For Quick Alerts
  ALLOW NOTIFICATIONS  
  For Daily Alerts

  ನಿಮ್ಮ ಆಸೆಯಂತೆ ಈ 'ವೀಕೆಂಡ್'ನ ಅತಿಥಿಯಾಗಲಿದ್ದಾರೆ 'ಕರ್ನಾಟಕದ ಸಿಂಗಂ'

  By Bharath Kumar
  |

  'ಜೀ-ಕನ್ನಡ'ದಲ್ಲಿ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬರಿ ಸಿನಿಮಾ ರಂಗದವರನ್ನೇ ಕರೆಸುತ್ತಾರೆ ಎಂಬ ಅಪವಾದ ಕಳೆದ ಎರಡು ಆವೃತ್ತಿಗಳಿಂದಲೂ ಕೇಳಿ ಬರುತ್ತಿದೆ. ಆದ್ರೆ, ಈ ಆರೋಪಗಳಿಗೆ ಬ್ರೇಕ್ ಹಾಕಲು ಈ ವಾರ 'ವೀಕೆಂಡ್ ವಿತ್ ರಮೇಶ್' ತಂಡ ಸಿದ್ದವಾಗಿದೆ.

  ಹೌದು, ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಖಡಕ್ ಐ.ಪಿ.ಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ಅವರು ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ರವಿ.ಡಿ.ಚೆನ್ನಣ್ಣನವರ್ ಅವರ ಕಾರ್ಯಕ್ರಮದ ರೆಕಾರ್ಡಿಂಗ್ ಮುಗಿದಿದ್ದು ಈ ವಾರ ಪ್ರಸಾರವಾಗಲಿದೆಯಂತೆ.

  ಕಳೆದ ಎರಡು ಆವೃತ್ತಿಗಳಿಂದಲೂ ರವಿ.ಡಿ.ಚೆನ್ನಣ್ಣನವರ್ ಅವರನ್ನ ವೀಕೆಂಡ್ ಸಾಧಕರ ಸೀಟಿನಲ್ಲಿ ನೋಡಬೇಕು ಎಂಬುದು ಪ್ರೇಕ್ಷಕರ ಒತ್ತಾಯವಾಗಿತ್ತು. ಕೊನೆಗೂ ಪ್ರೇಕ್ಷಕರ ಆಸೆ ಈ ವಾರ ನೆರವೇರಲಿದೆ.

  ಅಂದ್ಹಾಗೆ, ರವಿ.ಡಿ.ಚೆನ್ನಣ್ಣನವರ್ ಅವರು ಬದುಕು ಸಿನಿಮಾ ಕಥೆಯಷ್ಟೇ ರೋಚವಾಗಿದೆ. ಪೊಲೀಸ್ ಆಗುವ ಮುನ್ನ ದಿನಗೂಲಿ ಮಾಡಿ, ಸ್ವೀಪರ್ ಹಾಗೂ ಧಾರವಾಡದ ಹೋಟೆಲ್ ನಲ್ಲಿ ಮಾಣಿಯಾಗಿ ಕೆಲಸ ಮಾಡಿದ್ದಾರೆ. ನಂತರ ಅದೇ ಧಾರವಾಡದ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿರುವುದು ನಿಜಕ್ಕೂ ಸಾಧನೆಯೇ ಸರಿ.

  ಕ್ರಿಮಿನಲ್ ಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ರವಿ.ಡಿ.ಚೆನ್ನಣ್ಣನವರ್ ಅವರು 'ಕರ್ನಾಟಕದ ಸಿಂಗಂ' ಎಂದೇ ಖ್ಯಾತಿಗೊಳಿಸಿಕೊಂಡಿದ್ದಾರೆ. ಸದ್ಯ, ಮೈಸೂರಿನಲ್ಲಿ ರವಿ ಚನ್ನಣ್ಣನವರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ವ್ಯಕ್ತಿಯ ಬದುಕು ಈ ಶನಿವಾರ ವೀಕೆಂಡ್ ಟೆಂಟ್ ನಲ್ಲಿ ಪ್ರಸಾರವಾಗಲಿದೆ.

  English summary
  IPS Officer Ravi D Channannavar Guest at Weekend with Ramesh for This Week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X