»   » 'ಮುಂಗಾರು ಮಳೆ' ಚಿತ್ರದ 'ಪರ..ಪರ..' ಡೈಲಾಗ್ ನ ದೇವೇಗೌಡರು ಹೇಳಿದ್ರೆ...?!

'ಮುಂಗಾರು ಮಳೆ' ಚಿತ್ರದ 'ಪರ..ಪರ..' ಡೈಲಾಗ್ ನ ದೇವೇಗೌಡರು ಹೇಳಿದ್ರೆ...?!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ರವರಿಗೆ ಸ್ಯಾಂಡಲ್ ವುಡ್ ನಲ್ಲಿ ಬಹುದೊಡ್ಡ ಬ್ರೇಕ್ ನೀಡಿದ ಸಿನಿಮಾ 'ಮುಂಗಾರು ಮಳೆ'.

ತಮ್ಮ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿದ 'ಮುಂಗಾರು ಮಳೆ' ಚಿತ್ರದ ಸ್ಕ್ರಿಪ್ಟ್ ನ ಇಲ್ಲಿಯವರೆಗೂ ಗಣೇಶ್ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

Kannada Actor Ganesh mimics HD Devegowda in Weekend With Ramesh

ಗಣೇಶ್ ಜೊತೆ ನಟಿಸಲು ಒಲ್ಲೆ ಎಂದಿದ್ದರು ಕನ್ನಡ ಚಿತ್ರರಂಗದ ನಾಯಕಿಯರು.!

'ಮುಂಗಾರು ಮಳೆ' ಚಿತ್ರದ ಸ್ಕ್ರಿಪ್ಟ್ ನ ಮೊದಲ ಬಾರಿಗೆ ಓದಿದಾಗ, ''ನೀವು ಎಲ್ಲೇ ಇರಿ... ಹೇಗೆ ಇರಿ...'' ಡೈಲಾಗ್ ಗಣೇಶ್ ರವರಿಗೆ ತುಂಬಾ ಇಷ್ಟವಾಯ್ತಂತೆ. ''ಈ ಸೀನ್ ಇಡೀ ಚಿತ್ರಕ್ಕೆ ಹೈಲೈಟ್ ಆಗುತ್ತದೆ'' ಎಂದು ಅಂದೇ ಗಣೇಶ್ ಊಹಿಸಿದ್ದರಂತೆ.

ಗಣೇಶ್ ಊಹಿಸಿದಂತೆ ಆ ಡೈಲಾಗ್ ಜನಪ್ರಿಯ ಆಯ್ತು. 'ಮುಂಗಾರು ಮಳೆ' ಸಿನಿಮಾ ಕೂಡ ಯಶಸ್ವಿ ಪ್ರದರ್ಶನ ಕಾಣ್ತು. ಒಂದ್ವೇಳೆ ಇದೇ ಡೈಲಾಗ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರ ಬಾಯಿಂದ ಬಂದ್ರೆ ಹೇಗಿರುತ್ತದೆ.?

'ಕಾಮಿಡಿ ಟೈಮ್' ಗಣೇಶ್ ನ ಹೀರೋ ಮಾಡ್ತಿದ್ದೀರಾ.. ತಲೆ ಕೆಟ್ಟಿದ್ಯಾ ನಿಮಗೆ.?

ಹೇಳಿ ಕೇಳಿ, ಗೋಲ್ಡನ್ ಸ್ಟಾರ್ ಗಣೇಶ್ ಚೆನ್ನಾಗಿ ಮಿಮಿಕ್ರಿ ಮಾಡುತ್ತಾರೆ. ಎಚ್.ಡಿ.ದೇವೇಗೌಡರವರನ್ನ ಮಿಮಿಕ್ರಿ ಮಾಡುವುದರಲ್ಲಿ ಗಣೇಶ್ ಎಕ್ಸ್ ಪರ್ಟ್. ಹೀಗಾಗಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಮೇಶ್ ರವರ ಸಲಹೆ ಮೇರೆಗೆ ಗಣೇಶ್ 'ನೀವು ಎಲ್ಲೇ ಇರಿ... ಹೇಗೆ ಇರಿ' ಡೈಲಾಗ್ ನ ದೇವೇಗೌಡರು ಹೇಳಿದಂತೆ ಗಣೇಶ್ ಹೇಳಿ ತೋರಿಸಿದರು.

ಥೇಟ್ ಎಚ್.ಡಿ.ಡಿ ಮಾತನಾಡಿದಂತೆಯೇ ಮಾತನಾಡಿ ಗಣೇಶ್ ಕಚಗುಳಿ ಇಟ್ಟರು. ಇದನ್ನ ನೀವೇನಾದರೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಿಸ್ ಮಾಡಿಕೊಂಡಿದ್ದರೆ, OZEE ಮೂಲಕ ಈಗಲೇ ನೋಡಿರಿ... ಲಿಂಕ್ ಇಲ್ಲಿದೆ...

English summary
Kannada Actor Ganesh mimics HD Devegowda in Zee Kannada Channel's popular show 'Weekend With Ramesh-3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada