For Quick Alerts
  ALLOW NOTIFICATIONS  
  For Daily Alerts

  ಪವಿತ್ರಾಳನ್ನೂ ಕೊಲ್ಲಲು ದೇವ್ ಪ್ಲ್ಯಾನ್!

  By ಪ್ರಿಯಾ ದೊರೆ
  |

  ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಎಜೆಗೆ ಈಗ ದೇವ್ ತುಂಬಾ ಒಳ್ಳೆಯವನಂತೆ ನಾಟಕವಾಡುತ್ತಿದ್ದಾನೆ. ಪವಿತ್ರಾಗೋಸ್ಕರ ವ್ರತ ಮಾಡಿದ್ದಲ್ಲದೇ, ಸಾಯಲು ಪ್ರಯತ್ನಿಸಿದ್ದಾನೆ ಎಂದು ಏಜೆ ಈಗ ದೇವ್ ಸಂಪೂರ್ಣವಾಗಿ ನಂಬಿದ್ದಾನೆ. ದೇವ್ ಏನೇ ಮಾಡಿದರೂ ತನ್ನ ಹೆಂಡತಿ ಪವಿತ್ರಾಳ ಒಳಿತಿಗಾಗಿ ಎಂದು ಅಂದುಕೊಂಡಿದ್ದಾನೆ.

  ದೇವ್ ಬಣ್ಣ ಬಯಲು ಮಾಡಲು ಲೀಲಾ ಹರಸಾಹಸ ಪಡುತ್ತಿದ್ದಾಳೆ. ಆದರೆ, ಪ್ರತೀ ಬಾರಿಯೂ ದೇವ್ ತಪ್ಪಿಸಿಕೊಳ್ಳುತ್ತಿದ್ದಾನೆ. ಲೀಲಾ ಎದುರಿಗೆ ತನ್ನ ಉದ್ದೇಶವನ್ನು ದೇವ್ ಧೈರ್ಯವಾಗಿ ಹೇಳಿದ್ದಾನೆ. ಸಾಕ್ಷಿ ಇಲ್ಲದೇ ಲೀಲಾ ಕೈಕಟ್ಟಿ ಕೂರುವಂತಾಗಿದೆ.

  'ಶ್ರೀರಸ್ತು ಶುಭಮಸ್ತು' ಬಗ್ಗೆ ನಟಿ ಸುಧಾರಾಣಿ ಹೇಳಿದ್ದೇನು..?'ಶ್ರೀರಸ್ತು ಶುಭಮಸ್ತು' ಬಗ್ಗೆ ನಟಿ ಸುಧಾರಾಣಿ ಹೇಳಿದ್ದೇನು..?

  ಈಗ ತಾನು ಮಾಡದ ತಪ್ಪಿಗೆ ಲೀಲಾ ಅಪರಾಧಿ ಜಾಗದಲ್ಲಿ ನಿಂತಿದ್ದಾಳೆ. ಎಜೆ ಬಳಿ ಕೆನ್ನೆಗೆ ಹೊಡೆಸಿಕೊಂಡಿದ್ದಲ್ಲದೇ, ಮನೆಯಿಂದ ಆಚೆ ಹಾಕಲು ಮುಂದಾಗಿದ್ದಾನೆ. ಇದು ಲೀಲಾಗೆ ಇನ್ನಷ್ಟು ಗಟ್ಟಿಯಾಗಿ ನಿಲ್ಲುವಂತೆ ಮಾಡಿದೆ.

  ಪವಿತ್ರಾಳನ್ನು ಕೊಲ್ಲಲು ಮುಂದಾದ ದೇವ್!

  ಪವಿತ್ರಾಳನ್ನು ಕೊಲ್ಲಲು ಮುಂದಾದ ದೇವ್!

  ದೇವ್ ಈಗಾಗಲೇ ಸಾಕಷ್ಟು ಬಾರಿ ತನ್ನ ಹೆಂಡತಿ ಪವಿತ್ರಾಳನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ. ಬಿಲ್ಡಿಂಗ್ ಮೇಲಿಂದ ಪವಿತ್ರಾಳನ್ನು ದೂಡಿದಾಗಲೇ ಪವಿತ್ರಾ ಸಾಯಬೇಕಿತ್ತು. ಕೈ-ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ದಾಳೆ. ಮಲಗಿದ್ದಲ್ಲೇ ಮಲಗಿರುವ, ಮಾತನಾಡಲೂ ಬಾರದ ಪವಿತ್ರಳನ್ನು ದೇವ್ ನಿತ್ಯ ಕೊಲ್ಲುತ್ತೇನೆ ಎಂದು ಹೆದರಿಸುತ್ತಲೇ ಇದ್ದಾನೆ. ಪ್ರತಿ ಭಾರಿಯೂ, ಏಜೆ ಹಾಗೂ ಲೀಲಾಳಿಂದ ಅದು ಹೇಗೊ ಪವಿತ್ರಾ ಸಾಯುವುದು ತಪ್ಪುತ್ತಿತ್ತು. ಆದರೆ ಈಗ ಇಬ್ಬರೂ ಮನೆಯಲ್ಲಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡ ದೇವ್ ಪವಿತ್ರಾಳನ್ನು ಸಾಯಿಸಲೇಬೇಕು ಎಂದು ತೀರ್ಮಾನಿಸಿದ್ದಾನೆ. ಹೀಗಾಗಿ ಅವಳನ್ನು ಎತ್ತಿಕೊಂಡು ಬಂದಿರುವ ದೇವ್, ಮೆಟ್ಟಿಲು ಮೇಲಿನಿಂದ ಬೀಳಿಸಲು ಮುಂದಾಗಿದ್ದಾನೆ. ನಂತರ ಆಯತಪ್ಪಿ ಬಿದ್ದಿದ್ದಕ್ಕೇ ಹೀಗಾಯ್ತು ಎಂದು ಹೇಳಬೇಕು ಎಂದುಕೊಂಡಿದ್ದಾನೆ.

  ಖುಷಿಯಲ್ಲಿರುವ ದುರ್ಗಾ!

  ಖುಷಿಯಲ್ಲಿರುವ ದುರ್ಗಾ!

  ದುರ್ಗಾಗೆ ಈಗ ಏಜೆ, ಲೀಲಾಗೆ ಕಪಾಳ ಮೋಕ್ಷ ಮಾಡಿ, ಮನೆಯಿಂದ ಹೊರಗೆ ಕರೆದುಕೊಂಡು ಹೋಗಿರುವುದು ಖುಷಿಯಾಗಿದೆ. ಈ ಸಲ ಲೀಲಾ ಮನೆಯಿಂದ ಹೊರಗೆ ಹೋದರೆ, ಮತ್ತೆಂದೂ ಬರುವುದಿಲ್ಲ. ಲೀಲಾ ಮನೆಯಿಂದ ತೊಲಗಿದರೆ ಸಾಕು ಎಂದು ಖುಷಿಯಲ್ಲಿದ್ದಾಳೆ. ದೇವ್ ಹಾಗೂ ಸರಸ್ವತಿಗೆ ಅವಮಾನ ಮಾಡಿದಳು. ಮನೆಯನ್ನು ಇಬ್ಬಾಗ ಮಾಡುವ ಕೆಲಸ ಮಾಡಿದಳು ಎಂಬ ಕಾರಣಕ್ಕೆ ಅವಳನ್ನು ಏಜೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾನೆ.

  ದೇವರಿಗೆ ದೀಪ ಹಚ್ಚಿದ ಅಜ್ಜಿ!

  ದೇವರಿಗೆ ದೀಪ ಹಚ್ಚಿದ ಅಜ್ಜಿ!

  ಇನ್ನು ಅಜ್ಜಿ ಬಳಿ ದುರ್ಗಾ ಸುಳ್ಳು ಹೇಳಿದ್ದಾಳೆ. ಎಜೆ ಹಾಗೂ ಲೀಲಾ ಇಬ್ಬರೂ ಒಟ್ಟಿಗೆ ಆಚೆ ಹೋದರು ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿದ ಅಜ್ಜಿ, ಗಂಡ ಹೆಂಡತಿ ಒಂದಾಗಿದ್ದಾರೆ ಎಂದು ತಿಳಿದಿದ್ದಾಳೆ. ಹೀಗಾಗಿ ದೇವರಿಗೆ ದೀಪ ಹಚ್ಚಿ, ನನ್ನ ಮಗ ಹಾಗೂ ಸೊಸೆ ಒಂದಾಗಿದ್ದಕ್ಕೆ ಧನ್ಯವಾದಗಳನ್ನು ತಿಳಿಸುತ್ತಿದ್ದಾಳೆ.

  ಹೆದರಿ ನಡುಗಿದ ಲೀಲಾ!

  ಹೆದರಿ ನಡುಗಿದ ಲೀಲಾ!

  ಲೀಲಾಳನ್ನು ಏಜೆ ಇನ್ನೂ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಕರೆದುಕೊಂಡು ಹೋಗಿದ್ದಾನೆ. ಮೇಲೆ ಕರೆದುಕೊಂಡು ಹೋಗಿದ್ದಾನೆ. ಮೇಲಿನಿಂದ ಕೆಳಗೆ ನೋಡಿದ ಲೀಲಾ ತಲೆ ತಿರುಗಿ ಬಿದ್ದಿದ್ದಾಳೆ. ಏಜೆ ನೀರು ತರಲು ಹೋದಾಗ ಎಚ್ಚರಗೊಂಡ ಲೀಲಾ, ಹೆದರಿಕೊಂಡು ಬಚ್ಚಿಟ್ಟುಕೊಂಡಿದ್ದಾಳೆ. ಎಜೆ ತನ್ನನ್ನು ಸಾಯಿಸಲು ಬಂದಿದ್ದಾನೆ ಎಂದುಕೊಂಡಿದ್ದಾಳೆ. ಒಬ್ಬಳೇ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಆದರೆ, ಏಜೆ ಅಷ್ಟು ದೂರ ಲೀಲಾಳನ್ನು ಕರೆದುಕೊಂಡು ಬಂದ ಕಾರಣ ಗೊತ್ತಿಲ್ಲ. ಎಜೆ ಕೋಪದಲ್ಲಿದ್ದು, ಲೀಲಾಳನ್ನು ಹುಡುಕುತ್ತಿದ್ದಾನೆ. ಇಂದಿನ ಎಪಿಸೋಡ್ ನಲ್ಲಿ ಲೀಲಾ ಹಾಗೂ ಪವಿತ್ರಾ ಕಥೆ ಏನಾಗುತ್ತದೆ ಎಂದು ಕಾದು ನೋಡ ಬೇಕಿದೆ.

  English summary
  Hitler Kalyana Serial Written Update On August 3rd Episode, Know More,
  Thursday, August 4, 2022, 20:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X