿಕೊಡುತ್ತಿದ್ದರು. ನಿರಂಜನ್ ಇದ್ದಲ್ಲಿ ಕಾಮಿಡಿಗೆ ಬರವಂತೂ ಕಂಡಿತ ಇರಲ್ಲ. ಆದರೆ ಈ ಬಾರಿಯ ಗಾನ ಬಜಾನ ಶೋಗೆ ಆಂಕರ್ ಆಗಿ ನಿರಂಜನ್ ಅವರೇ ಬರುತ್ತಿದ್ದಾರಾ..? ಇಲ್ಲವೇ ಬೇರೆಯವರು ಹೋಸ್ಟ್ ಮಾಡಲಿದ್ದಾರಾ ಎಂಬ ಅನುಮಾನ ಶುರುವಾಗಿದೆ. ಇದಕ್ಕೆ ಕಾರಣ ವಾಹಿನಿ ಈ ಸಲದ 'ಗಾನ ಬಜಾನ' ಶೋ ನಡೆಸಿಕೊಡುವ ಆಂಕರ್ ಯಾರೆಂದು ವೀಕ್ಷಕರನ್ನೇ ಪ್ರಶ್ನಿಸಿದೆ. ಇದು ಜನರ ಮೆದುಳಿಗೆ ಕೆಲಸ ಕೊಟ್ಟಂತಾಗಿದೆ. ಆಂಕರ್ ಪ್ರೋಮೋವನ್ನು ಕಂಡರೆ ಅಕುಲ್ ಬಾಲಾಜಿ ಗಾನ ಬಜಾನ ಸೀಸನ್ 3 ರನ್ನು ಹೋಸ್ಟ್ ಮಾಡುತ್ತಾರೆ ಎಂದು ಕೆಲವರು ಊಹಿಸಿದ್ದರೆ, ಇನ್ನು ಕೆಲವರು ನಿರಂಜನ್ ಎಂದು ಹೇಳಿದ್ದಾರೆ. ಆದರೆ ಆಂಕರ್ ಯಾರೆಂದು ವಾಹಿನಿ ರಿವೀಲ್ ಮಾಡುವವರೆಗೂ ಕಾಯಬೇಕಿದೆ.

  English summary
  Ganabajana season 3 Promo Released To Premiere Soon Here is the details about Star Suvarna Ganabajana season 3. This show may start from diwali
  Tuesday, October 11, 2022, 19:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X