»   » ಸಿಬಿಐ ದಾಳಿ ನಡೆದಿರುವುದು ಸುಳ್ಳು: ನಟಿ ಹರಿಪ್ರಿಯಾ

ಸಿಬಿಐ ದಾಳಿ ನಡೆದಿರುವುದು ಸುಳ್ಳು: ನಟಿ ಹರಿಪ್ರಿಯಾ

Posted By:
Subscribe to Filmibeat Kannada
<ul id="pagination-digg"><li class="next"><a href="/tv/actress-haripriya-house-cbi-ride-rumour-065244.html">Next »</a></li></ul>

ಗಣಿಲಂಚ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ಈ ದಾಳಿಯ ವೇಳೆ ಸದಾಶಿವ ನಗರದಲ್ಲಿರುವ ನಟಿಯೊಬ್ಬರ ಮನೆಯ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಖಾಸಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ನಂತರ ಬಂದ ವರದಿಯಂತೆ ಇದೀಗ ನಾಲ್ಕು ಭಾಷೆಗಳಲ್ಲಿ ನಟಿಸುತ್ತಿರುವ ನಟಿ ಹರಿಪ್ರಿಯಾರ ಸದಾಶಿವ ನಗರದ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗುತ್ತಿತ್ತು.


ಆದರೆ ಈ ಕುರಿತು ಬಂದ ಸುದ್ದಿಗಳಿಗೆ ಹರಿಪ್ರಿಯಾ, 'ಸುವರ್ಣ 24X7 ಸುದ್ದಿ ವಾಹಿನಿಯಲ್ಲಿ (ಹರಿಪ್ರಿಯಾ ಸ್ಪೀಕಿಂಗ್ ಕಾರ್ಯಕ್ರಮ, ಪ್ರಸಾರ ಸಂಜೆ 5.30 ರಿಂದ 6.00) ಪ್ರತಿಕ್ರಿಯೆ ನೀಡಿದ್ದಾರೆ. "ಯಡಿಯೂರಪ್ಪ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಎಂಬುದೇ ನನಗೆ ಗೊತ್ತಿರಲಿಲ್ಲ. ಅದನ್ನು ಪೇಪರ್ ವರದಿ ನೋಡಿದ ಮೇಲೆ ತಿಳಿದುಕೊಂಡಿದ್ದೇನೆ. ಅವರಲ್ಲಿ ಯಾರ ಜೊತೆ ನನಗೆ ಸಂಬಂಧ ಕಟ್ಟಿ ಬರೆದಿದ್ದಾರೆ ಎಂಬುದೂ ನನಗೆ ಗೊತ್ತಿಲ್ಲ.

ಅಷ್ಟೇ ಅಲ್ಲ, ನನ್ನ ಮನೆ ಮೇಲೆ ಸಿಬಿಐ ದಾಳಿ ನಡೆದಿಲ್ಲ. ತಮಾಷೆ ಎಂದರೆ ನನ್ನ ಮನೆ ಇರುವುದು ಪ್ಲಾಟಿನಂ ನಗರದಲ್ಲಿ, ಸದಾಶಿವನಗರದಲ್ಲಲ್ಲ. ಎರಡು ವರ್ಷಗಳ ಹಿಂದೆ ಅಲ್ಲಿ ನಾವಿದ್ದ ಮನೆ ಬಾಡಿಗೆ ಮನೆ. ಅದಕ್ಕೆ ಸಾಕ್ಷಿಯಾಗಿ ನಾವು ಚೆಕ್ ರೂಪದಲ್ಲಿ ಕಟ್ಟಿರುವ ಬಾಡಿಗೆಯನ್ನು ಬ್ಯಾಂಕ್ ಟ್ರಾನ್ಸಾಕ್ಷನ್ ನಲ್ಲಿ ನೋಡಬಹುದು. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/tv/actress-haripriya-house-cbi-ride-rumour-065244.html">Next »</a></li></ul>
English summary
Actress Haripriya clarified that there is no CBI Ride on her Home. She also told that she even don't know the son's of former Chief Minister Yeddyurappa. &#13; &#13;
Please Wait while comments are loading...