For Quick Alerts
  ALLOW NOTIFICATIONS  
  For Daily Alerts

  ಮಹಾಸಂಗಮ : 'ಬಿಳೀ ಹೆಂಡ್ತಿ' ಬದುಕಲ್ಲಿ 'ಮುದ್ದುಲಕ್ಷ್ಮಿ' ಆಗಮನ

  By Naveen
  |

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 7 ಗಂಟೆಗೆ ಪ್ರಸಾರವಾಗುವ 'ಬಿಳೀ ಹೆಂಡ್ತಿ' ಹಾಗೂ 7:30 ಕ್ಕೆ ಪ್ರಸಾರವಾಗುವ 'ಮುದ್ದುಲಕ್ಷ್ಮಿ' ಧಾರಾವಾಹಿಗಳ ಮಹಾಸಂಗಮ ಸಂಚಿಕೆ ಇದೇ ಜೂನ್ 4 ರಿಂದ 8 ರವರೆಗೆ ಪ್ರಸಾರವಾಗಲಿದೆ.

  ವಿದೇಶದಿಂದ ಬಂದು ಸಂಪ್ರದಾಯಸ್ಥ ಮನೆತನವೊಂದರ ಸೊಸೆಯಾಗಿ ಸವಾಲುಗಳನ್ನೇ ಬದುಕಾಗಿಸಿಕೊಂಡಿರುವ 'ಬಿಳೀ ಹೆಂಡ್ತಿ' ಧಾರಾವಾಹಿಯ ಶೆರ್ಲಿ ಹಾಗೂ ಕಪ್ಪಗಿದ್ದಾಳೆ ಎಂಬ ಕಾರಣಕ್ಕೆ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗಿ ತನ್ನ ಅಂತರಗಂದ ಸೌಂದರ್ಯ ಹಾಗೂ ಶ್ರೇಷ್ಠ ವ್ಯಕ್ತಿತ್ವದ ಮೂಲಕ ಸಂಸಾರ ಸಾಗರವನ್ನು ದಾಟುವ 'ಮುದ್ದು ಲಕ್ಷ್ಮಿ' ಈ ಮಹಾಸಂಗಮದಲ್ಲಿ ಜೊತೆಯಾಗಲಿದ್ದಾರೆ.

  ಸರಿಗಮಪ 14 : ಎರಡನೇ ಸ್ಥಾನವನ್ನು ಹಂಚಿಕೊಂಡ ಕೀರ್ತನ, ಜ್ಞಾನೇಶ್ ಸರಿಗಮಪ 14 : ಎರಡನೇ ಸ್ಥಾನವನ್ನು ಹಂಚಿಕೊಂಡ ಕೀರ್ತನ, ಜ್ಞಾನೇಶ್

  'ಬಿಳೀ ಹೆಂಡಿ' ಧಾರಾವಾಹಿಯ ಶೆರ್ಲಿ ಬದುಕಿನಲ್ಲಿ ಎದುರಾಗುವ ಸಮಸ್ಯೆಯೊಂದನ್ನು ಮುದ್ದು ಲಕ್ಷ್ಮಿ ಬಗೆಹರಿಸಲಿದ್ದು 'ಬಿಳೀ ಹೆಂಡ್ತಿ' ಧಾರಾವಾಹಿಯ ದೊಡ್ಡ ರಹಸ್ಯವೊಂದು ಈ ಮಹಾಸಂಗಮದ ಕೊನೆಯಲ್ಲಿ ನೋಡುಗರಿಗೆ ಅನಾವರಣಗೊಳ್ಳಲಿದೆ. ಈ ಮೂಲಕ ಎರಡು ವಿಭಿನ್ನ ಕಥಾ ಹಂದರದ ಧಾರಾವಾಹಿಗಳ ಮಹಾ ಸಂಗಮ ಆಗಲಿದೆ.

  English summary
  Star Suvarna channel popular serials 'Muddulakshmi' and 'Bili Hendthi' maha sangama.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X