Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಚಂದನ್ ನಟನೆಯಲ್ಲಿ ಬ್ಯುಸಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮರಳಿ ಮನಸ್ಸಾಗಿದೆ' ಧಾರಾವಾಹಿಯು ಮುಕ್ತಾಯಗೊಳ್ಳಲಿದೆ. ಈಗಾಗಲೇ ಧಾರಾವಾಹಿಯ ಕೊನೆಯ ದಿನದ ಚಿತ್ರೀಕರಣವೂ ಕೂಡಾ ಮುಗಿದಿದೆ. ಇನ್ನು ಧಾರಾವಾಹಿಯಲ್ಲಿ ನಾಯಕ ಎಸಿಪಿ ವಿಕ್ರಾಂತ್ ಆಗಿ ಅಭಿನಯಿಸುತ್ತಿರುವ ಚಂದನ್ ಕುಮಾರ್ ಅವರು ಸಣ್ಣ ವಿಡಿಯೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಧಾರಾವಾಹಿ ಮುಕ್ತಾಯಗೊಳ್ಳುವುದರ ಸೂಚನೆಯನ್ನು ಕೂಡಾ ನೀಡಿದ್ದಾರೆ. ವಿಡಿಯೋದ ಜೊತೆಗೆ " ಶುಭಂ, ಎಸಿಪಿ ವಿಕ್ರಾಂತ್ ಪಾತ್ರ ಮುಗಿಯುತ್ತಿದೆ" ಎಂದು ಕೂಡಾ ಅವರು ಬರೆದುಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ರಾಧಾ ಕಲ್ಯಾಣ" ಧಾರಾವಾಹಿಯಲ್ಲಿ ನಾಯಕ ವಿಶು ಆಗಿ ಕಾಣಿಸಿಕೊಳ್ಳುವ ಮೂಲಕ ನಟನೆಗೆ ಕಾಲಿಟ್ಟ ಚಂದನ್ ಕುಮಾರ್ ಅವರ ಬಣ್ಣದ ಪಯಣಕ್ಕೆ ಇದೀಗ ಹನ್ನೆರಡರ ಹರೆಯ. ಸದ್ಯ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ಚಂದನ್ ಕುಮಾರ್ ಅವರ ಕಿರುತೆರೆ ಪಯಣಕ್ಕೆ ಮುನ್ನುಡಿ ಬರೆದಿದ್ದು ರಿಯಾಲಿಟಿ ಶೋ.
ಕಿರುತೆರೆ
ನಟಿ
ನಯನಾಗೆ
ನೆಗೆಟಿವ್
ಪಾತ್ರಗಳಲ್ಲಿ
ನಟಿಸುವುದೆಂದರೆ
ತುಂಬಾ
ಇಷ್ಟ

ರಿಯಾಲಿಟಿ ಶೋನಲ್ಲಿ ಫೇಮಸ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಪ್ಯಾಟೆ ಮಂದಿ ಕಾಡಿಗ್ ಬಂದ್ರು" ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಪರಿಚಿತರಾದ ಚಂದನ್ ಕುಮಾರ್ ಗೆ ಆ ಶೋ ತಂದುಕೊಟ್ಟ ಜನಪ್ರಿಯತೆ ಅಷ್ಟಿಷ್ಟಲ್ಲ. ಮುಂದೆ ರಿಯಾಲಿಟಿ ಶೋ ಮುಗಿದದ್ದೇ, ನಟಿಸುವ ಸುವರ್ಣಾವಕಾಶ ಚಂದನ್ ಅವರಿಗೆ ದೊರಕಿತು.

'ಲಕ್ಷ್ಮಿ ಬಾರಮ್ಮ'ದಿಂದ ಜನಪ್ರಿಯ
'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ವಿಶಾಲ್ ಭಾರಧ್ವಾಜ್ ಆಗಿ ಮಿಂಚಿದ ಚಂದನ್ ಕುಮಾರ್ ಮೊದಲ ಧಾರಾವಾಹಿಯಲ್ಲಿಯೇ ಸೀರಿಯಲ್ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು. ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಲಕ್ಷ್ಮಿ ಬಾರಮ್ಮ" ಧಾರಾವಾಹಿಯಲ್ಲಿ ನಾಯಕ ಚಂದು ಆಗಿ ಕಾಣಿಸಿಕೊಂಡರು ಚಂದನ್ ಕುಮಾರ್. ಒಂದಷ್ಟು ಸಮಯ ಚಂದು ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಿದ್ದ ಚಂದನ್ ಕುಮಾರ್ ನಂತರ ಕಾರಣಾಂತರದಿಂದ ಪಾತ್ರಕ್ಕೆ ವಿದಾಯ ಹೇಳಿದರು.

ಬಿಗ್ ಬಾಸ್ ವಿನ್ನರ್
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 3 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟ ಚಂದನ್ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ಮಾತ್ರವಲ್ಲ ಆ ಸೀಸನ್ ನ ರನ್ನರ್ ಅಪ್ ಆಗಿ ಹೊರಹೊಮ್ಮಿದ ಚಂದನ್ ಕುಮಾರ್ ನಂತರ ಮಹಾಶಂಕರನಾಗಿ ಕಿರುತೆರೆಗೆ ಮರಳಿದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಸರ್ವ ಮಂಗಳ ಮಾಂಗಲ್ಯೇ" ಧಾರಾವಾಹಿಯಲ್ಲಿ ನಾಯಕ ಮಹಾಶಂಕರನಾಗಿ ನಟಿಸಿ ಸೈ ಎನಿಸಿಕೊಂಡರು.

ಕೈ ಹಿಡಿಯಿತು ರಿಯಾಲಿಟಿ ಶೋ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಕ್ಕು ವಿತ್ ಕಿರಿಕ್ಕು' ರಿಯಾಲಿಟಿ ಶೋವಿನಲ್ಲ ಪತ್ನಿ ಕವಿತಾ ಗೌಡ ಅವರ ಜೊತೆಗೆ ಭಾಗವಹಿಸಿದ್ದ ಚಂದನ್ ಪ್ರಸ್ತುತ ಶೋವಿನ ವಿನ್ನರ್ ಆಗಿಯೂ ಹೊರಹೊಮ್ಮಿದರು. ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಮರಳಿ ಮನಸ್ಸಾಗಿದೆ" ನಟಿಸುವ ಅವಕಾಶವನ್ನು ಕೂಡಾ ಗಿಟ್ಟಿಸಿಕೊಂಡರು.

ತೆಲುಗು ಕಿರುತೆರೆಯಲ್ಲೂ ಮೋಡಿ
ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ"ಸಾವಿತ್ರಮ್ಮಗಾರಿ ಅಬ್ಬಾಯಿ" ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚಿದರು ಚಂದನ್ ಕುಮಾರ್. ಕೋವಿಡ್ ಸಮಯದಲ್ಲಿ "ಸಾವಿತ್ರಮ್ಮಗಾರಿ ಅಬ್ಬಾಯಿ" ಧಾರಾವಾಹಿಯು ಕನ್ನಡಕ್ಕೆ ಡಬ್ ಆಗಿ "ಸನ್ ಆಫ್ ಸಾವಿತ್ರಮ್ಮ" ಹೆಸರಿನಲ್ಲಿ ಪ್ರಸಾರಗೊಂಡಿತ್ತು. ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರಗೊಂಡ ಶ್ರೀಮತಿ ಶ್ರೀನಿವಾಸ ಧಾರಾವಾಹಿಯಲ್ಲಿ ನಾಯಕ ಶ್ರೀನಿವಾಸನಾಗಿ ಚಂದನ್ ಕಮಾಲ್ ಮಾಡಿದರು.

ಸಿನಿಮಾದಲ್ಲೂ ಚಂದನ್ ನಟನೆ
"ಲೈಫು ಇಷ್ಟೇನೆ" ಸಿನಿಮಾದಲ್ಲಿ ಸಪೋರ್ಟಿಂಗ್ ರೋಲ್ ನಲ್ಲಿ ಕಾಣಿಸಿಕೊಂಡ ಚಂದನ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ "ಪರಿಣಯ". ಮುಂದೆ ಕಟ್ಟೆ, ಎರಡೊಂದ್ಲಾ ಮೂರು, ಲವ್ ಯೂ ಆಲಿಯಾ, ಬೆಂಗಳೂರು 560023 ಹಾಗೂ ಪ್ರೇಮಬರಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ಡಾರ್ಲಿಂಗ್ ಕೃಷ್ಣ ಅಭಿನಯದ ಶ್ರೀಕೃಷ್ಣಜೀಮೈಲ್. ಕಾಂ ಸಿನಿಮಾದಲ್ಲಿಯೂ ಅತಿಥಿ ಪಾತ್ರದ ಮೂಲಕ ಗಮನ ಸೆಳೆದಿದ್ದರು ಚಂದನ್ ಕುಮಾರ್.