For Quick Alerts
  ALLOW NOTIFICATIONS  
  For Daily Alerts

  'ರಾಧಾ ರಮಣ' ಧಾರಾವಾಹಿಯಲ್ಲಿ ಇಂದು ರೋಚಕ ತಿರುವು: 'ಅವನಿ'ಗೆ ಏನಾಗುತ್ತೋ, ಏನೋ?

  By Harshitha
  |
  ರಾಧಾ ರಮಣ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್ | Radha ramana has a new twist | Filmibeat Kannada

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ರಾಧಾ ರಮಣ' ಕೂಡ ಒಂದು. ರಾಧಾ ಟೀಚರ್ ಹಾಗೂ ರಮಣ್ ರವರ 'ಕಾಂಟ್ರ್ಯಾಕ್ಟ್' ಮದುವೆಯಿಂದ ಶುರುವಾದ ಈ ಸೀರಿಯಲ್ ಕಥಾನಕ ಇದೀಗ ರಮಣ್ ಸಹೋದರಿ 'ಅವನಿ' ಸುತ್ತ ಸುತ್ತುತ್ತಿದೆ.

  ಆಸ್ಪತ್ರೆ ಪಾಲಾಗಿರುವ 'ಅವನಿ'ಗೆ ಆಪರೇಶನ್ ಮಾಡಿಸಿ, ಮನೆಗೆ ಕರೆದುಕೊಂಡು ಬಂದರೆ ರಮಣ್ ತನಗೆ ಒಲಿಯುತ್ತಾನೆ ಎನ್ನುವುದು ದೀಪಿಕಾ ನಂಬಿಕೆ. ಹೀಗಾಗಿ, ತಾಯಿ ಸಿತಾರಗೆ ವಿಷಯ ತಿಳಿಸದೆ, ಮನೆಯಲ್ಲಿ ಕಳ್ಳತನ ಮಾಡಿ, ಆಪರೇಶನ್ ಗೆ ದುಡ್ಡು ಹೊಂದಿಸಿಕೊಂಡು ಬೆಳ್ಳಂಬೆಳಗ್ಗೆಯೇ ಯಾರಿಗೂ ಹೇಳದೆ ಕೇಳದೆ ದೀಪಿಕಾ ಆಸ್ಪತ್ರೆಗೆ ತೆರಳುತ್ತಾಳೆ.

  'ಅವನಿ'ಗೆ ಆಪರೇಶನ್ ಮಾಡಿಸಿ ಮನೆಗೆ ಕರ್ಕೊಂಡು ಬರಲು ದಿನಕರ್ ಕೂಡ ಆಸ್ಪತ್ರೆ ಕಡೆಗೆ ಹೊರಡುತ್ತಾರೆ. ದಿನಕರ್ ರನ್ನ ರಮಣ್ ಫಾಲೋ ಮಾಡ್ತಾರೆ. ಬೆನ್ನ ಹಿಂದೆ ಏನೋ ನಡೀತ್ತಿದ್ಯಲ್ಲ ಅಂತ ಅನುಮಾನಗೊಂಡ ಸಿತಾರ ದೇವಿ ಕೂಡ ಆಸ್ಪತ್ರೆ ಕಡೆ ಹೆಜ್ಜೆ ಹಾಕ್ತಾರೆ. ಮುಂದೆ ಓದಿರಿ...

  ಎಲ್ಲರೂ ಹೋಗ್ತಿರೋದು ಒಂದೇ ಕಡೆ, ಆದರೆ ಯಾರಿಗೂ ಗೊತ್ತಿಲ್ಲ.!

  ಎಲ್ಲರೂ ಹೋಗ್ತಿರೋದು ಒಂದೇ ಕಡೆ, ಆದರೆ ಯಾರಿಗೂ ಗೊತ್ತಿಲ್ಲ.!

  ದೀಪಿಕಾ, ದಿನಕರ್, ರಮಣ್ ಹಾಗೂ ಸಿತಾರಾ ದೇವಿ... ಇವರೆಲ್ಲರೂ 'ಅರ್ಜೆಂಟ್ ಕೆಲಸ ಇದೆ' ಅಂತ ಮನೆಯವರ ಬಳಿ ಸುಳ್ಳು ಹೇಳಿ 'ಅವನಿ' ದಾಖಲಾಗಿರುವ ಆಸ್ಪತ್ರೆ ಕಡೆ ಹೊರಡುತ್ತಾರೆ. ಆದ್ರೆ, ಆಸ್ಪತ್ರೆಗೆ ಹೋಗುವ ಬಗ್ಗೆ ಒಬ್ಬರಿಗೊಬ್ಬರು ಮಾತನಾಡಿಕೊಂಡಿಲ್ಲ. ಆಸ್ಪತ್ರೆಗೆ ಒಬ್ಬರು ಹೋಗುವ ವಿಚಾರ ಮತ್ತೊಬ್ಬರಿಗೂ ಗೊತ್ತಿಲ್ಲ.

  ತಾಳ್ಮೆ ಪರೀಕ್ಷಿಸುತ್ತಿರುವ 'ಅಗ್ನಿಸಾಕ್ಷಿ' ನೋಡಿ ನೋಡಿ ರೋಸಿ ಹೋದ ವೀಕ್ಷಕರು.!ತಾಳ್ಮೆ ಪರೀಕ್ಷಿಸುತ್ತಿರುವ 'ಅಗ್ನಿಸಾಕ್ಷಿ' ನೋಡಿ ನೋಡಿ ರೋಸಿ ಹೋದ ವೀಕ್ಷಕರು.!

  ಆಸ್ಪತ್ರೆಗೆ ಎಲ್ಲರೂ ಮುಖಾಮುಖಿ ಆದರೆ..?

  ಆಸ್ಪತ್ರೆಗೆ ಎಲ್ಲರೂ ಮುಖಾಮುಖಿ ಆದರೆ..?

  'ತುಂಬಾ ಮುಖ್ಯವಾದ ಕೆಲಸ ಇದೆ' ಅಂತ ಹೊರಟವರೆಲ್ಲರೂ ಆಸ್ಪತ್ರೆಯಲ್ಲಿ ಮುಖಾಮುಖಿ ಆದರೆ.? ಇಲ್ಲಿಯವರೆಗೂ 'ರಹಸ್ಯ'ವಾಗಿಯೇ ಉಳಿದಿರುವ 'ಅವನಿ' ವಿಚಾರ ಇಂದು ಬಯಲಾದರೆ.?

  'ಅಗ್ನಿಸಾಕ್ಷಿ' ಚಂದ್ರಿಕಾಳ ಮೌನ ಸನ್ನಿಧಿಗೆ ಭಯ ಹುಟ್ಟಿಸಿದೆ'ಅಗ್ನಿಸಾಕ್ಷಿ' ಚಂದ್ರಿಕಾಳ ಮೌನ ಸನ್ನಿಧಿಗೆ ಭಯ ಹುಟ್ಟಿಸಿದೆ

  ಇಂದು ದೊಡ್ಡ ತಿರುವು.!

  ಇಂದು ದೊಡ್ಡ ತಿರುವು.!

  'ಅವನಿ' ಆಪರೇಶನ್ ನಡೆಯುವ ಜಾಗದಲ್ಲಿ ಎಲ್ಲರೂ ಮುಖಾಮುಖಿ ಆಗ್ತಾರಾ.? 'ಅವನಿ' ಬಗ್ಗೆ ರಮಣ್ ಗೆ ಸತ್ಯ ತಿಳಿಯುತ್ತಾ.? ಸಿತಾರ ದೇವಿ ಸಿಕ್ಕಿ ಬೀಳ್ತಾರಾ.? ಈ ಎಲ್ಲ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಬಹುದು.

  ದೀಪಿಕಾ ಮೇಲೆ ಅನುಮಾನ

  ದೀಪಿಕಾ ಮೇಲೆ ಅನುಮಾನ

  'ಅವನಿ'ಗೆ ಆಪರೇಶನ್ ಮಾಡಿಸಲು ಹೇಮಾ ಒಡವೆ ಕದ್ದ ದೀಪಿಕಾ, ದಿನಕರ್ ಕೈಯಲ್ಲಿ ಸಿಕ್ಕಿಬಿದ್ದಿದ್ದಾಯ್ತು. ಹೇಮಾ ಒಡವೆ ಕದ್ದಿದ್ದು ದೀಪಿಕಾ ಎಂಬ ಅನುಮಾನ ಗಂಗಾಗೂ ಬಂದಿದೆ. ಈ ಎಲ್ಲದರ ನಡುವೆ ದೀಪಿಕಾ 'ಅವನಿ'ಗೆ ಆಪರೇಶನ್ ಮಾಡಿಸಲು ಮುಂದಾಗಿದ್ದಾಳೆ. ರಮಣ್ ನ ಒಲಿಸಿಕೊಳ್ಳಲು ದೀಪಿಕಾ ಇಷ್ಟೆಲ್ಲ ಹರಸಾಹಸ ಪಟ್ಟಳು ಎಂಬ ಸಂಗತಿ ಕೂಡ ಬೆಳಕಿಗೆ ಬರುತ್ತಾ.? ಇಂದಿನ ಸಂಚಿಕೆ ನೋಡಬೇಕು.

  'ಅವನಿ'ಗೆ ಏನಾಗತ್ತೆ.?

  'ಅವನಿ'ಗೆ ಏನಾಗತ್ತೆ.?

  ಇಷ್ಟು ದಿನ ಹೈಡೋಸೇಜ್ ಔಷಧಿ ಕೊಟ್ಟಿದ್ರಿಂದಾಗಿ ಅವನಿ ದೇಹ ಕ್ಷೀಣಿಸಿದೆ. ಹೀಗಿರುವಾಗ, ಆಪರೇಶನ್ ಯಶಸ್ವಿ ಆಗುವ ಹಾಗೆ 'ರಾಧಾ ರಮಣ' ನಿರ್ದೇಶಕರು ಮನಸ್ಸು ಮಾಡಿದ್ದಾರೋ, ಇಲ್ವೋ ಗೊತ್ತಿಲ್ಲ.

  ರಾಧಾಗೆ ಏನೂ ಗೊತ್ತಾಗ್ತಿಲ್ಲ.!

  ರಾಧಾಗೆ ಏನೂ ಗೊತ್ತಾಗ್ತಿಲ್ಲ.!

  'ಅವನಿ' ವಿಚಾರದಲ್ಲಿ ದೀಪಿಕಾ, ದಿನಕರ್ ಹಾಗೂ ಸಿತಾರ ಪ್ಲಾನ್ ಗಳು ರಾಧಾಗಿನ್ನೂ ಗೊತ್ತಿಲ್ಲ. ಎಲ್ಲರ ನಡೆ ವಿಚಿತ್ರವಾಗಿರುವುದರಿಂದ ರಾಧಾ ದೇವಸ್ಥಾನಕ್ಕೆ ಹೊರಟಿದ್ದಾರೆ. ದೇವರ ಕೃಪೆಯಿಂದ ಇಂದಿನ ಸಂಚಿಕೆ ಏನಾಗುತ್ತೋ, ಏನೋ...

  English summary
  New Twist comes up in Colors Kannada Channel's popular serial 'Radha Ramana'. Will Avani gets operated today.? Read the article to know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X