Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೊಸೆಯಂದಿರಿಗೆ ಎಜೆನೇ ಸರಿ: ದುರ್ಗಾ ಪ್ಲ್ಯಾನ್‌ನಿಂದ ಯಾರು ಸೋಲುತ್ತಾರೆ..?
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ದುರ್ಗಾ ಒಳ್ಳೆಯವಳೇ. ಆದರೆ ಅವಳಿಗೆ ಲೀಲಾ ಆ ಮನೆಗೆ ಸೊಸೆಯಾಗಿ ಬಂದದ್ದು ಇಷ್ಟವಾಗಿಲ್ಲ. ಹಾಗಾಗಿ ದುರ್ಗಾ ಲೀಲಾ ಸೊಸೆಯಾಗಿ ಮನೆಗೆ ಬಂದಾಗಿನಿಂದಲೂ ಅವಳ ವಿರುದ್ಧ ವಿಷ ಕಾರುತ್ತಿದ್ದಾಳೆ.
ಲೀಲಾ ತಂಗಿ ರೇವತಿಗೆ ಮದುವೆ ಮಾಡಲು ಮನೆಯಲ್ಲಿ ಸಿದ್ಧತೆಗಳು ನಡೆಯುತ್ತಿದೆ. ಹೀಗಾಗಿ ರೇವತಿಯನ್ನು ನೋಡಲು ಹುಡುಗನ ಕಡೆಯವರು ಬರುತ್ತಿದ್ದಾರೆ. ರೇವತಿ ಮನೆಯಲ್ಲಿ ಎಲ್ಲರೂ ರೆಡಿಯಾಗುತ್ತಿದ್ದಾರೆ. ಲೀಲಾ ಕೂಡ ಮನೆ ಕಡೆಗೆ ಹೊರಟಿದ್ದಾಳೆ.
ಇದರಲ್ಲೂ ದುರ್ಗಾ ಮಸಲತ್ತು ಮಾಡಿದ್ದಾಳೆ. ಮದುವೆ ಬ್ರೋಕರ್ ಅವರಿಗೆ ಹೇಳಿ, ಅವಮಾನ ಮಾಡಲು ಸಿದ್ಧತೆಯನ್ನು ನಡೆಸಿದ್ದಾಳೆ. ಹಣದ ಆಸೆಗೆ ಬ್ರೋಕರ್ ದುರ್ಗಾ ಮಾತನ್ನು ಕೇಳಿದ್ದಾರೆ. ಈ ಸಲ ದುರ್ಗಾ ಮಾಡಿರುವ ಪ್ಲ್ಯಾನ್ ಹೇಗೆ ವರ್ಕೌಟ್ ಆಗುತ್ತೋ ನೋಡಬೇಕಿದೆ.
ಮಗನ
ಸಂತೋಷಕ್ಕಾಗಿ
ಅಮ್ಮನ
ತ್ಯಾಗ
ಹೆಂಡತಿ
ಬಗ್ಗೆ
ಹೆಮ್ಮೆ
ಪಟ್ಟ
ರಘು

ಮನೆಗೆ ಸೀರೆಗಳನ್ನು ತಂದ ಎಜೆ
ಎಜೆ ಒಂದಷ್ಟು ಸೀರೆಗಳನ್ನು ಮನೆಗೆ ತಂದಿದ್ದಾನೆ. ಅವುಗಳನ್ನು ಲೀಲಾಗೆ ಬೇಕಿರುವ ಸೀರೆಯನ್ನು ಆರಿಸಿಕೊಳ್ಳಲು ಹೇಳಿದ್ದಾನೆ. ಲೀಲಾ ತನಗೆ, ತನ್ನ ಸಹೋದರಿ ರೇವತಿ ಹಾಗೂ ತನಗೆ ಸೀರೆ ತೆಗೆದುಕೊಂಡಿದ್ದಾಳೆ. ಸೊಸೆಯಂದಿರಿಗೂ ಸೀರೆ ಕೊಡು ಎಂದು ಎಜೆ ಹೇಳುತ್ತಾನೆ. ಸರಿ ಎಂದು ಲೀಲಾ ಹೇಳಿದ್ದನ್ನು ಸರಸ್ವತಿ ನೋಡುತ್ತಾಳೆ. ದುರ್ಗಾ ಬಳಿ ಬಂದು ಲೀಲಾ ಸೆಲೆಕ್ಟ್ ಮಾಡಿ ಬಿಟ್ಟ ಸೀರೆಯನ್ನು ನಾವು ತೆಗೆದುಕೊಳ್ಳಬೇಕಾ ಎಂದು ಹೇಳಿದ್ದಾಳೆ. ಅಷ್ಟರಲ್ಲಿ ಲೀಲಾ ರೂಮಿಗೆ ಬಂದು ಸೀರೆಗಳನ್ನು ಸೆಲೆಕ್ಟ್ ಮಾಡಿಕೊಳ್ಳಲು ಹೇಳಿದ್ದಾಳೆ.

ಬೇಸರಗೊಂಡ ಲೀಲಾ
ದುರ್ಗಾ ನೆಲದ ಮೇಲೆ ನೀರನ್ನು ಚೆಲ್ಲಿ, ಅದನ್ನು ಒರೆಸಲು ಸೀರೆಯನ್ನು ಹಾಕುತ್ತಾಳೆ. ಆಗ ಅದರಿಂದ ನಮ್ಮ ಮನೆಯ ನೆಲ ಒರೆಸುವುದು ಸರಿಯಲ್ಲ. ಪೆಟ್ರೋಲ್ ತಂದು ಸುಡಬೇಕು ಎಂದು ಸರಸ್ವತಿ ಹೇಳುತ್ತಾಳೆ. ಆಗ ದುರ್ಗಾ, ಸರಸ್ವತಿ ಮಾತಿಗೆ ತಾಳ ಹಾಕುತ್ತಾಳೆ. ಲೀಲಾ ಬೇಸರ ಮಾಡಿಕೊಂಡು ಹೋಗುತ್ತಾಳೆ. ಅಷ್ಟರಲ್ಲಿ ಎಜೆ ಬಂದು ಪ್ರಶ್ನೆ ಮಾಡುತ್ತಾನೆ. ಸೀರೆ ಇಷ್ಟವಾಗಲಿಲ್ಲವಾ ಎಂದು ಕೇಳುತ್ತಾನೆ. ಆಗ ಲೀಲಾ ನನಗೆ ಸೀರೆ ಇಷ್ಟ ಆಯ್ತು. ಆದರೆ ನಿಮ್ಮ ಸೊಸೆಯಂದಿರಿಗೆ ಇಷ್ಟವಾಗಿಲ್ಲ ಎಂದು ಹೇಳುತ್ತಾಳೆ.
ವೋಟಿಂಗ್
ಎಲ್ಲಾ
ಬೋಗಸ್:
ಬಿಗ್
ಬಾಸ್
ವಿರುದ್ಧ
'ಕರಿಯ'
ಚಿತ್ರದ
ನಾಯಕಿ
ಗಂಭೀರ
ಆರೋಪ!

