»   » 'ಶೋ ಆಫ್', 'ಬಿಲ್ಡಪ್' ಎಂದು ನಟ ಅನಂತ್ ನಾಗ್ ಕರೆದಿದ್ದು ಯಾರಿಗೆ.?

'ಶೋ ಆಫ್', 'ಬಿಲ್ಡಪ್' ಎಂದು ನಟ ಅನಂತ್ ನಾಗ್ ಕರೆದಿದ್ದು ಯಾರಿಗೆ.?

Posted By:
Subscribe to Filmibeat Kannada

ಟಾಕ್ ಶೋ ಒಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ 'ಮಿಸ್ ಶೋ ಆಫ್' ಎಂದು ಬಿರುದು ಕೊಟ್ಟು ನಟಿ ರಶ್ಮಿಕಾ ಮಂದಣ್ಣ ವಿವಾದಕ್ಕೆ ಒಳಗಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಬಿಲ್ಡಪ್' ಎಂದು ಕರೆದು ಸಂಜನಾ 'ಟ್ರೋಲ್ ಪೇಜ್'ಗಳ ಕೆಂಗಣ್ಣಿಗೆ ಗುರಿಯಾಗಿದ್ದು ಯಾರಿಗ್ತಾನೆ ಗೊತ್ತಿಲ್ಲ ಹೇಳಿ..?

ಇಷ್ಟೆಲ್ಲ ವಿವಾದಗಳು ಆಗುತ್ತಲೇ ಇದ್ದರೂ ಟಾಕ್ ಶೋಗಳಲ್ಲಿ ಅಂಥ ಪ್ರಶ್ನೆಗಳು ಮರೆಯಾಗುತ್ತಿಲ್ಲ.

ನಿನ್ನೆಯಷ್ಟೇ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆದ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಅನಂತ್ ನಾಗ್ ರವರಿಗೂ ಅಂಥದ್ದೇ ಪ್ರಶ್ನೆಗಳು ಎದುರಾದವು. ಅದಕ್ಕೆ ನಟ ಅನಂತ್ ನಾಗ್ ಏನಂತ ಉತ್ತರ ಕೊಟ್ಟರು ಗೊತ್ತಾ.? ಮುಂದೆ ಓದಿರಿ...

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟ ಅನಂತ್ ನಾಗ್

ಕಲರ್ಸ್ ಸೂಪರ್ ವಾಹಿನಿಯ ಜನಪ್ರಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟ ಅನಂತ್ ನಾಗ್ ಹಾಗೂ ನಟಿ ಗೀತಾ ಅತಿಥಿಗಳಾಗಿ ಭಾಗವಹಿಸಿದ್ದರು.

ದಿಢೀರ್ ಬೆಂಕಿ

ಕಾರ್ಯಕ್ರಮದ ಪದ್ಧತಿಯಂತೆ ಮಾತುಕತೆ ಹಾಗೂ ಟಾಸ್ಕ್ ಮುಗಿದ ಬಳಿಕ 'ದಿಢೀರ್ ಬೆಂಕಿ' (Rapid Fire) ರೌಂಡ್ ಗೆ ನಿರೂಪಕ ಅಕುಲ್ ಬಾಲಾಜಿ ಚಾಲನೆ ನೀಡಿದರು.

ನಟರ ಹೆಸರನ್ನು ಹೇಳಬೇಕಿತ್ತು

''ಈ ಕೆಳಗಿನ ಪದಗಳನ್ನು ಕೇಳಿದಾಗ, ಯಾವ ನಟರು ನೆನಪಾಗುತ್ತಾರೆ.?'' ಎಂದು ''ಹೈ ಇನ್ ಆಟಿಟ್ಯೂಡ್, ಬಿಲ್ಡಪ್, ಶೋ ಆಫ್, ಡೌನ್ ಟು ಅರ್ಥ್, ಸೆಲ್ಫಿಶ್, ಆರೋಗೆಂಟ್'' ಪದಗಳನ್ನ ನಟ ಅನಂತ್ ನಾಗ್ ಮುಂದಿಟ್ಟರು ನಿರೂಪಕ ಅಕುಲ್ ಬಾಲಾಜಿ.

ಅನಂತ್ ನಾಗ್ ಕೊಟ್ಟ ಉತ್ತರ ಒಂದೇ.!

ಎಲ್ಲ ಪದಗಳಿಗೂ ನಟ ಅನಂತ್ ನಾಗ್ ಹೇಳಿದ ಹೆಸರು ಒಂದೇ... ಅದೇ 'ಅನಂತ್ ನಾಗ್'.!

ಯಾರ ಹೆಸರನ್ನೂ ಅನಂತ್ ನಾಗ್ ಹೇಳಲಿಲ್ಲ

ಆ ಎಲ್ಲ ಪದಗಳಿಗೂ ತಮ್ಮ ಹೆಸರನ್ನ ಬಿಟ್ಟು ಬೇರೆ ಯಾವ ನಟರ ಹೆಸರುಗಳನ್ನೂ ಅನಂತ್ ನಾಗ್ ಹೇಳಲಿಲ್ಲ.

ಕಾರಣ ಏನು.?

ಎಲ್ಲ ಪದಗಳಿಗೂ ತಮ್ಮ ಹೆಸರನ್ನ ಹೇಳಿಕೊಂಡು, ''ಎಲ್ಲ ಗುಣ-ಅವಗುಣಗಳೂ ನನ್ನಲ್ಲಿ ಇವೆ'' ಎಂಬ ಕಾರಣವನ್ನ ನಟ ಅನಂತ್ ನಾಗ್ ನೀಡಿದರು.

ವಿವಾದಕ್ಕೆ ಆಸ್ಪದ ಕೊಡಲೇ ಇಲ್ಲ.!

ಸಾಮಾನ್ಯವಾಗಿ ಇಂಥ ಪ್ರಶ್ನೆಗಳು ಬಂದಾಗ ವಿವಾದಕ್ಕೆ ಗುರಿಯಾಗುವುದು ಸಹಜ. ಆದ್ರೆ, ನಟ ಅನಂತ್ ನಾಗ್ ಅಂಥ ಯಾವುದೇ ವಿವಾದಗಳಿಗೆ ಆಸ್ಪದ ಕೊಡಲೇ ಇಲ್ಲ.

English summary
Kannada Actor Anant Nag calls himself 'Build up', 'Show off' in Colors Super channel's popular show 'Super Talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada