For Quick Alerts
  ALLOW NOTIFICATIONS  
  For Daily Alerts

  'ಪುಟಾಣಿ ಪಂಟ್ರು-2' ಫಿನಾಲೆಯಲ್ಲಿ ರಾಗಿಣಿ ಬೆಲ್ಲಿ ಡ್ಯಾನ್ಸ್

  By Harshitha
  |

  34 ಸಂಚಿಕೆಗಳನ್ನು ಪೂರೈಸಿ 'ಪುಟಾಣಿ ಪಂಟ್ರು-2' ಫೈನಲ್ ಹಂತಕ್ಕೆ ಬಂದಿದೆ. ಪುಟಾಣಿ ಮಕ್ಕಳ ನೃತ್ಯ ವೈಭವ ಕಂಡು ಈ ವೇದಿಕೆಯಲ್ಲಿ ಅನೇಕ ನಟರು, ನಿರ್ದೇಶಕರು ಬೆರಗಾಗಿದ್ದಾರೆ.

  15 ಪುಟಾಣಿ ಪಂಟ್ರು ಇದ್ದ ಈ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಫೈನಲ್ ಗೆ ಬಂದಿರುವವರು 5 ಮಕ್ಕಳು. ಈ ಐವರಲ್ಲಿ ಜಯಶಾಲಿಗಳ್ಯಾರು ಎನ್ನುವುದು ಕುತೂಹಲವಾಗಿದೆ.

  ರಕ್ಷಿತಾ ಪ್ರೇಮ್, ಸುಂದರಮ್ ಮಾಸ್ಟರ್ ಹಾಗೂ ಬಂದ ಎಲ್ಲಾ ಮಹನೀಯರು ಹೇಳುವ ಹಾಗೆ ಶೋನಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಲ್ಲಿ ಪ್ರತಿಭೆ ಇದೆ, ಆಯ್ಕೆ ಮಾಡುವುದು ಕಷ್ಟ. ಹೀಗಾಗಿ 'ಪುಟಾಣಿ ಪಂಟ್ರು-2' ಗೆಲ್ಲುವುದು ಯಾರು ಅನ್ನೋದು ಈಗ ಎಲ್ಲರ ಕಾತರಕ್ಕೆ ಕಾರಣವಾಗಿದೆ. [ಸುವರ್ಣ ವಾಹಿನಿಯಲ್ಲಿ 10 ಸೆಲೆಬ್ರಿಟಿ ದಂಪತಿಗಳ 'ಸೂಪರ್ ಜೋಡಿ']

  ಪ್ರತಿ ಸಂಚಿಕೆಯಲ್ಲೂ ಟಫ್ ಕಾಂಪಿಟೇಶನ್ ನೀಡುತ್ತಾ ಬಂದಿರುವ ತೌಷಿರ್, ಸದ್ವಿನ್, ವರ್ಷಿಣಿ, ಸಾಕ್ಷಿ ಮತ್ತು ರಾಗಿಣಿ ಗ್ರ್ಯಾಂಡ್ ಫಿನಾಲೆ ದಿನವೂ ಅದ್ಭುತ ಪರ್ಫಾಮೆನ್ಸ್ ನೀಡಿದ್ದಾರೆ. ಭಾರತದ ವೈಭವವನ್ನು ಸಾಕ್ಷಿ, ತನ್ನ ನೃತ್ಯದ ಮೂಲಕ ನೀಡಿದರೆ, ತೌಷಿರ್ 100 ಜನರೊಂದಿಗೆ ಹೆಜ್ಜೆ ಹಾಕಿದ ಕ್ಷಣಗಳನ್ನು ನೋಡಲು ರೋಮಾಂಚಕವಾಗುತ್ತದೆ.

  ಇನ್ನೂ ಗ್ರ್ಯಾಂಡ್ ಫಿನಾಲೆಯ ವಿಶೇಷ ನಟಿ ರಾಗಿಣಿ ದ್ವಿವೇದಿ. ಮಕ್ಕಳಿಗೆ ಹುಮ್ಮಸ್ಸು ನೀಡಿ, ತಾವು ಕೂಡ ಮಕ್ಕಳ ಜೊತೆ ಬೆಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ.

  ಸುಂದರಮ್ ಮಾಸ್ಟರ್, ರಕ್ಷಿತಾ ಪ್ರೇಮ್ ನಿರ್ಣಾಯಕತ್ವದಲ್ಲಿ 'ಪುಟಾಣಿ ಪಂಟ್ರು-2' ಫಿನಾಲೆ ಇದೇ ಭಾನುವಾರ (18-10-2015) ಸಂಜೆ 6ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  English summary
  Popular Dance Reality Show 'Putani Pantru -2' will go on air on October 18th at 6pm in Suvarna Channel. Kannada Actress Ragini Dwivedi is special attraction in Grand Finale.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X