For Quick Alerts
  ALLOW NOTIFICATIONS  
  For Daily Alerts

  ಮದುವೆಯಾದ ಮೇಲೆ ಮತ್ತೆ ಕಿರುತೆರೆ ಪಯಣ ಆರಂಭಿಸಿದ ನಟಿ ಲಾವಣ್ಯ

  By ಪ್ರಿಯಾ ದೊರೆ
  |

  ನಟಿ ಲಾವಣ್ಯ ಬಾಲ್ಯದಿಂದ ನೃತ್ಯದ ಮೇಲೆ ಹೆಚ್ಚು ಒಲವಿದ್ದರೂ ಹೆಚ್ಚು ಸಕ್ರಿಯರಾಗಿರುವುದು ನಟನೆಯಲ್ಲಿ. ಅಕಸ್ಮಾತ್ ಆಗಿ ಕಿರುತೆರೆಗೆ ಬಂದ ಲಾವಣ್ಯ ಅವರು ಇದನ್ನೇ ವೃತ್ತಿ ಬದುಕನ್ನಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಒಂದೇ ಧಾರಾವಾಹಿಗೆ ಸಾಕು ಎಂದು ಬಿಟ್ಟು ಹೋದರು.

  ಆದರೂ ನಟನೆಯ ಮೇಲಿನ ಒಲವು ಲಾವಣ್ಯ ಅವರ ಕೈ ಬಿಡಲಿಲ್ಲ. ಕಾರ್ಪೋರೇಟ್ ಕಂಪನಿಯ ಕೆಲವನ್ನು ಬಿಟ್ಟು ಮತ್ತೆ ಕಿರುತೆರೆಗೆ ಮರಳಿದರು. ಇಲ್ಲೇ ಬದುಕನ್ನು ಕಂಡುಕೊಂಡ ಲಾವಣ್ಯ ಜೀವನ ಸಂಗಾತಿಯನ್ನೂ ಇಲ್ಲೇ ಹುಡುಕಿಕೊಂಡಿದ್ದಾರೆ.

  ನಟಿ ಲಾವಣ್ಯ ಅವರಿಗೆ ಮೊದಲಿನಿಂದಲೂ ನೃತ್ಯವೆಂದರೆ ಬಹಳ ಇಷ್ಟ. ಕೆಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಲಾವಣ್ಯ ಅವರು ಪದವಿ ಅಂತಿಮ ವರ್ಷದಲ್ಲಿ ಓದುವಾಗ ಕಿರುತೆರೆಗೆ ಎಂಟ್ರಿ ಕೊಟ್ಟರು.

  ಕಾರ್ಪೋರೇಟ್ ಕೆಲಸ ಬಿಟ್ಟು ಬಂದ ಲಾವಣ್ಯ

  ಕಾರ್ಪೋರೇಟ್ ಕೆಲಸ ಬಿಟ್ಟು ಬಂದ ಲಾವಣ್ಯ

  ರಾಧಾರಮಣ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಲಾವಣ್ಯ ಅವರು ಬಣ್ಣ ಹಚ್ಚಿದರು. ರಾಧಾರಮಣ ಸೀರಿಯಲ್ ಮುಗಿದ ಬಳಿಕ ಲಾವಣ್ಯ ಅವರು ನಟನೆಯನ್ನು ತೊರೆದು ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಪಡೆದು ಸೆಟಲ್ ಆದರು. ಆದರೆ ಅವರನ್ನು ಈ ನಟನಾ ರಂಗ ಬಿಡಲಿಲ್ಲ. ಮತ್ತೆ ರಾಜಾ ರಾಣಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆ ಅವಕಾಶವನ್ನು ಕೈ ಬಿಡಲಾಗದೇ, ರಾಜಾರಾಣಿ ಧಾರಾವಾಹಿಗೆ ಬಂದರು. ಕಾರ್ಪೋರೇಟ್ ಕೆಲಸಗಳನ್ನು ಸಂಪೂರ್ಣವಾಗಿ ಬಿಟ್ಟು ಬಂದು ನಟಿಯಾಗಿ ಉಳಿದುಕೊಂಡರು. ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಸಂಘರ್ಷ ಎಂಬ ಧಾರಾವಾಹಿಯಲ್ಲಿ ನಟಿಸಿದರು.

  ಮದುವೆಯಾದ ಲಾವಣ್ಯ

  ಮದುವೆಯಾದ ಲಾವಣ್ಯ

  ಲಾವಣ್ಯ ಅವರ ನಟನೆಗೆ ಮನ ಸೋಲದವರಿಲ್ಲ. ಸದಾ ಕ್ರೀಯೇಟಿವ್ ಪಾತ್ರಗಳಲ್ಲಿ ನಟಿಸಲು ಬಯಸುತ್ತಾರೆ. ಉತ್ತಮ ಪಾತ್ರಗಳಿಗಾಗಿ ಎದುರು ನೋಡುತ್ತಿದ್ದ ಲಾವಣ್ಯ ಅವರಿಗೆ ದಾಸ ಪುರಂದರ ಧಾರಾವಾಹಿಯಲ್ಲಿ ನಟಿಸಲು ಸಿಕ್ಕ ಅವಕಾಶ ಅವರ ಅದೃಷ್ಟ ಎನ್ನುತ್ತಾರೆ. ಮದುವೆಗೂ ಮುನ್ನ ಲಾವಣ್ಯ ಅವರು ದಾಸ ಪುರಂದರ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇದರಲ್ಲಿ ಪದ್ಮ ಎಂಬ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಇದೇ ವರ್ಷ ಮೇ ತಿಂಗಳಿನಲ್ಲಿ ಲಾವಣ್ಯ ಅವರು ಶಶಿಧರ್ ಹೆಗ್ಡೆ ಅವರೊಂದಿಗೆ ಸಪ್ತಪದಿಯನ್ನು ತುಳಿದಿದ್ದರು.

  ಪ್ರೀತಿಸಿ ಒಂದಾದ ಶಶಿಧರ್-ಲಾವಣ್ಯ

  ಪ್ರೀತಿಸಿ ಒಂದಾದ ಶಶಿಧರ್-ಲಾವಣ್ಯ

  ಶಶಿಧರ್ ಹೆಗ್ಡೆ ಮತ್ತು ಲಾವಣ್ಯ ಇಬ್ಬರೂ ರಾಜಾ-ರಾಣಿ ಧಾರಾವಾಹಿ ಮೂಲಕ ಪರಿಚಯವಾಗಿ ನಂತರ ಪ್ರೀತಿಸಲು ಶುರು ಮಾಡಿದರು. ರಾಜಾ ರಾಣಿ ಧಾರಾವಾಹಿಯಲ್ಲಿ ಪ್ರಮುಖ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ, ಸಹವಾಸ ದೋಷ ಎಂಬ ಕಿರುಚಿತ್ರದಲ್ಲೂ ಒಟ್ಟಿಗೆ ನಟಿಸಿದ್ದರು. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಮನೆಯವರನ್ನು ಒಪ್ಪಿಸಿ ಕುಟುಂಬದ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾದರು. ಮದುವೆಯ ಫೋಟೋಗಳನ್ನು ಲಾವಣ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಇವರ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ನಲ್ಲಿ ತೆಗೆಸಿದ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದರು.

  ಮಾಧವ್ ಸೊಸೆ ಪೂರ್ಣಿಮಾ

  ಮಾಧವ್ ಸೊಸೆ ಪೂರ್ಣಿಮಾ

  ಸದ್ಯ ನಟಿ ಲಾವಣ್ಯ ಅವರು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಾಧವ್ ಅವರ ಸೊಸೆ ಪೂರ್ಣಿಮಾ ಪಾತ್ರದಲ್ಲಿ ನಟಿಸುತ್ತಿದ್ದು, ಪೂರ್ಣಿಗೆ ಮಾವ ಎಂದರೆ ಇಷ್ಟ. ಆದರೆ ಅವರ ಪತಿಗೆ ತಂದೆಯ ಮೇಲೆ ಕೋಪವಿರುತ್ತದೆ. ಅಮ್ಮನನ್ನು ಅಪಘಾತದಲ್ಲಿ ಕೊಂದರು ಎಂದು ಮಕ್ಕಳು ಮಾಧವ್ ನನ್ನು ದೂರುತ್ತಿರುತ್ತಾರೆ. ಸದ್ಯ ಪೂರ್ಣಿಮಾ ಗರ್ಭಿಣಿಯಾಗಿದ್ದಾರೆ. ಇನ್ನು ಶಶಿಧರ್ ಹೆಗ್ಡೆ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫಿಟ್ನೆಸ್ ಬಗ್ಗೆ ವೀಡಿಯೋ ಮಾಡುತ್ತಿರುತ್ತಾರೆ.

  English summary
  new serial srirasthu shubhamasthu actress lavanya acted. Here is more details of her serial journey
  Thursday, November 10, 2022, 18:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X