For Quick Alerts
  ALLOW NOTIFICATIONS  
  For Daily Alerts

  ಎಜೆ ಜೈಲಿನಲ್ಲಿ ವಾದ ಮಾಡುವಂತೆ ಒತ್ತಾಯ ಮಾಡಿದ ಲೀಲಾ

  By ಪ್ರಿಯಾ ದೊರೆ
  |

  ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಎಜೆಯನ್ನು ಪೊಲೀಸರು ಬೇಕಂತಲೆ ಶುಕ್ರವಾರ ಸಂಜೆ ಅರೆಸ್ಟ್ ಮಾಡಿದ್ದಾರೆ. ಇದೇ ವೇಳೆಗೆ ಅಜ್ಜಿ ಮನೆಗೆ ಬಂದಿದ್ದಾರೆ. ಮಗನನ್ನು ನೋಡಬೇಕು ಎಂದು ಹಠ ಹಿಡಿದಿದ್ದಾರೆ.

  ಆದರೆ ಮನೆಯವರೆಲ್ಲಾ ಸೇರಿ ಅಜ್ಜಿಯಿಂದ ಸತ್ಯವನ್ನು ಮುಚ್ಚಿಟ್ಟಿದ್ದಾರೆ. ಲೀಲಾ ಅಂತೂ ಅಜ್ಜಿ ಫೊನ್, ಮನೆ ಕೇಬಲ್ ತೆಗೆಸಿ, ಇಂಟರ್ನೆಟ್ ಕನೆಕ್ಷನ್ ಕಟ್ ಮಾಡಿಸಿ, ಅಜ್ಜಿಯನ್ನು ಖುಷಿಯಾಗಿಡಲು ಪ್ರಯತ್ನಪಟ್ಟಿದ್ದಾಳೆ.

  ಆದರೆ ಅಜ್ಜಿಗೆ ತನ್ನ ಮಗನನ್ನು ನೋಡಬೇಕು ಎಂಬ ಕಾತುರದಲ್ಲಿದ್ದಾಳೆ. ಗನ ನಡವಳಿಕೆ ಅಜ್ಜಿಗೆ ಅನುಮಾನ ತರಿಸಿದರೂ, ಸೊಸೆ ಲೀಲಾಳ ಮಾತಿಗೆ ಬೆಲೆ ಕೊಟ್ಟು ಸುಮ್ಮನಿದ್ದಾರೆ.

  ಜೈಲಿನಲ್ಲಿ ಕೊರಗುತ್ತಿರುವ ಎಜೆ

  ಜೈಲಿನಲ್ಲಿ ಕೊರಗುತ್ತಿರುವ ಎಜೆ

  ಲೀಲಾ ಹಾಗೂ ದುರ್ಗಾ ಸೇರಿ ಮನೆಯಲ್ಲಿ ಅಜ್ಜಿಗೆ ಎಜೆ ಅರೆಸ್ಟ್ ಆಗಿರುವ ವಿಚಾರ ತಿಳಿಯದಂತೆ ನೋಡಿಕೊಂಡಿದ್ದಾರೆ. ಲೀಲಾ ಅಜ್ಜಿಯ ಜೊತೆಗೆ ಇದ್ದುಕೊಂಡು ತನ್ನ ನೋವನ್ನು ನುಂಗಿಕೊಂಡಿದ್ದಾಳೆ. ಹೇಗಾದರೂ ಮಾಡಿ ಎಜೆಯನ್ನು ಜೈಲಿನಿಂದ ಬಿಡಿಸಬೇಕೆಂದು ಒದ್ದಾಡುತ್ತಿದ್ದಾಳೆ. ಇತ್ತ ಜೈಲಿನಲ್ಲಿರುವ ಎಜೆ ಊಟ-ತಿಂಡಿ ಮಾಡದೇ ಯೋಚನೆಯಲ್ಲಿ ಮುಳುಗಿದ್ದಾನೆ. ಅದರಲ್ಲೂ ತನ್ನ ಪ್ರೀತಿಯ ಹೆಂಡತಿ ಅಂತರಾ ಕೊಲೆ ಆರೋಪದಲ್ಲಿ ಅರೆಸ್ಟ್ ಆಗಿರುವುದು ಎಜೆಯನ್ನು ಕೊರಗುವಂತೆ ಮಾಡಿದೆ. ಯಾರು ಕಂಪ್ಲೇಟ್ ಕೊಟ್ಟರು. ತನ್ನನ್ನು ಹೀಗೆ ಅರೆಸ್ಟ್ ಮಾಡಲು ಕಾರಣವೇನು ಎಂಬುದೇ ಅರ್ಥವಾಗುತ್ತಿಲ್ಲ.

  ಅತ್ತೆಯನ್ನು ಒಪ್ಪಿಕೊಂಡ ಸೊಸೆಯಂದಿರು

  ಅತ್ತೆಯನ್ನು ಒಪ್ಪಿಕೊಂಡ ಸೊಸೆಯಂದಿರು

  ಲೀಲಾಗೆ ದುರ್ಗಾ ಸಪೋರ್ಟ್ ಮಾಡುತ್ತಿದ್ದಾಳೆ. ಎಜೆಯನ್ನು ಬಿಡಿಸಲು ಒಂದು ಕಡೆಯಿಂದ ಪ್ರಯತ್ನ ನಡೆಯುತ್ತಿದ್ದರೆ, ಮನೆಯಲ್ಲಿ ಲೀಲಾಗೆ ದುರ್ಗಾ ಜೊತೆಯಾಗಿ ನಿಂತಿದ್ದಾಳೆ. ಇನ್ನುಳಿದ ಸೊಸೆಯಂದಿರ ಬಳಿಯೂ ಮಾತನಾಡಿದ ಲೀಲಾ ಎಜೆ ಅರೆಸ್ಟ್ ಆಗಿರುವ ವಿಚಾರ ಅಜ್ಜಗೆ ತಿಳಿಯದಂತೆ ನೋಡಿಕೊಳ್ಳಲು ಸಹಾಯ ಮಾಡಿ ಎಂದು ಕೇಳಿದ್ದಾಳೆ. ಸೊಸೆಯಂದಿರು ಕೂಡ ಮನೆಯಲ್ಲಿ ಅಜ್ಜಿಯನ್ನು ಹುಷಾರಾಗಿ ನೋಡಿಕೊಂಡಿದ್ದಾರೆ. ಈ ಮೂಲಕ ಲೀಲಾ ತಮ್ಮ ಅತ್ತೆಯೆಂದು ಒಪ್ಪಿಕೊಂಡಂತಾಗಿದೆ.

  ಎಜೆ ಮೌನ ಮುರಿಯುವಂತೆ ಒತ್ತಾಯ ಮಾಡಿದ ಲೀಲಾ

  ಎಜೆ ಮೌನ ಮುರಿಯುವಂತೆ ಒತ್ತಾಯ ಮಾಡಿದ ಲೀಲಾ

  ಇನ್ನು ಕೋರ್ಟ್ ನಲ್ಲಿ ಎಜೆ ವಿರುದ್ಧ ಲಾಯರ್ ವಾದವನ್ನು ಮಂಡಿಸಿದ್ದಾರೆ. ಅಲ್ಲದೇ, ಎಜೆ ವಿರುದ್ಧ ಸಾಕ್ಷಿಯನ್ನು ಕೂಡ ತೋರಿಸಿದ್ದಾರೆ. ವೀಡಿಯೋ ನೋಡಿದ ಎಜೆ, ಲೀಲಾ ಎಲ್ಲರೂ ಶಾಕ್ ಆಗಿದ್ದಾರೆ. ಎಜೆಗಂತೂ ಮಾತು ಬರದಂತಾಗಿದೆ. ತನ್ನ ಕೇಸ್ ಗೆ ತಾನೇ ವಾದ ಮಾಡಬಹುದು ಎಂದು ಹೇಳಿದರೂ ಎಜೆ ಮಾತನಾಡುವುದಿಲ್ಲ. ಆದರೆ, ಲೀಲಾ ಎಜೆ ವಾದ ಮಂಡಿಸಲಿ ಎಂದು ಉಪಾಯ ಮಾಡಿದ್ದಾಳೆ. ಅಂತರಾ ಅವರ ಬಗ್ಗೆ ಜನ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅವರಿಗೋಸ್ಕರವಾದರೂ ನೀವು ವಾದ ಮಾಡಬೇಕು ಎಂದು ಒತ್ತಾಯ ಮಾಡುತ್ತಾಳೆ.

  ಎಜೆ ಕೋರ್ಟ್ ನಲ್ಲಿ ಗೆಲ್ಲುತ್ತಾನಾ..?

  ಎಜೆ ಕೋರ್ಟ್ ನಲ್ಲಿ ಗೆಲ್ಲುತ್ತಾನಾ..?

  ಲೀಲಾ ಮಾತುಗಳನ್ನು ಕೇಳಿದ ಎಜೆಗೆ ತನ್ನ ತಪ್ಪಿನ ಅರಿವಾಗುತ್ತೆ. ಹಾಗಾಗಿ ಎಜೆ ಕೋರ್ಟ್ ನಲ್ಲಿ ತನ್ನ ಪರವಾಗಿ ವಾದ ಮಾಡಲು ಮುಂದಾಗುತ್ತಾನೆ. ತನ್ನ ಪ್ರೀತಿ ಎಷ್ಟು ನಿಷ್ಕಲ್ಮಶವಾಗಿತ್ತು ಎಂದು ವಿವರಿಸಲು ಪ್ರಾರಂಬಿಸುತ್ತಾನೆ. ಎಜೆ ಮೌನ ಮುರಿದು ವಾದ ಶುರು ಮಾಡಿದ್ದು, ಕೇಸ್ ಗೆಲ್ಲುವುದು ಗ್ಯಾರೆಂಟಿ ಎಂದು ಪ್ರೇಕ್ಷಕರು ಊಹಿಸಿದ್ದಾರೆ. ಆದರೆ ಎಜೆ ಬಿಡುಗಡೆಯಾಗುತ್ತಾರಾ..? ಇಲ್ಲ ಮತ್ತೆ ಜೈಲು ಪಾಲಾಗುತ್ತಾರಾ ಎಂಬ ಕುತೂಹಲ ಮೂಡಿದೆ.

  English summary
  AJ hears leela words and decides to talk in court. AJ may come out of jail.
  Saturday, December 17, 2022, 18:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X