»   » ಮದುವೆ ಆರ್ಕೆಸ್ಟ್ರಾದಲ್ಲಿ ಗಣೇಶ್ ಡ್ಯಾನ್ಸ್ ನೋಡಿದ್ರೆ ಎದ್ದು ಬಿದ್ದು ನಗ್ತೀರಾ!

ಮದುವೆ ಆರ್ಕೆಸ್ಟ್ರಾದಲ್ಲಿ ಗಣೇಶ್ ಡ್ಯಾನ್ಸ್ ನೋಡಿದ್ರೆ ಎದ್ದು ಬಿದ್ದು ನಗ್ತೀರಾ!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಸೂಪರ್ ಡ್ಯಾನ್ಸರ್ ಎನ್ನುವುದು ಅವರ ಸಿನಿಮಾಗಳಲ್ಲಿ ಸಾಬೀತಾಗಿದೆ. ಅದಕ್ಕಾಗಿ ಗಣೇಶ್ ಡ್ಯಾನ್ಸ್ ಕ್ಲಾಸ್ ಗೆ ಏನಾದರೂ ಹೋಗಿದ್ದರ ಗೊತ್ತಿಲ್ಲ. ಆದ್ರೆ, ಗಣೇಶ್ ಅವರ ಆಗಿನ ಡ್ಯಾನ್ಸ್ ಮುಂದೆ ಯಾರೂ ಇಲ್ಲ ಬಿಡಿ.

ಗಣೇಶ್ ಅವರ ಚಿಕ್ಕವಯಸ್ಸಿನಲ್ಲಿ ಯಾವ ಪರಿ ಡ್ಯಾನ್ಸ್ ಮಾಡುತ್ತಿದ್ದರು ಎಂಬುದಕ್ಕೆ ವೀಕೆಂಡ್ ವಿತ್ ರಮೇಶ್ ಸಾಕ್ಷಿಯಾಗಿತ್ತು. ಆರ್ಕೆಸ್ಟ್ರಾವೊಂದರಲ್ಲಿ ಗಣೇಶ್ ಮತ್ತು ಸ್ನೇಹಿತರು ಕುಣಿದಿರುವ ವಿಡಿಯೋವನ್ನ ವೀಕೆಂಡ್ ಟೆಂಟ್ ನಲ್ಲಿ ಪ್ರಸಾರ ಮಾಡಿದರು. ಈ ಡ್ಯಾನ್ಸ್ ನೋಡಿ, ಸ್ವತಃ ಗಣೇಶ್ ಅವರು ಕೂಡ ಎದ್ದು ಬಿದ್ದು ನಕ್ಕಿದರು. ಅಷ್ಟರ ಮಟ್ಟಿಗೆ ಮನರಂಜನೆಯಿಂದ ಕೂಡಿದೆ.

ಯಶಸ್ಸಿನ ಅಮಲು ಗಣೇಶ್ ನೆತ್ತಿಗೇರಿರಲಿಲ್ಲ: ಬಂದ ದಾರಿ ಮರೆಯಲಿಲ್ಲ.!

Ganesh speaks about his Dance in Marriage Orchestra

ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಿದ ಬಗ್ಗೆ ಮಾತನಾಡಿದ ಗಣೇಶ್ ''ಇದು ಯಾರ ಮದುವೆ ಎಂದೇ ಗೊತ್ತಿಲ್ಲ. ಸುಮ್ಮನೆ ಫ್ರೆಂಡ್ಸ್ ಜೊತೆ ಹೋಗ್ತಿದ್ವಿ, ಆರ್ಕೆಸ್ಟ್ರಾದಲ್ಲಿ ಚೆನ್ನಾಗಿ ಡ್ಯಾನ್ಸ್ ಮಾಡ್ತಿದ್ವಿ, ಆಮೇಲೆ ರಾತ್ರಿ ಅಲ್ಲೇ ಮಲಗ್ತಿದ್ವಿ, ಬೆಳಗ್ಗೆ ಎದ್ದು ಮನೆಗೆ ಹೋಗ್ತಿದ್ವಿ. ಮನೆಯಲ್ಲಿ ಚೆನ್ನಾಗಿ ಬೈಯಿಸಿಕೊಳ್ಳುತ್ತಿದ್ದೀವಿ ಎಂದು ನೆನಪನ್ನ ಮೆಲುಕು ಹಾಕಿದರು.

'ಗೋಲ್ಡನ್ ಸ್ಟಾರ್' ಗಣೇಶ್ ಬಗ್ಗೆ ದುನಿಯಾ ವಿಜಯ್ ಏನಂದರು.?

ಇದಷ್ಟೆ ಅಲ್ಲ, ಸ್ಕೂಲ್, ಕಾಲೇಜಿನ ಕಾರ್ಯಕ್ರಮಗಳಲ್ಲಿ ಕೂಡ ಗಣೇಶ್ ಅವರ ಸಖತ್ ಆಗಿಯೇ ಡ್ಯಾನ್ಸ್ ಮಾಡುತ್ತಿದ್ದರಂತೆ. ಸ್ಕೂಲ್ ಗೆ ಸರಿಯಾಗಿ ಹೋಗದೇ ಇದ್ದರೂ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಮಿಸ್ ಆಗುತ್ತಿರಲಿಲ್ಲವಂತೆ.

ಗಣೇಶ್ ಅವರ ಈ ಆರ್ಕೆಸ್ಟ್ರಾ ಡ್ಯಾನ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ......

English summary
Kannada Actor Golden Star Ganesh speaks about his childhood days in Weekend With Ramesh-3

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada