For Quick Alerts
  ALLOW NOTIFICATIONS  
  For Daily Alerts

  ಜು.25ರಿಂದ ಸುವರ್ಣದಲ್ಲಿ ಮೊಳಗಲಿದೆ ಹರಹರ ಮಹಾದೇವ

  By Prasad
  |

  ಭಾರತದ ಪ್ರಾದೇಶಿಕ ಚಾನಲ್‌ಗಳಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿರುವ ಸುವರ್ಣ ವಾಹಿನಿಯ ಹರ ಹರ ಮಹಾದೇವ ಹೊಸ ಇತಿಹಾಸವನ್ನು ನಿರ್ಮಿಸಲು ಹೊರಟಿದೆ. ಕನ್ನಡದ ಚಾನಲ್ ಇದೇ ಮೊದಲ ಬಾರಿಗೆ 60 ಕೋಟಿ ರು. ಬಜೆಟ್‌ನಿಂದ ಇಂತಹ ಧಾರಾವಾಹಿಯನ್ನು ಪ್ರಾರಂಭಿಸುತ್ತಿದೆ.

  ಈ ಧಾರಾವಾಹಿಯ ಮತ್ತೊಂದು ದಾಖಲೆ ಎಂದರೆ ಈ ಧಾರಾವಾಹಿಯ ಪ್ರೋಮೋ. ಇನ್ಮುಂದೆ ಪ್ರತಿದಿನ ನಿಮ್ಮ ಮನೆಯಲ್ಲಿ ಶಿವರಾತ್ರಿ ಎಂದು ಹೇಳಲು ಹೊರಟಿರುವ ಪ್ರೋಮೋ ಕೂಡಾ 50 ಲಕ್ಷ ರು.ಮೊತ್ತದ್ದಾಗಿದೆ. ಇದೇ ಪ್ರಥಮ ಬಾರಿಗೆ ಬೃಹತ್ ಮೊತ್ತದಿಂದ ತಯಾರಿಸಿದ ಪ್ರೋಮೋ ಈಗಾಗಲೇ ಸುವರ್ಣ ವಾಹಿನಿಯಲ್ಲಿ ಮತ್ತು ಎಲ್ಲ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. [ಇತಿಹಾಸ ಸೃಷ್ಟಿಸಿದ 'ಥಟ್ ಅಂತ ಹೇಳಿ' ರಸಪ್ರಶ್ನೆ ಕಾರ್ಯಕ್ರಮ.!]


  ಇಂತಹ ಅದ್ಭುತವಾದ ಪ್ರೋಮೋವನ್ನು ನಿರ್ಮಿಸಲು ಬೃಹದಾಕಾರದ ಸೆಟ್‌ನ್ನು ಮುಂಬೈಯಲ್ಲಿ ಹಾಕಿದ್ದಾರೆ. 200ಕ್ಕೂ ಹೆಚ್ಚು ಜನ ಕಾರ್ಮಿಕರು ಮತ್ತು 250 ಸಹ ಕಲಾವಿದರು ಇದರ ಯಶಸ್ವಿಗೆ ಕಾರಣರಾಗಿದ್ದಾರೆ. ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಗ್ರಾಫಿಕ್ ಡಿಸೈನರ್ಸ್ ತಮ್ಮ ಕೈಚಳಕದಿಂದ ಈ ಪ್ರೋಮೋಗೆ ಇನ್ನಷ್ಟು ಮೆರಗು ನೀಡಿದ್ದಾರೆ.

  ಈ ಕೋಟಿ ಕೋಟಿ ಬಜೆಟ್ಟಿನ ಮಹಾ ಧಾರಾವಾಹಿಗೆ ಕನ್ನಡದ ಕೋಟ್ಯಾಧಿಪತಿ ಮತ್ತು ಬಿಗ್ ಬಾಸ್ ಗಿಂತಲೂ ಹೆಚ್ಚು ಹಣ ಸುರಿಯಲಾಗಿದೆ ಎಂಬುದು ಇದರ ಹೆಗ್ಗಳಿಕೆ. ಅಲ್ಲದೆ, ವಿನೂತನ ತಂತ್ರಜ್ಞಾನವನ್ನು ಕೂಡ ಈ ಧಾರಾವಾಹಿಗಾಗಿ ಅಳವಡಿಸಲಾಗಿದೆ. [ಬ್ಯಾಂಕಾಕ್ ನಲ್ಲಿ ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್' ವೇದಿಕೆ]

  Hara Hara Mahadev to be telecast in Suvarna from 25th July

  ಈಗಾಗಲೆ ಹರ ಹರ ಮಹಾದೇವ ಪ್ರೋಮೋ ಕೋಟ್ಯಾಂತರ ವೀಕ್ಷಕರ ಮನದಲ್ಲಿ ಛಾಪು ಮೂಡಿಸಿದೆ ಎಂದರೆ, ಧಾರಾವಾಹಿ ಯಶಸ್ವಿಯಾಗುವುದು ಖಂಡಿತ ಎಂಬುದು ಸುವರ್ಣ ವಾಹಿನಿಯ ಅಭಿಮತ. ಇಂಥ ಭಾರೀ ಮೊತ್ತದ ಹರ ಹರ ಮಹಾದೇವ ಇದೇ ಜುಲೈ 25ರಿಂದ ರಾತ್ರಿ 7.30ಕ್ಕೆ ಸುವರ್ಣವಾಹಿನಿಯಲ್ಲಿ ಮೂಡಿಬರಲಿದೆ.
  English summary
  Big budget serial Hara Hara Mahadev will be telecast in Suvarna channel from 25th July. According to Suvarna tv channel more than Rs 60 crore has bee spent to produce this mega serial and more than Rs 50 lakh was spent for promo only.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X