twitter
    For Quick Alerts
    ALLOW NOTIFICATIONS  
    For Daily Alerts

    ಕಾಯ್ಕಿಣಿ ಸಾಹಿತ್ಯವನ್ನು ಮುಕ್ತಕಂಠದಿಂದ ಹೊಗಳಿದ ಪ್ರಕಾಶ್ ರೈ, ಸೀತಾರಾಂ

    By Suneel
    |

    ಜಯಂತ್ ಕಾಯ್ಕಿಣಿ ಬರವಣಿಗೆ ಓದಿ ಸೋಲದ ಮನಸ್ಸುಗಳಿಲ್ಲ. ಅವರು ಬರೆದ ಹಾಡುಗಳನ್ನು ಒಮ್ಮೆ ಕೇಳಿ ಮತ್ತೆ ಮತ್ತೆ ಕೇಳಲು ಮಿಸ್ ಮಾಡಿಕೊಂಡವರು ಯಾರು ಇಲ್ಲ. ಅಷ್ಟು ಅದ್ಭುತವಾಗಿ ಸಿನಿಮಾಗಳಿಗೆ ಗೀತೆ ರಚನೆ ಮಾಡಿ ಚಿತ್ರ ಸಾಹಿತ್ಯಕ್ಕೆ ಘನತೆ ತಂದುಕೊಟ್ಟವರು ಕಾಯ್ಕಿಣಿ.[ಯುವ ಬರಹಗಾರರಿಗೆ ಜಯಂತ್ ಕಾಯ್ಕಿಣಿ'ಯ ಸ್ಫೂರ್ತಿಯ ಕಿವಿಮಾತುಗಳಿವು..!]

    ಆರಂಭದಲ್ಲಿಯೇ ಜಯಂತ್ ಕಾಯ್ಕಿಣಿ ಅವರ ಬರವಣಿಗೆ ನೋಡಿ ಸ್ಯಾಂಡಲ್ ವುಡ್ ನ ನಿರ್ದೇಶಕರೊಬ್ಬರು ಅಸೂಯೆ ಪಟ್ಟಿದ್ದರಂತೆ. ಅವರು ಯಾರು ಎಂಬುದು ವೀಕೆಂಡ್ ಟೆಂಟ್ ನಲ್ಲಿ ರಿವೀಲ್ ಆಗಿದೆ. ಅಲ್ಲದೇ ಹಲವು ಸಾಹಿತಿಗಳು ಮತ್ತು ನಟ ಪ್ರಕಾಶ್ ರೈ ರವರು ವೀಕೆಂಡ್ ಟೆಂಟ್ ನಲ್ಲಿ ಜಯಂತ್ ಕಾಯ್ಕಿಣಿ ಬಗ್ಗೆ ಮಾತನಾಡಿದ್ದಾರೆ. ಅವರೆಲ್ಲಾ ಕಾಯ್ಕಿಣಿ ಬಗ್ಗೆ ಮತ್ತು ಅವರ ಸಾಹಿತ್ಯದ ಬಗ್ಗೆ ಏನಂದ್ರು ಗೊತ್ತಾ?...

    ಕಾಯ್ಕಿಣಿ ಬರವಣಿಗೆ ಬಗ್ಗೆ ಸೀತಾರಾಂ'ಗೆ ಹೊಟ್ಟೆ ಕಿಚ್ಚು ಶುರುವಾಗಿತ್ತಂತೆ

    ಕಾಯ್ಕಿಣಿ ಬರವಣಿಗೆ ಬಗ್ಗೆ ಸೀತಾರಾಂ'ಗೆ ಹೊಟ್ಟೆ ಕಿಚ್ಚು ಶುರುವಾಗಿತ್ತಂತೆ

    "ತುಂಬಾ ವರ್ಷದ ಹಿಂದೆ ನೀವು ಮತ್ತು ವಿವೇಕ್ ಶ್ಯಾನು ಬೋಗ್ ಒಟ್ಟೊಟ್ಟಿಗೆ ಕಥೆಗಳನ್ನು ಬರೆಯುತ್ತಿದ್ರಿ. ನಿಮ್ಮ ಬರವಣಿಗೆ ಶೈಲಿ ನೋಡಿ ನನಗೆ ಹೊಟ್ಟೆ ಕಿಚ್ಚು ಶುರುವಾಗಿತ್ತು. ಲಂಕೇಶ್ ಸರ್ ಒಮ್ಮೆ ಜಯಂತ್ ಕಾಯ್ಕಿಣಿ ಅನ್ನೋ ಹುಡುಗ ಚೆನ್ನಾಗಿ ಬರೀತಾನೆ ಅಂದಾಗ ನಾನು ಅದಿಕ್ಕೆ ಪರವಾಗಿಲ್ಲ ಸರ್ ಸುಮಾರಾಗಿ ಬರೆಯುತ್ತಾನೆ ಅಂತ ಹೊಟ್ಟೆ ಕಿಚ್ಚಿನಿಂದ ಹೇಳಿದ್ದೆ. ಗೌರೀಶ್ ಕಾಯ್ಕಿಣಿ ಅಂತ ಕಸ್ತೂರಿಯಲ್ಲಿ ವಿದ್ವತ್ ಪೂರ್ಣ ಲೇಖನಗಳನ್ನು ಬರೆಯುತ್ತಿದ್ರು. ಆ ಕಾಯ್ಕಿಣಿ ಎಲ್ಲಿ, ಈ ಕಾಯ್ಕಿಣಿ ಎಲ್ಲಿ ಸರ್ ಎಂದು ನಾನ್ ಕೇಳ್ದೆ. ಆಗ ಲಂಕೇಶ್ ರವರು ಅವರ ಮಗನೇನೆ ರೀ ಈ ಜಯಂತ್ ಕಾಯ್ಕಿಣಿ ಅಂತಿದ್ರು" -ಟಿ.ಎನ್.ಸೀತಾರಾಂ, ಚಿತ್ರ ನಿರ್ದೇಶಕ

    ಕಾಯ್ಕಿಣಿ ಪುಸ್ತಕಗಳನ್ನು ಓದಿ ಸಿಟ್ಟು ಮಾಡಿಕೊಂಡಿದ್ದರು ರಶೀದ್

    ಕಾಯ್ಕಿಣಿ ಪುಸ್ತಕಗಳನ್ನು ಓದಿ ಸಿಟ್ಟು ಮಾಡಿಕೊಂಡಿದ್ದರು ರಶೀದ್

    "ನಿಮ್ಮ ಎರಡು ಕಥಾಸಂಕಲನಗಳಾದ 'ಬಣ್ಣದ ಕಾಲು' ಮತ್ತು 'ತೂಫಾನ್ ಮೇಲ್' ಓದಿ ಬೆಚ್ಚಿಬಿದ್ದಿದೆ. ಅಷ್ಟೊಂದು ಆಶ್ಚರ್ಯವಾಗಿತ್ತು. ಕನ್ನಡ ಹಾಗೂ ಪ್ರಪಂಚದ ಯಾವುದೇ ಕಥೆಗಾರನಿಗೂ ಕಡಿಮೆ ಇಲ್ಲದ ಹಾಗೆ ಅಷ್ಟು ಜೀವನ ಪ್ರೀತಿಯಲ್ಲಿ ಬರೆಯುತ್ತೀರಿ. ಓದುತ್ತಾ ಇರುವಾಗ ತುಂಬಾ ಖುಷಿ ಆಯ್ತು. ಆದರೆ ತುಂಬಾ ಸಿಟ್ಟು ಬಂತು. ಕಾರಣ ನಮ್ಮ ಕನ್ನಡ ವಿಮರ್ಶಕರು, ಕನ್ನಡದ ಕಥೆಗಾರಿಗೆ ಬಗ್ಗೆ ಮಾತನಾಡುವವರು ಯಾರು ಕೂಡ ಇತ್ತೀಚೆಗೆ ಜಯಂತ್ ಕಾಯ್ಕಿಣಿ ಕಥೆಗಳ ಬಗ್ಗೆ ಮಾತನಾಡಿಲ್ಲ. ಯಾಕೆ ಅಂತ ಸಿಟ್ಟು ಬಂತು..." -ಅಬ್ಧುಲ್ ರಶೀದ್, ಸಾಹಿತಿ

    'ಕಾಯ್ಕಿಣಿ ಅಂದ್ರೆ ನನ್ನ ಮನಸ್ಸಿನ ಮಳೆ' ಎಂದ ಪ್ರಕಾಶ್ ರೈ

    'ಕಾಯ್ಕಿಣಿ ಅಂದ್ರೆ ನನ್ನ ಮನಸ್ಸಿನ ಮಳೆ' ಎಂದ ಪ್ರಕಾಶ್ ರೈ

    "ನಿಮ್ಮನ್ನ ನಾನು ಮುಖತಃ ಭೇಟಿ ಆಗುವುದಕ್ಕು ಮುಂಚೆನು ನನಗೆ ಗೊತ್ತು. ನೀವು ನನ್ನ ಬೊಗಸೆಯಲ್ಲೂ ಮಳೆ ಕೂಡ. ನನ್ನ ಮನಸ್ಸಿನಲ್ಲೂ ಮಳೆ ಕೂಡ. ಕನ್ನಡದ ಸಂವೇದನಾಶೀಲ ಮನಸ್ಸುಗಳಲ್ಲಿಯೂ ಅದ್ಭುತ ಮಳೆ ನೀವು. ನಿಮ್ಮ ಬರವಣಿಗೆ ಆಚಾರ-ವಿಚಾರ, ನಿಮ್ಮ ಹಾಸ್ಯ ಪ್ರಜ್ಞೆ ಎಲ್ಲವನ್ನು ಒಂದು ಬೇರೆ ದೃಷ್ಠಿಕೋನದಿಂದ, ಅಂತಃಕರಣದಿಂದ ನೋಡುವ ನಿಮ್ಮ ಮನೋಭಾವ ನನಗೆ ತುಂಬಾ ಇಷ್ಟ. ನೀವು ಅಂದ್ರೆ, ನಿಮ್ಮ ಬರವಣಿಗೆ ಅಂದ್ರೆ ತುಂಬಾ ಇಷ್ಟ" - ಪ್ರಕಾಶ್ ರೈ, ನಟ

    ತರುಣ ಕಥೆಗಾರರು

    ತರುಣ ಕಥೆಗಾರರು

    "ಎಲ್ಲಕ್ಕಿಂತ ಆಚೆ ನೋಡಿದ್ರೆ ಒಂದು ತಲೆಮಾರನ್ನ ಪ್ರಭಾವಿಸಿದಂತ ಬಹಳ ದೊಡ್ಡ ಲೇಖಕರು ಜಯಂತ್ ಕಾಯ್ಕಿಣಿ. ಅವರು ಕಥೆಗಳಿಂದ ಹುಟ್ಟಿದವರು ಅನಿಸುತ್ತೆ. ಇವತ್ತಿಗೂ ಸಹ ತರುಣ ಕಥೆಗಾರರು" -ಜೋಗಿ, ಸಾಹಿತಿ

    ವೀಕೆಂಡ್ ಟೆಂಟಲ್ಲಿ ಕಾಯ್ಕಿಣಿ ಮಾತಿನ ನೆನಪು

    ವೀಕೆಂಡ್ ಟೆಂಟಲ್ಲಿ ಕಾಯ್ಕಿಣಿ ಮಾತಿನ ನೆನಪು

    'ನೀನೆ ಒಂದು ಸಾರಿ ಪಿಸುಮಾತು ಯಾಕೆ ಸವಿಯಾಗಿರುತ್ತೆ ಅಂತ ಹೇಳಿದ್ದೆ. ನಾವು ಇಷ್ಟಪಡುವವರ ಜೊತೆ ಯಾಕೆ ಪಿಸುಮಾತು ಆಡ್ತೀವಿ, ಅಥವಾ ಜಗಳ ಆಡುವಾಗ ಯಾಕೆ ಧ್ವನಿ ಜೋರಾಗುತ್ತೆ ಅಂದ್ರೆ ಆಗ ಹೃದಯಗಳು ದೂರವಾಗಿರುತ್ತವೆ ಎಂದು ಹೇಳಿದ್ದೆ. ಅದಿಕ್ಕೆ ಹತ್ತಿರ ಇದ್ರು ಕಿರುಚಾಡ್ತೀವಿ. ಆದ್ರೆ ಪಿಸುಮಾತು ಹೃದಯದ ಹತ್ತಿರ ಇದ್ದಾಗ ಅಬ್ಬರದ ದನಿ ಬೇಕಿಲ್ಲ ಎಂದು ಒಮ್ಮೆ ಹೇಳಿದ್ದೆ. ಈ ಮಾತುಗಳು ನನಗೆ ಯಾವಾಗಲು ನೆನಪಾಗುತ್ತಿರುತ್ತವೆ" -ನರಹಳ್ಳಿ ಸುಬ್ರಮಣ್ಯ, ಸಾಹಿತಿ

