For Quick Alerts
  ALLOW NOTIFICATIONS  
  For Daily Alerts

  ರೆಹಮಾನ್, ಜಯಶ್ರೀ ಮಾಡಿದ್ದನ್ನೇ ಅನುಸರಿಸಿ ಗೆದ್ದ ಹಣ ಉಳಿಸಿಕೊಂಡ ನಯನ

  By Bharath Kumar
  |
  Kannada Kotyadipathi Season 3 : ಜಾಣ್ಮೆಯಿಂದ ಆಡಿ ಒಳ್ಳೆ ಹಣ ಗೆದ್ದ ನಯನ..!

  'ಕನ್ನಡದ ಕೋಟ್ಯಧಿಪತಿ'ಯಲ್ಲಿ ಈ ವಾರ ಬರಿ ಕಿರುತೆರೆ ಕಲಾವಿದರೇ ಭಾಗವಹಿಸಿದ್ದರು. ವಾರದ ಮೊದಲ ಸ್ಪರ್ಧಿಯಾಗಿದ್ದ ರೆಹಮಾನ್, ನಂತರ ಜಯಶ್ರೀ, ಸಮೀರಾಚಾರ್ಯ, ರಕ್ಷಿತ್, ಅನು ಪೂವಮ್ಮ ಕೊನೆಯದಾಗಿ ನಯನ ಹಾಟ್ ಸೀಟ್ ಗೆ ಆಯ್ಕೆಯಾದರು.

  ರೆಹಮಾನ್ ಮತ್ತು ಜಯಶ್ರೀ ಅವರಂತೆ ಆಟವಾಡಿದ ನಯನ ಅವರು ಗೆದ್ದ ಹಣದಷ್ಟೇ ಗೆದ್ದುಕೊಂಡರು. ಇನ್ನು ಹೆಚ್ಚು ಗೆಲ್ಲುವ ಅವಕಾಶ ಇತ್ತಾದರೂ, ಇತಿಹಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದೆ ಆಟವನ್ನ ಕ್ವಿಟ್ ಮಾಡಿದರು. ಅಲ್ಲಿಗೆ ಈ ವಾರಾಂತ್ಯ ಮುಗಿಯಿತು.

  ಅಷ್ಟಕ್ಕೂ, ಕನ್ನಡದ ಕೋಟ್ಯಧಿಪತಿಯಲ್ಲಿ ನಯನ ಗೆದ್ದ ಹಣವೆಷ್ಟು.? ನಯನಗೆ ಕಷ್ಟವಾದ ಪ್ರಶ್ನೆ ಯಾವುದು.? ನಯನ ಆಟವನ್ನ ಅಂತ್ಯಗೊಳಿಸಿದ ಆ ಐತಿಹಾಸಿಕ ಪ್ರಶ್ನೆ ಯಾವುದು.? ಎಂಬುದನ್ನ ತಿಳಿಯಲು ಮುಂದೆ ಓದಿ.....

  ಕೈಕೊಟ್ಟ ಐತಿಹಾಸಿಕ ಪ್ರಶ್ನೆ.?

  ಕೈಕೊಟ್ಟ ಐತಿಹಾಸಿಕ ಪ್ರಶ್ನೆ.?

  1498ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮ ಪ್ರವೇಶಿಸಿದ ಭಾರತದ ಸ್ಥಳ ಯಾವುದು.?

  A ಗೋವಾ

  B ಕಲ್ಕತ್ತಾ

  C ಕ್ಯಾಲಿಕಟ್

  D ಮದ್ರಾಸ್

  'ಕೋಟ್ಯಧಿಪತಿ'ಯಲ್ಲಿ ಪುಟ್ಟಗೌರಿ ಮಹೇಶ ಮಾಡಿದ ತಪ್ಪನ್ನ ಜಯಶ್ರೀ ಮಾಡಲಿಲ್ಲ 'ಕೋಟ್ಯಧಿಪತಿ'ಯಲ್ಲಿ ಪುಟ್ಟಗೌರಿ ಮಹೇಶ ಮಾಡಿದ ತಪ್ಪನ್ನ ಜಯಶ್ರೀ ಮಾಡಲಿಲ್ಲ

  ಗೇಮ್ ಕ್ವಿಟ್ ಮಾಡಿದ ನಯನ

  ಗೇಮ್ ಕ್ವಿಟ್ ಮಾಡಿದ ನಯನ

  ಇದು ನಯನ ಅವರಿಗೆ ಹತ್ತನೇ ಪ್ರಶ್ನೆಯಾಗಿತ್ತು. ಇದು 3 ಲಕ್ಷದ 20 ಸಾವಿರ ರೂಪಾಯಿಯ ಪ್ರಶ್ನೆಯಾಗಿತ್ತು. ಒಂದು ವೇಳೆ ಈ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟಿದ್ದರೇ ಎರಡನೇ ಜಗಲಿಕಟ್ಟೆಯ ಹಂತಕ್ಕೆ ಹೆಜ್ಜೆ ಇಡುತ್ತಿದ್ದರು. ಅಲ್ಲಿಗೆ 3 ಲಕ್ಷದ 20 ಸಾವಿರ ಹಣ ಪಕ್ಕಾ ಆಗ್ತಿತ್ತು. ಆದ್ರೆ, ಉತ್ತರ ಕೊಡಲು ಮುಂದಾಗಲಿಲ್ಲ. ಬದಲಿಗೆ ಆಟ ಕ್ವಿಟ್ ಮಾಡಿದರು.

  'ಕೋಟ್ಯಧಿಪತಿ'ಯಲ್ಲಿ ನಿರಾಸೆ ಮೂಡಿಸಿದ 'ಬಿಗ್ ಬಾಸ್' ರೆಹಮಾನ್ ಗಳಿಸಿದೆಷ್ಟು.?'ಕೋಟ್ಯಧಿಪತಿ'ಯಲ್ಲಿ ನಿರಾಸೆ ಮೂಡಿಸಿದ 'ಬಿಗ್ ಬಾಸ್' ರೆಹಮಾನ್ ಗಳಿಸಿದೆಷ್ಟು.?

  1.60 ಲಕ್ಷ ಗೆದ್ದಕೊಂಡ ನಯನ

  1.60 ಲಕ್ಷ ಗೆದ್ದಕೊಂಡ ನಯನ

  9 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ನಯನ 1 ಲಕ್ಷ 60 ಸಾವಿರ ರೂಪಾಯಿ ಗೆದ್ದುಕೊಂಡಿದ್ದರು. ಹತ್ತನೇ ಪ್ರಶ್ನೆಗೆ ಉತ್ತರ ಗೊತ್ತಾಗಲಿಲ್ಲ. ಹೀಗಾಗಿ, ಒಂಭತ್ತನೇ ಹಂತಕ್ಕೆ ಆಟ ಕ್ವಿಟ್ ಮಾಡಿ 1 ಲಕ್ಷ 60 ಸಾವಿರ ಉಳಿಸಿಕೊಂಡರು. ಅಂದ್ಹಾಗೆ, ಆ ಪ್ರಶ್ನೆಗೆ ಸರಿಯಾದ ಉತ್ತರ ಆಯ್ಕೆ C ಕ್ಯಾಲಿಕಟ್

  ಆತುರದಿಂದ ಕೈಸುಟ್ಟುಕೊಂಡ ಸಮೀರಾಚಾರ್ಯ: ರಾಮಾಯಣ ಕುರಿತ ಪ್ರಶ್ನೆಗೆ ತಪ್ಪು ಉತ್ತರ ಆತುರದಿಂದ ಕೈಸುಟ್ಟುಕೊಂಡ ಸಮೀರಾಚಾರ್ಯ: ರಾಮಾಯಣ ಕುರಿತ ಪ್ರಶ್ನೆಗೆ ತಪ್ಪು ಉತ್ತರ

  ರೆಹಮಾನ್, ಜಯಶ್ರೀ ನಂತರ ನಯನ

  ರೆಹಮಾನ್, ಜಯಶ್ರೀ ನಂತರ ನಯನ

  ಈ ವಾರ 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಭಾಗವಹಿಸಿದ ಕಿರುತೆರೆ ಕಲಾವಿದರ ಪೈಕಿ 'ಬಿಗ್ ಬಾಸ್' ಖ್ಯಾತಿಯ ರೆಹಮಾನ್ ಮತ್ತು 'ಶ್ರೀ' ಧಾರಾವಾಹಿ ಖ್ಯಾತಿಯ ಜಯಶ್ರೀ ಅವರು 1 ಲಕ್ಷ 60 ಗೆದ್ದು ಕೊಂಡಿದ್ದರು. ಅಂದ್ರೆ, ಇವರಿಬ್ಬರು ಕೂಡ ಆಟವನ್ನ ಕ್ವಿಟ್ ಮಾಡಿದ್ದರು. ಅದರಂತೆ ನಯನ ಕೂಡ ಗೇಮ್ ಕ್ವಿಟ್ ಮಾಡಿ, ಅದೇ ಮೊತ್ತವನ್ನ ಉಳಿಸಿಕೊಂಡರು.

  'ಕೋಟ್ಯಧಿಪತಿ'ಯಲ್ಲಿ ಕೈಗೆ ಬಂದಿದ್ದೆಲ್ಲಾ ಕಳೆದುಕೊಂಡ 'ಪುಟ್ಟಗೌರಿ' ಮಹೇಶ'ಕೋಟ್ಯಧಿಪತಿ'ಯಲ್ಲಿ ಕೈಗೆ ಬಂದಿದ್ದೆಲ್ಲಾ ಕಳೆದುಕೊಂಡ 'ಪುಟ್ಟಗೌರಿ' ಮಹೇಶ

  ನಿರಾಸೆ ಮೂಡಿಸಿದ ಸಮೀರ್, ರಕ್ಷಿತ್, ಅನು

  ನಿರಾಸೆ ಮೂಡಿಸಿದ ಸಮೀರ್, ರಕ್ಷಿತ್, ಅನು

  ಇನ್ನು ಈ ವಾರ ಹಾಟ್ ಸೀಟ್ ನಲ್ಲಿ ಕೂತಿದ್ದ 'ಬಿಗ್ ಬಾಸ್' ಖ್ಯಾತಿಯ ಸಮೀರಾಚಾರ್ಯ, 'ಪುಟ್ಟಗೌರಿ ಮದುವೆ' ಧಾರಾವಾಹಿ ಖ್ಯಾತಿಯ ನಟ ರಕ್ಷಿತ್ (ಮಹೇಶ) ಹಾಗೂ ನಟಿ ಅನು ಪೂವಮ್ಮ ಅವರು ಕೇವಲ 10 ಸಾವಿರ ಗೆದ್ದು ನಿರಾಸೆ ಮೂಡಿಸಿದರು.

  English summary
  'Kannadada Kotyadhipathi season 3' contestant nayana has won 1 lakh 60 thousand rupees.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X