»   » ಐಂದ್ರಿತಾ ರೇ ಪ್ರಕಾರ ಕನ್ನಡ ಚಿತ್ರರಂಗದ ಓವರ್ ರೇಟೆಡ್ ನಟಿ ಯಾರು.?

ಐಂದ್ರಿತಾ ರೇ ಪ್ರಕಾರ ಕನ್ನಡ ಚಿತ್ರರಂಗದ ಓವರ್ ರೇಟೆಡ್ ನಟಿ ಯಾರು.?

Posted By:
Subscribe to Filmibeat Kannada

'ಗೋವಿಂದಾಯ ನಮಃ', 'ಬಚ್ಚನ್', 'ವಾಸ್ತು ಪ್ರಕಾರ', 'ಆಟಗಾರ', 'ಕಿಲ್ಲಿಂಗ್ ವೀರಪ್ಪನ್', 'ಜೆಸ್ಸಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಫಿಲ್ಮ್ ಫೇರ್ ಹಾಗೂ ಐಫಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ನಟಿ ಪಾರುಲ್ ಯಾದವ್ ''ಕನ್ನಡ ಚಿತ್ರರಂಗದ ಓವರ್ ರೇಟೆಡ್ ನಟಿ''ಯಂತೆ.!

ಹಾಗಂತ ಕಾಮೆಂಟ್ ಮಾಡಿದವರು ಕನ್ನಡ ನಟಿ ಐಂದ್ರಿತಾ ರೇ.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಐಂದ್ರಿತಾ ರೇ ಜೊತೆ ಮಾತುಕತೆ ಹಾಗೂ ಆಟ ಆಡಿದ ನಂತರ ನಿರೂಪಕ ಅಕುಲ್ ಬಾಲಾಜಿ Rapid Fire ರೌಂಡ್ ಗೆ ಚಾಲನೆ ನೀಡಿದರು.

Kannada Actress Aindrita Ray comments on Parul Yadav

'Rapid Fire' ರೌಂಡ್ ನಲ್ಲಿ ''ನಿಮ್ಮ ಪ್ರಕಾರ ಕನ್ನಡ ಚಿತ್ರರಂಗದ ಓವರ್ ರೇಟೆಡ್ ನಟಿ ಯಾರು.?'' ಎಂದು ಅಕುಲ್ ಬಾಲಾಜಿ ಕೇಳಿದ ಪ್ರಶ್ನೆಗೆ ಹಿಂದು ಮುಂದು ಯೋಚನೆ ಮಾಡದೆ ''ಪಾರುಲ್ ಯಾದವ್'' ಎಂದು ಉತ್ತರ ಕೊಟ್ಟರು ನಟಿ ಐಂದ್ರಿತಾ ರೇ.

ನಿಮಗೂ ನಟಿ ಪಾರುಲ್ ಯಾದವ್ 'ಓವರ್ ರೇಟೆಡ್ ನಟಿ' ಎಂದು ಅನಿಸುತ್ತಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ...

English summary
''Parul Yadav is Over Rated Actress in Kannada Film Industry'' says Kannada Actress Aindrita Ray in Colors Super Channel's popular show 'Super Talk Time'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada