»   » ಸುದೀಪ್ ಮತ್ತು ಪ್ರಥಮ್ ಮೊದಲ ಭೇಟಿಯ ರೋಚಕ ಕಥೆ!

ಸುದೀಪ್ ಮತ್ತು ಪ್ರಥಮ್ ಮೊದಲ ಭೇಟಿಯ ರೋಚಕ ಕಥೆ!

Posted By:
Subscribe to Filmibeat Kannada

'ಬಿಗ್ ಬಾಸ್' ಪ್ರಥಮ್ ಅಂದ್ರೆ ಮನೆಯಲ್ಲಿರೋರಿಗೂ ಟೆನ್ಶನ್, ಮನೆ ಹೊರಗಡೆ ಇರೋರಿಗೂ ಟೆನ್ಶನ್. ಯಾಕಂದ್ರೆ, ಪ್ರಥಮ್ ಅವರ ನಾನ್ ಸ್ಟಾಪ್ ಮಾತು, ತಪ್ಪು ಎನಿಸಿದ್ರೆ ಅವರು ಖಂಡಿಸೋ ಸ್ಟೈಲ್. ಹಳೆಯದನ್ನೆಲ್ಲ ಕರೆಕ್ಟ್ ಆಗಿ ಹೇಳುವ ಅವರ ನೆನಪಿನ ಶಕ್ತಿ. ಅಬ್ಬಾ....ಇದೆಲ್ಲಾ ಒಂದು ಕ್ಷಣ ನೋಡುಗರಿಗೆ 'ಹೀಗೂ ಉಂಟಾ' ಎನಿಸುತ್ತೆ?

ಒಂದು ಇಂಟ್ರಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ, ಪ್ರಥಮ್ ಅವರ ಈ ವಿಚಾರದಲ್ಲಿ ಕಿಚ್ಚ ಸುದೀಪ್ ಅವರಿಗೂ ದೊಡ್ಡ ಅನುಭವವೇ ಆಗಿದೆಯಂತೆ. ಆಗ ಪ್ರಥಮ್ ಯಾರು ಎಂಬುದು, ಸುದೀಪ್ ಗೂ ಕೂಡ ಗೊತ್ತಿರಲಿಲ್ಲ ಅಂತೆ. ಆದ್ರೆ, ಪ್ರಥಮ್, ಮುಕ್ಕಾಲು ಗಂಟೆ ಸುದೀಪ್ ಅವರಿಗೆ ಸಿಕ್ಕಾಪಟ್ಟೆ ತಲೆ ತಿಂದ್ದಿದ್ದಾರಂತೆ.[ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾಪಲ್ಟಾ: 'ಬಾಂಬ್' ಸಿಡಿಸಿದ ಸುದೀಪ್.!]

''ಆವತ್ತು ರಾಜೇಶ್ ರಾಮನಾಥ್ ಅವರು, ಸುದೀಪ್ ಅವರ ಬಳಿ, ಒಬ್ಬರನ್ನ ಕರೆದುಕೊಂಡು ಬಂದಿದ್ದರಂತೆ. ಇವರು ಬಹಳ ಇಂಟಲಿಜೆಂಟ್ ಅಂತ''..... ಮುಂದೆ ಓದಿ.....

'ಬಿಗ್ ಬಾಸ್' ಮನೆಗೆ ಹೋಗಿದ್ದ ಸುದೀಪ್!

ಈ ವಾರ ''ಸೂಪರ್ ಸಂಡೇ ವಿತ್ ಸುದೀಪ'' ವಿಶೇಷ ಸಂಚಿಕೆಯಲ್ಲಿ ಸುದೀಪ್ ಅವರು 'ಬಿಗ್ ಬಾಸ್' ಮನೆಗೆ ವಿಸಿಟ್ ಕೊಟ್ಟರು. ಮನೆಯ ಎಲ್ಲ ಸದಸ್ಯರನ್ನ ಮಾತನಾಡಿಸಿ, ನಂತರ ಸೀಕ್ರೆಟ್ ರೂಂನಲ್ಲಿದ್ದ ಮಾಳವಿಕಾ ಹಾಗೂ ಪ್ರಥಮ್ ಅವರನ್ನ ಕೂಡ ಕಿಚ್ಚ ಮೀಟ್ ಮಾಡಿದರು. ಈ ವೇಳೆ, ಸುದೀಪ್ ಮತ್ತು ಪ್ರಥಮ್ ಅವರ ಮೊದಲ ಭೇಟಿಯ ಇಂಟ್ರಸ್ಟಿಂಗ್ ವಿಚಾರವನ್ನ ನೆನಪಿಸಿಕೊಂಡರು.[ದೊಡ್ಮನೆಯಿಂದ ಹೊರಬಂದ ಮಾಳವಿಕಾ, ಪ್ರಥಮ್: 'ಬಿಗ್' ಟ್ವಿಸ್ಟ್ ನಿರೀಕ್ಷಿಸಿ]

ಮೊದಲ ಭೇಟಿಯಲ್ಲಿ ತಲೆ ತಿಂದ್ದಿದ್ದರಂತೆ ಪ್ರಥಮ್!

''ಸ್ಟುಡಿಯೋಂದರಲ್ಲಿ ಸುದೀಪ್ ಅವರನ್ನ ಮೀಟ್ ಮಾಡಿದ ಪ್ರಥಮ್, ಸುಮಾರು ಮೊಕ್ಕಾಲು ಗಂಟೆ ತಲೆತಿಂದ್ದಿದ್ದರಂತೆ. ಇದನ್ನ ಸ್ವತಃ ಸುದೀಪ್ ಅವರೇ, ಮಾಳವಿಕಾ ಹಾಗೂ ಪ್ರಥಮ್ ಅವರ ಬಳಿ ಅನುಭವ ಹಂಚಿಕೊಂಡರು.

ರಾಜೇಶ್ ರಾಮನಾಥ್ ಕಡೆಯಿಂದ ಭೇಟಿ!

''ಪ್ರಥಮ್ ಅವರನ್ನ ಮೊದಲ ಭೇಟಿ ಮಾಡಿದಾಗ, ಕೆಟ್ಟ ಮೂಡ್ ನಲ್ಲಿದ್ದೆ ಕೂತಿದ್ದೆ. ನನ್ನದೇ ಸಾವಿರ ತಲೆನೋವಿನಿಂದ ಕೆಟ್ಟ ಮೂಡ್ ನಲ್ಲಿ ಕೂತಿದ್ದೆ. ನಮ್ ರಾಜೇಶ್ ರಾಮನಾಥ್ ಅವರು ಪಟಪಟ ಅಂತ ಬಂದ್ರು. ಸುದೀಪ್, ಒಬ್ಬರನ್ನ ಪರಿಚಯ ಮಾಡ್ತೀನಿ. ಬಹಳ ಇಂಟಲಿಜೆಂಟ್. ಹಾಗೆ ಹೀಗೆ ಅಂತ ಹೇಳ್ತಿದ್ರೂ. ಯಾರು ಅಂದೆ?....ಈ ಕಡೆಯಿಂದ ಬಂದ್ರು ಇವರು...

45 ನಿಮಿಷ ನಾನ್ ಸ್ಟಾಪ್ ಮಾತು!

''ನಾನು ಬರಿ ಹಲೋ ಹೇಳಿದ್ದಷ್ಟೇ....45 ನಿಮಿಷ ನಾನ್ ಸ್ಟಾಪ್ ಮಾತಾಡಿದ್ರೂ, ಮಾತಾಡಿದ್ರೂ....ಅದ್ಯಾವುದೋ ಶ್ಲೋಕ ಹೇಳ್ತಾರೆ, ಗಾದೆ ಹೇಳ್ತಾರೆ, ಹಿಂಗತಾರೆ, ಹಂಗತಾರೆ, ಹೋಗ್ತಾ ಇದ್ದಾರೆ ಹೋಗ್ತಾ ಇದ್ದಾರೆ.....ನನಗೆ ಇವರು ಯಾರು ಅಂತ ಗೊತ್ತಿಲ್ಲ. ಹಿಂದೆ ಮುಂದೆ ಗೊತ್ತಿಲ್ಲ. ನನಗೆ ನನ್ನದೇ ಪ್ರಾಬ್ಲಂ. ಡಬ್ಬಿಂಗ್ ಬೇರೆ ಮಾಡಿ ಬಂದು ಹೊರಗಡೆ ಕೂತಿದ್ದೇ. ತಲೆಕೆಟ್ಟಿದೆ ನನಗೆ.....[ಪ್ರಥಮ್, ಮಾಳವಿಕಾ ಎಲಿಮಿನೇಷನ್ ನಾಟಕಕ್ಕೆ 'ಬಿಗ್' ಟ್ವಿಸ್ಟ್!]

ಸುಮ್ಮನಿರಪ್ಪಾ ಅಂದೆ!

''ಅಮೇಲೆ ನಾನು ಒಂದು ನಿಮಿಷ ಇರೀ ಅಂದೆ....ಸರ್, ಇದು ಮುಗುಸಿಬಿಡ್ತೀನಿ...ಇದೊಂದು ಮುಗಿಸಿಬಿಡ್ತೀನಿ ಸರ್ ಅಂತಾರೆ...ಅಮೇಲೆ ಇದೊಂದು ಮುಗಿಸಿಬಿಡ್ತೀನಿ ಅಂತ ಇನ್ನೊಂದು 10-15 ನಿಮಿಷ ಹೇಳೀದ್ರು.

ಕೊನೆಗೂ ಸುಮ್ಮನೆ ಆದ್ರೂ!

''ಸ್ವಲ್ಪ ಹೊತ್ತು ಆಯ್ತು....ಏನಂದ್ರೀ ನಿಮ್ಮ ಹೆಸರು ಅಂದೆ..

ಪ್ರಥಮ್ ಸರ್ ಅಂದ್ರು...

ಸುಮ್ಮನಿರಬೇಕು ಅಂದೆ?

ಆಯ್ತು ಸರ್ ಅಂದ್ರು, ಆಗಲ್ಲ ಸರ್ ಒಂದು....ಅಂದ್ರು

ಸುಮ್ಮನಿರಬೇಕು ಅಂದೆ?[ವೀಕ್ಷಕರ ಅನುಮಾನಕ್ಕೆ ಕ್ಲಾರಿಟಿ ಕೊಟ್ಟ 'ಬಿಗ್ ಬಾಸ್' & ಸುದೀಪ್.! ]

ತುಂಬಾ ಜ್ಞಾನಿ!

''ನನಗೆ ಖುಷಿಯಿದೆ. ಆದ್ರೆ, ಇದು ಸಂದರ್ಭ ಅಲ್ಲ. ನಾನು ಕಥೆ ಕೇಳೋಕೆ ಕೂತಿಲ್ಲ. ನನ್ನದು ಹರಿದು ನಾಲ್ಕು ಭಾಗ ಆಗ್ತಿದೆ. ನನ್ನದೇನೋ ಪ್ರಾಬ್ಲಂ ಇದೆ. ನನ್ನ ಪಾಡಿಗೆ ಇರಬೇಕು ಅಂತ ಹೊರಗಡೆ ಕೂತಿದ್ದೀನಿ ಅಷ್ಟೇ. ಅಷ್ಟು ಶಕ್ತಿ ತಗೊಂಡು ಹೋಗಿ ಸಿನಿಮಾ ಹಾಕಿ. ಬುದ್ದಿ ಕೊಟ್ಟಿದ್ದಾನೆ. ಆವಾಗನಿಂದ 25 ಶ್ಲೋಕಗಳು ಹೇಳಿದ್ದೀರಾ? ಹಾಗೆಲ್ಲ ಹೇಳಿದ್ಮೇಲೆ...ಸರಿ ಸಾರ್ ಅಂತ ಸುಮ್ಮನಾದ್ರು.

ಫೋಟೋಶೂಟ್ ಬೇರೆ ಆಯ್ತು!

ಅದಾದ ಮೇಲೆ 5 ನಿಮಿಷ ಫೋಟೋಶೂಟ್ ಬೇರೆ ಆಯ್ತು. ದಯವಿಟ್ಟು ಹೊರಡಿ, ಇಲ್ಲಿ ಕೂತಲ್ಲೇ ಒಂದು ಗಂಟೆ ಆಯ್ತು. ಹೋಗಿ ನಿಮ್ಮ ಕೆಲಸ ಮಾಡ್ಕೊಳಿ ಅಂದೆ....ನನ್ನ ಪರಿಚಯನೇ ಇಲ್ದಿದ್ದಾಗ, ಹಲೋ ಹೇಳೋಕೆ ಬಂದಬಿಟ್ಟು, ಒಂದು ಗಂಟೆ......ರಾಜೇಶ್ ರಾಮನಾಥ್ ಬಂದ್ರು. ನೀವು ಒಂದು ನಿಮಿಷ ಇರಿ ಅಂದೆ, ಪ್ರಥಮ್ ಗೆ ಹೊರಡಿ ಅಂದೆ...ಇವರನ್ನ ಕಳಿಸಿಬಿಟ್ಟೆ,

ಪ್ರಥಮ್ ಕೊನೆ ವ್ಯಕ್ತಿ!

''ರಾಜೇಶ್ ಅವರಿಗೆ ಹೇಳದೆ,,,,ನೆಕ್ಸ್ಟ್ ಟೈಮ್ ಇಷ್ಟೊಂದು ಎನರ್ಜಿ ಇದೆ ಗೊತ್ತಾದಾಗ, ಒಂದು ಸರಿ ನನ್ನ ಕೇಳು, ನನಗೆ ಎಷ್ಟು ಎನರ್ಜಿ ಉಳಿದಿದೆ ಅಂತ. ಅದನ್ನ ತೋರಿಸಿಬಿಟ್ಟು ಕರೆದುಕೊಂಡು ಬಾ ಅಂದೆ. ಅರ್ಥ ಆಯ್ತನೇಪ್ಪಾ. ನನಗೆ ಮೊದಲೇ ತಲೆಕೆಟ್ಟೋಗಿದೆ. ಇವರು ಬೇರೆ ಅರ್ಥ ಆಗ್ದೆ ಇರೋ ಭಾಷೆಯಲ್ಲಿ ಮಾತಾಡ್ತಿದ್ದಾರೆ. ಅಷ್ಟೇ ಅವತ್ತೆ ಲಾಸ್ಟ್, ರಾಜೇಶ್ ರಾಮನಾಥ್ ಮತ್ಯಾರನ್ನ ಕರದೆಕೊಂಡು ಬಂದೇ ಇಲ್ಲ....''

English summary
Bigg Boss Kannada 4 Week 13: Kiccha Sudeep remembers his first meeting with 'Olle Huduga' Pratham.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada