Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಸೀತಾ ರಾಮ'ನನ್ನು ಒಂದು ಮಾಡುತ್ತಾಳಾ ಪುಟಾಣಿ ರಿತು..
ಜೀ ಕನ್ನಡ ವಾಹಿನಿಯಲ್ಲಿ ಈಗ ಮತ್ತೊಂದು ಹೊಸ ಧಾರಾವಾಹಿ ಶುರುವಾಗಲಿದೆ. ಕಳೆದ ತಿಂಗಷ್ಟೇ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಪ್ರಾರಂಭವಾಗಿತ್ತು. ಇದೀಗ ಮತ್ತೊಂದು ಕಥೆಯನ್ನು ಪ್ರಾರಂಭಿಸಲು ವಾಹಿನಿ ಮುಂದಾಗಿದೆ.
ಈ ಬಗ್ಗೆ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರೋಮೋವನ್ನು ಹಂಚಿಕೊಂಡಿದೆ. ನಿನ್ನ ಸಂಜೆ ಪ್ರೋಮೋ ಶೇರ್ ಮಾಡಿದ್ದು, ಪ್ರೇಕ್ಷಕರು ಪ್ರೋಮೋ ನೋಡಿ ಫುಲ್ ಖುಷ್ ಆಗಿದ್ದಾರೆ.
ಮೋನಿಕಾಗೆ
ಮತ್ತೆ
ಶಾಕ್
ಕೊಟ್ಟ
ಜನನಿ,
ಎಲ್ಲ
ಪ್ಲ್ಯಾನ್
ಪಾರುಳದ್ದೇ!
ಹಾಗಾದರೆ ಆ ಧಾರಾವಾಹಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ಇರುವವರು ಮಿಸ್ ಮಾಡದೇ ಈ ಸುದ್ದಿಯನ್ನು ಓದಿ..

ಹೊಸ ಕಥೆ ಜೊತೆ ಬಂದ ವೈಷ್ಣವಿ
ಅದಾಗಲೇ ಕಳೆದ ಆರು ತಿಂಗಳಿನಿಂದ ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ಮೂಡಿಬರಲಿದೆ ಎಂದು ಹೇಳಲಾಗಿತ್ತು. ಅದರಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ ಹಾಗೂ ನಟ ಸೂರ್ಯ ಮತ್ತೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಸುದ್ದಿಯ ಬಗ್ಗೆ ಸ್ಪಷ್ಟತೆಯೂ ಇರಲಿಲ್ಲ, ಹೆಚ್ಚಿನ ಮಾಹಿತಿಯೂ ಇರಲಿಲ್ಲ. ಇನ್ನು ಕಳೆದ ತಿಂಗಳು ವೈಷ್ಣವಿ ಅವರು ಕೂಡ ತಮ್ಮ ಹೊಸ ಧಾರಾವಾಹಿಯ ಬಗ್ಗೆ ಸಣ್ಣ ಕ್ಲೂ ಕೊಟ್ಟಿದ್ದರು. ಆದರೆ ಇದೀಗ ಆ ಹೊಸ ಧಾರಾವಾಹಿಯಿ ಯಾವುದು.? ಅದರಲ್ಲಿ ಯಾರು ಯಾರು ಇದ್ದಾರೆ ಎಂಬೆಲ್ಲಾ ಬಗ್ಗೆ ಮಾಹಿತಿ ಇರಲಿಲ್ಲ. ಬಟ್ ಈಗ ರಿವೀಲ್ ಆಗಿದೆ.

ಆಕ್ಷನ್ ಕಟ್ ಹೇಳಿದ ಸ್ವಪ್ನಕೃಷ್ಣ
ಜೀ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾದ ಇನ್ ಸ್ಟಾಗ್ರಾಂ ಖಾತೆಯಲ್ಲಿ ನಿನ್ನೆ ಹೊಸ ಧಾರಾವಾಹಿಯ ಪ್ರೋಮೋವನ್ನು ಅಪ್ ಲೋಡ್ ಮಾಡಿದ್ದಾರೆ. ಪ್ರೋಮೋದಲ್ಲಿ 'ಮಂಗಳ ಗೌರಿ' ಧಾರಾವಾಹಿ ಖ್ಯಾತಿಯ ನಟ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ ಹಾಗೂ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಪುಟಾಣಿ ರಿತು ಸಿಂಗ್ ಕಾಣಿಸಿಕೊಂಡಿದ್ದಾರೆ. 'ಸತ್ಯ' ಧಾರಾವಾಹಿಯ ನಿರ್ದೇಶಕಿ ಸ್ವಪ್ನಕೃಷ್ಣ ಅವರೇ ಈ ಧಾರಾವಾಹಿಯ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ಅತೀ ಶೀಘ್ರದಲ್ಲಿ 'ಸೀತಾ ರಾಮ' ಎಂದು ವಾಹಿನಿ ಶೇರ್ ಮಾಡಿದೆ.

ನಾಯಕ ಪಾತ್ರದಲ್ಲಿ ಗಗನ್ ಚಿನ್ನಪ್ಪ
ಪ್ರೋಮೋದಲ್ಲಿ ಬರುವ ನಾಯಕ ಶಾಲೆಗೆ ಬಂದು ಕಿಟಕಿ ಮೂಲಕ ಕ್ಲಾಸ್ ನಲ್ಲಿ ಕುಳಿತಿರುವ ಪುಟಾಣಿ ಬಳಿ ಬರುತ್ತಾನೆ. ಆಗ ಆ ಮಗು ಏನಾಗಬೇಕಾಗಿತ್ತು ಎಂದು ಕೇಳುತ್ತೆ. ನಾಯಕ ಮದುವೆಯಾಗಬೇಕಿತ್ತು ಎಂದು ಹೇಳುತ್ತಾನೆ. ಇವರಿಬ್ಬರ ಮಾತುಕತೆ ಮುಂದುವರೆಯುತ್ತೆ. ಏನ್ ಕೆಲಸ ಮಾಡುತ್ತೀರಾ ನೀವು.? ಚಿಕ್ಕದಾಗಿ ಒಂದು ಬಿಸಿನೆಸ್ ಮಾಡಿಕೊಂಡಿದ್ದೀನಿ. ಎಷ್ಟು ದುಡಿತೀರಾ ನೀವು.? ನಿಮ್ಮಿಬ್ಬರನ್ನ ಚೆನ್ನಾಗಿ ನೋಡಿಕೊಳ್ಳುವಷ್ಟು. ಯೋಚನೆ ಮಾಡಿ ಹೇಳ್ತೀನಿ ಎಂದು ಆ ಮಗು ಕೊನೆಯದಾಗಿ ಹೇಳುತ್ತೆ. ಆಗ ನಾಯಕ ಎದ್ದು ನಿಂತು ನಾಯಕಿ ಕಡೆ ನೋಡಿ ಗೊತ್ತಿಲ್ಲ ಎಂಬಂತೆ ಸಙ್ನೆ ಮಾಡುತ್ತಾರೆ.

ವೀಕ್ಷಕರಲ್ಲಿ ಮೂಡಿದ ಕುತೂಹಲ
ಅಷ್ಟೇ ಅಲ್ಲದೇ ಈ ಪ್ರೋಮೋದಲ್ಲಿ ಹಾಡು, ಮ್ಯೂಸಿಕ್ ಕೂಡ ಇದೆ. ಯುದ್ಧವನ್ನೇ ಗೆಲ್ಲಬಲ್ಲ ಶಕ್ತಿಯುಳ್ಳ ಪ್ರೇಮ, ಇವರ ಮುಂದೆ ಸೋಲಬೇಕೆ ಅಯ್ಯೋ ರಾಮ ರಾಮ ಎಂದು ಮಕ್ಕಳು ಹಾಡಿದ್ದು, ಇದು ಕೂಡ ಚೆನ್ನಾಗಿದೆ. ಇನ್ನು ಈ ಹೊಸ ಧಾರಾವಾಹಿಯ ಹೆಸರು ಸೀತಾರಾಮ. ವಾಹಿನಿ ಸೀತೆಗೂ ರಾಮಂಗೂ ನಡುವೆ ಸೇತುವೆ ಕಟ್ತಿದೆ ಪುಟಾಣಿ ಅಳಿಲು. 'ಸೀತಾರಾಮ' ಶೀಘ್ರದಲ್ಲಿ ಎಂದು ಶೇರ್ ಮಾಡಿದ್ದರೆ, ಗಗನ್ ಚಿನ್ನಪ್ಪ ಅವರು ಹೊಸ ಕಥೆಯ ಪ್ರೋಮೋ ನೋಡಿದ ಮೇಲೆ ನಿಮ್ಮ ನಿರೀಕ್ಷೆ ಏನಿರಬಹುದು ಹೇಳಿ..? ಎಂದು ಕೇಳಿದ್ದಾರೆ. ವೈಷ್ಣವಿ ಗೌಡ ಹಾಗೂ ಸ್ವಪ್ನ ಕೃಷ್ಣ ಅವರು ಕೂಡ ಪ್ರೋಮೋ ಶೇರ್ ಮಾಡಿದ್ದು, ಸಂತಸವನ್ನು ಹಂಚಿಕೊಂಡಿದ್ದಾರೆ. ಪ್ರೋಮೋ ನೋಡಿದ ವೀಕ್ಷಕರು ಧಾರಾವಾಹಿಯನ್ನು ನೋಡಲು ಕಾಯುತ್ತಿದ್ದಾರೆ.