twitter
    For Quick Alerts
    ALLOW NOTIFICATIONS  
    For Daily Alerts

    ಇನ್ನೆಷ್ಟು ದಿನ ಪ್ರಸಾರವಾಗುತ್ತವೆ ಟಿವಿ ಧಾರವಾಹಿಗಳು?

    |

    ಕೊರೊನಾ ಭೀತಿಯಿಂದ ಇಡೀಯ ಭಾರತವೇ ಲಾಕ್‌ ಡೌನ್ ಆಗಿದೆ. ಸತತ 21 ದಿನಗಳ ಕಾಲ ಮನೆಯಿಂದ ಹೊರಗೆ ಬರದಂತೆ ಪ್ರಧಾನಿಗಳು ಮನವಿ ಮಾಡಿದ್ದಾರೆ. ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಮೋದಿ ಕೇಳಿದ್ದಾರೆ.

    Recommended Video

    ಮೊದಲು ಕೊರೊನಾಗೆ ಹೆದರಿಸಿ ನಂತರ ತಾನೇ ಹೆದರಿದ ನಟ ನವೀನ್ ಕೃಷ್ಣ | Naveen Krishna | Stay Home stay safe

    ಮನೆಯಲ್ಲೇ ಕೂತು ಮಾಡುವುದೇನು? ಸಿನಿಮಾ ಮಂದಿರಗಳು ಈಗಾಗಲೇ ಬಂದ್ ಆಗಿ ಎರಡು ವಾರವಾಗುತ್ತಾ ಬಂತು. ಈಗ ಧಾರವಾಹಿಗಳಷ್ಟೆ ಮನರಂಜನೆಯ ಸಾಧನಗಳು. ಆದರೆ ಅವೂ ಸಹ ಇನ್ನೆಷ್ಟು ದಿನ ಪ್ರಸಾರವಾಗುತ್ತವೆ?

    ಎಲ್ಲಾ ರೀತಿಯ ಚಿತ್ರೀಕರಣಗಳನ್ನು ಬಂದ್ ಮಾಡಿ ಬಹುತೇಕ ಎರಡು ವಾರವಾಗುತ್ತಾ ಬಂತು. ಧಾರವಾಹಿಗಳ ಚಿತ್ರೀಕರಣಗಳು ಸಹ ಬಂದ್ ಆಗಿವೆ. ಈಗ ಬರುತ್ತಿರುವ ಧಾರವಾಹಿಗಳು ಮೊದಲು ಚಿತ್ರೀಕರಣ ಮಾಡಿಟ್ಟುಕೊಟ್ಟಂತಹಾ ಎಪಿಸೋಡ್‌ಗಳಷ್ಟೆ.

    ಮಾರ್ಚ್ 19 ರಂದೇ ಎಲ್ಲಾ ಚಿತ್ರೀಕರಣಗಳು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಧಾರವಾಹಿಗಳ ಚಿತ್ರೀಕರಣಗಳೂ ಸಹ ಬಂದ್ ಆಗಿವೆ. ಆದರೆ ಧಾರವಾಹಿಗಳು ಮಾತ್ರ ದಿನನಿತ್ಯ ಎಂದಿನಂತೆ ಪ್ರಸಾರವಾಗುತ್ತಲೇ ಇದೆ. ಆದರೆ ಹೆಚ್ಚು ದಿನ ಈ ಧಾರವಾಹಿಗಳು ಪ್ರಸಾರವಾಗುವುದಿಲ್ಲ.

    ಎಲ್ಲಾ ಚಿತ್ರೀಕರಣ ಬಂದ್ ಮಾಡುವಂತೆ ಆದೇಶ

    ಎಲ್ಲಾ ಚಿತ್ರೀಕರಣ ಬಂದ್ ಮಾಡುವಂತೆ ಆದೇಶ

    ಹೌದು ಕೊರೊನಾ ಭಾರತಕ್ಕೆ ಪ್ರವೇಶವಿಟ್ಟ ಕೆಲವೇ ದಿನಗಳಲ್ಲಿ ಮುಂಜಾಗೃತೆಯಾಗಿ ಚಿತ್ರೀಕರಣಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಯಿತು. ರಾಜ್ಯದಲ್ಲೂ ಸಹ ಈ ಆದೇಶಗಳು ಬೇಗನೇ ಜಾರಿಗೆ ಬಂದವು.

    ಹೆಚ್ಚು ಶೂಟಿಂಗ್ ಮಾಡಿಟ್ಟುಕೊಂಡಿದ್ದವು ಕೆಲವು ಧಾರವಾಹಿಗಳು

    ಹೆಚ್ಚು ಶೂಟಿಂಗ್ ಮಾಡಿಟ್ಟುಕೊಂಡಿದ್ದವು ಕೆಲವು ಧಾರವಾಹಿಗಳು

    ಚಿತ್ರೀಕರಣ ಬಂದ್ ಮಾಡುವ ಮುನ್ನಾ ಸಿಕ್ಕ ಕಡಿಮೆ ಕಾಲಾವಕಾಶದಲ್ಲಿ ಧಾರವಾಹಿ ಯುನಿಟ್‌ಗಳು ದಿನಕ್ಕೆರಡು ಶಿಫ್ಟ್‌ಗಳಂತೆ ಚಿತ್ರೀಕರಣ ಮಾಡಿ ದಿನವೊಂದಕ್ಕೆ ಎರಡು-ಮೂರು ಎಪಿಸೋಡ್‌ಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದರು.

    ಎರಡು ವಾರ ಧಾರವಾಹಿ ಪ್ರಸಾರವಾಗಿವೆ

    ಎರಡು ವಾರ ಧಾರವಾಹಿ ಪ್ರಸಾರವಾಗಿವೆ

    ಅದರಂತೆ ಈಗಾಗಲೇ ಎರಡು ವಾರ ಧಾರವಾಹಿಗಳು ಪ್ರಸಾರವಾಗಿವೆ. ಆದರೆ ಹೀಗೆಯೇ ಹೆಚ್ಚು ದಿನ ನಡೆಯುವದಿಲ್ಲ. ಕೆಲವು ಧಾರವಾಹಿಗಳ ಬಳಿ ಕೇವಲ ಈ ವಾರಕ್ಕಾಗುವಷ್ಟು ಮಾತ್ರವೇ ಸರಕು ಉಳಿದಿದೆ. ಇನ್ನು ಕೆಲವು ಧಾರವಾಹಿ ತಂಡದ ಬಳಿ ಏಪ್ರಿಲ್ ಮೊದಲ ವಾರ ಮುಗಿಸುವಷ್ಟು ಸರಕು ಇದೆ.

    ಸಮಯ ಕೊಲ್ಲುವ ಯತ್ನ ಮಾಡುತ್ತಿವೆ ಚಾನೆಲ್‌ಗಳು

    ಸಮಯ ಕೊಲ್ಲುವ ಯತ್ನ ಮಾಡುತ್ತಿವೆ ಚಾನೆಲ್‌ಗಳು

    ಶೂಟಿಂಗ್ ಮಾಡಿಕೊಂಡಿರುವ ಎಪಿಸೋಡ್‌ಗಳು ಕಡಿಮೆ ಇರುವ ಧಾರವಾಹಿಗಳು ಹಾಡುಗಳನ್ನು ಪೂರ್ಣ ಹಾಕಿ ಸಮಯ ಕೊಲ್ಲುವ ತಂತ್ರವನ್ನು ಅನುಸರಿಸುತ್ತಿವೆ. ಚಿತ್ರೀಕರಣ ಮಾಡಿಟ್ಟುಕೊಂಡಿರುವ ಎಪಿಸೋಡ್‌ಗಳು ಮುಗಿದ ಬಳಿಕ ಮರುಪ್ರಸಾರ ಮಾಡಲು ಬಹುತೇಕ ಎಲ್ಲಾ ಧಾರವಾಹಿ ತಂಡಗಳು ಸಜ್ಜಾಗಿವೆ.

    ಒಂದು ದಿನಕ್ಕೆ ಒಂದೇ ಎಪಿಸೋಡ್ ಚಿತ್ರೀಕರಣ

    ಒಂದು ದಿನಕ್ಕೆ ಒಂದೇ ಎಪಿಸೋಡ್ ಚಿತ್ರೀಕರಣ

    ಉತ್ತಮ ಗುಣಮಟ್ಟದ ಧಾರವಾಹಿಗಳು ಒಂದು ಎಪಿಸೋಡ್ ಚಿತ್ರೀಕರಣ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣ ಅವುಗಳ ಬಳಿ ಹೆಚ್ಚಿನ 'ಎಪಿಸೋಡ್ ಬ್ಯಾಂಕ್' ಇಲ್ಲ ಹಾಗಾಗಿ ಕೆಲವೇ ದಿನಗಳಲ್ಲಿ ಧಾರವಾಹಿಗಳು ಮರುಪ್ರಸಾರ ಆರಂಭವಾಗಲಿದೆ.

    English summary
    Kannada TV serials to be re telecast very soon. All Serials run out of episodes. No shooting happen from March 19.
    Wednesday, March 25, 2020, 13:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X