For Quick Alerts
  ALLOW NOTIFICATIONS  
  For Daily Alerts

  ಕುಮಾರಸ್ವಾಮಿ ರಾಧಿಕಾನ್ನ ಏನಂತ ಕರೀತಾರೆ!?

  By Srinath
  |

  ಇತ್ತೀಚೆಗೆ ರೈತ ಸಂಘದವರಿಂದ 'ನಟಿ ರಾಧಿಕಾ ಯಾರು ಕುಮಾರಸ್ವಾಮಿ?' ಎಂದು ಕೇಳಿಸಿಕೊಂಡಿದ್ದ ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಖಾಸಗಿ ಬದುಕು ಮತ್ತೆ ಸಾರ್ವಜನಿಕ ಚರ್ಚೆಗೆ ತುತ್ತಾಗಿದೆ.

  ಕುಮಾರಸ್ವಾಮಿ ಅವರ ಘೋಷಿತ ಪತ್ನಿ, ನಟಿ ರಾಧಿಕಾ ಅವರು ಸುವರ್ಣ ನ್ಯೂಸ್ ಚಾನೆಲಿಗೆ ಸುದೀರ್ಘ ಸಂದರ್ಶನ ನೀಡಿದ್ದು, ತಮ್ಮ ಖಾಸಗಿ ಬದುಕಿನ ಬಗ್ಗೆ ಸವಿಸ್ತಾರವಾಗಿ ಹೇಳಿಕೊಂಡಿದ್ದಾರೆ. 'ಹೌದು, ಕುಮಾರಸ್ವಾಮಿ ಅವರನ್ನು ನೀವು ಏನೆಂದು ಸಂಬೋಧಿಸುತ್ತೀರಿ?' ಎಂದು ಸಂದರ್ಶಕ ಗೌರೀಶ್ ಅಕ್ಕಿ ಕೇಳಿದ್ದಕ್ಕೆ ನಾಚಿ ನೀರಾದ ರಾಧಿಕಾ, 'ಪತ್ನಿಯರು ಹಂಗೆಲ್ಲ ಗಂಡಂದಿರ ಹೆಸರನ್ನು ಹೇಳಬಾರದು' ಎಂದು ಪತಿಯ ಹೆಸರನ್ನು ಹೇಳದೆ ಜಾರಿಕೊಂಡರು.

  ಮುಂದಿನ ಸರದಿಯಲ್ಲಿ ಗೌರೀಶ್, 'ಸರಿ. ಕುಮಾರಸ್ವಾಮಿ ನಿಮ್ಮನ್ನು ಏನೂಂತ ಕರೀತಾರೆ' ಎಂದು ಕೇಳಿದ್ದೇ ತಡ 'ಚಿನ್ನೂ' ಅಂತ ರಾಧಿಕಾ ಉಲಿದರು. ಅಲ್ಲಿಗೆ ಕುಮಾರಸ್ವಾಮಿ ಅವರು ಇನ್ಮುಂದೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಮೊಬೈಲಿನಲ್ಲಿ 'ಚಿನ್ನು' ಅಂತ ಸಂಬೋಧಿಸಿ ಮಾತನಾಡುತ್ತಿದ್ದರೆ ಫೋನಿನ ಆ ಕಡೆ ನಟಿ ರಾಧಿಕಾ ಇದ್ದಾರೆ ಅಂತ ಮಹಾಜನತೆ ತಿಳಿಯಬಹುದು.

  ಕುತೂಹಲದ ಸಂಗತಿಯೆಂದರೆ, ಈ ಹಿಂದೆ ಕುಮಾರಸ್ವಾಮಿ ನಿರ್ಮಾಣದ ಸಿನಿಮಾಗಳಲ್ಲಿ ಟೈಟಲ್ ಕಾರ್ಡಿನಲ್ಲಿ ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ ಇಬ್ಬರ ಹೆಸರು, ಫೋಟೊ ಬರುತ್ತಿತ್ತು. ಈಗ ನಟಿ ರಾಧಿಕಾ ನಿರ್ಮಾಣದ ಚಿತ್ರಗಳಲ್ಲಿ ರಾಧಿಕಾ ಕುಮಾರಸ್ವಾಮಿ ಹೆಸರು ಕಾಣಿಸಿಕೊಳ್ಳುತ್ತಿದೆ.

  English summary
  How does Karnataka JDS president HD Kumaraswamy call Radhika Kumaraswamy!? The Answer is 'Chinnu'!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X