For Quick Alerts
  ALLOW NOTIFICATIONS  
  For Daily Alerts

  ತಮಿಳು ಬಿಗ್‌ಬಾಸ್‌ನಲ್ಲಿ ಕನ್ನಡತಿ! ಯಾರೀಕೆ ರಚಿತಾ ಮಹಾಲಕ್ಷ್ಮಿ?

  |

  ಕನ್ನಡ, ತೆಲುಗು, ಹಿಂದಿ ಬಿಗ್‌ಬಾಸ್‌ಗಳು ಏಕಕಾಲಕ್ಕೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಇದೀಗ ತಮಿಳು ಬಿಗ್‌ಬಾಸ್ ಸಹ ಆರಂಭಗೊಂಡಿದೆ. ತಮಿಳು ಬಿಗ್‌ಬಾಸ್‌ನ ಆರನೇ ಸೀಸನ್ ನಿನ್ನೆ (ಅಕ್ಟೋಬರ್ 09) ರಂದು ಆರಂಭವಾಗಿದ್ದು, ಕಳೆದ ಐದು ಸೀಸನ್ ಅನ್ನು ನಿರೂಪಣೆ ಮಾಡಿದ್ದ ಕಮಲ್ ಹಾಸನ್‌ ಅವರೇ ಈ ಶೋ ಅನ್ನೂ ನಿರೂಪಣೆ ಮಾಡುತ್ತಿದ್ದಾರೆ.

  ಬರೋಬ್ಬರಿ 20 ಮಂದಿ ಸ್ಪರ್ಧಿಗಳನ್ನು ಈ ಬಾರಿ ಮನೆಯ ಒಳಗೆ ಕಳಿಸಲಾಗಿದೆ. ಸೆಲೆಬ್ರಿಟಿಗಳ ಜೊತೆಗೆ ಮೂವರು ಸಾಮಾನ್ಯ ಜನರನ್ನೂ ಸಹ ಬಿಗ್‌ಬಾಸ್ ಮನೆಯೊಳಗೆ ಕಳಿಸಿರುವುದು ವಿಶೇಷ.

  ತಮಿಳು ಬಿಗ್‌ಬಾಸ್‌ ಮನೆಯಲ್ಲಿ ಒಬ್ಬ ಕನ್ನಡತಿಯೂ ಇದ್ದಾರೆ. ಅವರೇ ರಚಿತಾ ಮಹಾಲಕ್ಷ್ಮಿ. ಬೆಂಗಳೂರಿನವರಾದ ರಚಿತಾ ಮಹಾಲಕ್ಷ್ಮಿ ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯಗೊಂಡವರು. ಈಗ ತಮಿಳು ಟಿವಿ ಲೋಕದಲ್ಲಿ ಜನಪ್ರಿಯ ಮುಖ.

  ಕನ್ನಡದ ಯಾವ ಧಾರಾವಾಹಿಗಳಲ್ಲಿ ನಟನೆ?

  ಕನ್ನಡದ ಯಾವ ಧಾರಾವಾಹಿಗಳಲ್ಲಿ ನಟನೆ?

  1986, ಏಪ್ರಿಲ್ 26 ರಂದು ಜನಿಸಿದ ರಚಿತಾ ಶಾಲೆ, ಕಾಲೇಜೆಲ್ಲವನ್ನೂ ಬೆಂಗಳೂರಿನಲ್ಲಿಯೇ ಕಲಿತರು. ಬಳಿಕ 'ಮೇಘ ಮಂದಾರ' ಹೆಸರಿನ ಕನ್ನಡ ಧಾರಾವಾಹಿ ಮೂಲಕ ನಟನಾ ಲೋಕಕ್ಕೆ ಎಂಟ್ರಿ ನೀಡಿದರು. ಆ ಧಾರಾವಾಹಿಯಿಂದ ಬಹಳ ಜನಪ್ರಿಯತೆ ಗಳಿಸಿದ ರಚಿತಾ ಆ ಬಳಿಕ 'ಬಂದೇ ಬರತಾವ ಕಾಲ', 'ಸುಪ್ರಭಾತ', 'ಸವಿಗನಸು' ಧಾರಾವಾಹಿಗಳಲ್ಲಿ ನಟಿಸಿದರು. ಜನಪ್ರಿಯ ಹಾಗೂ ಪ್ರತಿಭಾವಂತ ನಟಿಯಾಗಿದ್ದ ರಚಿತಾಗೆ ಪರಭಾಷೆಗಳ ಧಾರಾವಾಹಿಗಳಿಂದಲೂ ಅವಕಾಶಗಳು ಅರಸಿ ಬಂದವು. ಕನ್ನಡದ ಬಳಿಕ ತಮಿಳು ಧಾರಾವಾಹಿ ಲೋಕಕ್ಕೂ ಕಾಲಿಟ್ಟ ರಚಿತಾ, 2013 ರಲ್ಲಿ ದಿನೇಶ್ ಗೋಪಾಲಸ್ವಾಮಿ ಅವರನ್ನು ವಿವಾಹವಾದರು.

  ತಮಿಳಿನಲ್ಲಿ ಹಿಟ್ ಆದ ರಚಿತಾ

  ತಮಿಳಿನಲ್ಲಿ ಹಿಟ್ ಆದ ರಚಿತಾ

  ತಮಿಳಿನಲ್ಲಿಯೂ ಹಲವು ಹಿಟ್ ಧಾರಾವಾಹಿಗಳಲ್ಲಿ ರಚಿತಾ ನಟಿಸಿದ್ದಾರೆ. 'ಪಿರಿವುಮ್ ಸಂತಿಪುಮ್' ಧಾರಾವಾಹಿಯಲ್ಲಿ ನಟಿಸಿದ ಬಳಿಕ ತೆಲುಗಿನ 'ಮಾ ನಾನ್ನ' ಧಾರಾವಾಹಿಯಲ್ಲಿ ನಟಿಸಿದರು. ತಮಿಳಿನಲ್ಲಿ ರಚಿತಾಗೆ ಬಹುದೊಡ್ಡ ಖ್ಯಾತಿಗಳಿಸಿಕೊಟ್ಟ ಧಾರಾವಾಹಿ ಎಂದರೆ 'ಸರವಣನ್ ಮೀನಾಕ್ಷಿ' ಈ ಧಾರಾವಾಹಿಯಲ್ಲಿ ರಚಿತಾ ನಟಿಸಿದ್ದ ಮೀನಾಕ್ಷಿ ಪಾತ್ರ ಬಹುದೊಡ್ಡ ಹಿಟ್ ಆಯಿತು. ಬಳಿಕ 'ಸರವಣನ್ ಮೀನಾಕ್ಷಿ 3' ನಲ್ಲಿಯೂ ರಚಿತಾ ಮುಖ್ಯಪಾತ್ರದಲ್ಲಿ ನಟಿಸಿದರು. ಆ ನಂತರ ನಾನ್ ಇರುವರ್ ನಮಕ್ಕು ಇರುವರ್ 2 ನಲ್ಲಿಯೂ ಮುಖ್ಯ ಪಾತ್ರದಲ್ಲಿ ನಟಿಸಿದರು ಅದೂ ಸಹ ಸೂಪರ್ ಹಿಟ್ ಆಯಿತು.

  ಒಂಟಿಯಾಗಿ ಬದುಕುತ್ತಿರುವ ರಚಿತಾ

  ಒಂಟಿಯಾಗಿ ಬದುಕುತ್ತಿರುವ ರಚಿತಾ

  ರಚಿತಾ ಇತ್ತೀಚಿನ ತಮ್ಮ ಸಂದರ್ಶನವೊಂದರಲ್ಲಿ ತಮ್ಮ ವೈವಾಹಿಕ ಜೀವನದಲ್ಲಿ ಬಿರುಕುಂಟಾಗಿರುವ ಬಗ್ಗೆ ಮಾತನಾಡಿದ್ದಾರೆ. ತಾವು ಕಳೆದ ಒಂದು ವರ್ಷದಿಂದಲೂ ಗಂಡನಿಂದ ದೂರಾಗಿ ಒಬ್ಬಂಟಿಯಾಗಿ ಬದುಕುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿರುವ ರಚಿತಾ ಮೀನಾಕ್ಷಿ ತಮ್ಮ ಧಾರಾವಾಹಿ ಶೂಟಿಂಗ್ ಸೆಟ್‌ ನ ಚಿತ್ರಗಳ ಜೊತೆಗೆ, ತಮ್ಮ ಪ್ರವಾಸ ಇನ್ನಿತರೆ ಚಿತ್ರಗಳನ್ನು ಸಹ ಅಪ್‌ಲೋಡ್ ಮಾಡುತ್ತಿರುತ್ತಾರೆ.

  ಕನ್ನಡದಲ್ಲಿ ಮಾತನಾಡಿದ ಕಮಲ್ ಹಾಸನ್

  ಕನ್ನಡದಲ್ಲಿ ಮಾತನಾಡಿದ ಕಮಲ್ ಹಾಸನ್

  ನಿನ್ನೆ ಬಿಗ್‌ಬಾಸ್ ಪ್ರೀಮಿಯರ್‌ನಲ್ಲಿ ರಚಿತಾರನ್ನು ಕಳಿಸಲು ಅವರ ತಾಯಿ ಸಹ ಬಂದಿದ್ದರು. ಆಗ ಕಮಲ್ ಹಾಸನ್ ಅವರು ರಚಿತಾರ ತಾಯಿಯೊಟ್ಟಿಗೆ ಕನ್ನಡದಲ್ಲಿಯೇ ಮಾತನಾಡಿದ್ದು ವಿಶೇಷ. ತಮಿಳು ಬಿಗ್‌ಬಾಸ್‌ನಲ್ಲಿ ರಚಿತಾ ಜೊತೆಗೆ ಹಲವು ಸೆಲೆಬ್ರಿಟಿಗಳು, ಸಾಮಾನ್ಯರು ಹಾಗೂ ಒಬ್ಬ ದ್ವಿಲಿಂಗಿ ಸಹ ಇದ್ದಾರೆ. ಸ್ಪರ್ಧೆ ಸಹ ಕಠಿಣವಾಗಿದ್ದು, ರಚಿತಾ ಗೆಲ್ಲುತ್ತಾರಾ ಇಲ್ಲವಾ ಕಾದು ನೋಡಬೇಕಿದೆ.

  English summary
  Kannada serial actress Rachitha Meenakshi is in Tamil Bigg Boss Season 06. She acted in some Kannada serials and Tamil, Telugu serials also.
  Tuesday, October 11, 2022, 10:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X