»   » ಫೇಸ್ ಬುಕ್ ನಲ್ಲಿ ಯಾವ ಚಾನಲ್ ಎಷ್ಟು ಫೇಮಸ್?

ಫೇಸ್ ಬುಕ್ ನಲ್ಲಿ ಯಾವ ಚಾನಲ್ ಎಷ್ಟು ಫೇಮಸ್?

Posted By:
Subscribe to Filmibeat Kannada

ಸಾಮಾಜಿಕ ಜಾಲತಾಣ ಫೇಸ್ ಬುಕ್ ಎಂದರೆ ಕೆಲವರಿಗೆ ಅಷ್ಟಕ್ಕಷ್ಟೆ. ಇನ್ನೂ ಕೆಲವರಿಗೆ ಅದು ಇಲ್ಲ ಎಂದರೆ ದಿನ ಮುಂದೋಗುವುದೇ ಕಷ್ಟ. ಇಪ್ಪತ್ತನಾಲ್ಕು ಗಂಟೆಯೂ ಅದನ್ನೇ ಜಪ ಮಾಡುವವರು ಇದ್ದಾರೆ, ಅದೇ ರೀತಿ ಅದನ್ನು ಮನಸಾರೆ ಶಪಿಸುವವರು ಇದ್ದಾರೆ. ಇದೊಂಥರಾ ಎರಡು ಅಲಗಿನ ಕತ್ತಿ ಇದ್ದಂತೆ.

ಇರಲಿ ನಮ್ಮ ಕನ್ನಡ ಟಿವಿ ವಾಹಿನಿಗಳು ಫೇಸ್ ಬುಕ್ ನಲ್ಲಿ ಎಷ್ಟು ಆಕ್ಟೀವ್ ಆಗಿವೆ ಎಂದು ಒಮ್ಮೆ ನೋಡೋಣ ಬನ್ನಿ. ತಮ್ಮ ಟಿವಿಯಲ್ಲಿ ಈ ವಾರ ಯಾವ ಚಿತ್ರ, ಆ ಸೀರಿಯಲ್ ನಲ್ಲಿ ಇಂದೇನಾಗುತ್ತದೆ, ಮುಂದೇನಾಗುತ್ತದೆ, ಹೊಸ ರಿಯಾಲಿಟಿ ಶೋ ಬಗ್ಗೆ, ಕಾರ್ಯಕ್ರಮದ ಬಗ್ಗೆ ವಿವರಗಳನ್ನು ಆಗಿಂದಾಗ್ಗೆ ನೀಡುತ್ತಲೇ ಇರುತ್ತವೆ.

ಕನ್ನಡ ಮನರಂಜನಾ ವಾಹಿನಿಗಳಲ್ಲಿ ಜೀ ಕನ್ನಡ, ಉದಯ ಟಿವಿ, ಈಟಿವಿ ಕನ್ನಡ, ಸುವರ್ಣ ಟಿವಿ, ಸುವರ್ಣ ಪ್ಲಸ್, ಕಸ್ತೂರಿ ವಾಹಿನಿಗಳು ಫೇಸ್ ಬುಕ್ ಫ್ಯಾನ್ ಪೇಜ್ ಹೊಂದಿವೆ. ಅದೇ ರೀತಿ ನ್ಯೂಸ್ ಚಾನಲ್ ಗಳೂ ಹೊಂದಿವೆ. (ಉದಾ: ಪಬ್ಲಿಕ್ ಟಿವಿ ಫೇಸ್ ಬುಕ್ ಫ್ಯಾನ್ ಪೇಜ್). ಇಲ್ಲಿನ ಅಂಕಿಸಂಖ್ಯೆಗಳು ನವೆಂಬರ್ 20, 2013ಕ್ಕೆ ಸಂಬಂಧಪಟ್ಟಂತಿವೆ ಎಂಬುದು ನಿಮ್ಮ ಗಮನಕ್ಕಿರಲಿ. ಬನ್ನಿ ಯಾರ ಜನಪ್ರಿಯತೆ ಎಷ್ಟಿದೆ ಎಂದು ಸ್ಲೈಡ್ ಗಳಲ್ಲಿ ನೋಡೋಣ.

ಈಟಿವಿ ಕನ್ನಡಕ್ಕೆ ಅತ್ಯಧಿಕ ಲೈಕ್ಸ್

ಫೇಸ್ ಬುಕ್ ನಲ್ಲೇ ಅತ್ಯಧಿಕ ಲೈಕ್ಸ್ ಪಡೆದಿರುವ ಟಿವಿ ಚಾನಲ್ ಈಟಿವಿ ಕನ್ನಡ. ಇದುವರೆಗೂ ಈಟಿವಿ ಕನ್ನಡ ಫ್ಯಾನ್ ಪೇಜನ್ನು 149,853 ಮಂದಿ ಲೈಕ್ ಮಾಡಿದ್ದಾರೆ. ಇದುವರೆಗೂ 19,858 ಮಂದಿ ಈ ಪೇಜ್ ಬಗ್ಗೆ ಮಾತನಾಡಿದ್ದಾರೆ.

ಫೇಸ್ ಬುಕ್ ನಲ್ಲಿ ಸುವರ್ಣ ವಾಹಿನಿ

ಇನ್ನು ಸುವರ್ಣ ವಾಹಿನಿಯ ಫೇಸ್ ಬುಕ್ ಫ್ಯಾನ್ ಪೇಜ್ ಗೆ 5,499 ಲೈಕ್ಸ್ ಬಂದಿವೆ. ಈ ತಾಣದ ಬಗ್ಗೆ ಇದುವರೆಗೂ 1,780 ಮಂದಿ ಮಾತನಾಡಿದ್ದಾರೆ.

ಉದಯ ಮ್ಯೂಸಿಕ್ ಚಾನಲ್ ಗುಡ್

ಇನ್ನು ಉದಯ ಮ್ಯೂಸಿಕ್ ಚಾನಲ್ ಗೆ ಇದುವರೆಗೂ 67,924 ಲೈಕ್ಸ್ ಪಡೆದಿದೆ. ಈ ಫೇಸ್ ಬುಕ್ ಫ್ಯಾನ್ ಪೇಜ್ ಬಗ್ಗೆ 8,960 ಮಂದಿ ಮಾತನಾಡಿದ್ದಾರೆ.

ಜೀ ಕನ್ನಡ ವಾಹಿನಿಯೂ ಸಖತ್ ಆಕ್ಟೀವ್

ಜೀ ಕನ್ನಡ ವಾಹಿನಿ ತನ್ನದೇ ಆದ ಶೈಲಿಯಲ್ಲಿ ತಮ್ಮ ಕಾರ್ಯಕ್ರಮಗಳನ್ನು ಫೇಸ್ ಬುಕ್ ಫ್ಯಾನ್ ಪೇಜ್ ನಲ್ಲಿ ಪ್ರೆಸೆಂಟ್ ಮಾಡುತ್ತಿದೆ. ಜೀ ಕನ್ನಡ ಫ್ಯಾನ್ ಪೇಜ್ ಗೆ 34,501 ಲೈಕ್ಸ್ ಹಾಗೂ 1,369 ಮಂದಿ ಇದರ ಬಗ್ಗೆ ಮಾತನಾಡಿದ್ದಾರೆ.

ಇನ್ನೂ ಅಂಬೆಗಾಲಿಟ್ಟಿರುವ ಸುವರ್ಣ ಪ್ಲಸ್

ಇತ್ತೀಚೆಗಷ್ಟೇ ಸೇರ್ಪಡೆಯಾದ ಸುವರ್ಣ ಪ್ಲಸ್ ವಾಹಿನಿ ಕೇವಲ 1,002 ಲೈಕ್ಸ್ ಪಡೆದಿದ್ದು, 182 ಮಂದಿ ಈ ಚಾಲನ್ ಬಗ್ಗೆ ಮಾತನಾಡಿದ್ದಾರೆ.

English summary
Kannada General entertainment Channels (GEC) popularity on facebook. Etv Kannada had 149,853 maximum likes and recently joined Suvarna Plus had least number of likes to till date.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada