»   » 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ 'ಮನ್ಮಥ ರಾಜ' ಕಾಶೀನಾಥ್

'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ 'ಮನ್ಮಥ ರಾಜ' ಕಾಶೀನಾಥ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ 'ಮನ್ಮಥ ರಾಜ', 'ಸುರಸುಂದರಾಂಗ', 'ಕಲಿಯುಗ ಕೃಷ್ಣ', 'ಪೋಲಿ ಕಿಟ್ಟಿ', 'ಚಪಲ ಚನ್ನಿಗರಾಯ' ಹೀಗೆ ಇವರು ಅಭಿನಯಿಸಿದ ಒಂದೊಂದು ಚಿತ್ರಗಳು ಪ್ರೇಕ್ಷಕರಿಗೆ ಒಂದೊಂದು 'ಅನುಭವ' ಕೊಟ್ಟಿತ್ತು.[ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ 'ಯುವ' ಸಾಧಕರು.! ]

ಹೆಸರು ಕಾಶೀನಾಥ್.....ಕನ್ನಡ ಚಿತ್ರರಂಗದ ಕ್ರಿಯಾತ್ಮಕ ನಿರ್ದೇಶಕ ಹಾಗೂ ರೊಮ್ಯಾಂಟಿಕ್ ನಾಯಕ. ಅದೇಷ್ಟೂ ಯುವ ಪ್ರತಿಭೆಗಳಿಗೆ ಇವರು ಗಾಡ್ ಫಾದರ್. ಸ್ಯಾಂಡಲ್ ವುಡ್ ನಲ್ಲಿ ತನ್ನ ಚಿತ್ರಗಳ ಮೂಲಕ ತನ್ನದೇ ಆದ ಪ್ರೇಕ್ಷಕ ವರ್ಗವನ್ನ ಹುಟ್ಟಿಹಾಕಿ ಹೊಸ ಇತಿಹಾಸ ಬರೆದ ಕಲಾವಿದ. ಈ ನಟ ಹಾಗೂ ನಿರ್ದೇಶಕ ಈಗ 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ ತಮ್ಮ ಯಶೋಗಾಥೆಯನ್ನ ಹೇಳಲು ಬರುತ್ತಿದ್ದಾರೆ.

'ವೀಕೆಂಡ್ ವಿತ್ ರಮೇಶ್' ಜೊತೆ ಕಾಶೀನಾಥ್

ಜೀ-ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕಾಶೀನಾಥ್ ಭಾಗವಹಿಸಿದ್ದಾರೆ. ಈಗಾಗಲೇ ಕಾಶಿನಾಥ್ ಸಾಧಕರ ಸೀಟ್ ಮೇಲೆ ಕೂತಿರುವ ಸಂಚಿಕೆಯ ಚಿತ್ರೀಕರಣ ಮುಗಿದಿದೆ.[ಪ್ರೋಮೋ ನೋಡಿ: ಸಾಧಕರ ಸೀಟ್ ಮೇಲೆ ಕೂತು ಕಣ್ಣೀರಿಟ್ಟ ರಕ್ಷಿತ್ ಶೆಟ್ಟಿ]

ಕಾಶೀನಾಥ್ ಯಶೋಗಾಥೆ

1982 ರಲ್ಲಿ 'ಅಮರ ಮಧುರ ಪ್ರೇಮ' ಚಿತ್ರದ ಮೂಲಕ ನಟನೆಗೆ ಪಾದರ್ಪಣೆ ಮಾಡಿದ್ದ ಕಾಶೀನಾಥ್ 1984 ರಲ್ಲಿ 'ಅನುಭವ' ಚಿತ್ರದ ಮೂಲಕ ನಿರ್ದೇಶಕರಾದರು. ಅಲ್ಲಿಂದ ಇಲ್ಲಿಯವರೆಗೂ ಸಾಲು ಸಾಲು ಚಿತ್ರಗಳ ಮೂಲಕ ಎಲ್ಲರನ್ನ ರಂಜಿಸುತ್ತಾ ಬಂದಿದ್ದಾರೆ. ತೆರೆಮೇಲೆ ನೋಡಿರುವ ಕಾಶಿನಾಥ್ ಅವರ ತೆರೆಹಿಂದಿನ ಕಹಾನಿ, ಕಾಲೇಜು ದಿನಗಳು, ಬಾಲ್ಯ, ಮದುವೆ ಹೀಗೆ ಅನೇಕ ಸಂಗತಿಗಳು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಾವರಣವಾಗಲಿದೆ.['ವೀಕೆಂಡ್ ವಿತ್ ರಮೇಶ್'ನಲ್ಲಿ ರಕ್ಷಿತ್ ಶೆಟ್ಟಿ: ಸಿಡಿಮಿಡಿಗೊಂಡ ವೀಕ್ಷಕರು.!]

ಫ್ಯಾಮಿಲಿ ಮತ್ತು ಸ್ನೇಹಿತರು ಭಾಗಿ

ಕಾಶೀನಾಥ್ ಅವರು ಭಾಗವಹಿಸಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಪಾಲ್ಗೊಂಡಿದ್ದಾರೆ. ಕಾಶೀನಾಥ್ ಅವರ ಮಗ, ಪತ್ನಿ, ನಟ ಬ್ಯಾಂಕ್ ಜನಾರ್ಧನ್, ವಿ.ಮನೋಹರ್ ಕೂಡ ಕಾಶೀನಾಥ್ ಸಾಧನೆಯನ್ನ ವೀಕೆಂಡ್ ನಲ್ಲಿ ಹಂಚಿಕೊಂಡಿದ್ದಾರೆ.

ಯಾವಾಗ ಪ್ರಸಾರ!

ಕಾಶೀನಾಥ್ ಭಾಗವಹಿಸಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಯಾವಾಗ ಪ್ರಸಾರ ಅಗಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

English summary
Kannada Actor and Director Kashinath has taken part in Zee Kannada Channel's popular show Weekend With Ramesh 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada