»   » ದೂರದರ್ಶನದಲ್ಲಿ ಮಾನವ ಹಕ್ಕುಗಳ ವಾರ್ತೆ

ದೂರದರ್ಶನದಲ್ಲಿ ಮಾನವ ಹಕ್ಕುಗಳ ವಾರ್ತೆ

Posted By:
Subscribe to Filmibeat Kannada
Human Rights news in bangalore DD
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಹಯೋಗದೊಂದಿಗೆ ಬೆಂಗಳೂರು ದೂರದರ್ಶನ ಕೇಂದ್ರ 'ಮಾನವ ಹಕ್ಕುಗಳ ವಾರ್ತೆ'ಗಳನ್ನು ಪ್ರಸಾರ ಮಾಡಲಿದೆ. ರಾಜ್ಯಪಾಲ ಹೆಚ್ ಆರ್ ಭಾರದ್ವಾಜ್ ಕಾರ್ಯಕ್ರಮಕ್ಕೆ ಗುರುವಾರ(ಏ.8) ಚಾಲನೆ ನೀಡಲಿದ್ದಾರೆ.

ಇಂದು ಸಂಜೆ 6 ಗಂಟೆ 'ಮಾನವ ಹಕ್ಕುಗಳ ವಾರ್ತೆ' ಉದ್ಘಾಟನಾ ಕಾರ್ಯಕ್ರಮ ದೂರದರ್ಶನ ಕೇಂದ್ರ, ಜೆ.ಸಿ.ನಗರ, ಬೆಂಗಳೂರಿನಲ್ಲಿ ನಡೆಯಲಿದೆ. ವಿಶೇಷ ಅತಿಥಿಗಳಾಗಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಮಾನವ ಹಕ್ಕುಗಳ ಸಚಿವ ಎಸ್ ಸುರೇಶ್ ಕುಮಾರ್, ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಡಾ.ಶಿವರಾಜ್ ವಿ ಪಾಟೀಲ್ ಹಾಗೂ ಬೆಂಗಳೂರು ದೂರದರ್ಶನ ಕೇಂದ್ರದ ಹಿರಿಯ ನಿರ್ದೇಶಕ ಡಾ.ಮಹೇಶ್ ಜೋಶಿ ಅವರು ಆಗಮಿಸಲಿದ್ದಾರೆ.

ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳು ಒಂದು ಅವಿಭಾಜ್ಯ ಅಂಗ. ಈ ಚೊಕ್ಕಟ್ಟಿನಲ್ಲಿ ಎಲ್ಲರೂ ಮಾನವ ಹಕ್ಕುಗಳನ್ನು ಪಾಲಿಸಬೇಕಾಗುತ್ತ್ತದೆ. ಅವು ಉಲ್ಲಂಘನೆಯಾದರೆ ಮಾನವ ಸಂಬಂಧಗಳು ಹದಗೆಡುವ ವಿಚಾರ ಎಲ್ಲರಿಗೂ ಗೊತ್ತೆಯಿದೆ. ಮಾನವ ಹಕ್ಕುಗಳ ಬಗ್ಗೆ ಅರಿವು ನೀಡುವುದರ ಜೊತೆಗೆ ನೆರವು ಮತ್ತು ರಕ್ಷಣೆಯನ್ನು ನೆಲಗಟ್ಟ್ಟಿನಲ್ಲಿ ವಾರ್ತೆಗಳು ಪ್ರಸಾರವಾಗಲಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada