»   » ಮುಂಬೈ ಎಂಬ ಮಹಾನಗರ ಕಾಯ್ಕಿಣಿ ಕಣ್ಣಿಗೆ ಕಂಡಿದ್ದು ಹೀಗೆ..!

ಮುಂಬೈ ಎಂಬ ಮಹಾನಗರ ಕಾಯ್ಕಿಣಿ ಕಣ್ಣಿಗೆ ಕಂಡಿದ್ದು ಹೀಗೆ..!

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಚಂದನವನದ ಚಂದದ ಸಾಹಿತಿ ಜಯಂತ್ ಕಾಯ್ಕಿಣಿ ಇಂದು ಕನ್ನಡಿಗರ ನೆಚ್ಚಿನ ಸಾಹಿತಿ ಆಗಿ ನಮ್ಮಲ್ಲೆರ ನಡುವೆ ಇರಬಹುದು. ಆದರೆ ಅವರ ಸಾಹಿತ್ಯ ಜೀವನ ಹೆಚ್ಚು ಹೆಚ್ಚು ಸಾಣೆ ಹಿಡಿದಿದ್ದು ಮುಂಬೈ ಮಹಾನಗರದಲ್ಲಿ. ಅಲ್ಲದೇ ಅಲ್ಲಿನ ವಡಾ ಪಾವ್ ಅಂದ್ರೆ ಅವರಿಗೆ ಅಚ್ಚುಮೆಚ್ಚು.[ಕನ್ನಡದಲ್ಲಿ ಜಗಳವಾಡಿದರೂ ಸಾಕಪ್ಪ ಅನ್ನೋ ಸ್ಥಿತಿಯಲ್ಲಿ ನಾವಿದ್ದೇವೆ!]

  ಹೌದು, ಜಯಂತ್ ಕಾಯ್ಕಿಣಿ ತಮ್ಮ 21 ನೇ ವರ್ಷಕ್ಕೆ ಶಿಕ್ಷಣಕ್ಕಾಗಿ ಮುಂಬೈಗೆ ಹೋದವರು. ಮುಂಬೈ ಬಗ್ಗೆ ಹಲವರು ಹಲವು ರೀತಿಯ ಆಲೋಚನೆ ಇಟ್ಟಿಕೊಂಡಿರುತ್ತಾರೆ. ಆದರೆ ಜಯಂತ್ ಕಾಯ್ಕಿಣಿ ರವರು ಬಾಂಬೆಯನ್ನು ವರ್ಣಿಸುವ ರೀತಿ ಕೇಳಿದರೆ, ಬಾಂಬೆ ನೋಡದೇ ಇರುವವರು ಸಹ ಹೋಗಬೇಕು ಎನಿಸಿಬಿಡುತ್ತದೆ. ಅಂತಹ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಜಯಂತ್ ಕಾಯ್ಕಿಣಿ ರವರು ತಮ್ಮದೇ ಜರ್ನಿ ಕುರಿತು 'ವೀಕೆಂಡ್ ವಿತ್ ರಮೇಶ್' ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿರಿ...

  ಜಯಂತ್ ಕಾಯ್ಕಿಣಿ ದೃಷ್ಟಿಯಲ್ಲಿ ಮುಂಬೈ..

  "ನನಗೆ ಮುಂಬೈ ಅಂದ್ರೆ ಒಂದು ದೊಡ್ಡ ಯೋಗಶಾಲೆ. ಆದ್ದರಿಂದಲೇ ನನ್ನೆಲ್ಲಾ ಕಥೆಗಳಲ್ಲಿ ಬಹುಪಾಲು ಮುಂಬೈ ಆವರಿಸಿರುತ್ತದೆ. ಯಾಕಂದ್ರೆ ಒಂದು ಟೀಸರ್ಟ್ ಮೇಲಿನ ಪ್ರಿಂಟ್ ಹೋಗಬಾರದೆಂದು ಮಡಿಚಿ ಹೇಗೆ ಒಣಹಾಕುತ್ತೀವೋ ಅದೇ ರೀತಿ ಬಾಂಬೆ ನನ್ನ ಜೀವನವನ್ನ ಸಾಹಿತ್ಯಕವಾಗಿ ರಿವರ್ಸ್ ಮಾಡಿತು" - ಜಯಂತ್ ಕಾಯ್ಕಿಣಿ, ಸಾಹಿತಿ

  ಮುಂಬೈ ಪ್ರದೇಶಕ್ಕೆ ಒಂದು ಶುದ್ಧ ಹಾರ್ಟ್ ಬೀಟ್ ಇದೆ

  " ಮುಂಬೈ ನಗರವನ್ನ ಟೂರಿಸ್ಟ್ ಆಗಿ ನೋಡಿದಾಗ ಬರೀ ಧೂಳು ಬಿಲ್ಡಿಂಗ್ ಗಳು ಕಾಣುತ್ತವೆ. ಆದರೆ ಒಮ್ಮೆ ಆ ಭಾಗದ ವ್ಯಕ್ತಿಯಾಗಿ ನೋಡಿದಾಗ, ಒಂದು ನಗರದ ಹಾರ್ಟ್ ಬೀಟ್ ಗೆ ನಮ್ಮ ಹಾರ್ಟ್ ಬೀಟ್ ಸಿಂಕ್ ಆಗಿಬಿಟ್ರೆ ತುಂಬಾ ಲಿಬರೇಟಿಂಗ್ ಪ್ರದೇಶವದು ಅನಿಸುತ್ತೆ" - ಜಯಂತ್ ಕಾಯ್ಕಿಣಿ, ಸಾಹಿತಿ

  ಮಹಿಳೆಯನ್ನು ತುಂಬಾ ಗೌರವದಿಂದ ನೋಡುವ ಪ್ರದೇಶ

  "ನಮ್ಮ ತಾಯಿ 75 ವರ್ಷದವರಾಗಿದ್ದಾಗಲೂ ಅಲ್ಲಿಗೆ ಬಂದು ಬ್ಯಾಚುಲರ್ ರೂಮ್ ನಲ್ಲಿ ನಮಗೆ ಅಡಿಗೆ ಮಾಡಿ ಹಾಕುತ್ತಿದ್ದರು. ಕಾರಣ ಅವರಿಗೆ ಮುಂಬೈ ಅಷ್ಟೊಂದು ಇಷ್ಟವಾಗುತ್ತಿತ್ತು. ಯಾಕಂದ್ರೆ ಮಹಿಳೆಯನ್ನು ತುಂಬಾ ಗೌರವದಿಂದ, ಸಮಾನತೆಯಿಂದ ನೋಡುತ್ತಿದ್ದ ನಗರ ಎಂದು ಹೆಚ್ಚು ಫೀಲ್ ಮಾಡುತ್ತಿದ್ದರು" - ಜಯಂತ್ ಕಾಯ್ಕಿಣಿ, ಸಾಹಿತಿ

  ಮುಂಬೈ ಕಷ್ಟದಲ್ಲಿರುವವರನ್ನು ಕೈ ಹಿಡಿದು ಮೇಲೆತ್ತುತ್ತದೆ.

  "ಯಾವುದೇ ಒಂದು ನಗರ ಇರಲಿ. ಮುಂಬೈ ಆಗಬಹುದು, ಕೊಲ್ಕತ್ತ ಆಗಬಹುದು. ಅದಕ್ಕೆ ಅದರದೇ ಆದ ವ್ಯಕ್ತಿತ್ವ ಬರುವುದು ಅಲ್ಲಿನ ಪಬ್ಲಿಕ್ ಟ್ರ್ಯಾನ್ಸ್ ಪೋರ್ಟ್ ನಿಂದ. ಎಲ್ಲಿ ಅದು ಚೆನ್ನಾಗಿದೆಯೋ ಆ ನಗರಗಳಲ್ಲಿ ಜನರ ನಡುವೆ ಉತ್ತಮ ಸಂಬಂಧ ಬರುತ್ತದೆ. ಅಂತಹ ನಗರ ಮುಂಬೈ. ಅಲ್ಲದೇ ಒಬ್ಬ ಸ್ಟ್ರಗಲರ್(ಕಷ್ಟದಲ್ಲಿರುವವರನ್ನು) ಅನ್ನು ಕೈಕೊಟ್ಟು ಹಿಡಿದು ಮೇಲೆತ್ತುತ್ತದೆ. ಆ ಇಮೇಜ್ ಬಾಂಬೆ ಬಗ್ಗೆ ನನ್ನನ್ನ ಯಾವಾಗಲು ಡ್ರೈವ್ ಮಾಡುತ್ತಿರುತ್ತದೆ" - ಜಯಂತ್ ಕಾಯ್ಕಿಣಿ, ಸಾಹಿತಿ

