»   » ತಿಂಡಿ-ಊಟ ಇಲ್ಲ, ಪೇಮೆಂಟ್ ಕೊಡಲಿಲ್ಲ: ಯಾಮಾರಿದ್ದ ನಟ ಮಂಡ್ಯ ರಮೇಶ್

ತಿಂಡಿ-ಊಟ ಇಲ್ಲ, ಪೇಮೆಂಟ್ ಕೊಡಲಿಲ್ಲ: ಯಾಮಾರಿದ್ದ ನಟ ಮಂಡ್ಯ ರಮೇಶ್

Posted By:
Subscribe to Filmibeat Kannada

ಕಲೆಯನ್ನೇ ಉಸಿರಾಗಿಸಿಕೊಂಡಿರುವ ನಟ ಮಂಡ್ಯ ರಮೇಶ್ ಇಲ್ಲಿಯವರೆಗೂ 210 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಸ್ಯ ನಟನ ಪಾತ್ರವಾಗಿರಲಿ, ಸಣ್ಣ ಪುಟ್ಟ ಪಾತ್ರವೇ ಆಗಿರಲಿ, ಯಾವುದೇ ಪಾತ್ರ ಸಿಕ್ಕರೂ ಅದಕ್ಕೆ ಜೀವ ತುಂಬಿ ಅಭಿನಯಿಸುವ ನಟ ಮಂಡ್ಯ ರಮೇಶ್.

ಸದ್ಯ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಮುದ್ದೇಶನಾಗಿ ಎಲ್ಲರನ್ನೂ ರಂಜಿಸುತ್ತಿರುವ ಮಂಡ್ಯ ರಮೇಶ್, ಹದಿಮೂರು ವರ್ಷಗಳ ಹಿಂದೆ ತಾವು ಯಾಮಾರಿದ್ದ ಪ್ರಸಂಗವನ್ನ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿರಿ...

ಮಂಡ್ಯ ರಮೇಶ್ ಗೆ ಬಂದ ಆಹ್ವಾನ ಇದು...

''ಹೀರೋ ಆಗಿ ನಿಮ್ಮ ಆಯ್ಕೆ ಮಾಡಿದ್ದೇವೆ. ನಟ ಶಶಿಕುಮಾರ್ ಜೊತೆ ನೀವು ಆಕ್ಟ್ ಮಾಡಬೇಕು'' ಅಂತ 'ನಿರ್ದೇಶಕ' ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಮಂಡ್ಯ ರಮೇಶ್ ಗೆ ಆಹ್ವಾನ ನೀಡಿದ್ದರಂತೆ.

ಫಾರ್ಮ್ ಹೌಸ್ ನಲ್ಲಿ ಶೂಟಿಂಗ್

ಸಿಕ್ಕ ಆಹ್ವಾನದ ಮೇರೆಗೆ 200 ಕಿ.ಮಿ ದೂರ ಕಾರ್ ನಲ್ಲಿ ಡ್ರೈವ್ ಮಾಡಿಕೊಂಡು ಫಾರ್ಮ್ ಹೌಸ್ ಒಂದಕ್ಕೆ ಮಂಡ್ಯ ರಮೇಶ್ ತೆರಳಿದರಂತೆ. ಒಂದು ಕ್ಯಾಮರಾ ತಗೊಂಡು ಬಂದ ಆ 'ನಿರ್ದೇಶಕ' ಇಡೀ ದಿನ ಶೂಟಿಂಗ್ ಮಾಡಿದರಂತೆ.

ತಿಂಡಿ-ಊಟ ಇಲ್ಲ, ಪೇಮೆಂಟ್ ಕೊಡಲಿಲ್ಲ

ಮಂಡ್ಯ ರಮೇಶ್ ಗೆ ತಿಂಡಿ, ಊಟ ಕೂಡ ಕೊಡದೆ ಇಡೀ ದಿನ ಶಾಟ್ ಮೇಲೆ ಶಾಟ್ ತೆಗೆದ ಆ ಡೈರೆಕ್ಟರ್ ಕಡೆಗೆ ಪೇಮೆಂಟ್ ಕೂಡ ಕೊಡಲಿಲ್ಲವಂತೆ.

ಎಲ್ಲ ಮಾಯ

''ಸಂಜೆ ವರೆಗೂ ಫುಲ್ ಶೂಟಿಂಗ್ ಮಾಡಿದರು. ತಿಂಡಿ-ಊಟ ಏನೂ ಇರ್ಲಿಲ್ಲ. ಮೇಕಪ್ ತೆಗೆದು ಬರುವಷ್ಟರಲ್ಲಿ. ಎಲ್ಲರೂ ಮಾಯ. ಪೇಮೆಂಟ್ ಕೂಡ ಕೊಡಲಿಲ್ಲ''

ತೋಟದವರನ್ನ ಯಾಮಾರಿಸಲು ಈ 'ಸಿನಿಮಾ' ನಾಟಕ

ಬಳಿಕ ಫೋನ್ ಮಾಡಿ ವಿಚಾರಿಸಿದಾಗ, ''ತೋಟದವರ ಹತ್ತಿರ ದುಡ್ಡು-ಕಾಸಿನ ವ್ಯವಹಾರ ಇತ್ತು. ಸಿನಿಮಾ ತೆಗೆದ ಮೇಲೆ ಎಲ್ಲ ಮಾಡಿಕೊಡುತ್ತೇವೆ ಅಂತ ತೋಟದವರಿಗೆ ಯಾಮಾರಿಸಬೇಕಿತ್ತು. ಹಾಗಾಗಿ, 'ಗುಳುಂ ಗಣೇಶ' ಹೆಸರಿನಲ್ಲಿ ಸಿನಿಮಾ ಶೂಟಿಂಗ್ ತರಹ ನಾಟಕ ಆಡಿದ್ವಿ'' ಎಂಬ ಉತ್ತರ ಮಂಡ್ಯ ರಮೇಶ್ ಗೆ ಸಿಕ್ತಂತೆ.

ಹದಿಮೂರು ವರ್ಷಗಳ ಹಿಂದೆ ನಡೆದದ್ದು

13 ವರ್ಷದ ಹಿಂದೆ ನಡೆದ ಈ ಘಟನೆಯನ್ನ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಮಂಡ್ಯ ರಮೇಶ್ ನೆನಪಿಸಿಕೊಂಡರು.

English summary
Mandya Ramesh speaks about an incident which happened 13 years ago.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada