»   » ಮಹಾಪರ್ವ: ಸಿಎಸ್ಪಿ ಲ್ಯಾಪ್ ಟಾಪ್ ಒಡೆದ ಪ್ರಸಂಗವೂ..

ಮಹಾಪರ್ವ: ಸಿಎಸ್ಪಿ ಲ್ಯಾಪ್ ಟಾಪ್ ಒಡೆದ ಪ್ರಸಂಗವೂ..

By: * ಶ್ರೀಧರ ಕೆದಿಲಾಯ, ಉಡುಪಿ
Subscribe to Filmibeat Kannada

ಕನ್ನಡ ಕಿರುತೆರೆ ಲೋಕದ ಅನಭಿಷಕ್ತ ಕಿಂಗ್ ಟಿಎನ್ ಸೀತಾರಾಂ ಅವರ ಹೊಸ ದೈನಂದಿನ ಧಾರಾವಾಹಿ'ಮಹಾ ಪರ್ವ' ನೋಡಲು ಪ್ರಯತ್ನ ಮಾಡಿದೆ. ಮಧ್ಯಮ ವರ್ಗದ ಜನರ ಆಶೋತ್ತರಗಳ ಜೊತೆ ಜೊತೆಗೆ ಸಮಾಜದ ಪ್ರತಿಬಿಂಬವಾಗಿ ಎಂದಿಗೂ ಅವರ ಧಾರಾವಾಹಿಗಳು ಜನಪ್ರಿಯತೆ ಗಳಿಸಿವೆ.

ಸೀತಾರಾಂ ಅವರ ಸೀರಿಯಲ್ ಗಳ ಖಾಯಂ ವೀಕ್ಷಕರಿಗೆ ಏಕತಾನತೆ ಭಾವ ಎಂದೂ ಕಾಡುವುದಿಲ್ಲ. ಏಕತಾನತೆಯೇ ಪ್ಲಸ್ ಪಾಯಿಂಟ್. ಆದರೆ, ಹೊಸ ಸೀರಿಯಲ್ ನಲ್ಲಿ ಮತ್ತದೆ ಉದ್ದುದ್ದಾ ಹೆಸರುಗಳು, ಅದೇ ರೀತಿ ಊರು, ಎಲ್ಲೋ ಕೇಳಿದ್ದೆವಲ್ಲ ಎಂಬಂಥ ಮಾತು ಕತೆ, ಸನ್ನಿವೇಶಗಳು ವೀಕ್ಷಕರಿಗೆ ಇಷ್ಟವಾಗಬಹುದು. ಆದರೆ, ಇದಕ್ಕೆ ವಿಷ್ಣುಮೂರ್ತಿ ಚಿತಾಂದ್ರಿ ಮಾತ್ರ ಅಪವಾದ. ಸೀತಾರಾಮ್ ಸೀರಿಯಲ್ ನ ಟಿಪಿಕಲ್ ಪಾತ್ರಧಾರಿಗಳ ನಟನೆಗಿಂತ ಈ ಪಾತ್ರಧಾರಿ ನಟನೆ  ಭಿನ್ನ,

ಲಾಯರ್ ಸಿಎಸ್ಪಿ ಲ್ಯಾಪ್ ಟಾಪ್ ಪ್ರಸಂಗ : ಅಲ್ರೀ ಒಂದು ಲ್ಯಾಪ್ ಟಾಪ್ ಒಡೆದು ಹೋದ್ರೆ 16 ಸಾವಿರ ಬಿಲ್ ಆಗುತ್ತಾ? ಫ್ಯೂಚುರಾ ಲ್ಯಾಪ್ ಟಾಪ್ ಎಂದರೆ ಏನು? ಲ್ಯಾಪ್ ಟಾಪ್ ಹಾರ್ಡ್ ಡಿಸ್ಕ್ ಚೆನ್ನಾಗಿದ್ರು ಡಾಟಾ ಬಗ್ಗೆ ಯಾಕೆ ಇಷ್ಟು ತಲೆ ಕೆಡಿಸಿಕೊಂಡ್ರು? ಇವೇ ಮುಂತಾದ ಪ್ರಶ್ನೆಗಳು ಅಕಸ್ಮಾತ್ ಸೀರಿಯಲ್ ನೋಡಲು ಕೂತ ನನಗೆ ಅನ್ನಿಸಿತು.

ಇಲ್ಲಿ ಲ್ಯಾಪ್ ಟಾಪ್ ಮುಖ್ಯವೋ ಅದರಲ್ಲಿರುವ ಡಾಟಾವೋ ಸ್ಪಷ್ಟವಾಗಲಿಲ್ಲ. ಲ್ಯಾಪ್ ಟಾಪ್ ರಿಪೇರಿ ಹಾಗಿರಲಿ, ಡಾಟಾ ಎಲ್ಲಾ ಸೇವ್ ಆಗಿರೋದು ಹಾರ್ಡ್ ಡಿಸ್ಕ್ ನಲ್ಲಿ ಅಲ್ವ. ಹಾರ್ಡ್ ಡಿಸ್ಕ್ ಚೆನ್ನಾಗೇ ಇತ್ತು. ಬೇಕಾದರೆ ಯೂಟ್ಯೂಬ್ ನಲ್ಲಿ ಜುಲೈ 22 ಎಪಿಸೋಡು ಇದೆ ಮತ್ತೆ ನೋಡಿ.. ಇಲ್ಲಿ ಚಿತ್ರ ಕೊಟ್ಟಿದ್ದೇವೆ ನೋಡ್ಕೊಳ್ಳಿ.. ಇದರ ಜೊತೆಗೆ ಇನ್ನೊಂದಿಷ್ಟು ಚರ್ಚೆ ಫೇಸ್ ಬುಕ್ ನಲ್ಲಿ ಕಂಡು ಬಂದಿದ್ದು ಸಿಕ್ಕಷ್ಟು ಕೊಟ್ಟಿದ್ದೇವೆ. ನಿಮ್ಮ ಅಭಿಪ್ರಾಯವನ್ನು ತಿಳಿಸಬಹುದು.

ಲ್ಯಾಪ್ ಟಾಪ್ ಪ್ರಸಂಗ

ತೂಗು ಉಯ್ಯಾಲೆಯಿಂದ ಬಿದ್ದ ಲ್ಯಾಪ್ ಟಾಪ್ ಹಿಂಬದಿ ಭಾಗ ಮಾತ್ರ ತೆರೆದು ಕೊಂಡಿತ್ತು. ಹಾರ್ಡ್ ಡಿಸ್ಕ್ ಚೆನ್ನಾಗೇ ಇತ್ತು. ಡಾಟಾ ಮುಖ್ಯವಾಗಿದ್ದರೆ ರಿಕವರಿ ಮಾಡಿಕೊಳ್ಳಬಹುದಲ್ವ.. ಈ ವಿಷ್ಯ ಸಿಎಸ್ಪಿ ಶಿಷ್ಯೆ ಪರಿಣತಿಗೆ ತಿಳಿದಿಲ್ಲ ಆದರೆ, ರಿಪೇರಿ ಮಾಡಿಸಬೇಕು ಎಂಬುದು ಮಾಮಿಗೆ ಗೊತ್ತು. ತಕ್ಷಣವೇ ಚಿನ್ಮಯಿ ಹೆಲ್ಪ್ ನಿಂದ ರಿಪೇರಿಗೆ ಕೊಡುತ್ತಾರೆ.

ಲ್ಯಾಪ್ ಟಾಪ್ ಪ್ರಸಂಗ

ಬಹುಶಃ ಈ ಧಾರಾವಾಹಿಗಾಗಿ ವಿಶೇಷ ಲ್ಯಾಪ್ ಟಾಪ್ ಏನಾದರೂ ಬಳಸಿರಬಹುದು. ಭಾರಿ ವೆಚ್ಚದ ಲ್ಯಾಪ್ ಟಾಪ್ ಒಡೆದು ಹೋದ ಪರಿಣಾಮ ಅದಕ್ಕೆ ಭಾರಿ ದಂಡ ತೆತ್ತು ರಿಪೇರಿ ಮಾಡಬೇಕಾಗಬಹುದು. ನಮ್ಮೂರಿನಲ್ಲಿ ಅಷ್ಟು ಖರ್ಚಾಗುವುದಿಲ್ಲಪ್ಪ. ಮಾನಿಟರ್ ಹೋಗಿದ್ರೆ ಬೇರೆ ವಿಚಾರ. ಬೆಂಗಳೂರಲ್ಲೂ ಅಷ್ಟು ಖರ್ಚಾಗುತ್ತೋ ಇಲ್ಲವೋ ಕಾಣೆ. ಕಳೆದ ಬಾರಿ ವೈರಾಣುಗಳೇ ತುಂಬಿ ಹಾಳಾಗಿದ್ದ ಹಾರ್ಡ್ ಡಿಸ್ಕ್ ನ ಡಾಟಾ ರಿಕವರಿಗೆ ನಾನು ತೆತ್ತಿದ್ದು 5 ಸಾವಿರ ರು ಮಾತ್ರ.

ಲ್ಯಾಪ್ ಟಾಪ್ ಪ್ರಸಂಗ

ಲ್ಯಾಪ್ ಟಾಪ್ ರಿಪೇರಿ ಬಗ್ಗೆ ಮಾತನಾಡದ ಕಂಪ್ಯೂಟರ್ ತಜ್ಞ ಪರೀಕ್ಷಿತ್, ಚಿನ್ಮಯಿ ಲ್ಯಾಪ್ ಟಾಪ್ ಬೀಳಿಸಿದ್ದರ ಬಗ್ಗೆ ಬೈಯುವುದೇ ದೊಡ್ಡದು ಮಾಡಲಾಗಿದೆ. ರಿಪೇರಿ ಹೇಗೆ ಎಂಬುದು ಪರೀಕ್ಷಿತ್ ತುಟಿ ಬಿಚ್ಚುವುದಿಲ್ಲ. ಬದಲಿಗೆ ಆಗುವ ಖರ್ಚಿನ ಬಗ್ಗೆ ಹೇಳುವುದೇ ಜಾಸ್ತಿ. ಇಡೀ ಎಪಿಸೋಡ್ ನಲ್ಲಿ ನೈಜತೆ ಕಂಡು ಬಂದಿದ್ದು ಮಾಮಿ ನಟನೆಯಲ್ಲಿ ಮಾತ್ರ. ಅದರಲ್ಲೂ ಕೊನೆ ಸೀನ್ ನಲ್ಲಿ ಸಿಎಸ್ಪಿಗೆ ಬುದ್ಧಿವಾದ ಹೇಳಿದ್ದು.

ಲ್ಯಾಪ್ ಟಾಪ್ ಪ್ರಸಂಗ -4

ಚಿನ್ಮಯಿ ಈ ಮುಂಚೆ ಕೂಡಾ ಲ್ಯಾಪ್ ಟಾಪ್ ಹಾಳುಗೆಡವಿದ್ದು, ಈ ಲ್ಯಾಪ್ ಟಾಪ್ ಹಾಳು ಮಾಡಿದ್ದು, ರಿಪೇರಿಗೆ ದುಡ್ಡು ಇಲ್ಲದಿರುವುದು, ಚಿನ್ಮಯಿ ಬೇಜವಾಬ್ದಾರಿತನ ಎಲ್ಲವೂ ಓಕೆ. ಆದರೆ, ಈ ಮಧ್ಯೆ ಚಿನ್ಮಯಿ ರಿಸಲ್ಟ್ ಏನಾಯ್ತು ಸಾರ್

ಲ್ಯಾಪ್ ಟಾಪ್ ಪ್ರಸಂಗ -5

ಲ್ಯಾಪ್ ಟಾಪ್ ಹಾಳು ಮಾಡಿದ್ದರೆ ಸಾಕಿತ್ತು. ಕೆಳಗೆ ಬೀಳಿಸಿ ರಿಪೇರಿ ಎನ್ನುವ ಬದಲು ಡಾಟಾ ನಷ್ಟವಾಗಿದೆ ಎನ್ನಲು ವೈರಸ್ ಹಿಡಿದಿದೆ ಎನ್ನಬಹುದಿತ್ತು. ಚಿನ್ಮಯಿ ವೈರಾಣು ಭರಿತ USB ಬಳಸಿದ್ದೇ ತಪ್ಪು ಎನ್ನಬಹುದಿತ್ತು. ಆದರೆ, ದೃಶ್ಯ ಅನುಕೂಲಕ್ಕಾಗಿ ಲ್ಯಾಪ್ ಟಾಪ್ ಬೀಳಿಸಿದ್ದು ಓಕೆ ಆದ್ರೆ, ಹಾರ್ಡ್ ಡಿಸ್ಕ್ ಚಿಂದಿ ಮಾಡಿದ್ದರೆ ಒಪ್ಪಬಹುದಿತ್ತು.

ಫೇಸ್ ಬುಕ್ ಪುಟದಿಂದ

ಎಡಬದಿಯಲ್ಲಿರುವ ಚಿತ್ರ ಕಳೆದ ಕೆಲವು ಎಪಿಸೋಡ್ ಹಿಂದೆ ಕಂಡಿರಬಹುದು. ಇದರಲ್ಲಿ ಆಗಿರುವ ಮುದ್ರಾ ರಾಕ್ಷಸನ ಹಾವಳಿ ಬಗ್ಗೆ ಫೇಸ್ ಬುಕ್ ನಲ್ಲಿ ಚರ್ಚೆ ನಡೆದಿದೆ.

ಕೆಲವರು ಸಿಎಸ್ಪಿ ಇದೇ ಅಂಶ ಹಿಡಿದುಕೊಂಡು ಕೋರ್ಟಿನಲ್ಲಿ ವಾದಿಸುತ್ತಾರೆ. ಸರಿಯಾಗಿ ಮುದ್ರಣ ಮಾಡದ ಪತ್ರಿಕೆ ನೈಜ ಸುದ್ದಿಯನ್ನು ಹೇಗೆ ನೀಡಲು ಸಾಧ್ಯ ಎನ್ನುತ್ತಾರೆ ಎಂದಿದ್ದಾರೆ.

ಮತ್ತೊಬ್ಬರು 'ನಾನು ನನ್ನ ಧಾರಾವಾಹಿಗಳಲ್ಲಿ ಸಮಾಜದಲ್ಲಿ ನಡೆಯುವ ಘಟನೆಗಳನ್ನು ತೋರಿಸುವುದರಿಂದ, ಈ ರೀತಿ ಎಷ್ಟೋ ಪತ್ರಿಕೆಗಳು Spelling Mistakes ಮಾಡುತ್ತವೆ ಅನ್ನೋದನ್ನ ತೋರಿಸೋಕೆ, ಈ ರೀತಿ ಪತ್ರಿಕೆಯಲ್ಲಿ ತಪ್ಪಾಗಿರುವುದನ್ನು ತೋರಿಸಿದೆ!' ಎಂದು ಟಿಎನ್ಎಸ್ ಹೇಳಬಹುದು ಎಂದಿದ್ದಾರೆ.

ಸಂಧೀಲ್ ಸಮಾರಾಧನೆ ಪುಟ ಕೃಪೆ

ಮಹಾಪರ್ವದ ಮುನ್ನೋಟ ಇಲ್ಲಿದೆ ಓದಿಕೊಳ್ಳಿ

* ಪರಿಣಿತ-ವಿದ್ಯಾಧರ ಸಿದ್ಧಾರ್ಥ ಒಂದಾಗುತ್ತಾರೆ
* ವಿಷ್ಣುಮೂರ್ತಿ ಚಿಂತಾದ್ರಿ ವಿರುದ್ಧ ಸಿಎಸ್ಪಿ ಕೇಸ್ ಗೆಲ್ತಾರೆ
* ಸುದರ್ಶನ ನಾಯಕ್-ಮಂದಾಕಿನಿ ಒಂದಾಗುತ್ತಾರೆ(ಅದು ಪರಿಣಿತಳಿಂದ)
* ಪರಿಣಿತ-ಸಮುದ್ಯತಾ ಅನೋನ್ಯವಾಗಿ ಸಹಬಾಳ್ವೆ ಮಾಡ್ತಾರೆ
* ಶಿವಕೃಷ್ಣ ದೇಸಾಯಿ ಸಿಎಂ ಆಗ್ತಾರೆ, ಇದರ ಬಗ್ಗೆ ಮೂರು ಕೋರ್ಟ್ ಕೇಸ್, ಹಲವು ಕಿಟಕಿ ಸೀನ್ಸ್
* ಎಂದಿನಂತೆ ಮಿಡ್ಲ್ ಕ್ಲಾಸ್ ಮನೆ PJs
ಕೊನೆಯದಾಗಿ ಪಾಂಡು ಹಾಗೂ ಪರಿಣಿತಗೆ ಸಿಎಸ್ ಪಿ ಬೈಯುವುದು ಆಮೇಲೆ ಅಳ್ಬೇಡ್ರಿ ಎಂದು ಸಮಾಧಾನ ಮಾಡೋದು, ಕವನ ವಾಚನ ಮಾಮೂಲಿ

ಪಾಂಡು ಮಹಾಶಯ

ಇಡೀ ಎಪಿಸೋಡು ಲ್ಯಾಪ್ ಟಾಪ್ ಸುತ್ತಾ ಸುತ್ತಿದರೂ ಕೊನೆ ತನಕ ಸಿಎಸ್ ಪಿ ಡಾಟಾ ಎಲ್ಲಾ ನನ್ನ ಬಳಿ ಇನ್ನೊಂದು ಕಾಪಿ ಇದೇ ಎನ್ನಲು ಪಾಂಡು ಅವರೇಕ ಕೊನೆ ಗಳಿಗೆ ತನಕ ಕಾಯ್ದರು. ಮೊದಲೇ ಹೇಳಿದ್ರೆ ಇಬ್ಬರು ಹೆಣ್ಮಕ್ಕಳ ಕಣ್ಣೀರಾದ್ರು ಉಳಿಯುತ್ತಿತ್ತು.

English summary
Mahaparva ETV Kannada Serial 22 July 2013 had many blunder scenes. Public expect more and error less serial scenes from Ace Director of TN Seetharam calibre, A laptop repair charge receipt reads Rs 16 thousand wonder what about Data saved in HDD which looked safe in that scene.
Please Wait while comments are loading...