For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರ್ತಿದಾಳೆ 'ಮಹಾರಾಣಿ'

  |

  ಸ್ಟಾರ್ ಸುವರ್ಣ ಚಾನಲ್ ವೀಕ್ಷಕರಿಗೆ ವೈವಿಧ್ಯಮಯ ಧಾರವಾಹಿಗಳು ಮತ್ತು ವಿನೂತನ ಶೈಲಿಯ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರನ್ನು ಮನರಂಜಿಸುತ್ತ ಬಂದಿದೆ. ಇತೀಚೆಗೆ ಪ್ರಾರಂಭಗೊಂಡ 'ಕೃಷ್ಣತುಳಸಿ'ಯಲ್ಲಿ ಶ್ರೀನಗರ ಕಿಟ್ಟಿ, 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ಶರಣ್, ಆಶಿಕಾ ಮುಂತಾದ ಸೆಲೆಬ್ರಿಟಿಗಳನ್ನು ಕರೆತಂದು ವೀಕ್ಷಕರನ್ನು ಮತ್ತಷ್ಟು ಮುದಗೊಳಿಸಲಾಯಿತು.

  ಇದೇ ನಿಟ್ಟಿನಲ್ಲಿ ಈಗ ಸ್ಟಾರ್ ಸುವರ್ಣ ವಾಹಿನಿ ಪ್ರೇಕ್ಷಕರಿಗೆ ಮತ್ತೊಂದು ಕತೆಯನ್ನು ಹೇಳಲು ಹೊರಟಿದೆ. ಅದೇ 'ಮಹಾರಾಣಿ'. ಅಜ್ಜಿ ಮತ್ತು ಮೊಮ್ಮಗಳ ಸುಮಧುರ ಬಾಂಧವ್ಯದ ಅಪರೂಪದ ಕತೆ ಹೊತ್ತು ಇದೇ ಅಕ್ಟೋಬರ್ 29ರಿಂದ ಸೋಮವಾರದಿಂದ ಶನಿವಾರ ರಾತ್ರಿ 8:30ಕ್ಕೆ ವೀಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾಳೆ ಮಹಾರಾಣಿ.

  ದಾಮಿನಿ ಶೆಟ್ಟಿ ಕತೆ ಚಿತ್ರಕತೆ ಇರುವ "ಮಹಾರಾಣಿ" ಧಾರಾವಾಹಿಯನ್ನು ರಾಜ್ ಶೆಟ್ಟಿ ತಮ್ಮ ಎಟರ್ರನಲ್ ಫ್ಲೇಮ್ಸ್ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ.

  ಹೊಸ ಮುಖವನ್ನು ನಾಯಕಿಯಾಗಿ ಪರಿಚಯಿಸಲು ಸುವರ್ಣ ವಾಹಿನಿ "ನೀವಾ ಮಹಾರಾಣಿ" ಎಂಬ ಅಭಿಯಾನವನ್ನು ನಡೆಸಿತ್ತು. ಬೆಂಗಳೂರು, ಮೈಸೂರು, ಗುಲ್ಬರ್ಗ ಹೀಗೆ ಕರ್ನಾಟಕದಾದ್ಯಂತ ಮಹಾರಾಣಿಯ ಕ್ಯಾಂಟರ್ ಸಂಚರಿಸಿ ಸಾವಿರಾರು ಪ್ರತಿಭೆಗಳನ್ನು ಆಡಿಷನ್ ಮಾಡಲಾಗಿತ್ತು. ಅವರಲ್ಲಿ ಪಾತ್ರಕ್ಕೆ ಹೊಂದುವ ರಶ್ಮಿತ ಚೆಂಗಪ್ಪ ಎಂಬ ಮಂಗಳೂರು ಮೂಲದ ಹುಡುಗಿಯನ್ನು ಮಹಾರಾಣಿಯಾಗಿ ಆಯ್ಕೆಮಾಡಿಕೊಳ್ಳಲಾಯ್ತು.

  ಮಹಾರಾಣಿಯಾಗಿ ರಶ್ಮಿತ ಚೆಂಗಪ್ಪ ನಟಿಸುತ್ತಿದ್ದಾರೆ, ನಾಯಕನ ಪಾತ್ರದಲ್ಲಿ ವಿನೋದ್ ಪಾಟೀಲ್, ಅಜ್ಜಿಯ ಪಾತ್ರದಲ್ಲಿ ವಿಜಯಲಕ್ಷ್ಮಿ ಉಪಾಧ್ಯಾಯ ನಟಿಸುತ್ತಿದ್ದಾರೆ.

  ಜೊತೆಗೆ ಜ್ಯೋತಿ ರೈ, ಪ್ರಕಾಶ್ ಶೆಟ್ಟಿ, ವಿನಯ್ ಕೃಷ್ಣ, ವಿಷ್ಣು , ನಿಧಿ ಚಕ್ರವರ್ತಿ, ಅತಿಥಿ ಪಾತ್ರದಲ್ಲಿ ನಾರಾಯಣ ಸ್ವಾಮಿ ಮತ್ತು ಗೌತಮಿ ನಟಿಸಿದ್ದಾರೆ.

  ಇದೇ ಅಕ್ಟೋಬರ್ 29ರಿಂದ ಸೋಮ - ಶನಿವಾರ ರಾತ್ರಿ 8:30ಕ್ಕೆ ಮಹಾರಾಣಿ ನಿಮ್ಮ ಮನೆ ಮನೆಗೆ ಬರುತ್ತಿದ್ದಾಳೆ.

  English summary
  Maharani new serial start in star suvarna from monday night 8.30 pm.
  Friday, October 26, 2018, 19:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X