For Quick Alerts
  ALLOW NOTIFICATIONS  
  For Daily Alerts

  ಕಾಫಿ ನಾಡು ಚಂದು ಕಾಪಿ ಹೊಡೆದ 'ನಾಗಿಣಿ 2' ನಮ್ರತಾ: ವಿಡಿಯೋ ವೈರಲ್

  By ಎಸ್ ಸುಮಂತ್
  |

  ಕಾಪಿನಾಡು ಚಂದ್ರು ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಅದರಲ್ಲೂ ಕಾಪಿನಾಡು ಚಂದು ಬಳಿ ಒಮ್ಮೆ ಆದರೂ ವಿಶ್ ಮಾಡಿಸಿಕೊಳ್ಳಬೇಕು ಎಂಬ ಬಯಕೆ ಈಗ ಎಲ್ಲರಲ್ಲೂ ಹುಟ್ಟಿಕೊಂಡು ಬಿಟ್ಟಿದೆ. ಯಾರದ್ದಾದರೂ ಹುಟ್ಟುಹಬ್ಬ ಆಗಿದ್ದರೆ ಗೂಗಲ್‌ನಲ್ಲಿ, ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿ, ಅದೇ ಸ್ಟೈಲ್‌ನಲ್ಲಿ ವಿಶ್ ಮಾಡ್ತಾ ಇದ್ದರು.

  ಆದರೆ ಅದ್ಯಾವಾಗ ಕಾಪಿನಾಡು ಚಂದು ವಿಶ್ ಮಾಡುವುದಕ್ಕೆ ಶುರು ಮಾಡಿದರೋ ಎಲ್ಲರ ಬಾಯಲ್ಲೂ ಅದೇ ರಾಗ, ಅದೇ ಶುಭ ಕೋರಿಕೆ. ಈಗ ನಮ್ರತಾ ಗೌಡ ಕೂಡ ಕಾಫಿ ನಾಡು ಚಂದು ಸ್ಟೈಲ್ ನಲ್ಲಿ ವಿಶ್ ಮಾಡಿ ವೈರಲ್ ಆಗುತ್ತಾ ಇದ್ದಾರೆ.

  ಒಂದೊಂದು ಸೀರಿಯಲ್‌ನಲ್ಲೂ ಒಂದೊಂದು ರೀತಿಯ ಸ್ನೇಹ-ಬಾಂಧವ್ಯ: ಫ್ರೆಂಡ್‌ಶಿಪ್‌ ಡೇ ಸ್ಪೆಷಲ್!ಒಂದೊಂದು ಸೀರಿಯಲ್‌ನಲ್ಲೂ ಒಂದೊಂದು ರೀತಿಯ ಸ್ನೇಹ-ಬಾಂಧವ್ಯ: ಫ್ರೆಂಡ್‌ಶಿಪ್‌ ಡೇ ಸ್ಪೆಷಲ್!

  ನಮ್ರತಾ ಗೌಡ ಸದ್ಯ ಮಾಡುತ್ತಿರುವುದು 'ನಾಗಿಣಿ 2' ಒಂದೇ ಧಾರಾವಾಹಿಯಾದರೂ, ಅಭಿಮಾನಿ ಬಳಗ ಸಿಕ್ಕಾಪಟ್ಟೆ ಇದೆ. ನಾಗಮಣಿಗಾಗಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಹಲವು ವರ್ಷಗಳಿಂದ ನಾಗಿಣಿ ತಾಳ್ಮೆಯಿಂದ ಕಾಯುತ್ತಿದ್ದಾಳೆ. ನಾಗಮಣಿಗಾಗಿ ಹಲವು ದುಷ್ಟರ ಕಣ್ಣು ಕೂಡ ಬಿದ್ದಿದೆ. ಹೀಗಾಗಿ ನಾಗಿಣಿ ಸ್ವಲ್ಪ ಎಚ್ಚರದಿಂದ ಇರಬೇಕಾದ ಅನಿವಾರ್ಯತೆ ಇದೆ. ಆದರೆ ಅದನ್ನು ಹೊರತುಪಡಿಸಿ, ನಮ್ರತಾ ಗೌಡ ಇದೀಗ ಕಾಪಿ ನಾಡು ಚಂದು ವಿಚಾರಕ್ಕೆ ಖ್ಯಾತಿ ಪಡೆಯುತ್ತಿದ್ದಾರೆ.

  ನಾಗಿಣಿ, ಮಾಯಾಂಗನಿ ಸಖತ್ ಕ್ಲೋಸ್ !

  ನಾಗಿಣಿ, ಮಾಯಾಂಗನಿ ಸಖತ್ ಕ್ಲೋಸ್ !

  'ನಾಗಿಣಿ 2' ಧಾರಾವಾಹಿಯಲ್ಲಿ ಶಿವಾನಿಗೆ ಹೆಚ್ಚು ಅಡ್ಡ ಬರುತ್ತಿರುವುದು ಮಾಯಾಂಗನೆ. ಶಿವಾನಿಯ ಪ್ರೀತಿ ಪಾತ್ರ ತ್ರಿಶೂಲ್‌ನನ್ನು ಪಡೆಯಲು ಹರಸಾಹಸ ಪಡುತ್ತಿದ್ದಾಳೆ. ಮಾಯಾಂಗನೆಯಿಂದ ತಪ್ಪಿಸಿಕೊಳ್ಳಲು, ನಾಗಮಣಿ ಕಾಪಾಡಲು ಶಿವಾನಿ ಹೊರಾಡುತ್ತಿದ್ದಾಳೆ. ಆದರೆ ಈ ದುಷ್ಮನಿ ತೆರೆ ಮೇಲೆ ಮಾತ್ರ. ತೆರೆ ಹಿಂದೆ ಮಾಯಾಂಗನೆ ಮತ್ತು ಶಿವಾನಿ ತುಂಬಾನೇ ಆತ್ಮೀಯರಾಗಿದ್ದಾರೆ. ಎಲ್ಲಾ ಕಡೆ ಒಟ್ಟೊಟ್ಟಿಗೆ ಸುತ್ತಾಡುತ್ತಾರೆ. ಎಂಜಾಯ್ ಮಾಡುತ್ತಾರೆ. ಅದಕ್ಕೆ ಸಾಕ್ಷಿ ರೂಪಕವಾಗಿ ಇಬ್ಬರ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಒಂದಷ್ಟು ಫೋಟೊಗಳು ಹಂಚಿಕೆಯಾಗಿವೆ. ಇಬ್ಬರ ಆತ್ಮೀಯತೆಗೆ ಆ ಫೋಟೋಗಳು ಸಾಕ್ಷಿಯಾಗಿವೆ.

  ತನ್ನ ಶತ್ರುವಿನ ಬರ್ತ್ ಡೇಯಲ್ಲಿ ನಾಗಿಣಿ

  ತನ್ನ ಶತ್ರುವಿನ ಬರ್ತ್ ಡೇಯಲ್ಲಿ ನಾಗಿಣಿ

  ಮಾಯಾಂಗನೇ ಅಲಿಯಾಸ್ ಐಶ್ವರ್ಯ ಸಿಂಧೋಗಿ ಹುಟ್ಟುಹಬ್ಬ ಇತ್ತೀಚೆಗೆ ಆಗಿದೆ. ಸ್ನೇಹಿತರೆಲ್ಲಾ ಸೇರಿ ಅದ್ದೂರಿಯಾಗಿ ಸೆಲೆಬ್ರೇಷನ್ ಮಾಡಿದ್ದಾರೆ. ಈ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಮ್ರತಾ ಗೌಡ ಕೂಡ ಭಾಗಿಯಾಗಿದ್ದಾರೆ. ನಿಮಗೆಲ್ಲಾ ಗೊತ್ತಿರುವ ಹಾಗೆ ನಮ್ರತಾಗೆ ಸ್ನೇಹಿತರು ಜಾಸ್ತಿ. ಪ್ರವಾಸದ ಕ್ರೇಜ್ ಇರುವ ನಮ್ರತಾ ಸ್ನೇಹಿತರ ಜೊತೆ ಆಗಾಗ ಟ್ರಿಪ್ ಹೋಗುತ್ತಾ ಇರುತ್ತಾರೆ. ಡಿನ್ನರ್, ಲಂಚ್ ಅಂತ ಕೂಡ ಆಗಾಗ ಸ್ನೇಹಿತರ ಜೊತೆ ಹೋಗುತ್ತಿರುತ್ತಾರೆ. ಅವರಿಗೂ ಸ್ನೇಹಿತರಿಗೂ ಎಷ್ಟು ಒಡನಾಟವಿದೆ ಎಂಬುದು ಅವರ ಹುಟ್ಟುಹಬ್ಬ, ಸ್ಪೆಷಲ್ ಡೇಗಳಲ್ಲಿ ಕಾಣಿಸುತ್ತಿದೆ.

  ಥೇಟ್ ಕಾಪಿನಾಡು ಚಂದು ಕಾಪಿ ಮಾಡಿ ವಿಶ್

  ಥೇಟ್ ಕಾಪಿನಾಡು ಚಂದು ಕಾಪಿ ಮಾಡಿ ವಿಶ್

  ಕಾಪಿನಾಡು ಚಂದು ಬರ್ತ್ ಡೇಗೆ ವಿಶ್ ಮಾಡುವ ಸ್ಟೈಲ್ ಎಲ್ಲರನ್ನು ಆಕರ್ಷಿಸಿದೆ. ಯಾಪಿ ಬರ್ತ್ ಡೇ ಅನ್ನೋ ವಾಕ್ಯ ಎಲ್ಲರ ಬಾಯಲ್ಲೂ ಗುನುಗುತ್ತಿದೆ. ಇದೀಗ ಐಶ್ವರ್ಯಾ ಬರ್ತ್ ಡೇಗೂ ನಮ್ರತಾ ಅದೇ ಡೈಲಾಗ್ ಹೇಳಿದ್ದಾರೆ. ನಾನು ಬಸವೇಶ್ವರ ನಗರದ ನಮ್ರತಾ ಮಾಡುತ್ತಿರುವ ನಮಸ್ಕಾರಗಳು. "ನಾನು ಪುನೀತ್ ಅಣ್ಣ, ಶಿವಣ್ಣನ ಕಟ್ಟಾ ಅಭಿಮಾನಿ. ಇವತ್ತು ನಮ್ಮ ಐಶು ಅಕ್ಕನ ಬರ್ತ್ ಡೇ.. ಐಶು ಅಕ್ಕ.. ಐಶು ಅಕ್ಕ.. ಯಾಪಿ ಬರ್ತ್ ಡೇ. ನಮ್ ಐಶು ಅಕ್ಕನ್ ಬರ್ತ್ ಡೇ" ಎಂದು ನಕ್ಕು ನಗಿಸಿದ್ದಾರೆ.

  ಕಾಫಿನಾಡು ಚಂದು ಶೈಲಿ ಕಾಪಿ

  ಕಾಫಿನಾಡು ಚಂದು ಅದೆಷ್ಟು ಫೇಮಸ್ ಆಗಿದ್ದಾನೆ ಎಂಬುದು ಎಲ್ಲರಿಗೂ ಗೊತ್ತು. ಎಲ್ಲರೂ ಒಮ್ಮೆ ಆ ಕಡೆ ಹೋದಾಗ ನಮ್ಮವರಿಗೊಂದು ವಿಶ್ ಮಾಡಿ ಅಂತಾರೆ. ಅದೇ ರೀತಿ ನಟಿ ಅಮೃತಾ ಅಯ್ಯಂಗಾರ್ ಅವರಿಗೂ ಇತ್ತೀಚೆಗೆ ವಿಶ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಯಾಕೆ ಆಂಕರ್ ಅನುಶ್ರೀ ಅಂಡ್ ಟೀಂ ಯಾಪಿ ಬರ್ತ್ ಡೇ ಡೈಲಾಗ್‌ಗೆ ರೀಲ್ಸ್ ಕೂಡ ಮಾಡಿದ್ದರು.

  English summary
  Namratha Gowda Imitate Coffee Nadu Chandu With Birthday Song. Here is the details.
  Tuesday, August 9, 2022, 10:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X