ದುರ್ಗಾಳನ್ನು ಹೊಗಳಿದ ಎಜೆ
ಎಜೆ ಅವರಿಗೆ ಸೀರೆ ಇಷ್ಟವಾಗುವಂತೆ ನಾನು ಮಾಡುತ್ತೇನೆ ಬಾ ಎಂದು ಕರೆದುಕೊಂಡು ಹೋಗುತ್ತಾನೆ. ದುರ್ಗಾ ಮತ್ತು ಸರಸ್ವತಿ ಇಬ್ಬರೂ ಲೀಲಾ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ಆಗ ಎಜೆ ಸೀರೆ ಇಷ್ಟವಾಗಲಿಲ್ಲವಾ. ಯಾಕೆ ನೆಲದ ಮೇಲೆ ಹಾಕಿದ್ದೀರಾ ಎಂದು ಕೇಳುತ್ತಾನೆ. ಅದರ ಬೆಲೆ ಗೊತ್ತಾ ಚಿನ್ನದ ದಾರದಲ್ಲಿ ಡಿಸೈನ್ ಮಾಡಲಾಗಿದೆ ಎಂದೆಲ್ಲಾ ಹೇಳಿದಾಗ ಸರಸ್ವತಿ ಸಬೂಬು ಹೇಳಿ ಅದೇ ಸೀರೆಯನ್ನು ತೆಗೆದುಕೊಂಡು ತಾನು ಟ್ರಯಲ್ ನೋಡುವಂತೆ ಹೇಳಿ ಹೋಗುತ್ತಾಳೆ. ಆಗ ಎಜೆ ನೋಡಿದ್ಯ ಲೀಲಾ, ಸೀರೆ ಯಾರು ಕೊಟ್ಟರು ಅನ್ನೋದು ಅವರಿಗೆ ಬೇಕಿಲ್ಲ. ಅದರ ಬೆಲೆ ಮುಖ್ಯ ಎಂದು ಹೇಳುತ್ತಾನೆ. ದುರ್ಗಾ ನನಗ್ಯಾಕೆ ಆ ಮಾತನ್ನು ಹೇಳಿಲ್ಲ ಎಂದಿದ್ದಕ್ಕೆ, ಎಜೆ ನೀನು ಏನು ಅಂತ ಗೊತ್ತು. ಸರಸ್ವತಿ ಮತ್ತು ಲಕ್ಷ್ಮಿ ಅವರಂತೆ ಅಲ್ಲ. ನಿನಗೆ ನಾನು ಸ್ಪೆಷಲ್ ಸ್ಥಾನ ಕೊಟ್ಟಿದ್ದೀನಿ ಎಂದು ಹೇಳಿ ಹೋಗುತ್ತಾನೆ. ಇನ್ನು ಸರಸ್ವತಿ ಅಷ್ಟಕ್ಕೆ ಸುಮ್ಮನಾಗದೇ ಕೌಸಲ್ಯಗೆ ತೆಗೆದುಕೊಂಡಿದ್ದ ಸೀರೆಯನ್ನು ಕತ್ತರಿಯಿಂದ ಕತ್ತರಿಸುತ್ತಾಳೆ. ಇದನ್ನು ತಿಳಿದ ದುರ್ಗಾ ಈ ಥರ ಜುಜುಬಿ ಐಡಿಯಾ ಮಾಡೋದ್ರಲ್ಲಿ ಅರ್ಥವಿಲ್ಲ. ಮಾಡಿದರೆ ದೊಡ್ಡದಾಗಿ ಮಾಡಬೇಕು ಎನ್ನುತ್ತಾಳೆ.

ಬೇಕು ಎಂದೇ ಅವಮಾನ ಮಾಡಿದರಾ..?
ಇನ್ನು ಕೌಸಲ್ಯ ಮನೆಗೆ ರೇವತಿಯನ್ನು ನೋಡಲು ಬಂದಿದ್ದಾರೆ. ಹುಡುಗ ಹುಡುಗಿಯನ್ನು ಒಪ್ಪಿಕೊಂಡಿದ್ದಾಳೆ. ಲೀಲಾ ಅಮ್ಮ ಹಾಗೂ ತಂಗಿಗಾಗಿ ಸೀರೆಯನ್ನು ತೆಗೆದುಕೊಂಡು ಬರುತ್ತಾಳೆ. ಅಷ್ಟರಲ್ಲಿ ಹುಡುಗನ ಕಡೆಯವರು ಎಜೆ ಸಂಬಂಧ ಎಂದು ತಿಳಿದು ಹಣಕ್ಕಾಗಿ ಸೆಕೆಂಡ್ ಹ್ಯಾಂಡ್ ಮದುವೆಯಾದ ತಂಗಿ ರೇವತಿ ಎಂದು ರಿಜೆಕ್ಟ್ ಮಾಡುತ್ತಾರೆ. ಇದೆಲ್ಲವೂ ದುರ್ಗಾ ಪ್ಲ್ಯಾನ್ ಆಗಿದ್ದು, ಎಜೆಗೆ ಈ ಸತ್ಯ ಗೊತ್ತಾಗುತ್ತಾ ಅನ್ನೋ ಕುತೂಹಲ ಮೂಡಿದೆ.