  ಕಾಯ್ಕಿಣಿ ಮುಂಬೈ ಜರ್ನಿ ಬಗ್ಗೆ ಸ್ನೇಹಿತರು ಹೆಳಿದ್ದೇನು?

  "ಜಯಂತ್ ಇದ್ದಲೆಲ್ಲಾ ಹುಡುಗಿಯರು ಮುತ್ತುಬಿಡುತ್ತಿದ್ದರು. ಒಮ್ಮೆ ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನಾನು ಮತ್ತು ಜಯಂತ್ ಭಾಗವಹಿಸಿದ್ವಿ. ಹುಡುಗಿಯರೆಲ್ಲಾ ಅವರ ಆಟೋಗ್ರಾಫ್ ಗಾಗಿ ಮುಗಿಬಿದ್ದಿದ್ದರು. ಆದ್ರೆ ನನ್ನ ಹತ್ತಿರ ಯಾರು ಬರಲಿಲ್ಲ ಅಂತ ಅಸೂಯೇ ಆಗಿತ್ತು. ಇದನ್ನ ತಮಾಷೆ ಮಾಡುತ್ತಿದೆ. ಆದರೆ ಜಯಂತ್ ಇಡೀ ನಾಡಿನಲ್ಲಿ ಎಲ್ಲರಿಗೂ ಮೆಚ್ಚಿಗೆ ಆಗುವ ಸಾಹಿತಿ" - ಡಾ.ವ್ಯಾಸರಾಯ್ ನಿಂಜೂರು, ವಿಜ್ಞಾನಿ

  ಜಯಂತ್ ಸರ್ ಗೆ ಸಹಾಯ ಮಾಡಿದ್ದ ವ್ಯಾಸರಾಯ್ ನಿಂಜೂರು

  'ವ್ಯಾಸರಾಯ್ ನಿಂಜೂರು ದೊಡ್ಡ ವಿಜ್ಞಾನಿ. ಅವರ ಎಂತಹ ದೊಡ್ಡ ಬಯೋ ಸೈನ್ ಟಿಸ್ಟ್ ಎಂದರೇ ನಮ್ಮ ಉದರದಲ್ಲಿ ಇರುವ ಒಂದು ಎನ್ಜೈಮ್ ಗೆ 'ನಿಂಜೂರ್ ಎನ್ಮೈಮ್' ಎಂದು ಹೆಸರಿದೆ. ನಾನು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿ ಮುಚ್ಚಿಹೋದಾಗ ಅವರು ನನ್ನನ್ನು ಕರೆದು ಅವರಿಗೆ ಬರುತ್ತಿದ್ದ ಕೆಲಸವನ್ನ ನನಗೆ ಕೊಟ್ಟು ನೋಡಿಕೊಂಡಿದ್ದರು. ಅವರಿಗೆ ನನ್ನ ದೊಡ್ಡ ನಮಸ್ಕಾರ ಯಾವಾಗಲು ಇರುತ್ತೆ" - ಜಯಂತ್ ಕಾಯ್ಕಿಣಿ, ಸಾಹಿತಿ

  English summary
  Indian Poet, Short Stories Author and a Lyricist Jayant Kaikini talks about mumbai in 'Weekend With Ramesh'

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more