For Quick Alerts
  ALLOW NOTIFICATIONS  
  For Daily Alerts

  ಕಾಡಿನಲ್ಲಿರುವ 'ಪುಟ್ಟಗೌರಿ'ಯಿಂದ ಮತ್ತೊಂದು ಪವಾಡ.?

  By Bharath Kumar
  |

  'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಪವಾಡಗಳಿಗೇನು ಕೊರತೆಯಿಲ್ಲ. ಪ್ರತಿ ಸನ್ನಿವೇಶದಲ್ಲೂ ಒಂದಲ್ಲ, ಒಂದು ರೀತಿಯಲ್ಲಿ ಅಚ್ಚರಿ, ಅಬ್ಬಾ ಎನ್ನಿಸುವ ಘಟನೆಗಳು ಸಂಭವಿಸುತ್ತೆ.

  ಇಂದಿನ ಎಪಿಸೋಡ್ ಅಂತಹದ್ದೇ ಪವಾಡವೊಂದಕ್ಕೆ ಸಾಕ್ಷಿಯಾಗಬಹುದು ಎಂಬ ಲೆಕ್ಕಾಚಾರ ಪ್ರೇಕ್ಷಕರಿಗೆ ಕಾಡಿದೆ. ಯಾಕಂದ್ರೆ, ಪುಟ್ಟಗೌರಿ ಮದುವೆಯ ನಿನ್ನೆಯ ಎಪಿಸೋಡ್ ಇದಕ್ಕೆ ಕಾರಣ.

  ಪ್ರಪಂಚದ 8ನೇ ಅದ್ಭುತ: ಮತ್ತೆ ಕಾಡಿಗೆ ಹೋದ 'ಪುಟ್ಟಗೌರಿ' ಪ್ರಪಂಚದ 8ನೇ ಅದ್ಭುತ: ಮತ್ತೆ ಕಾಡಿಗೆ ಹೋದ 'ಪುಟ್ಟಗೌರಿ'

  ಸದ್ಯ, ಹಳ್ಳಿಯಿಂದ ಕಿಡ್ನ್ಯಾಪ್ ಆಗಿರುವ ಗೌರಿ ಕಾಡಿನಲ್ಲಿ ಸಿಲುಕಿಕೊಂಡಿದ್ದಾಳೆ. ಜೊತೆಗೆ, ಗೌರಿಯನ್ನ ಅಪಹರಿಸಿದ್ದ ನೂತನ್ ಗೌರಿ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕು ಎಂದು ಟೊಂಕಕಟ್ಟಿ ನಿಂತಿದ್ದಾನೆ. ಈ ನಡುವೆ ಗೌರಿ ಮಹಾಕಾಳಿ ದೇವತೆಯ ಮೊರೆ ಹೋಗಿದ್ದಾಳೆ. ಈ ಮಧ್ಯೆ ಗೌರಿಯಲ್ಲಿ ಬಹುದೊಡ್ಡ ಬದಲಾವಣೆ ಆಗಿದೆ. ಏನದು.? ಮುಂದೆ ಓದಿ.....

  ಮಹಾಕಾಳಿಯ ರಕ್ಷಣೆಯಲ್ಲಿ ಗೌರಿ

  ಮಹಾಕಾಳಿಯ ರಕ್ಷಣೆಯಲ್ಲಿ ಗೌರಿ

  ಗೌರಿಯನ್ನ ಮರ್ಯಾದೆಯನ್ನ ಹಾಳುಮಾಡಬೇಕು ಎಂದು ನೂತನ್ ಸಿದ್ಧನಾಗಿದ್ದೇನೆ. ಗೌರಿಯನ್ನ ಬಲತ್ಕಾರ ಮಾಡಲು ಕಾಯುತ್ತಿದ್ದಾನೆ. ಆದ್ರೆ, ಅವನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಗೌರಿ ಈಗ ಗುಹೆಯಲ್ಲಿ ಮಹಾಕಾಳಿ ದೇವತೆಯನ್ನ ಬೇಡಿಕೊಳ್ಳುತ್ತಿದ್ದಾಳೆ. ತಾಯಿ ನನ್ನನ್ನು ಕಾಪಾಡು ಎಂದು ಅಂಗಲಾಚಿದ್ದಾಳೆ.

  'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!

  ಗೌರಿಯಲ್ಲಿ ಬದಲಾವಣೆ

  ಗೌರಿಯಲ್ಲಿ ಬದಲಾವಣೆ

  ನಿನ್ನನ್ನು ಕಾಪಾಡಲು ಆ ಕಾಳಿ ಅದು ಹೇಗೆ ಬರ್ತಾಳೆ ನೋಡೋಣ ಎಂದು ಸವಾಲ್ ಹಾಕಿ ನಿಂತಿರುವ ನೂತನ್ ಒಂದು ಕಡೆ. ದೇವಿ ಕಾಪಾಡ್ತಾಳೆ ಎಂದು ಬೇಡಿ ನಿಂತಿರುವ ಗೌರಿ ಇನ್ನೊಂದು ಕಡೆ. ಈ ಮಧ್ಯೆ ಗೌರಿಯ ಮುಖದಲ್ಲಿ ಬದಲಾವಣೆ ಆಗಿದೆ.

  ಪ್ರಾಣಾಪಾಯದಲ್ಲಿದ್ದ 'ಪುಟ್ಟಗೌರಿ' ಜೀವನದಲ್ಲಿ ಪವಾಡ: ಗೌರಿ ಮತ್ತೆ ಸೇಫ್.!ಪ್ರಾಣಾಪಾಯದಲ್ಲಿದ್ದ 'ಪುಟ್ಟಗೌರಿ' ಜೀವನದಲ್ಲಿ ಪವಾಡ: ಗೌರಿ ಮತ್ತೆ ಸೇಫ್.!

  ಮಹಾಕಾಳಿ ಅವತಾರವೆತ್ತಿದ್ಲ ಗೌರಿ.?

  ಮಹಾಕಾಳಿ ಅವತಾರವೆತ್ತಿದ್ಲ ಗೌರಿ.?

  ಮೃದುವಾಗಿದ್ದ ಗೌರಿ ದಿಢೀರ್ ಅಂತ ಕೋಪಗೊಂಡಿದ್ದಾಳೆ. ಕಾಳಿಯಂತೆ ಕೆಂಡಕಾರುತ್ತಿದ್ದಾಳೆ. ನೂತನ್ ಎದುರು ನೃತ್ಯ ಮಾಡುತ್ತಿದ್ದಾಳೆ. ಬಹುಶಃ ಇದನ್ನೆಲ್ಲ ಗಮನಿಸಿದ್ರೆ, ಗೌರಿಯಲ್ಲಿ ಮಹಾಕಾಳಿ ಆವರಿಸಿಕೊಂಡಳಾ ಎಂಬ ಕುತೂಹಲ ಕಾಡುತ್ತಿದೆ.? ಆದ್ರೆ, ನಿನ್ನೆಯ ಸಂಚಿಕೆ ಇಲ್ಲಿಗೆ ಅಂತ್ಯವಾಗಿದೆ. ಇಂದು ಏನಾಗಬಹುದು.?

  'ಪುಟ್ಟಗೌರಿ'ಯ ವನವಾಸ ಅಂತ್ಯ: ಗೌರಿ ಕಾಡಿನಿಂದ ನಾಡಿಗೆ ಬಂದಿದ್ದು ಹೇಗೆ? 'ಪುಟ್ಟಗೌರಿ'ಯ ವನವಾಸ ಅಂತ್ಯ: ಗೌರಿ ಕಾಡಿನಿಂದ ನಾಡಿಗೆ ಬಂದಿದ್ದು ಹೇಗೆ?

  ಕಾಳಿ ಅವತಾರದಲ್ಲಿ ಗೌರಿ

  ಕಾಳಿ ಅವತಾರದಲ್ಲಿ ಗೌರಿ

  ಬಹುಶಃ ಪ್ರೇಕ್ಷಕರ ಊಹೆ ನಿಜವಾದ್ರೆ, ಕಾಳಿ ಅವತಾರದಲ್ಲಿ ಗೌರಿ ಮಿಂಚಬಹುದು. ಸಂಮಪೂರ್ಣವಾಗಿ ಮಹಾಕಾಳಿಯಂತೆ ಗೌರಿ ರೂಪತಾಳಬಹುದು. ಗೌರಿಗೆ ಕಷ್ಟ ನೀಡುತ್ತಿರುವ ನೂತನ್ ವಿನಾಶಕ್ಕೆ ಕಾರಣವಾಗಬಹುದು. ಇದಕ್ಕೆಲ್ಲ ಉತ್ತರ ಇಂದಿನ ಎಪಿಸೋಡ್ ನೋಡಿ.

  English summary
  Nutan corners Gowri in a cave and decides to taunt her. Instead of harming her immediately, he gives her a chance to pray to the statue of Goddess Kali and ask for help. With no one around to help Gowri, she prays to the statue and seeks help. Will Gowri's prayers be answered?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X