For Quick Alerts
  ALLOW NOTIFICATIONS  
  For Daily Alerts

  ಜೂ.ಪುಟ್ಟಗೌರಿ ಈಗ ಹೇಗಿದ್ದಾರೆ, ಏನ್ಮಾಡುತ್ತಿದ್ದಾರೆ ಗೊತ್ತಾ?

  |
  ಪಾತ್ರಕ್ಕಾಗಿ ಏನು ಬೇಕಿದ್ರು ಮಾಡ್ತೀನಿ | Sanya Iyer | Puttagowri | Filmibeat Exclusive

  ಕನ್ನಡ ಕಿರುತೆರೆಯಲ್ಲಿ ಭಾರಿ ಜನಪ್ರಿಯ ಪಡೆದ ಧಾರಾವಾಹಿಗಳಲ್ಲಿ 'ಪುಟ್ಟಗೌರಿ ಮದುವೆ' ಕೂಡ ಒಂದು. ಈಗಾಗಲೆ 'ಪುಟ್ಟಗೌರಿ ಮದುವೆ' ಧಾರಾವಾಹಿ ಮುಗಿದು 'ಮಂಗಳಗೌರಿ' ಪ್ರಾರಂಭವಾಗಿದೆ. ಆದರು 'ಪುಟ್ಟಗೌರಿ' ನೆನಪು ಮಾತ್ರ ಕಿರುತೆರೆ ಪ್ರೇಕ್ಷಕರಲ್ಲಿ ಹಾಗೆ ಇದೆ.

  ಪುಟ್ಟುಗೌರಿ ಅಂದರೆ ನಟಿ ರಂಜನಿ ನೆನಪಾಗುತ್ತಾರೆ. ಆದರೆ ಜೂ.ಪುಟ್ಟಗೌರಿ ಅಂದರೆ ಮುದ್ದು ಮುಖದ ಪುಟ್ಟ ಸುಂದರಿ ನೆನಪಿಗೆ ಬರುತ್ತಾರೆ. ಹೌದು, ಮುದ್ದಾದ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಬಾಲನಟಿ ಪುಟ್ಟಗೌರಿ ಈಗ ದೊಡ್ಡವರಾಗಿದ್ದಾರೆ. ಪುಟ್ಟಗೌರಿಯನ್ನು ಈಗ ನೋಡಿದರೆ ಇವರು ಜೂ.ಪುಟ್ಟಗೌರಿನ ಅಂತ ಅಚ್ಚರಿ ಪಡಬೇಕು, ಹಾಗಾಗಿದ್ದಾರೆ.

  'ರಾಧಾ ರಮಣ' ಖ್ಯಾತಿಯ ನಟಿ ದೀಪಿಕಾ ಈಗ ಹೇಗಾಗಿದ್ದಾರೆ ನೀವೆ ನೋಡಿ'ರಾಧಾ ರಮಣ' ಖ್ಯಾತಿಯ ನಟಿ ದೀಪಿಕಾ ಈಗ ಹೇಗಾಗಿದ್ದಾರೆ ನೀವೆ ನೋಡಿ

   ಬಾಲ್ಯವಿವಾಹದ ಬಗ್ಗೆ ಇದ್ದ ಧಾರಾವಾಹಿ

  ಬಾಲ್ಯವಿವಾಹದ ಬಗ್ಗೆ ಇದ್ದ ಧಾರಾವಾಹಿ

  ಪುಟ್ಟಗೌರಿ ಮದುವೆ ಬಾಲ್ಯವಿವಾಹದ ಬಗ್ಗೆ ಇದ್ದ ಸೀರಿಯಲ್. ಪುಟ್ಟ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಸುವುದು ಈ ಧಾರಾವಾಹಿಯಲ್ಲಿ ತೋರಿಸಲಾಗಿತ್ತು. ಧಾರಾವಾಹಿ ಸೆಟ್ಟೇರಿದ ಪ್ರಾರಂಭದಲ್ಲಿ ಸಿಕ್ಕಾಪಟ್ಟೆ ಚರ್ಚೆಗೂ ಕಾರಣವಾಗಿತ್ತು. ಆ ನಂತರ ಈ ಧಾರಾವಾಹಿ ಭಾರಿ ನಜಪ್ರಿಯತೆ ಪಡೆದುಕೊಂಡಿತು. ಧಾರಾವಾಹಿ ಜೊತೆಗೆ ಪುಟ್ಟಗೌರಿ ಸಾನ್ಯಾ ಕೂಡ ಎಲ್ಲರ ಮನಗೆದ್ದಿದ್ದರು.

   ಪುಟ್ಟಗೌರಿ ನಿಜನಾಮ ಸಾನ್ಯಾ ಅಯ್ಯರ್

  ಪುಟ್ಟಗೌರಿ ನಿಜನಾಮ ಸಾನ್ಯಾ ಅಯ್ಯರ್

  ಸಾನ್ಯಾ ಅಯ್ಯರ್ ಅಂದರೆ ಥಟ್ ಅಂತ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಜೂ.ಪುಟ್ಟಗೌರಿ ಅಂದರೆ ನೆನಪಾಗುತ್ತಾರೆ. ಸಾನ್ಯ ಅಯ್ಯರ್ ಪುಟ್ಟಗೌರಿ ಧಾರಾವಾಹಿಯಲ್ಲಿ ಮುಗ್ಧ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಧಾರಾವಾಹಿಯಲ್ಲಿ ಆಕೆ ಪಾತ್ರ ಮುಗಿಯುತ್ತಿದ್ದಂತೆ ಸಾನ್ಯಾ ಮತ್ತೆ ಕನ್ನಡದಲ್ಲಿ ಬಣ್ಣಹಚ್ಚಿಲ್ಲ.

  ಸಿಂಗಿಂಗ್ ರಿಯಾಲಿಟಿ ಶೋ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಹಿಂದಿನ ಅಸಲಿ ಸಂಗತಿಸಿಂಗಿಂಗ್ ರಿಯಾಲಿಟಿ ಶೋ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಹಿಂದಿನ ಅಸಲಿ ಸಂಗತಿ

   ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ

  ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ

  ಧಾರಾವಾಹಿ ನಂತರ ಸಾನ್ಯಾ ಡ್ಯಾನ್ಸ್ ಕಾರ್ಯಕ್ರಮದ ಮೂಲಕ ಮತ್ತೆ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದಿದ್ದರು. ಜೊತೆಗೆ ಸೂಪರ್ ಮಿನಿಟ್ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಆದರೆ ಅದೆ ಕೊನೆ. ಆ ನಂತರ ಪುಟ್ಟಗೌರಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕನ್ನಡ ಪ್ರೇಕ್ಷಕರಿಗೆ ದರ್ಶನ ನೀಡಿಲ್ಲ.

   ಮಲಯಾಳಂನಲ್ಲಿ ಸಾನ್ಯಾ

  ಮಲಯಾಳಂನಲ್ಲಿ ಸಾನ್ಯಾ

  ಸದ್ಯ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿರುವ ಸಾನ್ಯಾ ಐಯ್ಯರ್ ಮತ್ತೆ ಕಿರುತೆರೆಗೆ ಬರುವ ಪ್ಲಾನ್ ಇಲ್ಲ ಎನಿಸುತ್ತೆ. ಯಾಕಂದ್ರೆ ದೊಡ್ಡಪರದೆ ಮೇಲೆ ನಾಯಕಿಯಾಗಿ ಮಿಂಚುವ ಕನಸು ಕಂಡಿರಬಹುದು. ಈಗಾಗಲೆ ಮಲಯಾಳಂನಲ್ಲೂ ಗುರುತಿಸಿಕೊಂಡಿದ್ದಾರೆ. ಮಲಯಾಳಂನ ಖ್ಯಾತ ಆಲ್ಬಂ ಹಾಡು 'ಆರಾರೊ ನೀಯಾರೊ...'ಹಾಡಿನಲ್ಲಿ ಸಾನ್ಯಾ ಕಾಣಿಸಿಕೊಂಡಿದ್ದಾರೆ. ರೋಮ್ಯಾಂಟಿಕ್ ಹಾಡಿನಲ್ಲಿ ಸಾನ್ಯಾ ಮಿಂಚಿದ್ದಾರೆ. ಸಾನ್ಯಾ ಅಭಿನಯಕ್ಕೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

  ಕೊಡವ ಶೈಲಿಯಲ್ಲಿ ಶ್ವೇತ ಚೆಂಗಪ್ಪ ಪುತ್ರನ ನಾಮಕರಣ: ಹೆಸರೇನು ಬಲ್ಲಿರಾ.?ಕೊಡವ ಶೈಲಿಯಲ್ಲಿ ಶ್ವೇತ ಚೆಂಗಪ್ಪ ಪುತ್ರನ ನಾಮಕರಣ: ಹೆಸರೇನು ಬಲ್ಲಿರಾ.?

   ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ

  ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ

  ಆಲ್ಬಂ ಹಾಡಿನ ನಂತರ ಸಾನ್ಯಾ ಮತ್ತೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಓದಿನ ಕಡೆ ಹೆಚ್ಚು ಗಮನ ಹರಿಸಿರುವ ಸಾನ್ಯಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀವ್ ಆಗಿದ್ದಾರೆ. ಸಖತ್ ಗ್ಲಾಮರ್ ಆಗಿರುವ ಸಾನ್ಯಾ ಆಗಾಗ ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿ ಒಂದಿಷ್ಟು ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  English summary
  Puttagowri Fame Sanya Iyer where is now?. Sanya Iyer very Active in Social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X