»   » ಶಿವ 'ಚಂದ್ರಶೇಖರ'ನ ಅವತಾರ ತಾಳುವುದಾದರೂ ಯಾಕೆ.?

ಶಿವ 'ಚಂದ್ರಶೇಖರ'ನ ಅವತಾರ ತಾಳುವುದಾದರೂ ಯಾಕೆ.?

Posted By:
Subscribe to Filmibeat Kannada

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ "ಹರ ಹರ ಮಹಾದೇವ" ಎಂಬ ಪೌರಾಣಿಕ ಧಾರಾವಾಹಿಯಲ್ಲಿ ಶಿವ ದೇವನ ಪೂರ್ವಾಪರ ಕಥೆಗಳನ್ನು ಸವಿಸ್ತಾರವಾಗಿ ಹೇಳುತ್ತಾ, ಕನ್ನಡಿಗರಿಗೆ ಪ್ರೀತಿಗೆ ಸ್ಟಾರ್ ಸುವರ್ಣ ವಾಹಿನಿ ಪಾತ್ರವಾಗಿದೆ. ಇದೀಗ ಇನ್ನೊಂದು ರೋಚಕ ತಿರುವು ಇದೇ ಸೋಮವಾರದಿಂದ ಮೂಡಿಬರಲಿದೆ.

ದಕ್ಷ ಪ್ರಜಾಪತಿಯ ರಾಜ್ಯ ದರ್ಬಾರ್ ಅನ್ನು ನಿತ್ಯ ನೋಡುತ್ತಲೇ ಬಂದಿರುವ ವೀಕ್ಷಕರಿಗೆ ಈ ವಾರದಲ್ಲಿ ಒಂದು ಹೊಸದಾದ ತಿರುವು ಕಾದಿದೆ. ಮಹಾಮಂಡಲ ಸಭೆಯಲ್ಲಿ ಭಾಗವಹಿಸಿರುವ ದಕ್ಷನನ್ನು, ನಂತರ ಬ್ರಹ್ಮ ಲೋಕಕ್ಕೆ ಕರೆಸಿಕೊಳ್ಳುತ್ತಾರೆ.[ಪ್ರೀತಿ-ದ್ವೇಷಗಳ ಕೊಂಡಿ 'ಜಸ್ಟ್ ಮಾತ್ ಮಾತಲ್ಲಿ']

hara-hara-mahadeva-how-did-shiva-become-chandrashekhar

ಇದರ ತಾತ್ಪರ್ಯವಾದರು ಏನು? ಶಿವನಿಗೆ ಅವಮಾನ ಮಾಡಿದ್ದಕ್ಕೆ ದಕ್ಷನಿಗೆ ಶಿಕ್ಷೆಯಾಗುತ್ತಾ? ಎಂಬುದನ್ನು ಕಾದು ನೋಡಬೇಕಾಗಿದೆ.

ನದಿ ತೀರದಲ್ಲಿ ಋಷಿ ಮುನಿಗಳಿಗೆ ಸಹಾಯ ಮಾಡುವ ಸತಿಯನ್ನು ನಾರದ ಮುನಿಗಳು ಏಕೆ 'ಶಕ್ತಿ' ಎಂದು ಸಂಬೋಧಿಸುತ್ತಾರೆ. ಅಂದರೆ ಇಲ್ಲಿ ಶಕ್ತಿ ಯಾರು? ಅಳಿಯ ಎಂಬುದನ್ನು ಮರೆತು ದಕ್ಷ ಚಂದ್ರನಿಗೆ ಏಕೆ ಶಾಪ ಕೊಡುತ್ತಾನೆ.[ಶಿವ-ಸತಿಯ ಪ್ರೇಮಕಥೆಗೆ ತಿರುವು ನೀಡಲಿರುವ ಸುರ-ಸುಂದರಿ]

hara-hara-mahadeva-how-did-shiva-become-chandrashekhar

ಚಂದ್ರ ಶಿವನ ಮುಡಿಯೇರುವ ಹಿಂದಿನ ಕತೆಯೇನು? ಎಂಬುದು ಮುಂದಿನ ಸಂಚಿಕೆಯಲ್ಲಿ ಬರುವ ದೃಶ್ಯಗಳು. ಸತಿ ಯೋಗ ನಿದ್ರೆಗೆ ಜಾರಿ, ಅವಳ ಆರೋಗ್ಯದಲ್ಲಿ ವ್ಯತ್ಯಯವಾದಾಗ ಅವಳನ್ನು ಸುಧಾರಿಸಲು ಮಹಾದೇವ ಏನು ಮಾಡುತ್ತಾರೆ.

ಹೀಗೆ ಅನೇಕ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಪಡೆಯಲು ಹಾಗೂ ಶಿವದೇವ ಚಂದ್ರಶೇಖರನಾಗುವ ವೃತ್ತಾಂತವನ್ನು ತಿಳಿಯಲು 'ಹರ ಹರ ಮಹಾದೇವ' ಧಾರಾವಾಹಿಯನ್ನು ತಪ್ಪದೇ ವೀಕ್ಷಿಸಿ.['ಹರ ಹರ ಮಹಾದೇವ' ಪಾತ್ರಧಾರಿಗಳ ಪರಿಚಯ]

hara-hara-mahadeva-how-did-shiva-become-chandrashekhar

'ಹರ ಹರ ಮಹಾದೇವ' ಸೋಮವಾರದಿಂದ ಶುಕ್ರವಾರ ರಾತ್ರಿ 7.30 ಕ್ಕೆ, ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.

English summary
Daksha was summoned by Brahmaloka soon after Mahamandala sabhe. Narada calls Sati as Shakti after seeing her helping rushis in river side. To know more story of 'Hara Hara Mahadeva', watch Hara Hara Mahadeva , Mon – Friday night at 7.30 PM in your favourite Star Suvarna channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada