twitter
    For Quick Alerts
    ALLOW NOTIFICATIONS  
    For Daily Alerts

    Anika Sindhya:ಪಾಸಿಟಿವ್ ಪಾತ್ರದೆಡೆಗೆ ಕಿರುತೆರೆಯ ಫೇಮಸ್ ಖಳನಾಯಕಿ ನಡಿಗೆ!

    By ಅನಿತಾ ಬನಾರಿ
    |

    ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮರಳಿ ಮನಸ್ಸಾಗಿದೆ' ಧಾರಾವಾಹಿಯಲ್ಲಿ ಕವನ ಪಾತ್ರಕ್ಕೆ ಜೀವ ತುಂಬುತ್ತಿರುವ ನಟಿ ಅನಿಕಾ ಸಿಂದ್ಯಾ. ವಿಶಿಷ್ಟ ಪಾತ್ರಗಳ ಮೂಲಕ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ಚೆಲುವೆ.

    'ಕಾದಂಬರಿ' ಧಾರಾವಾಹಿಯ ಮೂಲಕ ಕಿರುತೆರೆ ಜಗತ್ತಿಗೆ ಅನಿಕಾ ಸಿಂಧ್ಯಾ ಕಾಲಿಟ್ಟಿದ್ದರು. ಇದೀಗ ಈ ಪಯಣಕ್ಕೆ ಬರೋಬ್ಬರಿ ಹದಿನೆಂಟು ವರ್ಷ.

    ನೆಗೆಟಿವ್ ಪಾತ್ರಗಳಿಂದಲೇ ಮನೆ ಮಾತಾಗಿರುವ ನಟಿ ಅನಿಕಾ ಸಿಂಧ್ಯಾ ಸದ್ಯ 'ಮರಳಿ ಮನಸ್ಸಾಗಿದೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೇ ಅನಿಕಾ ಅವರ ವೃತ್ತಿ ಜೀವನದಲ್ಲಿ ಅವರು ಇದೇ ಮೊದಲ ಬಾರಿಗೆ ಪಾಸಿಟಿವ್ ಪಾತ್ರದಲ್ಲಿ ನಡೆಸುತ್ತಿದ್ದಾರೆ ಎಂದರೆ ಸುಳ್ಳಲ್ಲ.

    ಕಿರುತೆರೆಯ ಫೇಮಸ್ಸು ಖಳನಾಯಕಿ

    ಕಿರುತೆರೆಯ ಫೇಮಸ್ಸು ಖಳನಾಯಕಿ

    ಎಲ್ಲವೂ ಎಂದುಕೊಂಡಂತೆ ಆಗಿದ್ದರೆ ಇಂದು ಅನಿಕಾ ಸಿಂಧ್ಯಾ ಡಾಕ್ಟರ್ ಆಗಿರುತ್ತಿದ್ದರು. ಆದರೆ ಆಕಸ್ಮಿಕವಾಗಿ ದೊರೆತ ಅವಕಾಶದಿಂದ ನಟನಾ ರಂಗಕ್ಕೆ ಕಾಲಿಟ್ಟ ಅನಿಕಾ ಖಳನಾಯಕಿಯಾಗಿ ಬಣ್ಣದ ಪಯಣ ಶುರುವಾಗಿತ್ತು. ಮುಂದೆ ಅಂತಹುದೇ ಪಾತ್ರಗಳಿಗೆ ಸೀಮಿತವಾದ ಅನಿಕಾ ಸಿಂಧ್ಯಾ ಸದ್ಯ ಪಾಸಿಟಿವ್ ರೋಲ್ ಮೂಲಕ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದು ಅಲ್ಲಿವೂ ಯಶಸ್ವಿಯಾಗಿದ್ದಾರೆ.

    ಮೊದಲ ಧಾರಾವಾಹಿಯಲ್ಲಿ ಖಳನಾಯಕಿ

    ಮೊದಲ ಧಾರಾವಾಹಿಯಲ್ಲಿ ಖಳನಾಯಕಿ

    'ಕಾದಂಬರಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಅನಿಕಾ ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡರು. ಮುಂದೆ 'ಗುಪ್ತಗಾಮಿನಿ', 'ಕುಂಕುಮಭಾಗ್ಯ', 'ಕಂಕಣ', 'ನನ್ನವಳು', 'ಸುಕನ್ಯಾ', 'ಮನೆಮಗಳು', 'ಶುಭಮಂಗಳ', 'ಮಂದಾರ', 'ಸೂರ್ಯಕಾಂತಿ',
    'ಆಕಾಶದೀಪ', 'ಲಕ್ಷ್ಮಿ ಬಾರಮ್ಮ' ಸೇರಿದಂತೆ ಮೂವತ್ತಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ ಬೆಡಗಿ.

    ನೆಗೆಟಿವ್ ಕ್ಯಾರೆಕ್ಟರ್ ಮೀನಾಕ್ಷಿ

    ನೆಗೆಟಿವ್ ಕ್ಯಾರೆಕ್ಟರ್ ಮೀನಾಕ್ಷಿ

    ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕಾಶದೀಪ' ಧಾರಾವಾಹಿಯಲ್ಲಿ ನಾಯಕ ಆಕಾಶನ ಅತ್ತಿಗೆ ಮೀನಾಕ್ಷಿಯಾಗಿ ನಟಿಸಿದ್ದ ಅನಿಕಾ ಖಳನಾಯಕಿಯಾಗಿ ಮೋಡಿ ಮಾಡಿದರು. "ಮೀನಾಕ್ಷಿ ಪಾತ್ರ ಸಂಪೂರ್ಣ ನೆಗೆಟಿವ್ ಆಗಿದ್ದರೂ ಆ ಪಾತ್ರ ನನಗೆ ಸಂತಸ ನೀಡಿತ್ತು" ಎಂದು ನಗುತ್ತಾ ಹೇಳುವ ಅನಿಕಾ ಸಿಂಧ್ಯಾಗೆ ಕಿರುತೆರೆಯಲ್ಲಿ ಜನಪ್ರಿಯತೆ ನೀಡಿದ್ದು ಕುಮುದಾ ಪಾತ್ರ.

    ಕುಮುದಾ ಪಾತ್ರದಿಂದಲೇ ಅನಿಕಾ ಜನಪ್ರಿಯತೆ

    ಕುಮುದಾ ಪಾತ್ರದಿಂದಲೇ ಅನಿಕಾ ಜನಪ್ರಿಯತೆ

    ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಕುಮುದಾ ಆಗಿ ಅಭಿ‌ನಯಿಸಿದ್ದ ಅನಿಕಾ ಸಿಂಧ್ಯಾ ಬರೋಬ್ಬರಿ ಮೂರು ವರ್ಷಗಳ ಕಾಲ ಖಳನಾಯಕಿಯಾಗಿ ವೀಕ್ಷಕರನ್ನು ರಂಜಿಸಿದ್ದರು. ಧಾರಾವಾಹಿ ಮುಗಿದು ಎರಡು ವರ್ಷ ಕಳೆದರೂ ಇಂದಿಗೂ ಜನ ಕುಮುದಾ ಪಾತ್ರದಿಂದಲೇ ಅನಿಕಾರನ್ನು ಗುರುತಿಸುತ್ತಾರೆ.

    'ಒಂದೇ ಪಾತ್ರಕ್ಕೆ ಸೀಮಿತವಾಗಿರಬಾರದು'

    'ಒಂದೇ ಪಾತ್ರಕ್ಕೆ ಸೀಮಿತವಾಗಿರಬಾರದು'

    "ಖಳನಾಯಕಿಯಾಗಿಯೇ ನಾನು ಕಿರುತೆರೆಗೆ ಕಾಲಿಟ್ಟಿದ್ದು. ಮಾತ್ರವಲ್ಲ ಹೆಚ್ಚಿನ ಧಾರಾವಾಹಿಗಳಲ್ಲೂ ನಾನು ಖಳನಾಯಕಿಯಾಗಿಯೇ ಕಾಣಿಸಿಕೊಂಡಿದ್ದು ಹೆಚ್ಚು. ಆದರೆ ಯಾವತ್ತಿಗೂ ಒಂದೇ ಪಾತ್ರಕ್ಕೆ ಸೀಮಿತವಾಗಿರಬಾರದು. ಅದಕ್ಕಾಗಿಯೇ ನಾನು ಕವನ ಪಾತ್ರ ಒಪ್ಪಿಕೊಂಡೆ. ಎಲ್ಲರೂ ಹೇಳುವಂತೆ ನೆಗೆಟಿವ್ ರೋಲ್‌ನಲ್ಲಿ ನಟನೆಗೆ ಅವಕಾಶ ಜಾಸ್ತಿ ನಿಜ. ಆದರೆ ಹಾಗಾದರೆ ಒಂದೇ ಪಾತ್ರಕ್ಕೆ ಅಂಟಿಕೊಂಡು ಬಿಡುತ್ತೇವೆ. ಅದು ನನಗೆ ಮನಸ್ಸಿಲ್ಲ ಎಂದು ಅನಿಕಾ ಸಿಂಧ್ಯಾ ಹೇಳುತ್ತಾರೆ.

    English summary
    Kannada Actress Anika Sindhya Acts As A Kavana In Marali Manasagidhe's Serial, Know More.
    Thursday, January 5, 2023, 16:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X