»   » ಕಿರುತೆರೆ ಕಡೆಗೆ ಮತ್ತೆ ಮುಖ ಮಾಡಿದ ನಟಿ ಮಯೂರಿ

ಕಿರುತೆರೆ ಕಡೆಗೆ ಮತ್ತೆ ಮುಖ ಮಾಡಿದ ನಟಿ ಮಯೂರಿ

Posted By:
Subscribe to Filmibeat Kannada

'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ನಟಿ ಮಯೂರಿ ಕರ್ನಾಟಕದ ಮೂಲೆಮೂಲೆಯಲ್ಲಿಯೂ ಮನೆಮಾತಾದರು. ಇದೇ ಧಾರಾವಾಹಿಯ ಜನಪ್ರಿಯತೆಯ ಪ್ರತಿಫಲದಿಂದಲೇ ನಟಿ ಮಯೂರಿ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟರು.

'ಕೃಷ್ಣಲೀಲಾ', 'ಇಷ್ಟಕಾಮ್ಯ', 'ನಟರಾಜ ಸರ್ವೀಸ್' ಸಿನಿಮಾಗಳಲ್ಲಿ ಅಭಿನಯಿಸಿ ಉತ್ತಮ ಪ್ರಶಂಸೆ ಪಡೆದುಕೊಂಡ ನಟಿ ಮಯೂರಿ ಇದೀಗ ಮತ್ತೆ ಕಿರುತೆರೆ ಕಡೆಗೆ ಮುಖ ಮಾಡಿದ್ದಾರೆ.

ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಜೋ ಜೋ ಲಾಲಿ' ಧಾರಾವಾಹಿಯ ವಿಶೇಷ ಪಾತ್ರದಲ್ಲಿ ಮಯೂರಿ ಕಾಣಿಸಿಕೊಳ್ಳಲಿದ್ದಾರೆ. ಮುಂದೆ ಓದಿರಿ....

ಮಾಧವ, ರಾಧಾ, ರುಕ್ಮಿಣಿ ಜೊತೆ ಲೀಲಾ.!

ಉದಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಜೋ ಜೋ ಲಾಲಿ' ಈಗ 75 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೇ ಖುಷಿಯಲ್ಲಿ ಇನ್ಮುಂದೆ ಮಾಧವ, ರುಕ್ಮಿಣಿ ಹಾಗೂ ರಾಧಾ ಜೊತೆಗೆ ಲೀಲಾ ಕೂಡ ಜೊತೆಯಾಗಲಿದ್ದಾರೆ.

ಮಕ್ಕಳಿಲ್ಲ ಎನ್ನುವ ಕೊರತೆ

'ಜೋ ಜೋ ಲಾಲಿ' ಧಾರಾವಾಹಿಯಲ್ಲಿ ಮಾಧವ ಮತ್ತು ರುಕ್ಮಿಣಿ ಪರಸ್ಪರ ಪ್ರೀತಿಸುವ ಆದರ್ಶ ದಂಪತಿಗಳು. ಮಕ್ಕಳಿಲ್ಲ ಎನ್ನುವ ಕೊರತೆ ಬಿಟ್ಟರೆ ಬೇರೆ ಯಾವ ತೊಂದರೆ ಇಲ್ಲದ ಅದಮ್ಯ ಜೀವನ ಅವರದ್ದು.

ಮುಂದೇನಾಗುತ್ತದೆ..

ರುಕ್ಮಿಣಿಗೆ ಯಾವುದೇ ಕಾರಣಕ್ಕೂ ಮಕ್ಕಳು ಆಗಬಾರದೆಂದು ದ್ವೇಷ ಸಾಧಿಸುತ್ತಿರುವ ಅತ್ತಿಗೆ ಮಹೇಶ್ವರಿ. ಈ ದಂಪತಿ ದೇವರಿಗೆ ಎಷ್ಟೇ ಹರಕೆ ಸಲ್ಲಿಸಿದರೂ, ಮಕ್ಕಳು ಪ್ರಾಪ್ತಿಯಾಗಿರುವುದಿಲ್ಲ. ಮುಂದೇನಾಗುತ್ತದೆ ಎಂಬುದೇ ಕಥೆಯ ಟ್ವಿಸ್ಟ್.

ರುಕ್ಮಿಣಿ ಮನೆಗೆ ಲೀಲಾ...

ಈ ಘಟ್ಟದಲ್ಲಿ ರುಕ್ಮಿಣಿ ಮನೆಗೆ ಲೀಲಾ ಬರ್ತಿದ್ದಾಳೆ. ಅಂದರೆ 'ಕೃಷ್ಣ ಲೀಲಾ' ಖ್ಯಾತಿಯ 'ಮಯೂರಿ' ಎಂಟ್ರಿ ಕೊಡುತ್ತಿದ್ದಾರೆ.

ಮಯೂರಿ ಪಾತ್ರವೇನು.?

'ಜೋ ಜೋ ಲಾಲಿ'ಯಲ್ಲಿ ಮಯೂರಿ ಪಾತ್ರವೇನು.? ರುಕ್ಮಿಣಿ ಸಮಸ್ಯೆಗೆ ಮಯೂರಿ ಸಹಾಯವಾಗುತ್ತಾಳಾ ಎಂಬುದನ್ನ ನೀವೇ ನೋಡಿ...

ತಪ್ಪದೇ ವೀಕ್ಷಿಸಿ...

'ಜೋ ಜೋ ಲಾಲಿ'ಯಲ್ಲಿ ಲೀಲಾ ಇದೇ ಸೋಮವಾರದಿಂದ ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.

English summary
Kannada Actress Mayuri to act in Udaya TV's 'Jo Jo Lali' Kannada serial

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada