For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಸ್ಪರ್ಧಿಯನ್ನ ಮದುವೆ ಆಗಲು ಪಣ ತೊಟ್ಟ ಸಂಜನಾ ಗಲ್ರಾನಿ.!

  |

  'ಗಂಡ ಹೆಂಡತಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ನಟಿ ಸಂಜನಾ ಗಲ್ರಾನಿ. ಕನ್ನಡದಲ್ಲಿ 'ಮೈಲಾರಿ', 'ಈ ಸಂಜೆ', 'ರಂಗಪ್ಪ ಹೋಗ್ಬಿಟ್ನಾ', 'ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ', 'ಸಾಗರ್', 'ಅಗ್ರಜ', 'ರಾಜಸಿಂಹ', 'ದಂಡುಪಾಳ್ಯ-2' ಚಿತ್ರಗಳಲ್ಲಿ ನಟಿಸಿರುವ ಸಂಜನಾ ಗಲ್ರಾನಿ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.

  ದುನಿಯಾ ವಿಜಯ್ ಮಗನಿಗೆ ಇಷ್ಟವಾದ ಸಾವಿತ್ರಿ ಯಾರು ಗೊತ್ತಾ..? |FILMIBEAT KANNADA

  ಇಂತಿಪ್ಪ ಸಂಜನಾ ಗಲ್ರಾನಿ ಇದೀಗ ಹಿಂದಿ ಕಿರುತೆರೆ ಕಡೆ ಮುಖ ಮಾಡಿದ್ದಾರೆ. ಅಲ್ಲಿನ ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿಯಾಗಿದ್ದಾರೆ. ವಿಶೇಷ ಅಂದ್ರೆ, ಆ ರಿಯಾಲಿಟಿ ಶೋನಲ್ಲಿ ನಟಿ ಸಂಜನಾ ಗಲ್ರಾನಿ 'ರಿಯಲ್ ವಧು' ಆಗಿದ್ದಾರೆ.

  ಹೌದು, ಬಾಳ ಸಂಗಾತಿಯನ್ನು ಹುಡುಕಿಕೊಂಡು ನಟಿ ಸಂಜನಾ ಹಿಂದಿಯ ವಧು-ವರ ಅನ್ವೇಷಣೆ ಕಾನ್ಸೆಪ್ಟ್ ನಲ್ಲಿ ಮೂಡಿಬರುತ್ತಿರುವ 'ಮುಜ್ಸೆ ಶಾದಿ ಕರೋಗಿ' ಕಾರ್ಯಕ್ರಮದಲ್ಲಿ ಸ್ಪರ್ಧೆಗಿಳಿದಿದ್ದಾರೆ. ಈಗಷ್ಟೇ 'ಬಿಗ್ ಬಾಸ್' ಮನೆಯಿಂದ ಹೊರಬಂದ ಪಾರಸ್ ಛಾಬ್ರಾ ರನ್ನ ವರಿಸಿ, ಶೋ ಗೆಲ್ಲಲು ಸಂಜನಾ ಗಲ್ರಾನಿ ಪಣ ತೊಟ್ಟಿದ್ದಾರೆ.

  ಹಾಗ್ನೋಡಿದ್ರೆ, ಕನ್ನಡದ 'ಬಿಗ್ ಬಾಸ್' ಮೊದಲನೇ ಆವೃತ್ತಿಯಲ್ಲಿ ನಟಿ ಸಂಜನಾ ಸ್ಪರ್ಧಿಸಿದ್ದರು. ಇದೀಗ ಹಿಂದಿಯ 'ಬಿಗ್ ಬಾಸ್-13' ಕಾರ್ಯಕ್ರಮದಲ್ಲಿ ಸಂಸ್ಕಾರಿ ಪ್ಲೇ ಬಾಯ್ ಅಂತಲೇ ಕು'ಖ್ಯಾತಿ' ಗಳಿಸಿದ್ದ ಪಾರಸ್ ಛಾಬ್ರಾ ಕೈಹಿಡಿಯಲು ನಟಿ ಸಂಜನಾ ಮುಂದಾಗಿದ್ದಾರೆ.

  ಹೊಸ ರಿಯಾಲಿಟಿ ಶೋ

  ಹೊಸ ರಿಯಾಲಿಟಿ ಶೋ

  'ಬಿಗ್ ಬಾಸ್-13' ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ, ಅದೇ ಕಾರ್ಯಕ್ರಮದ ಸ್ಪರ್ಧಿಗಳನ್ನು ಬಳಸಿಕೊಂಡು ಟಿ.ಆರ್.ಪಿ ಮೇನ್ಟೇನ್ ಮಾಡಲು ವಾಹಿನಿ ಹೊಸ ರಿಯಾಲಿಟಿ ಶೋಗೆ ಚಾಲನೆ ನೀಡಿದೆ. ಅದೇ 'ಮುಜ್ಸೆ ಶಾದಿ ಕರೋಗಿ'. ವಧು-ವರ ಅನ್ವೇಷಣೆ ಕುರಿತಾದ ಈ ಶೋನಲ್ಲಿ 'ಬಿಗ್ ಬಾಸ್-13' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಶೆಹನಾಝ್ ಗಿಲ್ ಮತ್ತು ಪಾರಸ್ ಛಾಬ್ರಾ ತಮ್ಮ ಲೈಫ್ ಪಾರ್ಟ್ನರ್ ಗಳನ್ನು ಆರಿಸಲಿದ್ದಾರೆ.

  ಮತ್ತೊಂದು ಎಡವಟ್ಟು ಮಾಡಿದ ಸಂಜನಾ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು.!ಮತ್ತೊಂದು ಎಡವಟ್ಟು ಮಾಡಿದ ಸಂಜನಾ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು.!

  ಸಂಸ್ಕಾರಿ ಪ್ಲೇ ಬಾಯ್

  ಸಂಸ್ಕಾರಿ ಪ್ಲೇ ಬಾಯ್

  'ಬಿಗ್ ಬಾಸ್-13' ಕಾರ್ಯಕ್ರಮದಲ್ಲಿ ಸಂಸ್ಕಾರಿ ಪ್ಲೇ ಬಾಯ್ ಅಂತಲೇ ಕರೆಯಿಸಿಕೊಳ್ಳುತ್ತಿದ್ದ ಸ್ಪರ್ಧಿ ಪಾರಸ್ ಛಾಬ್ರಾ. ಹಲವು ಬಾರಿ ಮಹಿಳಾ ಸ್ಪರ್ಧಿಗಳಿಗೆ ಮುತ್ತಿಟ್ಟು ಕೆಂಗಣ್ಣಿಗೆ ಗುರಿಯಾಗಿದ್ದ ಪಾರಸ್ ಛಾಬ್ರಾ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಟಾಪ್ 5 ಹಂತ ತಲುಪಿದ್ದರು. ಗ್ರ್ಯಾಂಡ್ ಫಿನಾಲೆಯಲ್ಲಿ 10 ಲಕ್ಷ ರೂಪಾಯಿಯನ್ನು ಆಯ್ಕೆ ಮಾಡಿಕೊಂಡು 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದಿದ್ದ ಪಾರಸ್ ಛಾಬ್ರಾ ಇದೀಗ 'ಮುಜ್ಸೆ ಶಾದಿ ಕರೋಗಿ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದೇ ವೇದಿಕೆ ಮೂಲಕ ತಮ್ಮ ಬಾಳಸಂಗಾತಿಯನ್ನ ಪಾರಸ್ ಛಾಬ್ರಾ ಆಯ್ಕೆ ಮಾಡಿಕೊಳ್ಳಲಿದ್ದಾರೆ.

  'ಹುಡುಗಾಟ'ದಿಂದ ವಿಡಿಯೋ ಮಾಡಿದ್ದು: 'ಪ್ಲೀಸ್ ಕಾಪಾಡಿ' ಎಂದ ನಟಿ ಸಂಜನಾ.!'ಹುಡುಗಾಟ'ದಿಂದ ವಿಡಿಯೋ ಮಾಡಿದ್ದು: 'ಪ್ಲೀಸ್ ಕಾಪಾಡಿ' ಎಂದ ನಟಿ ಸಂಜನಾ.!

  'ವಧು'ವಾಗಿ ಬಂದ ಸಂಜನಾ ಗಲ್ರಾನಿ

  'ವಧು'ವಾಗಿ ಬಂದ ಸಂಜನಾ ಗಲ್ರಾನಿ

  ಪಾರಸ್ ಛಾಬ್ರಾ ರನ್ನ ಇಂಪ್ರೆಸ್ ಮಾಡಲು 'ಮುಜ್ಸೆ ಶಾದಿ ಕರೋಗಿ' ಕಾರ್ಯಕ್ರಮದಲ್ಲಿ ಸಂಜನಾ ಸ್ಪರ್ಧಿಯಾಗಿದ್ದಾರೆ. ಪಾರಸ್ ಛಾಬ್ರಾ ಮನಗೆಲ್ಲಲು ಮೊದಲು ವೇದಿಕೆ ಮೇಲೆ ಬಂದ 'ವಧು' ಸಂಜನಾ ಗಲ್ರಾನಿ.

  ಬಾರ್ ನಲ್ಲಿ ಕಿರಿಕ್: ಸುದೀರ್ಘ ಪತ್ರ ಬರೆದು ಸ್ಪಷ್ಟನೆ ನೀಡಿದ ಸಂಜನಾ ಗಲ್ರಾನಿಬಾರ್ ನಲ್ಲಿ ಕಿರಿಕ್: ಸುದೀರ್ಘ ಪತ್ರ ಬರೆದು ಸ್ಪಷ್ಟನೆ ನೀಡಿದ ಸಂಜನಾ ಗಲ್ರಾನಿ

  ಸಂಜನಾ ಪರಿಚಯ ಮಾಡಿಕೊಂಡಿದ್ದು ಹೇಗೆ.?

  ಸಂಜನಾ ಪರಿಚಯ ಮಾಡಿಕೊಂಡಿದ್ದು ಹೇಗೆ.?

  ''ರಾಣಿಯೋಂಕೆ ರಾಣಿ... ಸಂಜನಾ ಗಲ್ರಾನಿ... ನಾನು ಬೆಂಗಳೂರು, ದಕ್ಷಿಣ ಭಾರತದಿಂದ ಬಂದಿದ್ದೇನೆ. ನಾನು ಕನ್ನಡ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. 12 ವರ್ಷ ಇದ್ದಾಗ ಬಾಲನಟಿಯಾಗಿ ನಟಿಸಿದ್ದೇನೆ. 16-17 ವರ್ಷ ಇದ್ದಾಗ ಹೀರೋಯಿನ್ ಆದೆ'' ಎಂದು ತಮ್ಮನ್ನ ಸಂಜನಾ ಗಲ್ರಾನಿ ಪರಿಚಯಿಸಿಕೊಂಡರು.

  'ಗಂಡ ಹೆಂಡತಿ' ಸಂಧಾನ: ಆರೋಪ ಮಾಡಿದ್ದು ಸಂಜನಾ, 'ಸಾರಿ' ಕೇಳಿದ್ದು ಅವರೇ.!'ಗಂಡ ಹೆಂಡತಿ' ಸಂಧಾನ: ಆರೋಪ ಮಾಡಿದ್ದು ಸಂಜನಾ, 'ಸಾರಿ' ಕೇಳಿದ್ದು ಅವರೇ.!

  ಪಾರಸ್ ಕಂಡ್ರೆ ಇಷ್ಟ ಅಂತೆ.!

  ಪಾರಸ್ ಕಂಡ್ರೆ ಇಷ್ಟ ಅಂತೆ.!

  ''ಪಾರಸ್ ಛಾಬ್ರಾ ಅಂದ್ರೆ ನನಗೆ ತುಂಬಾ ಇಷ್ಟ. ಹೀ ಈಸ್ ವೆರಿ ಕ್ಯೂಟ್. ಹೀಗಾಗಿ, ಸಿನಿಮಾ ಬದಲು ರಿಯಾಲಿಟಿ ಶೋ ಮಾಡೋಣ ಅಂತ ಇಲ್ಲಿಗೆ ಬಂದೆ. ನನ್ನ ವ್ಯಕ್ತಿತ್ವ ಮತ್ತು ಪಾರಸ್ ವ್ಯಕ್ತಿತ್ವದಲ್ಲಿ ತುಂಬಾ ಸಾಮ್ಯತೆಗಳಿವೆ. ನಾನು ತುಂಬ ಬೋಲ್ಡ್. ಏನೇ ಇದ್ದರೂ, ಡೈರೆಕ್ಟ್ ಆಗಿ ಮಾತನಾಡುವೆ. ಪಾರಸ್ ಕೂಡ ತುಂಬಾ ಡೈರೆಕ್ಟ್ ಆಗಿ ಮಾತನಾಡುತ್ತಾರೆ. ಹೀಗಾಗಿ, ಅವರಿಗಾಗಿ ನಾನು ಇಲ್ಲಿಗೆ ಬಂದಿದ್ದೇನೆ'' ಎಂದು ಹೇಳಿದ್ದಾರೆ ಸಂಜನಾ.

  ವಾವ್ ಎಂದ ಪಾರಸ್

  ವಾವ್ ಎಂದ ಪಾರಸ್

  ''ದಕ್ಷಿಣದ ಬಹು ದೊಡ್ಡ ನಟಿ ನೀವು. 40 ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದೀರಾ. ನಾನು ಬರೀ 'ಬಿಗ್ ಬಾಸ್' ಮನೆಯಲ್ಲಿದ್ದೆ. ಹೀಗಾಗಿ, ನೀವು ನನಗಿಂತ ದೊಡ್ಡ ಸೆಲೆಬ್ರಿಟಿ. ಎಷ್ಟೋ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದೀರಿ. ನೀವು ಸುಂದರವಾಗಿದ್ದೀರಿ. ಅಂದ್ಮೇಲೆ ಯಾರಾದರೂ ದಕ್ಷಿಣದ ನಟ ಅಥವಾ ಬಿಸಿನೆಸ್ ಮ್ಯಾನ್ ಜೊತೆಗೆ ಮದುವೆ ಆಗಬಹುದಿತ್ತು.? ಅಂಥದ್ರಲ್ಲಿ, ಸಿನಿಮಾನ ಪಕ್ಕಕ್ಕಿಟ್ಟು ನನಗಾಗಿ ಇಲ್ಲಿಯವರೆಗೂ ಬಂದಿದ್ದೀರಾ. ವಾವ್ ಐ ಆಮ್ ಫೀಲಿಂಗ್ ಗ್ರೇಟ್'' ಎಂದರು ಪಾರಸ್ ಛಾಬ್ರಾ.

  ಸಂಜನಾಗೆ ಇದೆ ಹಳೇ ಲವ್ ಸ್ಟೋರಿ.!

  ಸಂಜನಾಗೆ ಇದೆ ಹಳೇ ಲವ್ ಸ್ಟೋರಿ.!

  ''ದಕ್ಷಿಣ ಭಾರತದಲ್ಲಿ ನಿಮಗೆ ಯಾವ ಹುಡುಗನೂ ಇಷ್ಟ ಆಗಲಿಲ್ಲವೇ.?'' ಎಂದು ಪಾರಸ್ ಪ್ರಶ್ನಿಸಿದ್ದರು. ಆಗ, ''ಕೆಲವೊಬ್ಬರು ಇಷ್ಟ ಆಗಿದ್ದಾರೆ. ನನಗೂ ಒಂದು ಗೌರವಯುತವಾದ ಪಾಸ್ಟ್ (ಹಳೇ ಲವ್ ಸ್ಟೋರಿ) ಇದೆ. ಹಳೆಯದ್ದನ್ನೆಲ್ಲಾ ಮರೆತು, ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇನೆ'' ಎಂದರು ಸಂಜನಾ. ಅದಕ್ಕೆ, ''ಬ್ರೇಕಪ್ ಯಾಕಾಯ್ತು.?'' ಎಂದು ಪಾರಸ್ ಕೇಳಿದಾಗ, ''ಸಿನಿಮಾದಲ್ಲಿ ಮುಂದುವರೆಯುವ ಬಗ್ಗೆ ನನಗೆ ಇಚ್ಛೆ ಇತ್ತು. ಆದ್ರೆ ನನ್ನ ಬಾಯ್ ಫ್ರೆಂಡ್ ಗೆ ಅದು ಇಷ್ಟ ಇರಲಿಲ್ಲ. ಸೆಟಲ್ ಆಗಬೇಕು ಅಂತಿದ್ರು. ಅಷ್ಟು ಬೇಗ ಸೆಟಲ್ ಆಗಲು ನನಗೆ ಇಷ್ಟ ಇರಲಿಲ್ಲ. ಹೀಗಾಗಿ ಬ್ರೇಕಪ್ ಆಯ್ತು'' ಎಂದರು ಸಂಜನಾ.

  ಮುತ್ತು ಕೊಟ್ಟ ಸಂಜನಾ.!

  ಮುತ್ತು ಕೊಟ್ಟ ಸಂಜನಾ.!

  ''ಹಾಗಾದರೆ ಈಗ ಸೆಟಲ್ ಆಗುವ ಮನಃಸ್ಥಿತಿ ನಿಮಗೆ ಇದ್ಯಾ.?'' ಎಂದು ಪಾರಸ್ ಕೇಳಿದರು. ಆಗ, ''50-50. ಆದ್ರೆ, ನನಗೆ ನೀವು ಅಂದ್ರೆ ತುಂಬಾ ಇಷ್ಟ. ಹೀಗಾಗಿ ಇಲ್ಲಿಗೆ ಬಂದಿದ್ದೇನೆ'' ಎಂದು ಹೇಳಿ ಪಾರಸ್ ಮನಗೆದ್ದರು ಸಂಜನಾ. ಜೊತೆಗೆ ''ಮುತ್ತು ಕೊಟ್ಟರೆ ಕ್ಯಾಲೋರಿ ಬರ್ನ್ ಆಗುತ್ತೆ'' ಅಂತ 'ಬಿಗ್ ಬಾಸ್' ಮನೆಯಲ್ಲಿ ಹೇಳಿದ್ರಿ ಎನ್ನುತ್ತ ಪಾರಸ್ ಕೆನ್ನೆಗೆ ಸಂಜನಾ ಮುತ್ತಿಟ್ಟರು. ಜೊತೆಗೆ ಪಾರಸ್ ಮತ್ತು ಸಂಜನಾ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದರು.

  ಗ್ರೀನ್ ಸಿಗ್ನಲ್ ಕೊಟ್ಟ ಪಾರಸ್.!

  ಗ್ರೀನ್ ಸಿಗ್ನಲ್ ಕೊಟ್ಟ ಪಾರಸ್.!

  'ಮುಜ್ಸೆ ಶಾದಿ ಕರೋಗಿ' ಶೋನಲ್ಲಿ ಸಂಜನಾ ಮುಂದುವರೆಯಲು ಪಾರಸ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಂಜನಾ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಪಾರಸ್ ಗಿದೆ. ಇದೇ ಶೋನಲ್ಲಿ ಪಾರಸ್ ಮತ್ತು ಸಂಜನಾ ನಡುವೆ ಅನುರಾಗ ಅರಳಿದರೆ, ಮದುವೆ ನಡೆಯಬಹುದು.!

  English summary
  Kannada Actress Sanjana Galrani has participated in Hindi reality show Mujse Shaadi Karoge.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X