    ಚಿತ್ರ ಸಾಹಿತ್ಯಕ್ಕೆ ಘನತೆ ತಂದುಕೊಟ್ಟವರು ಕಾಯ್ಕಿಣಿ

    ಚಿತ್ರ ಸಾಹಿತ್ಯಕ್ಕೆ ಘನತೆ ತಂದುಕೊಟ್ಟವರು ಕಾಯ್ಕಿಣಿ

    "ಹಿಂದೆ ಜನರು ಕ್ಯಾಸೆಟ್ ಗಳಿಗೆ ಅಂತ, ಸಿನಿಮಾಗೆ ಅಂತ ಬರೆದಾಗ ಒಂದು ತರದಲ್ಲಿ ಜನರು ಕ್ಯಾಸೆಟ್ ಕವಿಗಳು ಅಂತಲೇ ತಮಾಷೆ ಮಾಡ್ತಿದ್ರು. ಆದ್ರೆ ನೀನು ಬರೆದಾಗ ಮಾತ್ರ ಚಿತ್ರ ಸಾಹಿತ್ಯಕ್ಕೆ ಘನತೆ ತಂದುಕೊಟ್ಟ ಒಬ್ಬ ಕವಿ ಅಂತ ಹೆಸರು ಮಾಡಿದ್ರಿ. ಇದೊಂತರ ವಿಚಿತ್ರ ವೈಪರಿತ್ಯಗಳು"- ಎಂ.ಎಸ್.ಶ್ರೀರಾಮ್, ಸ್ನೇಹಿತ

    ಸಾಹಿತಿಗಳ ಪ್ರೀತಿಯ ಮಾತು ಕೇಳಿದ ಕಾಯ್ಕಿಣಿ ಹೇಳಿದ್ದು ಹೀಗೆ...

    ಸಾಹಿತಿಗಳ ಪ್ರೀತಿಯ ಮಾತು ಕೇಳಿದ ಕಾಯ್ಕಿಣಿ ಹೇಳಿದ್ದು ಹೀಗೆ...

    "ಒಬ್ಬ ಲೇಖಕನಿಗೆ ವಿಮರ್ಶೆ, ಫಲಕ, ಹಳದಿ ಕೆಂಪು ಧ್ವಜ, ಸನ್ಮಾನ ಪತ್ರ ಇನ್ನೇನು ಬೇಡ. ಇನ್ನೊಂದು ಮನಸ್ಸಿನಲ್ಲಿ ನಮ್ಮ ಕೃತಿ ಬೆಳೆಯಬೇಕು ಅನ್ನೋದು ಅಷ್ಟೇ ಸಾಕು. ಸೂಕ್ಷ್ಮ ಮನಸ್ಸುಗಳು ಓದಿದ್ದಾಗ ಕೃತಿಗಳಿಗೆ ಮತ್ತೆ ಜೀವ ಬರುತ್ತದೆ. ಅದು ನಮಗೆ ಅತ್ಯಮೂಲ್ಯ" - ಜಯಂತ್ ಕಾಯ್ಕಿಣಿ, ಸಾಹಿತಿ[ಮುಂಬೈ ಎಂಬ ಮಹಾನಗರ ಕಾಯ್ಕಿಣಿ ಕಣ್ಣಿಗೆ ಕಂಡಿದ್ದು ಹೀಗೆ..!]

    English summary
    Prakash Rai, Seetharam talks about Indian Poet, Short Stories Author and a Lyricist Jayant Kaikini in 'Weekend With Ramesh'.
    Wednesday, April 26, 2017, 12:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X